ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕರಾವಳಿ ಹುಡ್ಗ ನಿಖಿಲ್ ಕಾಂಚನ್ ಈಗ ಅಮೆರಿಕಾದ ಸ್ಟಾರ್‌ ಕ್ರಿಕೆಟಿಗ!

By Kiran Sirsikar
Nikhil Kanchan from Kundapura star of American cricket

ಉಡುಪಿ, ಡಿಸೆಂಬರ್ 21: ದೂರದ ಅಮೆರಿಕಾರದಲ್ಲಿ ಕರಾವಳಿ ಹುಡುಗನೊಬ್ಬ ಕ್ರಿಕೆಟ್ ಸ್ಟಾರ್ ಆಗಿ ಮಿಂಚುತ್ತಿದ್ದಾನೆ. ಈಗಷ್ಟೆ ಚಿಗುರುತ್ತಿರುವ ಅಮೆರಿಕನ್ ಕ್ರಿಕೆಟ್ ಕ್ಷೇತ್ರದಲ್ಲಿ ಉಡುಪಿ ಜಿಲ್ಲೆಯ ಕುಂದಾಪುರದ ಯುವಕ ತನ್ನ ಪ್ರತಿಭೆಯಿಂದ ವಿಶ್ವ ಕ್ರಿಕೆಟ್ ದಿಗ್ಗಜರೇ ತಿರುಗಿ ನೋಡುವಂತೆ ಮಿನುಗುತ್ತಿದ್ದಾನೆ.

ಡೆಲ್ಲೀನ ಗೆಲ್ಲೋಕೆ ಬಿಡದ ಜೈಪುರ್, ಬಾಯಗಲಿಸಿ ಬಾಕಿಯಾದ ವೀಕ್ಷಕರು!ಡೆಲ್ಲೀನ ಗೆಲ್ಲೋಕೆ ಬಿಡದ ಜೈಪುರ್, ಬಾಯಗಲಿಸಿ ಬಾಕಿಯಾದ ವೀಕ್ಷಕರು!

ಕಡಲ ತಡಿಯ ಶ್ರೀ ಕೃಷ್ಣನ ನಾಡು ಉಡುಪಿ ಜಿಲ್ಲೆಯ ಕುಂದಾಪುರದ ನಿಖಿಲ್‌ ಕೃಷ್ಣ ಕಾಂಚನ್‌ ಅಮೆರಿಕದಲ್ಲಿ ಕ್ರಿಕೆಟ್‌ ಕ್ಷೇತ್ರದಲ್ಲಿ ಮಿನುಗುತ್ತಿರುವ ಪ್ರತಿಭೆ. ಬಾಲ್ಯದಿಂದಲೇ ಕ್ರಿಕೆಟ್‌ನತ್ತ ಅತ್ಯಂತ ಆಸಕ್ತರಾಗಿದ್ದ ನಿಖಿಲ್‌ ಇಂದು ಕ್ರಿಕೆಟ್‌ ಕ್ಷೇತ್ರದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಗಳಿಸುವಂತೆ ಮಾಡಿದೆ . ನಿಖಿಲ್‌ ಫಿಲ್ಡಿಂಗ್ , ಬ್ಯಾಟಿಂಗ್‌, ಕೀಪಿಂಗ್‌ ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ.

ಯುವರಾಜ್ ಮುಂಬೈ ಸೇರಿಕೊಂಡ ಬಗ್ಗೆ ನಂಗೊಂದ್ ಹೇಳ್ಳಿಕ್ಕಿದೆ: ಗಂಗೂಲಿಯುವರಾಜ್ ಮುಂಬೈ ಸೇರಿಕೊಂಡ ಬಗ್ಗೆ ನಂಗೊಂದ್ ಹೇಳ್ಳಿಕ್ಕಿದೆ: ಗಂಗೂಲಿ

