ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ರೋಹಿತ್ ಶರ್ಮಾ ಫಿಟ್‌ನೆಸ್ ಬಗ್ಗೆ ಯಾವುದೇ ಸ್ಪಷ್ಟತೆಯಿಲ್ಲ: ಸಂಜಯ್ ಮಂಜ್ರೇಕರ್

No clarity on the issue of Rohit Sharma’s fitness: Sanjay Manjrekar

ಟೀಮ್ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿಯಲು ಸಜ್ಜಾಗಿದೆ. ಆಸ್ಟ್ರೇಲಿಯಾಗೆ ಈಗಾಗಲೇ ಭಾರತ ತಂಡ ತಲುಪಿದ್ದು ಕ್ವಾರಂಟೈನ್ ಅವಧಿಯನ್ನು ಪೂರೈಸುತ್ತಿದೆ. ಏಕದಿನ ಸರಣಿಯ ಮೂಲಕ ಈ ಕುತೂಹಲಕಾರಿ ಸರಣಿಗೆ ಚಾಲನೆ ದೊರೆಯಲಿದೆ. ಆದರೆ ಈ ಟೂರ್ನಿಗೆ ಪ್ರಕಟಿಸಲಾದ ತಂಡದಲ್ಲಿ ರೋಹಿತ್ ಶರ್ಮಾಗೆ ಸ್ಥಾನವನ್ನು ನೀಡದಿರುವುದು ಆರಂಭದಲ್ಲೇ ಸಾಕಷ್ಟು ಚರ್ಚೆಗೆ ಕಾರಣವಾಗಿತ್ತು. ಆದರೆ ಬಳಿಕ ಮಂಡಳಿ ಗಾಯದ ಕಾರಣವನ್ನು ಮುಂದಿಟ್ಟಿತ್ತು.

ಆದರೆ ಬಳಿಕ ರೋಹಿತ್ ಶರ್ಮಾ ಐಪಿಎಲ್‌ನಲ್ಲೂ ಕೆಲ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ರೋಹಿತ್ ಶರ್ಮಾ ಅವರ ಫಿಟ್‌ನೆಸ್ ಗಮನಿಸಿಕೊಂಡು ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ನಿರ್ಧರಿಸಲಾಗಿ ಟೆಸ್ಟ್ ತಂಡದಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ.

ಮಾಜಿ ನಾಯಕ ಹುಸೇನ್ ಆಯ್ಕೆಯ ಐಪಿಎಲ್ 2020 ತಂಡ ಹೀಗಿದೆಮಾಜಿ ನಾಯಕ ಹುಸೇನ್ ಆಯ್ಕೆಯ ಐಪಿಎಲ್ 2020 ತಂಡ ಹೀಗಿದೆ

ಈ ಎಲ್ಲಾ ಬೆಳವಣಿಗೆಯ ಬಗ್ಗೆ ಮಾಜಿ ಆಟಗಾರ ಸಂಜಯ್ ಮಂಜ್ರೇಕರ್ ಪ್ರತಿಕ್ರಿಯೆ ನೀಡಿದ್ದಾರೆ. ರೋಹಿತ್ ಶರ್ಮಾ ಅವರ ಫಿಟ್‌ನೆಸ್ ಸಂಬಂಧಿತ ವಿಚಾರವಾಗಿ ಯಾವುದೇ ಸ್ಪಷ್ಟತೆಗಳು ದೊರೆಯುತ್ತಿಲ್ಲ. ಈ ಬಗ್ಗೆ ಚರ್ಚೆಗಳು ತಾರಕಕ್ಕೇರಿದ್ದರೂ ಬಿಸಿಸಿಐ ಕೂಡ ಸ್ಪಷ್ಟ ಮಾಹಿತಿಯನ್ನು ನೀಡುತ್ತಿಲ್ಲ ಎಂದಿದ್ದಾರೆ ಮಂಜ್ರೇಕರ್.

ರೋಹಿತ್ ಶರ್ಮಾ ಫಿಟ್‌ನೆಸ್ ಬಗೆಗಿನ ಚರ್ಚೆಗೆ ಶೂನ್ಯ ಸ್ಪಷ್ಟತೆ ದೊರೆಯುತ್ತಿದೆ. ರೊಹಿತ್ ಬಗ್ಗೆ ಹಾಗೂ ಅವರ ಫಿಟ್‌ಸೆಸ್ ಬಗ್ಗೆ ಬಿಸಿಸಿಐ ಸ್ಪಷ್ಟ ನಿಲುವನ್ನು ತೆಗೆದುಕೊಳ್ಳಬೇಕು. ಜನರಿಗೆ ಮಾಹಿತಿ ದೊರೆಯದಿದ್ದಾಗ ಉಹಾಪೋಹಗಳು ಹರಿದಾಡಲು ಕಾರಣವಾಗುತ್ತದೆ. ನನಗಂತು ಏನಾಗುತ್ತಿದೆ ಎಂಬ ಬಗ್ಗೆ ಯಾವುದೇ ಸುಳಿವಯ ದೊರೆಯುತ್ತಿಲ್ಲ ಎಂದಿದ್ದಾರೆ ಸಂಜಯ್ ಮಂಜ್ರೇಕರ್.

ಐಪಿಎಲ್ ಹೊಸ ಫ್ರಾಂಚೈಸಿಗೆ ಸೂಪರ್ ಸ್ಟಾರ್ ಮೋಹನ್ ಲಾಲ್ ಓನರ್?ಐಪಿಎಲ್ ಹೊಸ ಫ್ರಾಂಚೈಸಿಗೆ ಸೂಪರ್ ಸ್ಟಾರ್ ಮೋಹನ್ ಲಾಲ್ ಓನರ್?

ಇದೇ ಸಂದರ್ಭದಲ್ಲಿ ಸಂಜಯ್ ಮಂಜ್ರೇಕರ್ ಸೂರ್ಯಕುಮಾರ್ ಯಾದವ್ ಆಯ್ಕೆಯಾಗದ ಬಗ್ಗೆಯೂ ಪ್ರತಿಕ್ರಿಯಸಿದರು. ಸೂರ್ಯಕುಮಾರ್ ಯಾದವ್ ಆದಷ್ಟು ಶೀಘ್ರದಲ್ಲಿ ತಂಡದಲ್ಲಿ ಸ್ಥಾನವನ್ನು ಪಡೆದುಕೊಳ್ಳಲಿದ್ದಾರೆ ಎಂದಿದ್ದಾರೆ.

Story first published: Friday, November 13, 2020, 17:29 [IST]
Other articles published on Nov 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X