ಕಾರ್ಡಿಫ್, ಜೂನ್ 1: ಮ್ಯಾಟ್ ಹೆನ್ರಿ ಮತ್ತು ಲಾಕಿ ಫಾರ್ಗುಸನ್ ಮಾರಕ ಬೌಲಿಂಗ್ ದಾಳಿ ಮತ್ತು ಮಾರ್ಟಿನ್ ಗಪ್ಟಿಲ್-ಕಾಲಿನ್ ಮುನ್ರೋ ಮುರಿಯದ ಜೊತೆಯಾಟದಿಂದಾಗಿ ಶನಿವಾರ (ಜೂನ್ 1) ನಡೆದ ವಿಶ್ವಕಪ್ 3ನೇ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ನ್ಯೂಜಿಲ್ಯಾಂಡ್ 10 ವಿಕೆಟ್ ಗೆಲುವನ್ನಾಚರಿಸಿದೆ. ಬ್ಯಾಟಿಂಗ್ ವೈಫಲ್ಯ ತೋರಿಸಿ ಲಂಕಾ ಹೀನಾಯ ಸೋಲು ಕಂಡಿತು.
ಶ್ರೀಲಂಕಾ vs ನ್ಯೂಜಿಲ್ಯಾಂಡ್, ಜೂನ್ 1, Live ಸ್ಕೋರ್ಕಾರ್ಡ್
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಲಂಕಾ, ಆರಂಭದಿಂದಲೂ ಎದುರಾಳಿ ಬೌಲರ್ಗಳ ಬಲೆಗೆ ಸಿಲುಕುತ್ತಾ ಸಾಗಿತು. ಲಹಿರು ತಿರಿಮನ್ನೆ 4, ಕುಸಲ್ ಪೆರೇರಾ 29, ಕುಸಲ್ ಮೆಂಡಿಸ್ 0, ಏಂಜೆಲೋ ಮ್ಯಾಥ್ಯೂಸ್ 0, ಧನಂಜಯ ಡಿ ಸಿಲ್ವಾ 4, ತಿಸೆರ ಪೆರೆರಾ 27, ಜೀವನ್ ಮೆಂಡಿಸ್ 1, ಸುರಂಗಾ ಲಕ್ಮಲ್ 7, ಐಸುರು ಉದಾನ 0, ಲಸಿತ್ ಮಾಲಿಂಗ 1 ರನ್ಗೆ ನಿರ್ಗಮಿಸಿದರು.
ವಿಶ್ವಕಪ್: ಕೊಹ್ಲಿ ಕೊಟ್ಟ ಬ್ಯಾಟ್ ಕದ್ದು ಹೋಗಿದ್ದರ ಗಮ್ಮತ್ತು ಬಿಚ್ಚಿಟ್ಟ ರಶೀದ್!
ಆದರೆ ದಿಮುತ್ ಕರುಣರತ್ನೆ ಅವರ 52 ರನ್ (84 ಎಸೆತ) ತಂಡವನ್ನು ಕೊಂಚ ರನ್ ಕುಸಿತದಿಂದ ಪಾರು ಮಾಡಿತು. ಶ್ರೀಲಂಕಾ 29.2 ಓವರ್ಗೆ ಎಲ್ಲಾ ವಿಕೆಟ್ ಕಳೆದು 136 ರನ್ ಗಳಿಸಿತು. ಲಂಕಾ ಇನ್ನಿಂಗ್ಸ್ ವೇಳೆ ಹೆನ್ರಿ 29 ರನ್ಗೆ 3, ಫಾರ್ಗುಸನ್ 22 ರನ್ಗೆ ವಿಕೆಟ್ ಪಾರಮ್ಯ ಮೆರೆದರು.
ವಿಶ್ವಕಪ್: ಇಂಡೊ-ಪಾಕ್ ಪಂದ್ಯದ ಬಗ್ಗೆ ರೈನಾ ಹೇಳಿದ್ದೇನು ಗೊತ್ತಾ?
ಗುರಿ ಬೆನ್ನತ್ತಿದ ಕಿವೀಸ್ ಆರಂಭಿಕ ಆಟಗಾರರಾದ ಗಪ್ಟಿಲ್ 73 (51 ಎಸೆತ), ಮುನ್ರೋ 58 (47 ಎಸೆತ) ರನ್ ಸೇರಿಸಿ ತಂಡವನ್ನು ಗೆಲ್ಲಿಸಿ ಕೊಟ್ಟರು. ನ್ಯೂಜಿಲ್ಯಾಂಡ್ 16.1 ಓವರ್ಗೆ ವಿಕೆಟ್ ನಷ್ಟವಿಲ್ಲದೆ 137 ರನ್ ಪೂರೈಸಿತು. ಮ್ಯಾಟ್ ಹೆನ್ರಿ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.
ಭಾರತ 'ರಾಜ'ನಂತೆ ಸೆಮಿಫೈನಲ್ ಹೋಗೋದು ಖಚಿತ: ಮೆಕಲಂ ಭವಿಷ್ಯ
ಶ್ರೀಲಂಕಾ ತಂಡ: ದಿಮುತ್ ಕರುಣರತ್ನೆ (ಸಿ), ಲಹಿರು ತಿರಿಮನ್ನೆ, ಕುಸಲ್ ಪೆರೇರಾ (ವಿಕೆ), ಕುಸಲ್ ಮೆಂಡಿಸ್, ಏಂಜೆಲೋ ಮ್ಯಾಥ್ಯೂಸ್, ಧನಂಜಯ ಡಿ ಸಿಲ್ವಾ, ತಿಸೆರ ಪೆರೆರಾ, ಜೀವನ್ ಮೆಂಡಿಸ್, ಸುರಂಗಾ ಲಕ್ಮಲ್, ಐಸುರು ಉದಾನ, ಲಸಿತ್ ಮಾಲಿಂಗ.
ಬಾಂಗ್ಲಾದೇಶದಿಂದ ಅಂಕ ಕಿತ್ತುಕೊಳ್ಳುವುದೇ ದಕ್ಷಿಣ ಆಫ್ರಿಕಾ
ನ್ಯೂಜಿಲ್ಯಾಂಡ್ ತಂಡ: ಮಾರ್ಟಿನ್ ಗಪ್ಟಿಲ್, ಕಾಲಿನ್ ಮುನ್ರೋ, ಕೇನ್ ವಿಲಿಯಮ್ಸನ್ (ಸಿ), ಟಾಮ್ ಲ್ಯಾಥಮ್ (ವಿಕೆ), ರಾಸ್ ಟೇಲರ್, ಜೇಮ್ಸ್ ನೀಶಾಂ, ಕಾಲಿನ್ ಡಿ ಗ್ರಾಂಡ್ಹೋಮ್ಮೆ, ಮಿಚೆಲ್ ಸ್ಯಾಂಟ್ನರ್, ಲಾಕೀ ಫರ್ಗುಸನ್, ಮ್ಯಾಟ್ ಹೆನ್ರಿ, ಟ್ರೆಂಟ್ ಬೌಲ್ಟ್.
{headtohead_cricket_4_7}