ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನ್ಯೂಜಿಲೆಂಡ್ ಪ್ರವಾಸ: ವಿಂಡೀಸ್ ತಂಡಕ್ಕೆ ಪೊಲ್ಲಾರ್ಡ್ ನಾಯಕ, ಪೂರನ್ ಉಪ ನಾಯಕ

Nicholas Pooran named as West Indies Vice captains for NZ series

ಸೈಂಟ್ ಜಾನ್ಸ್ (ಆಂಟಿಗಾ), ನ .12: ಐಪಿಎಲ್ 2020ರಲ್ಲಿ ಕಿಂಗ್ಸ್ ಎಲೆವನ್ ಪಂಜಾಬ್ ತಂಡದ ಪರ ಆಡುವ ನಿಕೊಲಾಸ್ ಪೂರನ್ ಅವರನ್ನು ವೆಸ್ಟ್ ಇಂಡೀಸ್ ಟಿ20ಐ ಉಪ ನಾಯಕರನ್ನಾಗಿ ಆಯ್ಕೆ ಮಾಡಲಾಗಿದೆ. ನ್ಯೂಜಿಲೆಂಡ್ ಸರಣಿಯಲ್ಲಿ ರೊಸ್ಟನ್ ಚೇಸ್ ಅವರು ಟೆಸ್ಟ್ ತಂಡಕ್ಕೆ ಉಪ ನಾಯಕರಾಗಿರುತ್ತಾರೆ ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಪ್ರಕಟಿಸಿದೆ.

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ವೆಸ್ಟ್ ಇಂಡೀಸ್ ಕ್ರಿಕೆಟ್‌ ತಂಡ ಕೊವಿಡ್-19 ಪರೀಕ್ಷೆಯಲ್ಲಿ ಪಾಸ್ ಆಗಿದೆ. ನ್ಯೂಜಿಲೆಂಡ್ ಪ್ರವಾಸದಲ್ಲಿ ಉಭಯ ತಂಡಗಳು 3 ಟಿ20ಐ ಮತ್ತು 2 ಟೆಸ್ಟ್ ಪಂದ್ಯಗಳಲ್ಲಿ ಪಾಲ್ಗೊಳ್ಳಲಿವೆ.

ನ್ಯೂಜಿಲೆಂಡ್ ಪ್ರವಾಸದಲ್ಲಿರುವ ವಿಂಡೀಸ್ ಕೋವಿಡ್ ಪರೀಕ್ಷೆಯಲ್ಲಿ ಪಾಸ್ನ್ಯೂಜಿಲೆಂಡ್ ಪ್ರವಾಸದಲ್ಲಿರುವ ವಿಂಡೀಸ್ ಕೋವಿಡ್ ಪರೀಕ್ಷೆಯಲ್ಲಿ ಪಾಸ್

ನವೆಂಬರ್ 27ರಂದು ಮೊದಲನೇ ಟಿ20 ಪಂದ್ಯ ಮೌಂಟ್‌ಮಾಂಗನ್ಯುಯಿಯಲ್ಲಿ ನಡೆದರೆ, ದ್ವಿತೀಯ ಟಿ20 ಪಂದ್ಯ ಇದೇ ಸ್ಟೇಡಿಯಂನಲ್ಲಿ ನವೆಂಬರ್ 29ಕ್ಕೆ ಮತ್ತು ತೃತೀಯ ಪಂದ್ಯ ನವೆಂಬರ್ 30ಕ್ಕೆ ನಡೆಯಲಿದೆ. ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಭಾಗವಾಗಿ ಡಿಸೆಂಬರ್ 3ರಂದು ಮೊದಲನೇ ಟೆಸ್ಟ್ ಪಂದ್ಯ ಹ್ಯಾಮ್ಟನ್‌ನಲ್ಲಿ, ಡಿಸೆಂಬರ್ 11ರಂದು ದ್ವಿತೀಯ ಟೆಸ್ಟ್ ವೆಲ್ಲಿಂಗ್ಟನ್‌ನಲ್ಲಿ ಆರಂಭವಾಗಲಿದೆ.

ಆಲ್ ರೌಂಡರ್ ಚೇಸ್ 35 ಟೆಸ್ಟ್ ಪಂದ್ಯಗಳನ್ನಾಡಿದ್ದು, 5 ಶತಕ ಹಾಗೂ 3 ಬಾರಿ 5 ವಿಕೆಟ್ ಗಳಿಸಿದ್ದಾರೆ. ವಿಕೆಟ್ ಕೀಪರ್ ಬ್ಯಾಟ್ಸ್ ಮನ್ ಪೂರನ್ ಅವರು 19 ಟಿ20ಐ ಪಂದ್ಯಗಳಿಂದ 2 ಅರ್ಧಶತಕ ಗಳಿಸಿದ್ದರೆ, ಏಕದಿನ ಕ್ರಿಕೆಟ್ ನಲ್ಲಿ 50 ರನ್ ಸರಾಸರಿ ಹೊಂದಿದ್ದಾರೆ. ಐಪಿಎಲ್ ನಲ್ಲಿ ಪಂಜಾಬ್ ಪರ 14 ಪಂದ್ಯಗಳಲ್ಲಿ 353ರನ್ ಬಾರಿಸಿದ್ದಾರೆ.

ವೆಸ್ಟ್ ಇಂಡೀಸ್ ಟಿ20ಐ ತಂಡ: ಕೀರಾನ್ ಪೊಲ್ಲಾರ್ಡ್(ನಾಯಕ), ನಿಕೊಲಾಸ್ ಪೂರನ್(ಉಪ ನಾಯಕ) ಫಾಬಿಯಾನ್ ಅಲೆನ್, ಶೆಲ್ಡನ್ ಕಾಟ್ರೆಲ್, ಆಂಡ್ರೆ ಫ್ಲೆಚರ್, ಶಿಮ್ರೊನ್ ಹೆಟ್ಮೆರ್, ಬ್ರಂಡನ್ ಕಿಂಗ್, ಕಲಿ ಮೆಯರ್ಸ್, ರೊವ್ಮನ್ ಪೊವೆಲ್, ಕೀಮೋ ಪಾಲ್, ರೊಮಾರಿಯೊ ಶೆಫರ್ಡ್, ಒಶಾನೆ ಥಾಮಸ್, ಹೇಡನ್ ವಾಲ್ಶ್ ಜ್ಯೂನಿಯರ್, ಕೆಸ್ರಿಕ್ ವಿಲಿಯಮ್ಸ್.

ಟೆಸ್ಟ್ ಕ್ರಿಕೆಟ್: ಜಾಸನ ಹೋಲ್ಡರ್ (ನಾಯಕ), ರೊಸ್ಟನ್ ಚೇಸ್ (ಉಪ ನಾಯಕ), ಜೆರ್ಮೈನ್ ಬ್ಲಾಕ್ ವುಡ್, ಕ್ರೆಗ್ ಬ್ರಥ್ ವೈಟ್, ಡರೆನ್ ಬ್ರಾವೊ, ಶಮರ್ ಬ್ರೂಕ್ಸ್, ಜಾನ್ ಕ್ಯಾಂಪ್ ಬೆಲ್, ರಹ್ಕೀಮ್ ಕಾರ್ ನ್ವೆಲ್, ಅಲ್ಜರಿ ಜೋಸೆಫ್, ಕೀಮೋ ಪಾಲ್, ಕೆಮಾರ್ ರೋಚ್

Story first published: Thursday, November 12, 2020, 11:31 [IST]
Other articles published on Nov 12, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X