ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ನಿಂದನೆಗೆ ವಿರಾಟ್ ಕೊಹ್ಲಿಯೇ ದಾರಿ ಮಾಡಿಕೊಳ್ಳುತ್ತಾರೆ': ನಿಕ್ ಕಾಂಪ್ಟನ್

Nick Compton explained difference sledging mothods between Virat Kohli and James Anderson

ಲಂಡನ್: ಇಂಗ್ಲೆಂಡ್ ತಂಡದ ಮಾಜಿ ಆರಂಭಿಕ ಬ್ಯಾಟ್ಸ್‌ಮನ್‌ ನಿಕ್ ಕಾಂಪ್ಟನ್, ಟೀಮ್ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ಮತ್ತು ಇಂಗ್ಲೆಂಡ್ ವೇಗಿ ಜೇಮ್ಸ್ ಆ್ಯಂಡರ್ಸನ್ ನಡುವಿನ ಸ್ಲೆಡ್ಜಿಂಗ್‌ ಬಗ್ಗೆ ಮಾತನಾಡಿದ್ದಾರೆ. ಕೊಹ್ಲಿಯೇ ಮುಂದಾಗಿ ನಿಂದನೆಗೆ ದಾರಿಯಾಗುತ್ತಿದ್ದಾರೆ. ಕೊಹ್ಲಿ ತನ್ನನ್ನು ತಾನು ತಿದ್ದಿಕೊಳ್ಳಬೇಕು ಎಂದೂ ಕಾಂಪ್ಟನ್ ಹೇಳಿದ್ದಾರೆ. ಭಾರತ vs ಇಂಗ್ಲೆಂಡ್ ದ್ವಿತೀಯ ಟೆಸ್ಟ್‌ ಪಂದ್ಯದ ವೇಳೆಯ ಸ್ಲೆಡ್ಜಿಂಗ್ ಪ್ರಕರಣಕ್ಕೆ ಸಂಬಂಧಿಸಿ ಕಾಂಪ್ಟನ್ ತನ್ನ ಅಭಿಪ್ರಾಯ ಹಂಚಿಕೊಂಡಿದ್ದಾರೆ.

IPL 2021 2ನೇ ಹಂತ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವೇಳಾಪಟ್ಟಿIPL 2021 2ನೇ ಹಂತ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಸಂಪೂರ್ಣ ವೇಳಾಪಟ್ಟಿ

ಲಂಡನ್‌ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದಿದ್ದ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ದ್ವಿತೀಯ ಟೆಸ್ಟ್‌ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ಜೇಮ್ಸ್ ಆ್ಯಂಡರ್ಸನ್ ಮಧ್ಯೆ ಬಿಗುವಿನ ವಾತಾವರಣ ಸೃಷ್ಠಿಯಾಗಿತ್ತು. ಮೈದಾನದಲ್ಲಿ ಕೊಹ್ಲಿ ಮತ್ತು ಆ್ಯಂಡರ್ಸನ್ ಬೈದಾಡಿಕೊಂಡಿದ್ದರು. ಇಬ್ಬರ ನಡುವೆ ನಡೆದ ನಿಂದನೆಯ ಮಾತುಗಳು ಸ್ಟಂಪ್ ಬೈಕ್‌ನಲ್ಲಿ ಸ್ಪಷ್ಟವಾಗಿ ದಾಖಲಾಗಿತ್ತು.

