ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಆಡುವಾಗ ಕನ್ನಡ ಮಾತಾಡಿದ ಕೆಎಲ್ ರಾಹುಲ್-ಮನೀಶ್ ಪಾಂಡೆ: ವೀಡಿಯೋ

New Zealand vs India: Manish Pandey and KL Rahul speaks in Kannada

ಮೌಂಟ್‌ಮೌಂಗನ್ಯುಯಿ, ಫೆಬ್ರವರಿ 12: ನ್ಯೂಜಿಲೆಂಡ್ ವಿರುದ್ಧದ ಮೂರನೇ ಮತ್ತು ಕೊನೆಯ ಏಕದಿನ ಪಂದ್ಯದಲ್ಲಿ ಸೋಲುವ ಮೂಲಕ ಭಾರತ ಏಕದಿನ ಸರಣಿಯಲ್ಲಿ ವೈಟ್‌ವಾಷ್ ಮುಖಭಂಗಕ್ಕೀಡಾಗಿದೆ. ಆದರೆ ತಂಡವನ್ನು ವೈಟ್‌ವಾಷ್‌ನಿಂದ ಪಾರು ಮಾಡಲು ಕೊಸರಾಡಿದ ಕನ್ನಡಿಗ ಕೆಎಲ್ ರಾಹುಲ್, ಮನೀಶ್ ಪಾಂಡೆ, ಶ್ರೇಯಸ್ ಐಯ್ಯರ್ ಮತ್ತು ಇನ್ನಿತರ ಆಟಗಾರರ ಬಗ್ಗೆ ಶ್ಲಾಘನೆಯೂ ವ್ಯಕ್ತವಾಗಿದೆ (ವೀಡಿಯೋ ಕೃಪೆ: ಸ್ಟಾರ್‌ ಸ್ಪೋರ್ಟ್ಸ್‌).

31 ವರ್ಷಗಳ ಹಿಂದಿನ ಕೆಟ್ಟ ದಾಖಲೆ ಮತ್ತೆ ನೆನಪಿಸಿದ ಟೀಮ್ ಇಂಡಿಯಾ!31 ವರ್ಷಗಳ ಹಿಂದಿನ ಕೆಟ್ಟ ದಾಖಲೆ ಮತ್ತೆ ನೆನಪಿಸಿದ ಟೀಮ್ ಇಂಡಿಯಾ!

ನಾಯಕ ವಿರಾಟ್ ಕೊಹ್ಲಿ ಕೂಡ ಬೇಗನೆ ವಿಕೆಟ್ ಒಪ್ಪಿಸಿದಾಗ, ಟೀಮ್ ಇಂಡಿಯಾಕ್ಕೆ ರನ್ ಬಲ ತುಂಬುವ ಜವಾಬ್ದಾರಿ ಹೊತ್ತುಕೊಂಡಿದ್ದ ಕೆಎಲ್ ರಾಹುಲ್ ಮತ್ತು ಮನೀಶ್ ಪಾಂಡೆ, ಆಟದ ಮಧ್ಯೆ ಕನ್ನಡ ಮಾತನಾಡಿ ಗಮನ ಸೆಳೆದಿದ್ದರು. ನ್ಯೂಜಿಲೆಂಡ್‌ ಕ್ರೀಸಿನಲ್ಲಿ ಕನ್ನಡದ ಕಂಪು ಹರಿಸಿದ ಕನ್ನಡಿಗರ ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ವಿಶ್ವದ ನಂಬರ್ 1 ಬೌಲರ್ ಜಸ್ಪ್ರೀತ್ ಬೂಮ್ರಾ ಕಥೆ ಹೀಗ್ಯಾಕಾಯ್ತು?ವಿಶ್ವದ ನಂಬರ್ 1 ಬೌಲರ್ ಜಸ್ಪ್ರೀತ್ ಬೂಮ್ರಾ ಕಥೆ ಹೀಗ್ಯಾಕಾಯ್ತು?

ನ್ಯೂಜಿಲೆಂಡ್‌ನ ಮೌಂಟ್‌ಮೌಂಗನ್ಯುಯಿಯ ಬೇ ಓವಲ್‌ನಲ್ಲಿ ನಡೆದಿದ್ದ ಭಾರತ-ನ್ಯೂಜಿಲೆಂಡ್‌ ಮೂರನೇ ಏಕದಿನ ಪಂದ್ಯದ ಭಾರತದ ಇನ್ನಿಂಗ್ಸ್‌ನಲ್ಲಿ ಈ ದೃಶ್ಯ ಕಂಡುಬಂತು. ಭಾರತದ 5 ಮತ್ತು 6ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ರಾಹುಲ್, ಮನೀಶ್ ಪಾಂಡೆ ರನ್‌ ಗಳಿಸುವಾಗ ಕನ್ನಡದಲ್ಲಿ ಪರಸ್ಪರ ಸಂವಹನ ನಡೆಸಿದ್ದುದು ಸೆರೆಯಾಗಿತ್ತು.

ಪಂದ್ಯದಲ್ಲಿ ಕೆಎಲ್ ರಾಹುಲ್ 112, ಮನೀಶ್ ಪಾಂಡೆ 42, ಶ್ರೇಯಸ್ ಐಯ್ಯರ್ 62, ಪೃಥ್ವಿ ಶಾ 40 ರನ್‌ನೊಂದಿಗೆ ಭಾರತ 50 ಓವರ್‌ಗೆ 7 ವಿಕೆಟ್‌ ಕಳೆದು 296 ರನ್ ಗಳಿಸಿತ್ತು. ಆದರೆ ಗುರಿ ಬೆಂಬತ್ತಿದ ಕಿವೀಸ್, ಮಾರ್ಟಿನ್ ಗಪ್ಟಿಲ್ 66, ಹೆನ್ರಿ ನಿಕೋಲ್ಸ್ 80, ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 58 ರನ್‌ನೊಂದಿಗೆ 47.1 ಓವರ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 300 ರನ್ ಬಾರಿಸಿ ಗೆದ್ದಿತ್ತು.

Story first published: Wednesday, February 12, 2020, 9:16 [IST]
Other articles published on Feb 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X