ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20ಐ: ಸೂಪರ್ ಓವರ್‌ನಲ್ಲಿ ರೋ'ಹಿಟ್‌' ತಂದುಕೊಟ್ಟ ಸೂಪರ್ ಗೆಲುವು!

New Zealand vs India, 3rd T20I - Live match report

ಹ್ಯಾಮಿಲ್ಟನ್, ಜನವರಿ 29: ಹ್ಯಾಮಿಲ್ಟನ್‌ನ ಸೆಡ್ಡನ್ ಪಾರ್ಕ್‌ನಲ್ಲಿ ಬುಧವಾರ (ಜನವರಿ 29) ನಡೆದ ಭಾರತ-ನ್ಯೂಜಿಲೆಂಡ್ 3ನೇ ಟಿ20ಐ ಪಂದ್ಯ ಸಮಬಲಗೊಂಡಿದೆ. ವಿಜೇತರನ್ನು ನಿರ್ಧರಿಸಲು ನಡೆಸಲಾದ ಸೂಪರ್ ಓವರ್‌ನಲ್ಲಿ ಕಡೆಯ ಬಾಲ್‌ಗೆ ಹಿಟ್‌ಮ್ಯಾನ್ ರೋಹಿತ್‌ ಶರ್ಮಾ ಸಿಕ್ಸ್‌ ಬಾರಿಸಿದ್ದರಿಂದ ಟೀಮ್ ಇಂಡಿಯಾ ರೋಚಕ ಗೆಲುವನ್ನಾಚರಿಸಿದೆ. ಇದರೊಂದಿಗೆ ಐದು ಪಂದ್ಯಗಳ ಟಿ20 ಸರಣಿ 3-0ಯಿಂದ ಭಾರತದ ವಶವಾಗಿದೆ.

ಆರಂಭಿಕನಾಗಿ 10000 ರನ್ : ದಿಗ್ಗಜರ ಸಾಲಿಗೆ ಸೇರಿದ ರೋಹಿತ್ ಶರ್ಮಾಆರಂಭಿಕನಾಗಿ 10000 ರನ್ : ದಿಗ್ಗಜರ ಸಾಲಿಗೆ ಸೇರಿದ ರೋಹಿತ್ ಶರ್ಮಾ

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಭಾರತದಿಂದ ರೋಹಿತ್ ಶರ್ಮಾ 65 (40 ಎಸೆತ), ಕೆಎಲ್ ರಾಹುಲ್ 27, ನಾಯಕ ವಿರಾಟ್ ಕೊಹ್ಲಿ 38, ಶ್ರೇಯಸ್ ಅಯ್ಯರ್ 17, ಮನೀಶ್ ಪಾಂಡೆ 14, ರವೀಂದ್ರ ಜಡೇಜಾ 10 ರನ್ ಬಾರಿಸಿದರು. ಭಾರತ 20 ಓವರ್‌ಗೆ 5 ವಿಕೆಟ್ ನಷ್ಟದಲ್ಲಿ 179 ರನ್ ಕಲೆ ಹಾಕಿತು.

ಅಂಡರ್ 19 ವಿಶ್ವಕಪ್: ಟೀಮ್ ಇಂಡಿಯಾ ಕಪ್‌ ಗೆಲ್ಲಲು ಇನ್ನೆರಡೇ ಮೆಟ್ಟಿಲು!ಅಂಡರ್ 19 ವಿಶ್ವಕಪ್: ಟೀಮ್ ಇಂಡಿಯಾ ಕಪ್‌ ಗೆಲ್ಲಲು ಇನ್ನೆರಡೇ ಮೆಟ್ಟಿಲು!

ಪಂದ್ಯದ Live ಸ್ಕೋರ್‌ಕಾರ್ಡ್ ಕೆಳಗಿದೆ.

1
46205

ಗುರಿ ಬೆನ್ನತ್ತಿದ ನ್ಯೂಜಿಲೆಂಡ್‌, ಮಾರ್ಟಿನ್ ಗಪ್ಟಿಲ್ 31, ಕಾಲಿನ್ ಮುನ್ರೋ 14, ನಾಯಕ ಕೇನ್ ವಿಲಿಯಮ್ಸನ್ 95 (48 ಎಸತ), ರಾಸ್ ಟೇಲರ್ 17 ರನ್‌ನೊಂದಿಗೆ 20 ಓವರ್‌ಗೆ 6 ವಿಕೆಟ್ ನಷ್ಟದಲ್ಲಿ 179 ರನ್‌ ಮಾಡಿ ಪಂದ್ಯವನ್ನು ಟೈಗೊಳಿಸಿತು. ಮತ್ತೆ ಸೂಪರ್ ಓವರ್‌ ನಡೆಸಲಾಯ್ತು.

ಬ್ಯಾಟಿಂಗ್‌ನಲ್ಲಿ ಕೊಹ್ಲಿ, ರಾಹುಲ್ ಕಾಪಿ ಮಾಡಿದ್ದು ಚಾಹಲ್ ಶೈಲಿಯನ್ನಂತೆ !ಬ್ಯಾಟಿಂಗ್‌ನಲ್ಲಿ ಕೊಹ್ಲಿ, ರಾಹುಲ್ ಕಾಪಿ ಮಾಡಿದ್ದು ಚಾಹಲ್ ಶೈಲಿಯನ್ನಂತೆ !

