ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಬೌಲಿಂಗ್ ಇಲ್ಲ, ಬ್ಯಾಟಿಂಗ್ ಇಲ್ಲ, ಒಂದ್ ಕ್ಯಾಚೂ ಮಾಡದೆ ರಶೀದ್ ದಾಖಲೆ!

No bowling, No Batting, No Catch for Adil Rashid in 2nd Test Rout

ಲಂಡನ್, ಆಗಸ್ಟ್ 13: ಇಂಥದ್ದೊಂದು ಗಮ್ಮತ್ತಿನ ದಾಖಲೆಯಾಗಿದೆ. ಭಾರತ vs ಇಂಗ್ಲೆಂಡ್ ದ್ವಿತೀಯ ಟೆಸ್ಟ್ ನಲ್ಲಿ ಇಂಗ್ಲೆಂಡ್ ಲೆಗ್ ಸ್ಪಿನ್ನರ್ ಆದಿಲ್ ರಶೀದ್ ಬೌಲಿಂಗ್ ಮಾಡದೆ, ಬ್ಯಾಟಿಂಗ್ ಮಾಡದೆ, ರನ್ ಔಟ್ ಗೆ ಕಾರಣರಾಗದೆ, ಒಂದೇ ಒಂದ್ ಕ್ಯಾಚೂ ಹಿಡಿಯದೆ ದಾಖಲೆ ನಿರ್ಮಿಸಿದ್ದಾರೆ.

ಕೆಪಿಎಲ್ 2018 ಟ್ರೋಫಿ ಅನಾವರಣಗೊಳಿಸಿದ ಸ್ಟೈರಿಸ್ಕೆಪಿಎಲ್ 2018 ಟ್ರೋಫಿ ಅನಾವರಣಗೊಳಿಸಿದ ಸ್ಟೈರಿಸ್

ಭಾನುವಾರ (ಆಗಸ್ಟ್ 12) ಲಂಡನ್ ನ ಲಾರ್ಡ್ಸ್ ಸ್ಟೇಡಿಯಂನಲ್ಲಿ ಮುಕ್ತಾಯಗೊಂಡ ಭಾರತ-ಇಂಗ್ಲೆಂಡ್ ಟೆಸ್ಟ್ ನಲ್ಲಿ ರಶೀದ್ ಇಂಗ್ಲೆಂಡ್ ಬೆಂಬಲಿಸಿ ಏನೊಂದೂ ಮಾಡದೆ ಗುರುತಿಸಿಕೊಂಡರು. ಆದರೂ ಪಂದ್ಯದ ಸಂಭಾವೆಯಾಗಿ ರಶೀದ್ £12,500 (11 ಲಕ್ಷ ರೂ.) ಪಡೆಯಲಿದ್ದಾರೆ.

ರಶೀದ್ 13 ವರ್ಷಗಳ ಬಳಿಕ ಈ ರೀತಿಯ (ಕುಖ್ಯಾತಿ) ದಾಖಲೆ ನಿರ್ಮಿಸಿದ ವಿಶ್ವದ 14ನೇ ಆಟಗಾರನೆನಿಸಿಕೊಂಡರೆ, ಇಂಗ್ಲೆಂಡ್ ನ ಮೊದಲ ಆಟಗಾರನಾಗಿಯೂ ಗುರುತಿಸಿಕೊಂಡಿದ್ದಾರೆ. ಭಾರತದೆದುರಿನ ದ್ವಿತೀಯ ಟೆಸ್ಟ್ ಗೆ ಅದ್ಯಾಕೋ ಸ್ಪಿನ್ನರ್ ರಶೀದ್ ಗೆ ಯಾವುದಕ್ಕೂ ಅವಕಾಶ ದೊರೆಯಲಿಲ್ಲ.

ಹಿಂದಿನ ಸಾರಿ 2005ರಲ್ಲಿ ಲಾರ್ಡ್ಸ್ ನಲ್ಲೇ ನಡೆದಿದ್ದ ಬಾಂಗ್ಲದೇಶ v ಇಂಗ್ಲೆಂಡ್ ಟೆಸ್ಟ್ ಇನ್ನಿಂಗ್ಸ್ ಒಂದರಲ್ಲಿ ಇಂಗ್ಲೆಂಡ್ 261 ರನ್ ಗಳಿಂದ ಬಾಂಗ್ಲಾವನ್ನು ಹಿಮ್ಮೆಟ್ಟಿಸಿತ್ತು. ಈ ವೇಳೆ ಗಾರೆಥ್ ಬಟ್ಟಿ ಇದೇ ರೀತಿಯ ದಾಖಲೆಗಾಗಿ ಗುರುತಿಸಿಕೊಂಡಿದ್ದರು.

ಯಾರ್ಕ್ಷೈರ್ ತಂಡದ ಆಟಗಾರರಾಗಿರುವ ರಶೀದ್ ಗೆ ಇಂಗ್ಲೆಂಡ್ ಟೆಸ್ಟ್ ತಂಡದಲ್ಲಿ ಸ್ಥಾನ ದೊರೆತಾಗ ಸ್ವತಃ ಯಾರ್ಕ್ಷೈರ್ ಅಸಮಾಧಾನ ವ್ಯಕ್ತ ಪಡಿಸಿತ್ತು. ಯಾಕೆಂದರೆ ರಶೀದ್ ಅವರು ಯಾರ್ಕ್ಷೈರ್ ನೊಂದಿಗೆ ಬಿಳಿಚೆಂಡು (ಏಕದಿನ) ಕ್ರಿಕೆಟ್ ಗಾಗಿ ಮಾತ್ರ ಆಡುವ ಒಪ್ಪಂದಕ್ಕೆ ಸಹಿ ಹಾಕಿದ್ದರು. ಅಲ್ಲದೆ ಟೆಸ್ಟ್ ಕ್ರಿಕೆಟ್ ಮಾದರಿಗೆ ರಶೀದ್ ಸಜ್ಜಾಗಿಯೂ ಇರಲಿಲ್ಲ. ಆದರೂ ಇಂಗ್ಲೆಂಡ್ ಆದಿಲ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿಕೊಂಡಿತ್ತು!

Story first published: Monday, August 13, 2018, 22:54 [IST]
Other articles published on Aug 13, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X