ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ನ ಬಳಿಕ ನ್ಯೂಜಿಲೆಂಡ್ ಪ್ರವಾಸ ಕೈಗೊಳ್ಳಲಿದೆ ಭಾರತ: ಕಿವೀಸ್ ನಾಡಿನಲ್ಲಿ ವೈಟ್‌ಬಾಲ್ ಸರಣಿ ಖಚಿತ

New Zealand will host white ball series for India right after T20 World Cup 2022

ನ್ಯೂಜಿಲೆಂಡ್ ಕ್ರಿಕೆಟ್ ಮಂಡಳಿ 2022-23ರ ತವರಿನ ಸರಣಿಯನ್ನು ಮಂಗಳವಾರ ಘೋಷಣೆ ಮಾಡಿದೆ. ಈ ಅವಧಿಯಲ್ಲಿ ಕಿವೀಸ್ ಪಡೆ ಯಾವೆಲ್ಲಾ ಸರಣಿಗಳನ್ನು ತವರಿನಲ್ಲಿ ಆಡಲಿದೆ ಎಂಬುದನ್ನು ನ್ಯೂಜಿಲೆಂಡ್ ಮಂಡಳಿ ಅಧಿಕೃತಪಡಿಸಿದೆ. ತವರಿನಲ್ಲಿ ಟಿ20 ವಿಶ್ವಕಪ್‌ಗೆ ಮುನ್ನ ತ್ರಿಕೋನ ಸರಣಿಯೊಂದಿಗೆ ಮುಂದಿನ ಕ್ರಿಕೆಟ್ ಋತುವನ್ನು ಆರಂಭಿಸಲಿರುವ ನ್ಯೂಜಿಲೆಂಡ್ ತಂಡ ಈ ಮೂಲಕ ವಿಶ್ವಕಪ್‌ಗೆ ಸಿದ್ಧತೆ ನಡೆಸಲಿದೆ.

ಇನ್ನು ಟಿ20 ವಿಶ್ವಕಪ್ ಅಂತ್ಯವಾಗುತ್ತಿದ್ದಂತೆಯೇ ಭಾರತ ನ್ಯೂಜಿಲೆಂಡ್ ಪ್ರವಾಸವನ್ನು ಕೈಗೊಳ್ಳಲಿದ್ದು ವೈಟ್‌ಬಾಲ್ ಸರಣಿಯಲ್ಲಿ ಮುಖಾಮುಖಿಯಾಗಲಿದೆ. ಈ ಸರಣಿಯ ದಿನಾಂಕ ಹಾಗೂ ತಾಣಗಳನ್ನು ಕೂಡ ನ್ಯೂಜಿಲೆಂಡ್ ಕ್ರಿಕೆಟ್ ಅಧಿಕೃತವಾಗಿ ಘೋಷಣೆ ಮಾಡಿದೆ.

ಐರ್ಲೆಂಡ್ vs ಭಾರತ: ನಾಯಕತ್ವದ ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಹಾರ್ದಿಕ್ ಪಾಂಡ್ಯಐರ್ಲೆಂಡ್ vs ಭಾರತ: ನಾಯಕತ್ವದ ಮೊದಲ ಪಂದ್ಯದಲ್ಲೇ ಹೊಸ ದಾಖಲೆ ಬರೆದ ಹಾರ್ದಿಕ್ ಪಾಂಡ್ಯ

