ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬಿಸಿಸಿಐಗೆ ಕ್ರಿಕೆಟ್‌ ಆಸ್ಟ್ರೇಲಿಯಾದಿಂದ ಬ್ಲ್ಯಾಕ್‌ಮೇಲ್‌ ಮೇಲ್‌!

No Aussie in womens IPL; BCCI says Cricket Australia blackmailing for mens series rescheduling

ಹೊಸದಿಲ್ಲಿ, ಏಪ್ರಿಲ್‌ 27: ಭಾರತೀಯ ಕ್ರಿಕೆಟ್‌ ನಿಯಂತ್ರಣ ಮಂಡಳಿ(ಬಿಸಿಸಿಐ)ಯ ಮಹತ್ವಾಂಕ್ಷೀಯ ಟೂರ್ನಿಯಾದ ಮಹಿಳಾ ಐಪಿಎಲ್‌ ಟಿ20 ಚಾಲೆಂಜ್‌ನಲ್ಲಿ ಆಸ್ಟ್ರೇಲಿಯಾದ ಯಾವುದೇ ಆಟಗಾರ್ತಿ ಕೂಡ ಪಾಲ್ಗೊಳ್ಳುತ್ತಿಲ್ಲ.

 ಐಪಿಎಲ್‌: ಮಹಿಳಾ ಟಿ20 ಚಾಲೆಂಜ್‌ಗೆ ತಂಡಗಳು ಪ್ರಕಟ ಐಪಿಎಲ್‌: ಮಹಿಳಾ ಟಿ20 ಚಾಲೆಂಜ್‌ಗೆ ತಂಡಗಳು ಪ್ರಕಟ

ಪುರುಷರ ಕ್ರಿಕೆಟ್‌ ತಂಡಗಳ ನಡುವಣ ದ್ವಿಪಕ್ಷೀಯ ಕ್ರಿಕೆಟ್‌ ಸರಣಿ ಆಯೋಜನೆ ವಿಚಾರದಲ್ಲಿರುವ ತಕರಾರು ಸಂಬಂಧ ಮಹಿಳಾ ಐಪಿಎಲ್‌ನಲ್ಲಿಆಸೀಸ್‌ನ ಯಾವುದೇ ಆಟಗಾರ್ತಿ ಪಾಲ್ಗೊಳ್ಳಬಾರದು ಎಂದು ಕ್ರಿಕೆಟ್‌ ಆಸ್ಟ್ರೇಲಿಯಾ ಬ್ಲ್ಯಾಕ್‌ ಮೇಲ್‌ ಮಾಡುತ್ತಿದೆ ಎಂದು ಇದೇ ವೇಳೆ ಬಿಸಿಸಿಐ ಆರೋಪಿಸಿದೆ.

ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್‌ ತಂಡದ ತಾರೆಯರಾದ ಮೆಗ್‌ ಲ್ಯಾನಿಂಗ್‌, ಎಲೀಸ್‌ ಪೆರ್ರಿ ಮತ್ತು ಆಲ್ಯಾಸ ಹೇಲೀಗೆ ಮಹಿಳಾ ಐಪಿಎಲ್‌ನಲ್ಲಿ ಭಾರಿ ಬೇಡಿಕೆ ಇತ್ತು. ಆದರೆ ಕ್ರಿಕೆಟ್‌ ಆಸ್ಟ್ರೇಲಿಯಾ ಇವರಪಾಲ್ಗೊಳ್ಳುವಿಕೆಗೆ ಅಡ್ಡಗಾಲಾಕಿದೆ.

 ಶ್ರೀಲಂಕಾ ಬಾಂಬ್‌ ಬ್ಲಾಸ್ಟ್‌: ಕೂದಲೆಳೆ ಅಂತರದಲ್ಲಿ ಪಾರಾದ ಕುಂಬ್ಳೆ! ಶ್ರೀಲಂಕಾ ಬಾಂಬ್‌ ಬ್ಲಾಸ್ಟ್‌: ಕೂದಲೆಳೆ ಅಂತರದಲ್ಲಿ ಪಾರಾದ ಕುಂಬ್ಳೆ!

ಕಳೆದ ವರ್ಷ ಐಪಿಎಲ್‌ನಲ್ಲಿ ಮಹಿಳಾ ಐಪಿಎಲ್‌ನ ಏಕಮಾತ್ರ ಪ್ರದರ್ಶನ ಪಂದ್ಯವನ್ನು ಆಯೋಜಿಸಲಾಗಿತ್ತು. ಆದರೆ, ಈ ಬಾರಿ ಮೂರು ತಂಡಗಳನ್ನು ಒಳಗೊಂಡ ಮಹಿಳಾ ಟಿ20 ಚಾಲೆಂಜ್‌ ತ್ರಿಕೋನ ಸರಣಿಯನ್ಜು ಆಯೋಜಿಸಲಾಗಿದ್ದು, ಮೇ 6ರಿಂದ 11ರವರೆಗೆ ಒಟ್ಟು ನಾಲ್ಕು ಪಂದ್ಯಗಳು ನಡೆಯಲಿವೆ.

