ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ಎಲೈಟ್ ಪ್ಯಾನೆಲ್‌ಗೆ ಭಾರತದ ಯುವ ಅಂಪೈರ್ ನಿತಿನ್ ಮೆನನ್ ಸೇರ್ಪಡೆ

Nitin Menon from India has been included in the ICC Elite Panel

ನವದೆಹಲಿ, ಜೂನ್ 29: ಭಾರತದ ಯುವ ಅಂಪೈರ್ ನಿತಿನ್ ಮೆನನ್ ಅವರು 2020-21ರ ಸೀಸನ್‌ಗಾಗಿ ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್ ಎಲೈಟ್ ಪ್ಯಾನೆಲ್‌ನಲ್ಲಿ ಸೇರಿಸಲ್ಪಟ್ಟಿದ್ದಾರೆ. ಮೆನನ್ ಅವರು ಇಂಗ್ಲೆಂಡ್‌ನ ಅಂಪೈರ್ ನಿಗೆಲ್ ಲಾಂಗ್ ಅವರ ಬದಲಿಗೆ ಆಯ್ಕೆಗೊಂಡಿದ್ದಾರೆ.

ತೆಂಡೂಲ್ಕರ್ ಪುತ್ರ ಅರ್ಜುನ್ ವಿರುದ್ಧ ನಂಜು ಕಾರಿದ್ದ ನೆಟ್ಟಿಗರ ಬಣ್ಣ ಬಯಲು!ತೆಂಡೂಲ್ಕರ್ ಪುತ್ರ ಅರ್ಜುನ್ ವಿರುದ್ಧ ನಂಜು ಕಾರಿದ್ದ ನೆಟ್ಟಿಗರ ಬಣ್ಣ ಬಯಲು!

36ರ ಹರೆಯದ ನಿತಿನ್ ಮೆನನ್ ಈವರೆಗೆ 3 ಟೆಸ್ಟ್ ಪಂದ್ಯಗಳು, 24 ಏಕದಿನ ಪಂದ್ಯಗಳು ಮತ್ತು 16 ಟಿ20ಐ ಪಂದ್ಯಗಳಲ್ಲಿ ಕರ್ತವ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಅಲ್ಲದೆ ಐಸಿಸಿ ಎಲೈಟ್ ಪ್ಯಾನೆಲ್ ಸೇರಿದ ಭಾರತದ ಮೂರನೇ ಅಂಪೈರ್ ಹೆಗ್ಗಳಿಕೆಗೆ ಮೆನನ್ ಪಾತ್ರರಾಗಿದ್ದಾರೆ.

ಧೋನಿ, ರೋಹಿತ್, ವಿರಾಟ್ : ಮೂವರ ನಾಯಕತ್ವದ ಭಿನ್ನತೆ ಬಗ್ಗೆ ಪಾರ್ಥಿವ್ ಮಾತುಧೋನಿ, ರೋಹಿತ್, ವಿರಾಟ್ : ಮೂವರ ನಾಯಕತ್ವದ ಭಿನ್ನತೆ ಬಗ್ಗೆ ಪಾರ್ಥಿವ್ ಮಾತು

ಈ ಮೊದಲು ಐಸಿಸಿ ಎಲೈಟ್ ಪ್ಯಾನೆಲ್‌ಗೆ ಭಾರತದಿಂದ ಮಾಜಿ ನಾಯಕ ಶ್ರೀನಿವಾಸ್ ವೆಂಕಟ್ರಾಘವನ್ ಮತ್ತು ಸುಂದರಂ ರವಿ ಸೇರ್ಪಡೆಗೊಂಡಿದ್ದರು. ಇವರಿಬ್ಬರೂ ಕಳೆದ ವರ್ಷ ಐಸಿಸಿ ಎಲೈಟ್ ಪ್ಯಾನೆಲ್‌ನಿಂದ ಹೊರ ಬಂದಿದ್ದರು. ಆಯ್ಕೆಯಾಗಿರುವ ಬಗ್ಗೆ ಮೆನನ್,'ಎಲೈಟ್ ಪ್ಯಾನೆಲ್‌ನಲ್ಲಿ ಹೆಸರಸಲ್ಪಟ್ಟಿರುವುದು ನನಗೆ ದೊಡ್ಡ ಗೌರವದ ಮತ್ತು ಹೆಮ್ಮೆಯ ವಿಚಾರವಾಗಿದೆ,' ಎಂದು ಪ್ರತಿಕ್ರಿಯಿಸಿದ್ದಾರೆ.

ಧೋನಿಯ ಈ 5 ನಿರ್ಧಾರಗಳು ಎಲ್ಲರನ್ನೂ ದಂಗುಬಡಿಸಿತ್ತು, ಆದರೆ ಭಾರತವನ್ನು ಗೆಲ್ಲಿಸಿತ್ತು!ಧೋನಿಯ ಈ 5 ನಿರ್ಧಾರಗಳು ಎಲ್ಲರನ್ನೂ ದಂಗುಬಡಿಸಿತ್ತು, ಆದರೆ ಭಾರತವನ್ನು ಗೆಲ್ಲಿಸಿತ್ತು!

ಐಸಿಸಿ ಜನರಲ್ ಮ್ಯಾನೇಜರ್ (ಕ್ರಿಕೆಟ್) ಜೆಫ್ ಅಲ್ಲಾರ್ಡೈಸ್ (ಅಧ್ಯಕ್ಷ), ಭಾರತದ ಮಾಜಿ ಆಟಗಾರ-ಕಾಮೆಂಟೇಟರ್ ಸಂಜಯ್ ಮಂಜ್ರೇಕ್, ಮ್ಯಾಚ್ ರೆಫರೀಗಳಾದ ರಂಜನ್ ಮದುಗಲ್ಲೆ ಮತ್ತು ಡೇವಿಡ್ ಬೂನ್ ಅವರಿದ್ದ ಆಯ್ಕೆ ಸಮಿತಿ ಮೆನನ್ ಆವರನ್ನು ಆರಿಸಿದೆ. ಈ ಮೊದಲು ಮೆನನ್ ಅವರು, ಅಂಪೈರ್‌ಗಳ 'ಎಮಿರೇಟ್ಸ್ ಐಸಿಸಿ ಇಂಟರ್‌ನ್ಯಾಷನಲ್ ಪ್ಯಾನೆಲ್'ನಲ್ಲಿದ್ದರು.

Story first published: Monday, June 29, 2020, 14:55 [IST]
Other articles published on Jun 29, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X