ಪ್ರಾಥಮಿಕ ವಿದ್ಯಾಭ್ಯಾಸವನ್ನು ಬ್ರಹ್ಮಾವರದ ಲಿಟ್ಲ್‌ ರಾಕ್‌ ಇಂಡಿಯನ್‌ ಸ್ಕೂಲ್‌ನಲ್ಲಿ ಪ್ರಾರ್ಥಮಿಕ ವಿದ್ಯಾಬ್ಯಾಸ ಪೂರೈಸಿದ ನಿಖಿಲ್, ಬಾಲ್ಯದಿಂದಲೇ ಕ್ರಿಕೆಟ್‌ ಬಗ್ಗೆ ವಿಶೇಷ ಆಸಕ್ತಿ ಹೊಂದಿದ್ದ ನಿಖಿಲ್‌ ಹೈಸ್ಕೂಲ್‌ ವಿದ್ಯಾರ್ಥಿಯಾಗಿದ್ದಾಗಲೇ ಕ್ರಿಕೆಟ್‌ನಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದರು. ಕುಂದಾಪುರದ ಖ್ಯಾತ ಚಕ್ರವರ್ತಿ ಕ್ರಿಕೆಟ್‌ ತಂಡದ ಪ್ರದೀಪ್‌ ಅವರಲ್ಲಿ ತರಬೇತಿ ಪಡೆದು ವಿಕೆಟ್‌ ಕೀಪಿಂಗ್‌ನಲ್ಲಿ ಪಳಗಿದರು.

ಕುಂದಾಪುರದ ಕುವರ

ಕುಂದಾಪುರದ ಕುವರ

ಕುಂದಾಪುರದ ಉದ್ಯಮಿ ಕೆ.ಕೆ. ಕಾಂಚನ್‌ ಮತ್ತು ಶಾಂತಾ ಕಾಂಚನ್‌ ಅವರ ಪುತ್ರರಾಗಿರುವ ನಿಖಿಲ್‌ ಕಾಂಚನ್‌ ಕೋಟದ ವಿವೇಕ ಜೂನಿಯರ್‌ ಕಾಲೇಜಿನಲ್ಲಿ ಪದವಿ ಪೂರ್ವ ಶಿಕ್ಷ ಣ ಪಡೆದು ನಂತರ ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿಯಲ್ಲಿ ಎಂಜಿನಿಯರಿಂಗ್‌ ಪದವಿ ಮುಗಿಸಿದ್ದಾರೆ. ಬೆಂಗಳೂರು ಇನ್‌ಸ್ಟಿಟ್ಯೂಟ್‌ ಆಫ್‌ ಟೆಕ್ನಾಲಜಿ ಯಲ್ಲಿ ಎಂಜಿನಿಯರಿಂಗ್‌ ಪದವಿ ವ್ಯಾಸಂಗ ಮಾಡುತ್ತಿರುವ ಸಂದರ್ಭ ನಾಲ್ಕು ವರ್ಷ ಬಿಐಟಿ ಕ್ರಿಕೆಟ್‌ ತಂಡವನ್ನು ವಿಶ್ವವಿದ್ಯಾಲಯ ಮಟ್ಟದಲ್ಲಿ ಮುನ್ನಡೆಸಿದ್ದರು. ಕರ್ನಾಟಕ ರಾಜ್ಯ ಬಿ ಡಿವಿಜನ್‌ ಲೀಗ್‌ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ನಿಖಿಲ್ ಕಾಂಚನ್.