ಸ್ಲೆಡ್ಜಿಂಗ್ ವೇಳೆ ವಿರಾಟ್ ಕೊಹ್ಲಿ ಮಿತಿ ಮೀರುತ್ತಾರೆ

ಸ್ಲೆಡ್ಜಿಂಗ್ ವೇಳೆ ವಿರಾಟ್ ಕೊಹ್ಲಿ ಮಿತಿ ಮೀರುತ್ತಾರೆ

ದ್ವಿತೀಯ ಟೆಸ್ಟ್‌ ಪಂದ್ಯದ ವೇಳೆ ವಿರಾಟ್ ಕೊಹ್ಲಿ ಮತ್ತು ಜೇಮ್ಸ್ ಆ್ಯಂಡರ್ಸನ್ ನಡುವೆ ನಡೆದ ಸ್ಲೆಡ್ಜಿಂಗ್ ಬಗ್ಗೆ ಮಾತನಾಡಿರುವ ನಿಕ್ ಕಾಂಪ್ಟನ್, ಕೊಹ್ಲಿ ಸ್ಲೆಡ್ಜಿಂಗ್ ವೇಳೆ ಮಿತಿ ಮೀರುತ್ತಾರೆ. ಬದಲಿಗೆ ಕೊಹ್ಲಿ ಸ್ವಲ್ಪ ತಾಳ್ಮೆ ತಂದುಕೊಳ್ಳಬೇಕು. ಯಾಕೆಂದರೆ ಕೊಹ್ಲಿ ಅವರು ಭಾರತೀಯ ಕ್ರಿಕೆಟ್ ಅನ್ನು ಪ್ರತಿನಿಧಿಸುತ್ತಿದ್ದಾರೆ. ಭಾರತೀಯ ಕ್ರಿಕೆಟ್‌ಗೆ ಒಂದು ಘನತೆಯಿದೆ. ಅದನ್ನು ಕೊಹ್ಲಿ ಉಳಿಸಿಕೊಳ್ಳಬೇಕು. ಕ್ರಿಕೆಟ್‌ನಲ್ಲಿ ಸ್ಲೆಡ್ಜಿಂಗ್‌ ಒಳ್ಳೆಯದೆ. ಅದು ಬೇಕು ಕೂಡ. ಆದರೆ ನಮ್ಮ ನಾಲಗೆ ಎಲ್ಲೆ ಮೀರಬಾರದು. ಸ್ವಲ್ಪ ಶಾಂತವಾಗೆ ತಮ್ಮ ಪ್ರತಿರೋಧ ತೋರಿಸಿಕೊಳ್ಳಬೇಕು ಎಂದು ಕಾಂಪ್ಟನ್ ಹೇಳಿದ್ದಾರೆ. ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದಿದ್ದ ಪಂದ್ಯದ ವೇಳೆ ಕೊಹ್ಲಿ, ಆ್ಯಂಡರ್ಸನನ್ ವಿರುದ್ಧ ಬೈದಾಡಿಕೊಂಡಿದ್ದರು. ಪಂದ್ಯ ಸೋಲುವುದನ್ನು ತಪ್ಪಿಸಲು ಯತ್ನಿಸುತ್ತಿದ್ದ ಇಂಗ್ಲೆಂಡ್‌ನ ಜೋಸ್ ಬಟ್ಲರ್ ಮತ್ತು ಆಲಿ ರಾಬಿನ್ಸನ್ ವಿರುದ್ಧವೂ ನಿಂದನೆಯ ಮಾತುಗಳನ್ನಾಡಿ ಕೆಣಕಿದ್ದರು. ಇದೇ ವಿಚಾರಗಳನ್ನು ಮುಂದಿಟ್ಟುಕೊಂಡು ಕಾಂಪ್ಟನ್ ಮಾತನಾಡಿದ್ದಾರೆ. ಸಾಮಾನ್ಯ ಸ್ಲೆಡ್ಜಿಂಗ್‌ಗೂ ಕೊಹ್ಲಿಯ ವಿಧಾನಕ್ಕೂ ವ್ಯತ್ಯಾಸವಿದೆ. ವಿರಾಟ್ ಸ್ವಲ್ಪ ಹೆಚ್ಚೇ ಎನ್ನುವಂತೆ ಕೋಪಗೊಳ್ಳುತ್ತಾರೆ ಎಂದು ಕಾಂಪ್ಟನ್ ತಿಳಿಸಿದ್ದಾರೆ.

