ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿಕೋಲಸ್ ಪೂರನ್ 6 ಸಿಕ್ಸರ್ ವ್ಯರ್ಥ, ವೆಸ್ಟ್‌ ಇಂಡೀಸ್ ವಿರುದ್ಧ ಪಾಕಿಸ್ತಾನಕ್ಕೆ ರೋಚಕ ಜಯ!

Nicholas Pooran Half century, Pakistan beat West Indies by 7 runs in 2nd T20I

ಗಯಾನಾ: ಗಯಾನಾದ ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ಶನಿವಾರ (ಜುಲೈ 31) ನಡೆದ ಪಾಕಿಸ್ತಾನ ಮತ್ತು ವೆಸ್ಟ್ ಇಂಡೀಸ್ ನಡುವಿನ ದ್ವಿತೀಯ ಟಿ20ಐ ಪಂದ್ಯದಲ್ಲಿ ಪ್ರವಾಸಿ ಪಾಕ್ ರೋಚಕ 7 ರನ್ ಜಯ ಗಳಿಸಿದೆ. ವಿಂಡೀಸ್‌ನಿಂದ ನಿಕೋಲಸ್ ಪೂರನ್ ಸ್ಫೋಟಕ ವ್ಯರ್ಥವಾಗಿದೆ. ಇದರೊಂದಿಗೆ ನಾಲ್ಕು ಪಂದ್ಯಗಳ ಟಿ20ಐ ಸರಣಿಯಲ್ಲಿ ಪಾಕಿಸ್ತಾನ 1-0ಯ ಮುನ್ನಡೆ ಗಳಿಸಿದೆ. ಇತ್ತಂಡಗಳ ಆರಂಭಿಕ ಪಂದ್ಯ ಮಳೆಗೆ ಆಹುತಿಯಾಗಿತ್ತು.

'ಬಿಸಿಸಿಐಯಿಂದ ನನಗೆ ಬೆದರಿಕೆ ಬರುತ್ತಿದೆ': ದೂರಿತ್ತ ಹರ್ಷೆಲ್ ಗಿಬ್ಸ್'ಬಿಸಿಸಿಐಯಿಂದ ನನಗೆ ಬೆದರಿಕೆ ಬರುತ್ತಿದೆ': ದೂರಿತ್ತ ಹರ್ಷೆಲ್ ಗಿಬ್ಸ್

ನಾಯಕ ಬಾಬರ್ ಅಝಾಮ್ ಬಿರುಸಿನ ಅರ್ಧ ಶತಕ, ಮೊಹಮ್ಮದ್ ರಿಝ್ವಾನ್ ಬ್ಯಾಟಿಂಗ್, ಮೊಹಮ್ಮದ್ ಹಫೀಝ್ ಬೌಲಿಂಗ್‌ ಬಲದೊಂದಿಗೆ ಪಾಕಿಸ್ತಾನ ಕ್ರಿಕೆಟ್ ತಂಡ ಪಂದ್ಯ ಗೆದ್ದು ಟಿ20ಐ ಸರಣಿಯಲ್ಲಿ ಮುನ್ನಡೆ ಗಿಟ್ಟಿಸಿಕೊಂಡಿದೆ. ಮೂರನೇ ಟಿ20ಐ ಆಗಸ್ಟ್ 1ರ ಇಂದು ನಡೆಯಲಿದೆ.