ಸೀನಿಯರ್‌ ಡಿಸೈನ್‌ ಎಂಜಿನಿಯರ್‌

ಸೀನಿಯರ್‌ ಡಿಸೈನ್‌ ಎಂಜಿನಿಯರ್‌

ನಂತರ ದಿನಗಳಲ್ಲಿ ಉನ್ನತ ವಿದ್ಯಾಭ್ಯಾಸಕ್ಕೆ ಅಮೆರಿಕಾಕೆ ತೆರಳಿದ ನಿಖಿಲ್ ಕಾಂಚನ್ ಎಂಎಸ್‌ ಸ್ನಾತಕೋತ್ತರ ಪದವಿಯನ್ನು ಅಮೆರಿಕದ ಯುನಿವರ್ಸಿಟಿ ಆಫ್‌ ಮಿಚಿಗನ್‌ನಲ್ಲಿ ಪಡೆದಿದ್ದಾರೆ. ಪ್ರಸ್ತುತ ಟೆಟ್ರಾಡ್‌ನಲ್ಲಿ ಪ್ರತಿಷ್ಠಿತ ಫೋರ್ಡ್‌ ಮೋಟಾರ್ಸ್‌ನಲ್ಲಿ ಸೀನಿಯರ್‌ ಡಿಸೈನ್‌ ಎಂಜಿನಿಯರ್‌ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಎಲ್ಲರಿಂದಲೂ ಶಹಬ್ಬಾಸ್‌ಗಿರಿ

ಎಲ್ಲರಿಂದಲೂ ಶಹಬ್ಬಾಸ್‌ಗಿರಿ

ಹೊರಾಂಗಣ ಕ್ರಿಕೆಟ್‌ ಅಲ್ಲದೇ ಒಳಾಂಗಣ ಕ್ರಿಕೆಟ್‌ನಲ್ಲಿಯೂ ನಿಖಿಲ್‌ ಕಾಂಚನ್‌ ಅಪ್ರತಿಮ ಸಾಧನೆ ಮಾಡಿದ್ದಾರೆ. ಕಳೆದ ತಿಂಗಳಷ್ಟೇ ಅಮೆರಿಕದ ಮಿಚಿಗನ್‌ ರಾಜ್ಯದಲ್ಲಿ ನಡೆದ ಕ್ರಿಕೆಟ್‌ ಪಂದ್ಯಾವಳಿಯೊಂದರಲ್ಲಿ ಮಿಚಿಗನ್‌ ರಾಜ್ಯ ತಂಡದ ನೇತೃತ್ವ ವಹಿಸಿದ್ದ ನಿಖಿಲ್‌ ಅದ್ವಿತೀಯ ಸಾಧನೆ ಮಾಡಿ ಎಲ್ಲರಿಂದಲೂ ಶಹಬ್ಬಾಸ್‌ಗಿರಿ ಪಡೆದಿದ್ದಾರೆ (ಚಿತ್ರ ಕೃಪೆ: ಕುಂದಾಪುರ್ ಡಾಟ್ ಕಾಮ್).

ಸಾಲು ಸಾಲು ಪ್ರಶಸ್ತಿಗಳು

ಸಾಲು ಸಾಲು ಪ್ರಶಸ್ತಿಗಳು

40 ಓವರ್‌ಗಳ ಪಂದ್ಯಾವಳಿಯ ಅತ್ಯುತ್ತಮ ಆಟಗಾರ, ಟಿ-20 ಉತ್ತಮ ಆಟಗಾರ, 40 ಓವರ್‌ಗಳ ಪಂದ್ಯಾವಳಿಯ ಉತ್ತಮ ಬ್ಯಾಟ್ಸ್‌ಮನ್‌,ಟಿ-20 ಅತ್ಯುತ್ತಮ ಬ್ಯಾಟ್ಸ್‌ಮನ್‌, ಯುಎಸ್‌ ಕಾರ್ಪೊರೇಟ್‌ ಕಪ್‌ನ ಉತ್ತಮ ಟಿ-20 ಆಟಗಾರ, ಉತ್ತಮ ಫೀಲ್ಡರ್‌, ಡಿಟ್ರಾಯ್ಡ್‌ ಸೂಪರ್‌ ಲೀಗ್‌ನ ಉತ್ತಮ ಬ್ಯಾಟ್ಸ್‌ಮನ್‌ ಹೀಗೆ ಹತ್ತು ಹಲವು ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಯುನಿರ್ವಸಿಟಿ ಆಫ್‌ ಮಿಚಿಗನ್‌ ಕ್ರಿಕೆಟ್‌ ತಂಡದ ನಾಯಕರಾಗಿ ಸತತ ಮೂರು ವರ್ಷ ಚಾಂಪಿಯನ್‌ಷಿಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ.

Story first published: Friday, December 21, 2018, 20:19 [IST]
Other articles published on Dec 21, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X