ಭಾರತದ ವಿರುದ್ಧ ಸರಣಿ

ಭಾರತದ ವಿರುದ್ಧ ಸರಣಿ

ರೋಹಿತ್ ಶರ್ಮಾ ನೇತೃತ್ವದ ಭಾರತ ತಂಡದ ವಿರುದ್ಧದ ವೈಟ್‌ಬಾಲ್ ಸರಣಿಗೆ ನ್ಯೂಜಿಲೆಂಡ್ ಆತಿಥ್ಯ ವಹಿಸಲಿದೆ. ಭಾರತ ಈ ಪ್ರವಾಸದಲ್ಲಿ ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಿದರೆ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿಯೂ ಮುಖಾಮುಖಿಯಾಗಲಿದೆ. ಟಿ20 ವಿಶ್ವಕಪ್‌ನ ಫೈನಲ್‌ನ ನಾಲ್ಕು ದಿನಗಳ ಬಳಿಕ ಈ ಸರಣಿ ಆರಂಭವಾಗಲಿದ್ದು ನವೆಂಬರ್ 18ರಿಂದ ಪರಾಂಭಗೊಳ್ಳಲಿದೆ. ಗಮನಿಸಬೇಕಾದ ಅಂಶವೆಂದರೆ ಕಳೆದ ವರ್ಷ ನ್ಯೂಜಿಲೆಂಡ್ ಕ್ರಿಕೆಟ್ ತಂಡ ವಿಶ್ವಕಪ್ ಫೈನಲ್ ಮುಕ್ತಾಯವಾದ ಕೆಲ ದಿನಗಳಲ್ಲಿಯೇ ಭಾರತ ಪ್ರವಾಸ ಕೈಗೊಂಡಿತ್ತು.

ತಾಣಗಳ ವಿವರ ಹೀಗಿದೆ

ತಾಣಗಳ ವಿವರ ಹೀಗಿದೆ

ನವೆಂಬರ್ 18ರಿಂದ ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿ ಆರಂಭವಾಗಲಿದೆ. ವಿಲ್ಲಿಂಗ್ಟನ್, ಟೌರಂಗ ಹಾಗೂ ನೇಪಿಯರ್ ಚುಟುಕು ಪಂದ್ಯಗಳಿಗೆ ಆತಿಥ್ಯವಹಿಸಲಿದೆ. ಬವೆಂಬರ್ 25-30ರ ಅವಧಿಯಲ್ಲಿ ಏಕದಿನ ಸರಣಿ ನಡೆಯಲಿದ್ದು ಆಕ್ಲಂಡ್, ಹ್ಯಾಮಿಲ್ಟನ್ ಹಾಗೂ ಕ್ರೈಸ್ಟ್‌ಚರ್ಚ್ ಆತಿಥ್ಯವಹಿಸಲಿದೆ.

Dinesh Karthik ಜೀವನದ ರಹಸ್ಯ:DK ಬದುಕಿಗೆ ಈತ ಎಂಟ್ರಿ ಕೊಟ್ಟಿಲ್ಲ ಅಂದಿದ್ರೆ DK ಕಥೆ??? | *Cricket | OneIndia
ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಯೋಜಿಸಲಿದೆ ಕಿವೀಸ್

ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿ ಆಯೋಜಿಸಲಿದೆ ಕಿವೀಸ್

ಇನ್ನು ಈ ಕ್ರಿಕೆಟ್ ಆವೃತ್ತಿಯಲ್ಲಿ ನ್ಯೂಜಿಲೆಂಡ್ ತಂಡ ಆಯೋಜನೆ ಮಾಡಲಿರುವ ಮತ್ತೊಂದು ಪ್ರಮುಖ ಸರಣಿಯೆಂದರೆ ಇಂಗ್ಲೆಂಡ್ ವಿರುದ್ಧಧ ಟೆಸ್ಟ್ ಸರಣಿ. ಎರಡು ಪಂದ್ಯಗಳ ಟೆಸ್ಟ್ ಸರಣಿ ಇದಾಗಲಿದ್ದು ಒಂದ ಪಿಂಕ್ ಬಾಲ್ ಟೆಸ್ಟ್ ಪಂದ್ಯವಾಗಿರಲಿದೆ. ಈ ಸರಣಿಯ ಮೂಲಕ ನ್ಯೂಜಿಲೆಂಡ್ ಇಂಗ್ಲೆಂಡ್ ನೆಲದಲ್ಲಿ ಅನುಭವಿಸಿದ ಟೆಸ್ಟ್ ಸರಣಿಯ ವೈಟ್‌ವಾಶ್ ಸೋಲಿಗೆ ಸೇಡು ತೀರಿಸಿಕೊಳ್ಳಲಿದೆ.

Story first published: Tuesday, June 28, 2022, 10:30 [IST]
Other articles published on Jun 28, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X