ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಮೆನ್ಸ್ ಟಿ20 ಚಾಲೆಂಜ್‌ಗೆ ಪ್ರಾಯೋಜಕತ್ವದ ಜೊತೆಗೆ ಮಹಿಳಾ ಕ್ರಿಕೆಟ್‌ಗೆ ರಿಲಯನ್ಸ್ ಸಂಪೂರ್ಣ ಬೆಂಬಲ

By ಪ್ರತಿನಿಧಿ
Nita Ambani extends support for women’s cricket

ಮುಂಬೈ, ನವೆಂಬರ್ 2: ವಿಮೆನ್ಸ್ ಟಿ20 ಚಾಲೆಂಜ್‌ಗೆ ಜಿಯೋ ಪ್ರಾಯೋಜಕತ್ವ ವಹಿಸಿಕೊಂಡ ಬಳಿಕ ರಿಲಯನ್ಸ್ ಫೌಂಡೇಶನ್ ಸ್ಥಾಪಕಿ ರಿಲಯನ್ಸ್ ಫೌಂಡೇಷನ್ ಮಹಿಳಾ ಕ್ರಿಕೆಟ್ ಪ್ರಗತಿಗೆ ಮಹತ್ವದ ಹೆಜ್ಜೆಯನ್ನಿಟ್ಟಿದೆ. ಸ್ಥಾಪಕಿ ಹಾಗೂ ಅಧ್ಯಕ್ಷೆ ನೀತಾ ಅಂಬಾನಿ ಅವರು ಭಾರತದಲ್ಲಿ ಮಹಿಳಾ ಕ್ರಿಕೆಟ್ ಗೆ ತಮ್ಮ ಬೆಂಬಲ ಘೋಷಿಸಿದ್ದಾರೆ. ಆ ದಿಕ್ಕಿನಲ್ಲಿ ಮೊದಲ ಹೆಜ್ಜೆಯಾಗಿ ಜಿಯೋ ಮತ್ತು ರಿಲಯನ್ಸ್ ಫೌಂಡೇಷನ್ ಎಜುಕೇಷನ್ ಅಂಡ್ ಸ್ಪೋರ್ಟ್ಸ್ ಫಾರ್ ಆಲ್ ನಿಂದ (RF ESA) ಮುಂಬರುವ ವಿಮೆನ್ಸ್ ಟಿ20 ಚಾಲೆಂಜ್‌ಗೆ ಪ್ರಾಯೋಜಕತ್ವ ಘೋಷಿಸಿದ್ದಾರೆ.

ಇದರ ಜತೆಗೆ ಮಹಿಳಾ ಕ್ರಿಕೆಟರ್‌ಗಳಿಗೆ ಅಭ್ಯಾಸ ಹಾಗೂ ಇತರ ಸೌಲಭ್ಯಗಳಿಗಾಗಿ ನವೀ ಮುಂಬೈನಲ್ಲಿ ಇರುವ ಜಿಯೋ ಕ್ರಿಕೆಟ್ ಮೈದಾನದಲ್ಲಿ ಮಹಿಳಾ ಕ್ರಿಕೆಟರ್ ಗಳಿಗೆ ಕ್ರಿಕೆಟ್ ಫೆಸಿಲಿಟಿ ಒದಗಿಸುವುದಾಗಿ ನೀತಾ ಅಂಬಾನಿ ತಿಳಿಸಿದ್ದಾರೆ. ಹೀಗಾಗಿ ಜಿಯೋ ಕ್ರಿಕೆಟ್ ಮೈದಾನದಲ್ಲಿ ರಾಷ್ಟ್ರೀಯ ತಂಡಕ್ಕೆ ಟ್ರಯಲ್, ಶಿಬಿರ ಹಾಗೂ ಸ್ಪರ್ಧಾತ್ಮಕ ಪಂದ್ಯಗಳನ್ನು ವರ್ಷವಿಡೀ ಉಚಿತವಾಗಿ ನಡೆಸಲು ಅವಕಾಶ ದೊರೆಯಲಿದೆ.

ವಿಮೆನ್ಸ್ ಟಿ20 ಚಾಲೆಂಜ್‌: ಶೀರ್ಷಿಕೆ ಪ್ರಾಯೋಜಕತ್ವ ತೆಕ್ಕೆಗೆ ಹಾಕಿಕೊಂಡ ಜಿಯೋವಿಮೆನ್ಸ್ ಟಿ20 ಚಾಲೆಂಜ್‌: ಶೀರ್ಷಿಕೆ ಪ್ರಾಯೋಜಕತ್ವ ತೆಕ್ಕೆಗೆ ಹಾಕಿಕೊಂಡ ಜಿಯೋ