ಪಂದ್ಯದ ಸಂಕ್ಷಿಪ್ತ ಸ್ಕೋರ್‌

ಪಂದ್ಯದ ಸಂಕ್ಷಿಪ್ತ ಸ್ಕೋರ್‌

ಟಾಸ್ ಸೋತು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಪಾಕಿಸ್ತಾನ್ ತಂಡ, ಶಾರ್ಜೀಲ್ ಖಾನ್ 20, ಮೊಹಮ್ಮದ್ ರಿಝ್ವಾನ್ 46 (36), ಬಾಬರ್ ಅಝಾಮ್ 51 (40), ಫಖರ್ ಝಮಾನ್ 15, ಮೊಹಮ್ಮದ್ ಹಫೀಝ್ 6, ಸೊಹೈಬ್ ಮಕ್ಸೂದ್ 5, ಶದಾಬ್ ಖಾನ್ 5 ರನ್‌ನೊಂದಿಗೆ 20 ಓವರ್‌ಗಳಲ್ಲಿ 8 ವಿಕೆಟ್‌ ಕಳೆದು 157 ರನ್ ಗಳಿಸಿತ್ತು. ಗುರಿ ಬೆನ್ನಟ್ಟಿದ ವೆಸ್ಟ್ ಇಂಡೀಸ್ ತಂಡ, ಎವಿನ್ ಲೂಯಿಸ್ 35 (33), ಕ್ರಿಸ್ ಗೇಲ್ 16, ಶಿಮ್ರನ್ ಹೆಟ್ಮೈರ್ 17, ನಿಕೋಲಸ್ ಪೂರನ್ 62 (33), ಕೀರನ್ ಪೊಲಾರ್ಡ್ 13 ರನ್‌ನೊಂದಿಗೆ 20 ಓವರ್‌ಗಳಲ್ಲಿ 4 ವಿಕೆಟ್‌ ಕಳೆದು 150 ರನ್ ಬಾರಿಸಿ 7 ರನ್‌ನಿಂದ ಶರಣಾಯ್ತು.

ನಿಕೋಲಸ್ ಪೂರನ್ 6 ಸಿಕ್ಸರ್

ನಿಕೋಲಸ್ ಪೂರನ್ 6 ಸಿಕ್ಸರ್

ವೆಸ್ಟ್‌ ಇಂಡೀಸ್ ಬ್ಯಾಟಿಂಗ್‌ ವೇಳೆ ಆರಂಭದಲ್ಲಿ ಸ್ಲೋ ರನ್‌ಗಳು ಬಂದಿದ್ದರಿಂದ ಪಂದ್ಯದ ಕೊನೆಯ ವೇಳೆಗೆ ವೆಸ್ಟ್ ಇಂಡೀಸ್ ಗೆಲುವಿಗೆ ಕಡಿಮೆ ಎಸೆತಗಳಲ್ಲಿ ಹೆಚ್ಚು ರನ್‌ಗಳ ಅನಿವಾರ್ಯತೆಯಿತ್ತು. ಈ ವೇಳೆ 5ನೇ ಬ್ಯಾಟಿಂಗ್ ಕ್ರಮಾಂಕದಲ್ಲಿ ಬಂದಿದ್ದ ನಿಕೋಲಸ್ ಪೂರನ್ ಸ್ಫೋಟಕ ಬ್ಯಾಟಿಂಗ್‌ ಪ್ರದರ್ಶಿಸಿದ್ದರು. 4 ಫೋರ್ಸ್, 6 ಸಿಕ್ಸರ್ ಪೂರನ್ ಬ್ಯಾಟಿಂದ ಸಿಡಿಯಿತು. ಇನ್ನು ಪಾಕಿಸ್ತಾನ ಇನ್ನಿಂಗ್ಸ್‌ ವೇಳೆ ವೆಸ್ಟ್ ಇಂಡೀಸ್‌ ಆಲ್ ರೌಂಡರ್ ಜೇಸನ್ ಹೋಲ್ಡರ್ 26 ರನ್‌ಗೆ 4 ವಿಕೆಟ್, ಡ್ವೇನ್ ಬ್ರಾವೋ 2 ವಿಕೆಟ್ ಪಡೆದರೆ, ವೆಸ್ಟ್‌ ಇಂಡೀಸ್‌ ಇನ್ನಿಂಗ್ಸ್‌ನಲ್ಲಿ ಪಾಕ್‌ನ ಮೊಹಮ್ಮದ್ ಹಫೀಝ್ 6 ರನ್‌ಗೆ 1, ಶಾಹೀನ್ ಅಫ್ರಿದಿ 1, ಹಸನ್ ಅಲಿ 1, ಮೊಹಮ್ಮದ್ ವಾಸಿಮ್ ಜೂನಿಯರ್ 1 ವಿಕೆಟ್‌ನೊಂದಿಗೆ ಗಮನ ಸೆಳೆದರು. ಮೊಹಮ್ಮದ್ ಹಫೀಝ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದುಕೊಂಡರು.