ಸ್ಲೆಡ್ಜಿಂಗ್‌ಗೆ ಒಳ್ಳೆಯ ಉಪಾಯ ಹೇಳಿದ ಕಾಂಪ್ಟನ್

ಸ್ಲೆಡ್ಜಿಂಗ್‌ಗೆ ಒಳ್ಳೆಯ ಉಪಾಯ ಹೇಳಿದ ಕಾಂಪ್ಟನ್

"ಕ್ರಿಕೆಟ್‌ನಲ್ಲಿ ಸ್ಲೆಡ್ಜಿಂಗ್ ಸಾಮಾನ್ಯ ಅಂತ ಎಲ್ಲರಂತೆ ನಾನೂ ಕೂಡ ಒಪ್ಪಿಕೊಳ್ಳುತ್ತೇನೆ. ವಿರಾಟ್ ಕೊಹ್ಲಿ ಮಾತ್ರ ಅಲ್ಲ, ಜೇಮ್ಸ್ ಆ್ಯಂಡರ್ಸನ್ ಕೂಡ ಸ್ಲೆಡ್ಜಿಂಗ್‌ಗೆ ತಾನಾಗೇ ಮುಂದಾಗುತ್ತಾರೆ. ನಾನು ಆ ಬಗ್ಗೆ ಹೇಳುತ್ತಿಲ್ಲ. ಆದರೆ ಕೊಹ್ಲಿಯ ಭಾಷೆ ಕೊಂಚ ವಿಪರೀತವಾಗಿರತ್ತೆ. ಆ್ಯಂಡಸರ್ನ್ ಬೇರೆಯೇ ವಿಧಾನದಿಂದ ನಿಂದಿಸುತ್ತಾರೆ. ಆದರೆ ಕೊಹ್ಲಿ ಇನ್ನೂ ತೀವ್ರ ರೀತಿಯಲ್ಲಿ ನಿಂದನೆಗಿಳಿಯುತ್ತಾರೆ. ಅವರು ನಿಂದಿಸುವಾಗಲೂ ಸ್ವಲ್ಪ ಉತ್ತಮ ಪದಗಳನ್ನು ಬಳಸಬಹುದು. ನಾವು ಈ ಆಟಗಾರ ಅಥವಾ ಆ ಆಟಗಾರ ಅಂಥ ಅವರ ಮೇಲೆ ಕಲ್ಲು ಎಸೆಯಬಾರದು. ಅದಿಲ್ಲದಿದ್ದರೆ ನಾವು ಇನ್ನೂ ದೊಡ್ಡ ಮಟ್ಟಿನ ವಾಗ್ವಾದಲ್ಲಿ ತೊಡಗಿಕೊಳ್ಳಬಹುದು. ಭಾರತೀಯ ಆಟಗಾರರು ಇಂಗ್ಲೆಂಡ್ ಆಟಗಾರರಿಗೆ ತಿರುಗಿ ಉತ್ತರಿಸಲೇಬೇಕು. ಭಾರತೀಯರು ಕೋಪಗೊಳ್ಳಬಾರದು ಎಂದು ನಾನು ಹೇಳುತ್ತಿಲ್ಲ. ನನಗನ್ನಿಸುತ್ತದೆ, ರವೀಂದ್ರ ಜಡೇಜಾ ಕೂಡ ಆವತ್ತು ವಾಗ್ವಾದ ನಡೆಸಿದ್ದರು. ಆದರೆ ಅವರ ತೀರಿ ಸರಿಯಿತ್ತು. ಕೋಪ ಮಾಡಿಕೊಳ್ಳುವುದರಲ್ಲೂ ವಿಭಿನ್ನ ವಿಧಾನಗಳಿವೆ. ಕೊಹ್ಲಿ ಈ ಕೋಪವನ್ನು ಬೇರೆ ಚತುರ ವಿಧಾನದಿಂದ ಹೊರ ಹಾಕಬಹುದು. ಈ ರೀತಿಯ ಕಚ್ಚಾಟಕ್ಕಿಂತ ಬೇರೆಯದ್ದೇ ರೀತಿಯಲ್ಲಿ ಕೊಹ್ಲಿ ಎದುರೇಟು ನೀಡಬಹುದು. ಎದುರಾಳಿಗೆ ತಿರುಗೇಟು ನೀಡಲು ಇನ್ನೊಂದು ಒಳ್ಳೆಯ ವಿಧಾನವೆಂದರೆ ಅವರು ಕಾಲೆಳೆದಾಗ ಏನೂ ಮಾತನಾಡದೆ ಸುಮ್ಮನಿದ್ದು ಆ ಬಳಿಕ ನಮ್ಮ ಸರದಿ ಬಂದಾಗ ಶತಕ ಬಾರಿಸೋದು ಅಥವಾ ವಿಕೆಟ್ ಪಡೆಯೋದು ಇಂಥ ಸ್ಲೆಡ್ಜಿಂಗ್ ಒಳ್ಳೆಯದು," ಎಂದು ಸ್ಪೋರ್ಟ್ಸ್‌ಕೀಡಾ ಜೊತೆ ಮಾತನಾಡಿದ ಕಾಂಪ್ಟನ್ ಹೇಳಿದ್ದಾರೆ (ಚಿತ್ರದಲ್ಲಿ ಕಾಂಪ್ಟನ್).

