ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಇಂಗ್ಲೆಂಡ್, ಆಸ್ಟ್ರೇಲಿಯಾ ಪ್ಲೇಯರ್ಸ್ ಐಪಿಎಲ್ ಆರಂಭದಲ್ಲಿ ಆಡೋ ಖಾತ್ರಿಯಿಲ್ಲ'

No clarity on England, Australia players availability for openers

ಬೆಂಗಳೂರು: ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೆ ಇನ್ನು ಕೆಲವೇ ದಿನಗಳು ಬಾಕಿ ಉಳಿದಿವೆ. ಸೆಪ್ಟೆಂಬರ್ 19ರಿಂದ ಭಾರತದ ಅದ್ದೂರಿ ಕ್ರಿಕೆಟ್ ಹಬ್ಬ ಆರಂಭವಾಗಲಿದೆ. ಆದರೆ ಈಗಲೂ ಕೂಡ ಐಪಿಎಲ್ ಆರಂಭಿಕ ಪಂದ್ಯದಲ್ಲಿ ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಆಟಗಾರರು ಆಡುತ್ತಾರೋ ಇಲ್ಲವೋ ಎಂಬ ಬಗ್ಗೆ ಸ್ಪಷ್ಟನೆ ಇಲ್ಲ. ಹೀಗಾಗಿ ಎರಡೂ ತಂಡಗಳ ಆಟಗಾರರು ಆಡೋದು ಖಾತ್ರಿಯಿಲ್ಲ ಎಂದು ಕಿಂಗ್ಸ್ ಇಲೆವೆನ್ ಪಂಜಾಬ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸತೀಶ್ ಮೆನನ್ ಹೇಳಿದ್ದಾರೆ.

 ಈ ಸಲ ಕಪ್‌ ಗೆಲ್ಲಲು ಆರ್‌ಸಿಬಿಗೆ ಪ್ರಮುಖ ಸಲಹೆ ಕೊಟ್ಟ ಗೌತಮ್ ಗಂಭೀರ್ ಈ ಸಲ ಕಪ್‌ ಗೆಲ್ಲಲು ಆರ್‌ಸಿಬಿಗೆ ಪ್ರಮುಖ ಸಲಹೆ ಕೊಟ್ಟ ಗೌತಮ್ ಗಂಭೀರ್

2020ರ ಐಪಿಎಲ್ ಆವೃತ್ತಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಜೈವಿಕ ಸುರಕ್ಷಾ ತಾಣದಲ್ಲಿ ಸೆಪ್ಟೆಂಬರ್ 19ರಿಂದ ನವೆಂಬರ್ 10ರ ವರೆಗೆ ನಡೆಯಲಿದೆ. ಕೊರೊನಾ ಪ್ರಕರಣಗಳು ಏರುತ್ತಿದ್ದರಿಂದ ಭಾರತದಲ್ಲಿ ನಡೆಯಬೇಕಿದ್ದ ಟೂರ್ನಿಯನ್ನು ಯುಎಇಯಲ್ಲಿ ನಡೆಸಲು ನಿರ್ಧರಿಸಲಾಗಿತ್ತು.

ಐಪಿಎಲ್ 2020: ಕಣಕ್ಕಿಳಿಯಲಿರುವ ತಂಡಗಳ ಸಂಪೂರ್ಣ ಆಟಗಾರರು ಹಾಗೂ ನಾಯಕರುಐಪಿಎಲ್ 2020: ಕಣಕ್ಕಿಳಿಯಲಿರುವ ತಂಡಗಳ ಸಂಪೂರ್ಣ ಆಟಗಾರರು ಹಾಗೂ ನಾಯಕರು

ಕೊರೊನಾವೈರಸ್ ಕಾರಣ ಯುಎಇಯಲ್ಲೂ ಆಟಗಾರರಿಗೆ ಕಠಿಣ ಕ್ವಾರಂಟೈನ್ ನಿಯಮ ಇದೆ. ಇದು ಆಟಗಾರರಿಗೆ ಅಡ್ಡಿಯಾಗುವ ಸಾಧ್ಯತೆಯಿದೆ.

ಇಂಗ್ಲೆಂಡ್-ಆಸ್ಟ್ರೇಲಿಯಾ ಸರಣಿ

ಇಂಗ್ಲೆಂಡ್-ಆಸ್ಟ್ರೇಲಿಯಾ ಸರಣಿ

ಈ ಬಾರಿಯ ಐಪಿಎಲ್‌ನ ಆರಂಭಿಕ ಪಂದ್ಯಗಳಲ್ಲಿ ಇಂಗ್ಲೆಂಡ್‌ ಮತ್ತು ಆಸ್ಟ್ರೇಲಿಯಾ ಆಟಗಾರರು ಆಡೋದು ಅನುಮಾನ ಎಂದು ಮೊದಲಿನಿಂದಲೂ ಹೇಳಲಾಗಿತ್ತು. ಕಾರಣ, ಎರಡೂ ತಂಡಗಳು ಸದ್ಯ ಏಕದಿನ ಸರಣಿಯಲ್ಲಿ ತೊಡಗಿಕೊಂಡಿವೆ. ಸರಣಿ ಮುಗಿಸಿ ಎರಡೂ ತಂಡದ ಆಟಗಾರರು ಯುಎಇಗೆ ತೆರಳಿದರೂ ಅಲ್ಲಿನ ಕ್ವಾರಂಟೈನ್‌ ನಿಯಮ ಆರಂಭಿಕ ಪಂದ್ಯಗಳಲ್ಲಿ ಆಟಗಾರರು ಆಡದಂತೆ ತಡೆಯುವ ಸಾಧ್ಯತೆಯಿದೆ.