ದ್ವಿಪಕ್ಷೀಯ ಸರಣಿ ಆಯೋಜನೆ ಒಪ್ಪಂದ ಪ್ರಕಾರ 2021ರ ಜನವರಿಯಲ್ಲಿ ನಡೆಯಬೇಕಿರುವ ಭಾರತ ಮತ್ತು ಆಸ್ಟ್ರೇಲಿಯಾ ಪುರುಷರ ತಂಡಗಳ ನಡುವಣ 3 ಪಂದ್ಯಗಳ ಏಕದಿನ ಕ್ರಿಕೆಟ್‌ ಸರಣಿಯನ್ನು ಮುಂದೂಡಲು ಬಿಸಿಸಿಐ ಮೇಲೆ ಒತ್ತಡ ಹೇರುವ ಉದ್ದೇಶದಿಂದ ಈ ಮೂವರು ಆಟಗಾರ್ತಿಯರನ್ನು ಮಹಿಳಾ ಐಪಿಎಲ್‌ನಲ್ಲಿ ಪಾಲ್ಗೊಳ್ಳದಂತೆ ಮಾಡಲಾಗುತ್ತಿದೆ ಎಂದು ಮೂಲಗಳು ಹೇಳಿವೆ. 2020ರ ಜನವರಿಯಲ್ಲಿ ಆಸ್ಟ್ರೇಲಿಯಾದಲ್ಲಿ ಟೆಲಿವಿಷನ್‌ ಪ್ರಸಾರಕ್ಕೆ ಕೊಂಚ ಗೊಂದಲವಿರುವ ಕಾರಣ ಇಂಡೊ-ಆಸೀಸ್‌ ಸರಣಿಯನ್ನು ಮುಂದೂಡಲು ಕ್ರಿಕೆಟ್‌ ಆಸ್ಟ್ರೇಲಿಯಾದ ಮೇಲೆ ಒತ್ತಡವಿದೆ.

 ಕೌಂಟಿ ಕ್ರಿಕೆಟ್: ಹ್ಯಾಂಪ್‌ಶೈರ್‌ ಪರ ಆಡಲಿರುವ ಅಜಿಂಕ್ಯ ರಹಾನೆ ಕೌಂಟಿ ಕ್ರಿಕೆಟ್: ಹ್ಯಾಂಪ್‌ಶೈರ್‌ ಪರ ಆಡಲಿರುವ ಅಜಿಂಕ್ಯ ರಹಾನೆ

ಇನ್ನು ಮಹಿಳಾ ಐಪಿಎಲ್‌ಗೆ ಆಸ್ಟ್ರೇಲಿಯಾದ ಮೂವರು ಆಟಗಾರ್ತಿಯರನ್ನು ಬಿಡುಗಡೆ ಮಾಡುವಂತೆ ಬಿಸಿಸಿಐ ಕ್ರಿಕೆಟ್‌ ಆಸ್ಟ್ರೇಲಿಯಾಗೆ ಏಪ್ರಿಲ್‌ 5ರಂದು ಇ-ಮೇಲ್‌ ರವಾನಿಸಿತ್ತು. ಇದಕ್ಕೆ ಕ್ರಿಕೆಟ್‌ ಆಸ್ಟ್ರೇಲಿಯಾದ ಅಧಿಕಾರಿ ಬೆಲಿಂಡಾ ಕ್ಲಾರ್ಕ್‌, ಪುರುಷರ ಕ್ರಿಕೆಟ್‌ ಸರಣಿಯ ಗೊಂದಲ ಇತ್ಯರ್ಥವಾಗುವವರೆಗೂ ಮಹಿಳಾ ಆಟಗಾರ್ತಿಯರನ್ನು ಬಿಡುಗಡೆ ಮಾಡಲು ಸಾಧ್ಯವಿಲ್ಲ ಎಂದು ಏಪ್ರಿಲ್‌ 5ರಂದು ಉತ್ತರಿಸಿದ್ದರು. ಇದಾದ ಬಳಿಕ ಕ್ರಿಕೆಟ್‌ ಆಸ್ಟ್ರೇಲಿಯಾದಿಂದ ಯಾವುದೇ ಪ್ರತಿಕ್ರಿಯೆ ಇಲ್ಲ.

 ಇತಿಹಾಸ ನಿರ್ಮಿಸಲು ಚೆನ್ನೈ ಸೂಪರ್‌ ಕಿಂಗ್ಸ್‌ನ ಸುರೇಶ್ ರೈನಾ ಸಜ್ಜು! ಇತಿಹಾಸ ನಿರ್ಮಿಸಲು ಚೆನ್ನೈ ಸೂಪರ್‌ ಕಿಂಗ್ಸ್‌ನ ಸುರೇಶ್ ರೈನಾ ಸಜ್ಜು!

"ಮಹಿಳಾ ಕ್ರಿಕೆಟ್‌ಗೂ ಪುರುಷರ ಕ್ರಿಕೆಟ್‌ಗೂ ಸಂಬಂಧವಿಲ್ಲಿ. ಇದೀಗ ಮಹಿಳಾ ಆಟಗಾರ್ತಿಯರನ್ನು ಮುಂದಿಟ್ಟು ಪುರುಷರ ಕ್ರಿಕೆಟ್‌ ಸರಣಿ ಬಗ್ಗೆ ಮಾತನಾಡುತ್ತಿರುವುದು ಬ್ಲ್ಯಾಕ್‌ಮೇಲ್‌ ಮಾಡಿದ ಹಾಗೆ,'' ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆಸ್ಟ್ರೇಲಿಯಾ ಆಟಗಾರ್ತಿಯರು ಇಲ್ಲದ ಮಹಿಳಾ ಐಪಿಎಲ್‌ನ ಮೂರು ತಂಡಗಳನ್ನು ಬಿಸಿಸಿಐ ಶುಕ್ರವಾರ ಬಿಡುಗಡೆ ಮಾಡಿತ್ತು.

Story first published: Friday, April 26, 2019, 19:53 [IST]
Other articles published on Apr 26, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X