ರೋಚಕ ಸೂಪರ್ ಓವರ್‌ನ ಮೊದಲು ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ ಓವರ್‌ಒಂದಕ್ಕೆ 17 ರನ್ ಬಾರಿಸಿ ಭಾರತಕ್ಕೆ 18 ರನ್ ಗುರಿ ನೀಡಿತ್ತು. ಗುರಿ ಬೆಂಬತ್ತಿದ ವಿರಾಟ್ ಕೊಹ್ಲಿ ಪಡೆ, ರೋಹಿತ್ ಶರ್ಮಾ ಸಿಕ್ಸ್‌ನೊಂದಿಗೆ 20 ರನ್ ಪೇರಿಸಿ ಗೆಲುವನ್ನಾಚರಿಸಿತು.

ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್‌: ಮಾರಕ ವೇಗಿ ಸ್ಟುವರ್ಟ್ ಬ್ರಾಡ್‌ಗೆ ದಂಡದಕ್ಷಿಣ ಆಫ್ರಿಕಾ vs ಇಂಗ್ಲೆಂಡ್‌: ಮಾರಕ ವೇಗಿ ಸ್ಟುವರ್ಟ್ ಬ್ರಾಡ್‌ಗೆ ದಂಡ

ಭಾರತದ ಇನ್ನಿಂಗ್ಸ್‌ನಲ್ಲಿ ನ್ಯೂಜಿಲೆಂಡ್‌ನ ಹಮೀಶ್ ಬೆನೆಟ್ 54ಕ್ಕೆ 3, ಮಿಚೆಲ್ ಸ್ಯಾಂಟ್ನರ್ 1, ಕಾಲಿನ್‌ ಡೆ ಗ್ರ್ಯಾಂಡ್‌ಹೋಮ್‌ 1 ವಿಕೆಟ್ ಪಡೆದರೆ, ನ್ಯೂಜಿಲೆಂಡ್‌ ಇನ್ನಿಂಗ್ಸ್‌ನಲ್ಲಿ ಭಾರತದ ಶಾರ್ದೂಲ್ ಠಾಕೂರ್ 2, ಮೊಹಮ್ಮದ್ ಶಮಿ 2, ಯುಜುವೇಂದ್ರ ಚಾಹಲ್ ಮತ್ತು ರವೀಂದ್ರ ಜಡೇಜಾ ತಲಾ 1 ವಿಕೆಟ್ ಪಡೆದರು. ರೋಹಿತ್ ಶರ್ಮಾ ಪಂದ್ಯ ಶ್ರೇಷ್ಠರೆನಿಸಿದರು.

ಭಾರತ ತಂಡ: ರೋಹಿತ್ ಶರ್ಮಾ, ಲೋಕೇಶ್ ರಾಹುಲ್ (ವಿಕೆ), ವಿರಾಟ್ ಕೊಹ್ಲಿ (ಸಿ), ಶ್ರೇಯಸ್ ಅಯ್ಯರ್, ಮನೀಶ್ ಪಾಂಡೆ, ಶಿವಮ್ ದೂಬೆ, ರವೀಂದ್ರ ಜಡೇಜಾ, ಶಾರ್ದೂಲ್ ಠಾಕೂರ್, ಮೊಹಮ್ಮದ್ ಶಮಿ, ಯುಜುವೇಂದ್ರ ಚಾಹಲ್, ಜಸ್‌ಪ್ರೀತ್‌ ಬೂಮ್ರಾ.

ಅಯ್ಯೋ ಪಾಪ ಧೋನಿ! ಸ್ವೀಟಿ ಕ್ಯೂಟಿ ಎನ್ನುತ್ತಾ ಏನಿದು ಗೋಳು!!: ವೀಡಿಯೋಅಯ್ಯೋ ಪಾಪ ಧೋನಿ! ಸ್ವೀಟಿ ಕ್ಯೂಟಿ ಎನ್ನುತ್ತಾ ಏನಿದು ಗೋಳು!!: ವೀಡಿಯೋ

ನ್ಯೂಜಿಲೆಂಡ್‌ ತಂಡ: ಮಾರ್ಟಿನ್ ಗಪ್ಟಿಲ್, ಕಾಲಿನ್ ಮುನ್ರೊ, ಕೇನ್ ವಿಲಿಯಮ್ಸನ್ (ಸಿ), ಕಾಲಿನ್ ಡಿ ಗ್ರ್ಯಾಂಡ್‌ಹೋಮ್, ರಾಸ್ ಟೇಲರ್, ಟಿಮ್ ಸೀಫರ್ಟ್ (ವಿಕೆ), ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಸ್ಕಾಟ್ ಕುಗ್ಗೆಲೀಜ್ನ್, ಇಶ್ ಸೋಧಿ, ಹಮೀಶ್ ಬೆನೆಟ್.

Story first published: Wednesday, January 29, 2020, 16:52 [IST]
Other articles published on Jan 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X