ಇನ್ನೂ ಇದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ

ಇನ್ನೂ ಇದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ

'ಈ ಬಗ್ಗೆ ಇನ್ನೂ ಯಾರಿಗೂ ಸ್ಪಷ್ಟನೆ ಇಲ್ಲ. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ಆಟಗಾರರು ಬಯೋ ಬಬಲ್‌ನಿಂದ ಬಯೋ ಬಬಲ್‌ಗೆ ಬರುವುದರಿಂದ ಅವರ ಕ್ವಾರಂಟೈನ್ ದಿನಗಳನ್ನು ಕಡಿಮೆಗೊಳಿಸಲಾಗುತ್ತದೆಯೇ ಎಂಬ ಬಗ್ಗೆ ಬಿಸಿಸಿಐ ಸ್ಪಷ್ಟನೆ ನೀಡಬೇಕು. ನಮಗೆ ಇನ್ನೂ ಇದರ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ,' ಎಂದು ಐಎಎನ್‌ಎಸ್ ಜೊತೆ ಮಾತನಾಡಿದ ಮೆನನ್ ಹೇಳಿದ್ದಾರೆ.

ಐಪಿಎಲ್‌ನಲ್ಲಿ ಇಂಗ್ಲೆಂಡ್-ಆಸೀಸ್ ಆಟಗಾರರು

ಐಪಿಎಲ್‌ನಲ್ಲಿ ಇಂಗ್ಲೆಂಡ್-ಆಸೀಸ್ ಆಟಗಾರರು

ಐಪಿಎಲ್ ತಂಡಗಳಲ್ಲಿ ಇಂಗ್ಲೆಂಡ್-ಆಸ್ಟ್ರೇಲಿಯಾದಿಂದ ಪ್ರಮುಖ ಆಟಗಾರರಿದ್ದಾರೆ. ಆರ್‌ಸಿಬಿಯಲ್ಲಿ ಆ್ಯರನ್ ಫಿಂಚ್, ಜೋಶುವಾ ಫಿಲಿಪ್, ಮುಂಬೈ ಇಂಡಿಯನ್ಸ್‌ನಲ್ಲಿ ಕ್ರಿಸ್ ಲಿನ್, ನಾಥನ್ ಕೌಲ್ಟರ್-ನೈಲ್, ಜೇಮ್ಸ್ ಪ್ಯಾಟಿನ್ಸನ್, ಸಿಎಸ್‌ಕೆಯಲ್ಲಿ ಸ್ಯಾಮ್ ಕರನ್, ಜೋಶ್ ಹ್ಯಾಝಲ್ವುಡ್, ಪ್ಯಾಟ್ ಕಮಿನ್ಸ್, ಟಾಮ್ ಬ್ಯಾಂಟನ್, ಸನ್ ರೈಸರ್ಸ್ ಹೈದರಾಬಾದ್‌ನಲ್ಲಿ ಡೇವಿಡ್ ವಾರ್ನರ್, ಜಾನಿ ಬೈರ್‌ಸ್ಟೋವ್, ಮಿಚೆಲ್ ಮಾರ್ಷ್, ಬಿಲ್ಲಿ ಸ್ಟ್ಯಾನ್ಲೇಕ್, ಕೆXIನಲ್ಲಿ ಗ್ಲೆನ್ ಮ್ಯಾಕ್ಸ್‌ವೆಲ್, ಡೆಲ್ಲಿಯಲ್ಲಿ ಅಲೆಕ್ಸ್ ಕ್ಯಾರಿ, ಮಾರ್ಕಸ್ ಸ್ಟೋಯ್ನಿಸ್, ರಾಜಸ್ಥಾನದಲ್ಲಿ ಸ್ಟೀವ್ ಸ್ಮಿತ್, ಬೆನ್ ಸ್ಟೋಕ್ಸ್, ಜೋಸ್ ಬಟ್ಲರ್, ಜೋಫ್ರಾ ಆರ್ಚರ್ ಇಂಥ ಅನೇಕ ಆಟಗಾರರು ಇದ್ದಾರೆ.

ಇಂಗ್ಲೆಂಡ್-ಆಸೀಸ್ ಸರಣಿ

ಇಂಗ್ಲೆಂಡ್-ಆಸೀಸ್ ಸರಣಿ

ಮೂರು ಪಂದ್ಯಗಳ ಟಿ20ಐ ಮತ್ತು ಮೂರು ಪಂದ್ಯಗಳ ಏಕದಿನ ಸರಣಿಗಾಗಿ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ಗೆ ಪ್ರವಾಸ ಹೋಗಿತ್ತು. ಇದರಲ್ಲಿ ಟಿ20ಐ ಸರಣಿ 1-1ರಿಂದ ಸಮಬಲಗೊಂಡಿದೆ. ಏಕದಿನ ಸರಣಿ ಕೂಡ 1-1ರಿಂದ ಸರಿದೂಗಿದೆ. ಕೊನೇ ಏಕದಿನ ಪಂದ್ಯ ಸೆಪ್ಟೆಂಬರ್ 16ರ ಬುಧವಾರ ನಡೆಯಲಿದೆ. ಸರಣಿ ಮುಗಿದ ಬಳಿಕವಷ್ಟೇ ಆಸ್ಟ್ರೇಲಿಯಾ-ಇಂಗ್ಲೆಂಡ್‌ ಪ್ರಮುಖ ಆಟಗಾರರು ಐಪಿಎಲ್‌ಗಾಗಿ ಯುಎಇಗೆ ತೆರಳಲಿದ್ದಾರೆ.

Story first published: Tuesday, September 15, 2020, 9:46 [IST]
Other articles published on Sep 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X