ನಮಗೆ ಮನರಂಜನೆಗೆ ಒಂದು ಥಿಯೇಟರ್ ಬೇಕು

"ನಾವು ಈ ರೀತಿಯ ಸ್ಲೆಡ್ಜಿಂಗ್‌ಗಳನ್ನು ಮುಂದುವರೆಯಲು ಬಿಡಬೇಕು. ನಮಗೆ ಮನರಂಜನೆಗೆ ಒಂದು ಥಿಯೇಟರ್ ಬೇಕು. ಆಟದಲ್ಲಿ ನಮಗೆ ಕ್ಯಾರೆಕ್ಟರ್ ಬೇಕು. ಕೊಹ್ಲಿ ಆ ರೀತಿಯ ಕ್ಯಾರೆಕ್ಟರ್. ಕ್ರಿಕೆಟ್‌ಗೆ ಅವರು ಸಾಕಷ್ಟು ಕೊಡುಗೆಗಳನ್ನು ನೀಡಿದ್ದಾರೆ. ನನಗೆ ಕೊಹ್ಲಿ ಒಬ್ಬ ಆಟಗಾರನಾಗಿ ಅವರ ಬಗ್ಗೆ ಪ್ರೀತಿಯಿದೆ. ಅವರ ನಾಯಕತ್ವದ ತಂಡಕ್ಕೆ ಹೆಚ್ಚೆ ಎನ್ನುವಂತೆ ಭಾವನಾತ್ಮಕವಾಗಿರತ್ತೆ. ಕ್ರಿಕೆಟ್‌ನಲ್ಲಿ ಕ್ಯಾರೆಕ್ಟರ್ ಮುಖ್ಯ ನಿಜ. ಆದರೆ ಪ್ರತೀ ಸಾರಿಯೂ ಮ್ಯಾಚ್ ರೆಫರೀ ಮಧ್ಯ ಪ್ರವೇಶಿಸಿ ನಮ್ಮ ನಡುವಿನ ಜಗಳ ನಿಲ್ಲಿಸುವಂತಾಗಬಾರದು. ಹಾಗಾದರೆ ಕ್ರಿಕೆಟ್‌ ನಿಜವಾದ ಮನರಂಜನೆ ಹಾಳಾಗುತ್ತದೆ. ಅದು ಹೇಗಿರುತ್ತದೆಯೆಂದರೆ ತುಂಟಾಟದ ಹುಡುಗರನ್ನು ಆಡೋಕೆ ಬಿಟ್ಟಾಗ ಅವರು ಕಿತ್ತಾಡಿಕೊಳ್ಳುವ ರೀತಿಯಿರುತ್ತದೆ," ಎಂದು ಕಾಂಪ್ಟನ್ ವಿವರಿಸಿದ್ದಾರೆ. ಈ ಮೊದಲೂ ಕಾಂಪ್ಟನ್ ವಿರಾಟ್ ಕೊಹ್ಲಿಯ ನಡೆಯ ಬಗ್ಗೆ ತನ್ನ ಅಸಮಾಧಾನ ತೋರಿಕೊಂಡರು. ಕೊಹ್ಲಿ ಒಬ್ಬ ಹೊಸಲು ಬಾಯಿಯವ. ಇಂಗ್ಲೆಂಡ್ ನಾಯಕ ಜೋ ರೂಟ್, ನ್ಯೂಜಿಲೆಂಡ್ ನಾಯಕ ಕೇನ್ ವಿಲಿಯಮ್ಸನ್ ಭಾರತದ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಅವರಷ್ಟು ಕೊಹ್ಲಿ ಒಳ್ಳೆಯವನಲ್ಲ. ಕೊಹ್ಲಿಯಲ್ಲಿ ಒಳ್ಳೆಯ ನಾಯಕತ್ವದ ಗುಣವಿಲ್ಲ ಎಂದಿದ್ದರು. ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯ ಮುಗಿದು 2 ದಿನಗಳು ಕಳೆದ ಬಳಿಕ ಪಂದ್ಯದಲ್ಲಿ ನಡೆದ ವಾಕ್ಸಮರಗಳ ಕುರಿತು ಕಾಂಪ್ಟನ್ ಮಾತನಾಡಿ, ಕೊಹ್ಲಿಯದ್ದು ಕೆಟ್ಟ ಬಾಯಿ ಎಂದು ಕಿಡಿಕಾರಿದ್ದರು. "ವಿರಾಟ್ ಕೊಹ್ಲಿ ಓರ್ವ ಹೊಲಸು ಬಾಯಿಯ ವ್ಯಕ್ತಿಯಲ್ಲವೇ? 2012ರಲ್ಲಿ ಭಾರತ ಪ್ರವಾಸ ಕೈಗೊಂಡಿದ್ದಾಗ ವಿರಾಟ್ ಕೊಹ್ಲಿ ನನ್ನ ವಿರುದ್ಧ ಬಳಸಿದ ಅವಾಚ್ಯ ಶಬ್ದಗಳನ್ನು ಕೇಳಿ ದಿಗ್ಭ್ರಮೆಗೊಂಡಿದ್ದೆ ಹಾಗೂ ಅದನ್ನು ನನ್ನ ಜೀವನಪೂರ್ತಿ ಮರೆಯುವುದಿಲ್ಲ," ಎಂದಿದ್ದರು.

