ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕಿವೀಸ್ vs ವಿಂಡೀಸ್: ಸ್ಫೋಟಕ ಅರ್ಧ ಶತಕ ಚಚ್ಚಿದ ಕೀರನ್ ಪೊಲಾರ್ಡ್

New Zealand vs West Indies: Kieron Pollard smashed unbeaten 75 runs from just 37 balls

ಆಕ್ಲೆಂಡ್: ಶುಕ್ರವಾರ (ನವೆಂಬರ್ 27) ನಡೆದ ನ್ಯೂಜಿಲೆಂಡ್ vs ವೆಸ್ಟ್ ಇಂಡೀಸ್ ನಡುವಿನ ಮೊದಲ ಟಿ20ಐ ಪಂದ್ಯದಲ್ಲಿ ವಿಂಡೀಸ್ ನಾಯಕ ಕೀರನ್ ಪೊಲಾರ್ಡ್ ಸ್ಫೋಟಕ ಬ್ಯಾಟಿಂಗ್ ನಡೆಸಿದ್ದಾರೆ. ತಂಡವನ್ನು ಗೆಲ್ಲಿಸುವ ನೆಲೆಯಲ್ಲಿ ಪೊಲಾರ್ಡ್ ಮಾಡಿದ ಹೋರಾಟ ವ್ಯರ್ಥವಾಗಿದೆ. ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಡಕ್ವರ್ಥ್ ಲೂಯೀಸ್ ನಿಯಮದ ಆಧಾರದಲ್ಲಿ 5 ವಿಕೆಟ್ ಜಯ ಗಳಿಸಿದೆ.

ದ.ಆಫ್ರಿಕಾ ಗೆಲ್ಲಲು 6ಕ್ಕೆ 6 ರನ್ ಬೇಕು, ಸಚಿನ್ ಓವರ್ ಎಸೀತೀನಿ ಅಂದ್ರು!ದ.ಆಫ್ರಿಕಾ ಗೆಲ್ಲಲು 6ಕ್ಕೆ 6 ರನ್ ಬೇಕು, ಸಚಿನ್ ಓವರ್ ಎಸೀತೀನಿ ಅಂದ್ರು!

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ವೆಸ್ಟ್ ಇಂಡೀಸ್‌ನಿಂದ ಆ್ಯಂಡ್ರೆ ಫ್ಲೆಚರ್ 34 (14 ಎಸೆತ), ಬ್ರೆಂಡನ್ ಕಿಂಗ್ 13, ಫ್ಯಾಬಿಯೆನ್ ಅಲೆನ್ 30 ರನ್‌ ಬಾರಿಸಿದರು. 6ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ಪೊಲಾರ್ಡ್, 37 ಎಸೆತಗಳಲ್ಲಿ 75 ರನ್ ಬಾರಿಸಿದ್ದರು. ವಿಂಡೀಸ್ 16 ಓವರ್‌ಗಳಲ್ಲಿ 7 ವಿಕೆಟ್ ಕಳೆದು 180 ರನ್ ಗಳಿಸಿತ್ತು.

ಗುರಿ ಬೆನ್ನಟ್ಟಿದ ನ್ಯೂಜಿಲೆಂಡ್, ಮಾರ್ಟಿನ್ ಗಪ್ಟಿಲ್ 5, ಟಿಮ್ ಸೀಫರ್ಟ್ 17, ಡಿವಾನ್ ಕಾನ್ವೆ 41 (29 ಎಸೆತ), ಗ್ಲೆನ್ ಫಿಲಿಪ್ಸ್ 22, ಜೇಮ್ಸ್ ನೀಶಮ್ 48 (24 ಎಸೆತ), ಮಿಚೆಲ್ ಸ್ಯಾಂಟ್ನರ್ 31 ಎಸೆತಗಳೊಂದಿಗೆ 15.2 ಓವರ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 179 ರನ್ ಗಳಿಸಿತು.

ಭಾರತ vs ಆಸೀಸ್: ಅದಾನಿ ವಿರುದ್ಧ ಇಬ್ಬರಿಂದ ಪ್ರತಿಭಟನೆ-ವಿಡಿಯೋಭಾರತ vs ಆಸೀಸ್: ಅದಾನಿ ವಿರುದ್ಧ ಇಬ್ಬರಿಂದ ಪ್ರತಿಭಟನೆ-ವಿಡಿಯೋ

ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್ ಪರ ಆಡುವ ಆಲ್ ರೌಂಡರ್ ಕೀರನ್ ಪೊಲಾರ್ಡ್, 104 ಏಕಿದಿನ ಇನ್ನಿಂಗ್ಸ್‌ಗಳಲ್ಲಿ 2496 ರನ್, 60 ಟಿ20ಐ ಇನ್ನಿಂಗ್ಸ್‌ಗಳಲ್ಲಿ 1123 ರನ್ ಮತ್ತು 147 ಐಪಿಎಲ್ ಇನ್ನಿಂಗ್ಸ್‌ಗಳಲ್ಲಿ 3023 ರನ್ ಗಳಿಸಿದ್ದಾರೆ. ಏಕದಿನ, ಟಿ20ಐ ಮತ್ತು ಐಪಿಎಲ್‌ನಲ್ಲಿ ಕ್ರಮವಾಗಿ 53, 35 ಮತ್ತು 60 ವಿಕೆಟ್ ಪಡೆದಿದ್ದಾರೆ.

Story first published: Friday, November 27, 2020, 17:09 [IST]
Other articles published on Nov 27, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X