ವೆಸ್ಟ್ ಇಂಡೀಸ್ ತಂಡ

ವೆಸ್ಟ್ ಇಂಡೀಸ್ ತಂಡ

ಪ್ಲೇಯಿಂಗ್ XI: ಎವಿನ್ ಲೂಯಿಸ್, ಆಂಡ್ರೆ ಫ್ಲೆಚರ್, ಕ್ರಿಸ್ ಗೇಲ್, ಶಿಮ್ರಾನ್ ಹೆಟ್ಮೈಯರ್, ನಿಕೋಲಸ್ ಪೂರನ್ (ವಿಕೆ), ಕೀರನ್ ಪೊಲಾರ್ಡ್ (ನಾಯಕ), ಜೇಸನ್ ಹೋಲ್ಡರ್, ಡ್ವೇನ್ ಬ್ರಾವೊ, ರೊಮಾರಿಯೊ ಶೆಫರ್ಡ್, ಹೇಡನ್ ವಾಲ್ಷ್, ಅಕೆಲ್ ಹೊಸೈನ್
ಬೆಂಚ್: ಫಿಡೆಲ್ ಎಡ್ವರ್ಡ್ಸ್, ಶೆಲ್ಡನ್ ಕಾಟ್ರೆಲ್, ಫ್ಯಾಬಿಯನ್ ಅಲೆನ್, ಆಂಡ್ರೆ ರಸೆಲ್, ಓಬೇಡ್ ಮೆಕಾಯ್, ಲೆಂಡ್ಲ್ ಸಿಮನ್ಸ್, ಓಶಾನೆ ಥಾಮಸ್, ಕೆವಿನ್ ಸಿಂಕ್ಲೇರ್

ಗಡ್ಡ ಹಾಗೂ ತಿಲಕಾನೆ ನನ್ನ IDENTITY !! C T RAVI | Oneindia Kannada
ಪಾಕಿಸ್ತಾನ ತಂಡ

ಪಾಕಿಸ್ತಾನ ತಂಡ

ಪ್ಲೇಯಿಂಗ್ XI: ಶಾರ್ಜೀಲ್ ಖಾನ್, ಮೊಹಮ್ಮದ್ ರಿಜ್ವಾನ್ (ವಿಕೆ), ಬಾಬರ್ ಅಝಾಮ್ (ನಾಯಕ), ಮೊಹಮ್ಮದ್ ಹಫೀಜ್, ಫಖರ್ ಜಮಾನ್, ಸೊಹೈಬ್ ಮಕ್ಸೂದ್, ಶಾದಬ್ ಖಾನ್, ಹಸನ್ ಅಲಿ, ಮೊಹಮ್ಮದ್ ವಾಸಿಂ ಜೂನಿಯರ್, ಶಾಹೀನ್ ಅಫ್ರಿದಿ, ಉಸ್ಮಾನ್ ಖಾದಿರ್.
ಬೆಂಚ್: ಸರ್ಫರಾಜ್ ಅಹ್ಮದ್, ಮೊಹಮ್ಮದ್ ನವಾಜ್, ಇಮಾದ್ ವಾಸಿಂ, ಫಹೀಮ್ ಅಶ್ರಫ್, ಅರ್ಷದ್ ಇಕ್ಬಾಲ್, ಮೊಹಮ್ಮದ್ ಹಸ್ನೈನ್, ಹ್ಯಾರಿಸ್ ರೌಫ್.

Story first published: Sunday, August 1, 2021, 9:08 [IST]
Other articles published on Aug 1, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X