ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ 2020: ಸುರೇಶ್ ರೈನಾ ಅಲಭ್ಯತೆ ತಂಡಕ್ಕೆ ದೊಡ್ಡ ನಷ್ಟ ಎಂದ ಶೇನ್ ವಾಟ್ಸನ್

No Doubt Raina Is A Big Loss But Csk Have Depth, Says Shane Watson

ವೈಯಕ್ತಿಕ ಕಾರಣಗಳಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಉಪನಾಯಕ ಸುರೇಶ್ ರೈನಾ ಹಠಾತ್ ಆಗಿ ದುಬೈನಿಂದ ವಾಪಾಸ್ ಆಗುವ ಮೂಲಕ ಶಾಕ್ ನೀಡಿದ್ದರು. ಬಳಿಕ ರೈನಾ ಈ ಬಾರಿಯ ಐಪಿಎಲ್‌ನಿಂದ ಸಂಪೂರ್ಣವಾಗಿ ಹೊರಗುಳಿಯಲಿದ್ದಾರೆ ಎಂಬ ವಿಚಾರವನ್ನು ಸಿಎಸ್‌ಕೆ ಫ್ರಾಂಚೈಸಿ ತಿಳಿಸಿತ್ತು. ಇದೀಗ ಸುರೇಶ್ ರೈನಾ ಅಲಭ್ಯತೆಯಿಂದ ತಂಡಕ್ಕಾಗುವ ನಷ್ಟದ ಬಗ್ಗೆ ಶೇನ್ ವಾಟ್ಸನ್ ಪ್ರತಿಕ್ರಿಯಿಸಿದ್ದಾರೆ.

ಸುರೇಶ್ ರೈನಾ ಅವರಂತಾ ಸಾಮರ್ಥ್ಯದ ಆಟಗಾರನಿಗೆ ಬದಲಿ ಆಟಗಾರನನ್ನು ಸೇರಿಸಿಕೊಳ್ಳುವುದು ಚೆನ್ನೈ ಸೂಒರ್ ಕಿಂಗ್ಸ್ ಪಾಲಿಗೆ ಅತ್ಯಂತ ಕಠಿಣ ಸಂಗತಿಯಾಗಿದೆ. ಆದರೆ ಐಪಿಎಲ್‌ನ ಇತರ ತಂಡಗಳಂತೆಯೇ ಸಿಎಸ್‌ಕೆ ತಂಡ ಸಾಕಷ್ಟು ಅನುಭವ ಹಾಗೂ ಸಾಮರ್ಥ್ಯವನ್ನು ಹೊಂದಿದ ಎಂದು ಸಿಎಸ್‌ಕೆ ತಂಡದ ಆರಂಭಿಕ ಆಟಗಾರ ಶೇನ್ ವಾಟ್ಸನ್ ಹೇಳಿದ್ದಾರೆ.

ಐಪಿಎಲ್ 2020ರ ಗೀತೆ ಕಾಪೀನಾ?: ಬಿಸಿಸಿಐ ವಿರುದ್ಧ ರ್‍ಯಾಪರ್ ಕೃಷ್ಣ ಗರಂ!ಐಪಿಎಲ್ 2020ರ ಗೀತೆ ಕಾಪೀನಾ?: ಬಿಸಿಸಿಐ ವಿರುದ್ಧ ರ್‍ಯಾಪರ್ ಕೃಷ್ಣ ಗರಂ!

ಕಳೆದ ಎರಡು ಆವೃತ್ತಿಗಳಿಂದ ಚೆನ್ನೈ ತಂಡದ ಭಾಗವಾಗಿರುವ ಆಸ್ಟ್ರೇಲಿಯಾದ ಆಟಗಾರ ಶೇನ್ ವಾಟ್ಸನ್ ಸುರೇಶ್ ರೈನಾ ಅವರನ್ನು ದೊಡ್ಡ ಪ್ರಮಾಣದಲ್ಲಿ ಮಿಸ್ ಮಾಡಿಕೊಳ್ಳುತ್ತೇವೆ. ಆದರೆ ಅವರ ಅಲಭ್ಯತೆ ಮುರಳಿ ವಿಜಯ್ ಅವರಂತಾ ಉತ್ತಮ ಬ್ಯಾಟ್ಸ್‌ಮನ್‌ಗಳಿಗೆ ಹೆಚ್ಚಿನ ಅವಕಾಶ ದೊರೆಯಲು ಕಾರಣವಾಗುತ್ತದೆ ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ.

ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ಅವರ ಅಲಭ್ಯತೆಯನ್ನು ನಾವು ಭರಿಸಿಕೊಳ್ಳಲೇ ಬೇಕಿದೆ. ಸುರೇಶ್ ರೈನಾ ಐಪಿಎಲ್ ಇತಿಹಾಸದಲ್ಲಿ ಹೆಚ್ಚಿನ ಪಂದ್ಯಗಳನ್ನಾಡಿದ ಅನುಭವ ಹೊಂದಿದ್ದಾರೆ. ಐಪಿಎಲ್ ಇತಿಹಾಸದ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ. ಹಲವಾರು ದಾಖಲೆಗಳನ್ನು ಬರೆದಿದ್ದಾರೆ. ಅವರ ಸ್ಥಾನವನ್ನು ಭರ್ತಿ ಮಾಡುವುದು ಕಷ್ಟದ ಕೆಲಸ ಎಂದು ಶೇನ್ ವಾರ್ನ್ ಹೇಳಿದ್ದಾರೆ.

ದೀಪಕ್ ಚಹಾರ್ 2ನೇ ಕೊರೊನಾ ಪರೀಕ್ಷೆಯೂ ನೆಗೆಟಿವ್, ತಂಡಕ್ಕೆ ಸೇರ್ಪಡೆದೀಪಕ್ ಚಹಾರ್ 2ನೇ ಕೊರೊನಾ ಪರೀಕ್ಷೆಯೂ ನೆಗೆಟಿವ್, ತಂಡಕ್ಕೆ ಸೇರ್ಪಡೆ

ಇನ್ನು ಇದೇ ಸಂದರ್ಭದಲ್ಲಿ ಶೇನ್ ವಾಟ್ಸನ್ ಮುರಳಿ ವಿಜಯ್ ಹಾಗೂ ಪಿಯೂಷ್ ಚಾವ್ಲಾ ಬಗ್ಗೆ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ. ಇವರಿಬ್ಬರೂ ಸಾಕಷ್ಟು ಅನುಭವವನ್ನು ಹೊಂದಿರುವ ಅದ್ಭುತ ಆಟಗಾರರಾಗಿದ್ದಾರೆ. ಸುರೇಶ್ ರೈನಾ ಹಾಗೂ ಹರ್ಭಜನ್ ಸಿಂಗ್ ಅಲಭ್ಯತೆಯಿಂದಾಗಿ ಈ ಆಟಗಾರರಿಗೆ ಹೆಚ್ಚಿನ ಅವಕಾಶ ದೊರೆಯುವ ಸಾಧ್ಯತೆಯಿದೆ ಎಂದು ಶೇನ್ ವಾಟ್ಸನ್ ಹೇಳಿದ್ದಾರೆ.

Story first published: Thursday, September 10, 2020, 16:16 [IST]
Other articles published on Sep 10, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X