ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಯುಕೆ ಪ್ರವಾಸದ ಬಳಿಕ ಕಿವೀಸ್ ವಿಕೆಟ್ ಕೀಪರ್ ಬಿಜೆ ವಾಟ್ಲಿಂಗ್ ನಿವೃತ್ತಿ

New Zealand wicketkeeper-batsman BJ Watling to retire after England tour

ಆಕ್ಲೆಂಡ್: ಇಂಗ್ಲೆಂಡ್ ಪ್ರವಾಸದ ಬಳಿಕ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್‌ ಕಮ್ ವಿಕೆಟ್ ಕೀಪರ್ ಬಿಜೆ ವಾಟ್ಲಿಂಗ್‌ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ. ಈ ವಿಚಾರವನ್ನು ನ್ಯೂಜಿಲೆಂಡ್ ಕ್ರಿಕೆಟ್ ಬೋರ್ಡ್ (NZC) ಮಂಗಳವಾರ ತಿಳಿಸಿದೆ.

 ಶ್ರೀಲಂಕಾ ಪ್ರವಾಸ ಸರಣಿಗೆ ಭಾರತಕ್ಕೆ ಶಿಖರ್ ಧವನ್ ನಾಯಕ?! ಶ್ರೀಲಂಕಾ ಪ್ರವಾಸ ಸರಣಿಗೆ ಭಾರತಕ್ಕೆ ಶಿಖರ್ ಧವನ್ ನಾಯಕ?!

ನ್ಯೂಜಿಲೆಂಡ್ ಪರ ಆರಂಭಿಕರಾಗಿ ಆಡುತ್ತಿದ್ದ 35ರ ಹರೆಯದ ಬಿಜೆ ವಾಟ್ಲಿಂಗ್‌, 2009ರಲ್ಲಿ ಟೆಸ್ಟ್‌ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದಾಗ ಬ್ಯಾಟಿಂಗ್‌ಗಾಗಿ ಗಮನ ಸೆಳೆದಿದ್ದರಾದರೂ ಆ ಬಳಿಕ ವಿಶ್ವಶ್ರೇಷ್ಠ ವಿಕೆಟ್‌ ಕೀಪರ್‌ಗಳಲ್ಲಿ ಒಬ್ಬರಾಗಿ ಹೆಚ್ಚು ಗುರುತಿಸಿಕೊಂಡಿದ್ದರು.

ನ್ಯೂಜಿಲೆಂಡ್ ಕ್ರಿಕೆಟ್ ತಂಡ ಶುಕ್ರವಾರ (ಮೇ 14) 2021-22ನೇ ಸಾಲಿನ ಆಟಗಾರರ ಒಪ್ಪಂದದ ಪಟ್ಟಿ ಪ್ರಕಟಿಸಲಿದೆ. ಇದರಲ್ಲಿ ವಾಟ್ಲಿಂಗ್‌ ಹೆಸರಿರುವ ಸಾಧ್ಯತೆಯಿಲ್ಲ. ಯಾಕೆಂದರೆ ಈಗಾಗಲೇ ತಾನು ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ದೂರ ಉಳಿಯಬಯಸಿರುವುದಾಗಿ ವಾಟ್ಲಿಂಗ್ ಹೇಳಿಕೊಂಡಿದ್ದಾರೆ.

ಚಹಾಲ್‌ಗಿಂತ ಮೊಹಮ್ಮದ್ ಸಿರಾಜ್ ಉತ್ತಮ ಬೌಲರ್ ಎನ್ನುತ್ತಿವೆ ಈ ಅಂಕಿಅಂಶಗಳುಚಹಾಲ್‌ಗಿಂತ ಮೊಹಮ್ಮದ್ ಸಿರಾಜ್ ಉತ್ತಮ ಬೌಲರ್ ಎನ್ನುತ್ತಿವೆ ಈ ಅಂಕಿಅಂಶಗಳು

ಬಲಗೈ ಬ್ಯಾಟ್ಸ್‌ಮನ್‌ ಆಗಿದ್ದ ವಾಟ್ಲಿಂಗ್, 73 ಟೆಸ್ಟ್‌ ಪಂದ್ಯಗಳಲ್ಲಿ 3773 ರನ್, 8 ಶತಕ, 19 ಅರ್ಧ ಶತಕ, 1 ದ್ವಿಶತಕ ಬಾರಿಸಿದ್ದರು. ಇನ್ನು 28 ಏಕದಿನ ಪಂದ್ಯಗಳಲ್ಲಿ 573 ರನ್, 5 ಟಿ020ಐ ಪಂದ್ಯಗಳಲ್ಲಿ 38 ರನ್ ಬಾರಿಸಿದ್ದಾರೆ. 2009ರಲ್ಲಿ ವಾಟ್ಲಿಂಗ್‌ ಪಾಕಿಸ್ತಾನ್ ವಿರುದ್ಧ ಟೆಸ್ಟ್‌ ಕ್ರಿಕೆಟ್ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು.

Story first published: Tuesday, May 11, 2021, 23:43 [IST]
Other articles published on May 11, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X