David Warner ಹಂಚಿಕೊಂಡ ಹೊಸ ವಿಡಿಯೋ ನೋಡಿ ಕನ್ನಡಿರು ಖುಷ್ | Oneindia Kannada
ಕೊಹ್ಲಿ ಮತ್ತು ಆ್ಯಂಡರ್ಸನ್ ಮಧ್ಯೆ ಏನಾಗಿದ್ದು ಆವತ್ತು?

ಕೊಹ್ಲಿ ಮತ್ತು ಆ್ಯಂಡರ್ಸನ್ ಮಧ್ಯೆ ಏನಾಗಿದ್ದು ಆವತ್ತು?

ಭಾರತ ಮತ್ತು ಇಂಗ್ಲೆಂಡ್ ನಡುವಿನ ಎರಡನೇ ಟೆಸ್ಟ್ ಪಂದ್ಯದ ಎರಡನೇ ಇನ್ನಿಂಗ್ಸ್‌ನಲ್ಲಿ 17ನೇ ಓವರ್ ಬೌಲಿಂಗ್ ಮಾಡುತ್ತಿದ್ದ ಜೇಮ್ಸ್ ಆ್ಯಂಡರ್ಸನ್ ಜತೆಗೆ ನಾನ್ ಸ್ಟ್ರೈಕ್ ಕೊನೆಯಲ್ಲಿದ್ದ ವಿರಾಟ್ ಕೊಹ್ಲಿ ವಾಕ್ಸಮರ ನಡೆಸಿದರು. ಜೇಮ್ಸ್ ಆ್ಯಂಡರ್ಸನ್ ಕುರಿತು ಮೈದಾನದಲ್ಲಿಯೇ ಕಿಡಿಕಾರಿದ ವಿರಾಟ್ ಕೊಹ್ಲಿ 'ನನ್ನನ್ನು ಪದೇ ಪದೇ ಕೆಣಕುತ್ತಿದ್ದೀಯ, ಜಸ್ ಪ್ರೀತ್ ಬುಮ್ರಾ ರೀತಿ ಕೆಣಕಲು ಪ್ರಯತ್ನಿಸುತ್ತಿದ್ದೀರಾ' ಎಂದು ವಿರಾಟ್ ಕೊಹ್ಲಿ ಜೇಮ್ಸ್ ಆ್ಯಂಡರ್ಸನ್ ಕಾಲನ್ನು ಎಳೆದರು. ಇನ್ನೂ ಪದೇ ಪದೇ ಪಿಚ್ ಮೇಲೆ ಓಡಾಡುತ್ತಿದ್ದ ಆ್ಯಂಡರ್ಸನ್ ವಿರುದ್ಧ ಮತ್ತೊಮ್ಮೆ ಕಿಡಿಕಾರಿದ ವಿರಾಟ್ ಕೊಹ್ಲಿ 'ಲಾರ್ಡ್ಸ್ ಮೈದಾನ ನಿಮ್ಮ ಮನೆಯ ಹಿತ್ತಲಲ್ಲ' ಎಂದು ಅವಾಚ್ಯ ಪದವೊಂದನ್ನು ಉಪಯೋಗಿಸಿ ಜೇಮ್ಸ್ ಆ್ಯಂಡರ್ಸನ್ ವಿರುದ್ಧ ಹರಿಹಾಯ್ದರು. ಅಷ್ಟೇ ಅಲ್ಲದೆ ಪಿಚ್ ಮೇಲೆ ಪದೇ ಪದೇ ಓಡಾಡಿದ್ದಕ್ಕೆ ಹೆಚ್ಚು ವಯಸ್ಸಾದ ಕಾರಣಕ್ಕೆ ಹೀಗೆಲ್ಲ ನಡೆದುಕೊಳ್ಳುತ್ತಿದ್ದೀ ಎಂದು ಜೇಮ್ಸ್ ಆ್ಯಂಡರ್ಸನ್ ವಿರುದ್ಧ ಮತ್ತೊಮ್ಮೆ ಕೊಹ್ಲಿ ರೇಗಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಂದ್ಹಾಗೆ, ಲಾರ್ಡ್ಸ್ ನಲ್ಲಿ ನಡೆದಿದ್ದ ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಭಾರತ ಭರ್ಜರಿ 151 ರನ್‌ಗಳ ಗೆಲುವು ದಾಖಲಿಸಿತ್ತು. ಅಸಲಿಗೆ ಪಂದ್ಯವನ್ನು ಇಂಗ್ಲೆಂಡ್ ಗೆಲ್ಲುವುದರಲ್ಲಿತ್ತು. ಆದರೆ ಭಾರತದ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಬೌಲರ್‌ಗಳಾದ ಮೊಹಮ್ಮದ್ ಶಮಿ ಮತ್ತು ಜಸ್‌ಪ್ರೀತ್‌ ಬೂಮ್ರಾ ಭರ್ಜರಿ ಬ್ಯಾಟಿಂಗ್‌ ನಡೆಸಿ ಎದುರಾಳಿಗೆ ಒತ್ತಡ ಹೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಂತೂ ಆ ಪಂದ್ಯ ಗೆದ್ದು ಐದು ಪಂದ್ಯಗಳ ಟೆಸ್ಟ್‌ ಸರಣಿಯಲ್ಲಿ ಭಾರತ 1-0ಯ ಮುನ್ನಡೆ ಪಡೆದುಕೊಂಡಿದೆ.

Story first published: Friday, August 20, 2021, 16:00 [IST]
Other articles published on Aug 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X