ಇಷ್ಟು ಮಾತ್ರವಲ್ಲದೆ ಮುಂಬೈನಲ್ಲಿರುವ ಸರ್ ಎಚ್.ಎನ್. ರಿಲಯನ್ಸ್ ಫೌಂಡೇಷನ್ ಹಾಸ್ಪಿಟಲ್ ಅಂಡ್ ರಿಸರ್ಚ್ ಸೆಂಟರ್ ನಲ್ಲಿ ದೊರೆಯುವ ಪುನಶ್ಚೇತನ ಮತ್ತು ಕ್ರೀಡಾ ವಿಜ್ಞಾನ ಸೌಲಭ್ಯಗಳನ್ನು ಮಹಿಳಾ ಕ್ರಿಕೆಟರ್ ಗಳು ಪಡೆಯಬಹುದಾಗಿದೆ. ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿಯಲ್ಲಿನ ಭಾರತದ ಮೊದಲ ಮಹಿಳೆ ಎಂಬ ಖ್ಯಾತಿ ಪಡೆದಿರುವ ನೀತಾ ಅಂಬಾನಿ ಭಾರತದ ಯುವಜನ ಅದರಲ್ಲೂ ಯುವತಿಯರಲ್ಲಿ ಹಲವು ಕ್ರೀಡಾ ಸಂಸ್ಕೃತಿ ಬೆಳೆಯಬೇಕು ಎಂದು ಶ್ರಮಿಸುತ್ತಿದ್ದಾರೆ. ಯುವ ಪ್ರತಿಭೆಗಳನ್ನು ಹೆಕ್ಕಿ ತೆಗೆಯುತ್ತಿದ್ದಾರೆ. ಎಲ್ಲರಿಗೂ ಕ್ರೀಡೆ ಸೌಲಭ್ಯ ದೊರೆಯುವಂತಾಗಬೇಕು ಎಂಬ ಧ್ಯೇಯ ಹೊಂದಿದ್ದಾರೆ.

ಈ ಬಗ್ಗೆ ಮಾತನಾಡಿರುವ ನೀತಾ ಅಂಬಾನಿ, "ಮಹಿಳಾ ಟಿ20 ಆಯೋಜಿಸುತ್ತಿರುವ ಬಿಸಿಸಿಐಗೆ ನನ್ನ ಹೃದಯಪೂರ್ವಕ ಅಭಿನಂದನೆ. ಭಾರತದಲ್ಲಿ ಮಹಿಳಾ ಕ್ರಿಕೆಟ್ ಬೆಳವಣಿಗೆಗೆ ಇದು ಪ್ರಗತಿಪರ ಹೆಜ್ಜೆ. ಈ ಅದ್ಭುತ ಆರಂಭಕ್ಕೆ ಪೂರ್ಣ ಬೆಂಬಲ ನೀಡುತ್ತಿರುವುದಕ್ಕೆ ನನಗೆ ಸಂತೋಷ ಆಗ್ತಿದೆ. ನಮ್ಮ ಆಟಗಾರ್ತಿಯರ ಸಾಮರ್ಥ್ಯದ ಮೇಲೆ ಅಪಾರವಾದ ಭರವಸೆ ನನಗಿದೆ. ಕಳೆದ ಕೆಲ ವರ್ಷಗಳಿಂದ ಐಸಿಸಿ ಕ್ರಿಕೆಟ್ ಪಂದ್ಯಾವಳಿಗಳಲ್ಲಿ ನಮ್ಮ ಮಹಿಳಾ ಕ್ರಿಕೆಟರ್ ಗಳು ಉತ್ತಮ ಸಾಧನೆ ಮಾಡುತ್ತಾ ಬಂದಿದ್ದಾರೆ. ನಾವು ಅವರಿಗೆ ಉತ್ತಮ ಮೂಲಸೌಕರ್ಯ, ತರಬೇತಿಯನ್ನು ನೀಡಬೇಕು. ಅಂಜುಂ, ಮಿಥಾಲಿ, ಸ್ಮೃತಿ, ಹರ್ಮನ್ ಪ್ರೀತ್ ಮತ್ತು ಪೂನಂ ಇವರೆಲ್ಲ ರೋಲ್ ಮಾಡೆಲ್ ಗಳು. ಮುಂದಿನ ಪಯಣದಲ್ಲಿ ಯಶಸ್ಸು ದೊರೆಯಲಿ ಎಂದು ಹಾರೈಸುತ್ತೇನೆ," ಎಂದಿದ್ದಾರೆ ನೀತಾ ಅಂಬಾನಿ.

ನವೆಂಬರ್ 4, 2020ರಿಂದ ಮಹಿಳಾ T20 ಪಂದ್ಯಾವಳಿಗಳು ಶಾರ್ಜಾದಲ್ಲಿ ನಡೆಯಲಿವೆ. ಸೂಪರ್ ನೋವಾಸ್, ಟ್ರಯಲ್ ಬ್ಲೇಜರ್ಸ್ ಹಾಗೂ ವೆಲಾಸಿಟಿ ಎಂಬ ಫ್ರಾಂಚೈಸ್ ಗಳನ್ನು ಹರ್ಮನ್ ಪ್ರೀತ್ ಕೌರ್, ಸ್ಮೃತಿ ಮಂಧಾನ, ಮಿಥಾಲಿ ರಾಜ್ ಮುನ್ನಡೆಸಲಿದ್ದಾರೆ.

Story first published: Monday, November 2, 2020, 19:42 [IST]
Other articles published on Nov 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X