2011ರ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ಫಿಕ್ಸಿಂಗ್: ಆರೋಪಕ್ಕೆ ಸಾಕ್ಷ್ಯವೇ ಇಲ್ಲ ಎಂದ ತನಿಖಾ ತಂಡ

2011ರ ವಿಶ್ವಕಪ್‌ನ ಭಾರತದ ವಿರುದ್ಧದ ಫೈನಲ್ ಪಂದ್ಯದಲ್ಲಿ ಶ್ರೀಲಂಕಾ ಕ್ರಿಕೆಟ್ ತಂಡ ಫಿಕ್ಸಿಂಗ್ ನಡೆಸಿದೆ ಎಂಬ ಆರೋಪಕ್ಕೆ ಸಂಬಂಧ ಪಟ್ಟ ತನಿಖೆಯನ್ನು ಮುಕ್ತಾಯಗೊಳಿಸಲಾಗಿದೆ. ಈ ಆರೋಪಕ್ಕೆ ಸಂಬಂಧಿಸಿದ ಯಾವುದೇ ಸಾಕ್ಷಿಗಳು ಲಭ್ಯವಾಗದ ಕಾರಣದಿಂದ ವಿಶೇಷ ತನಿಖಾ ದಳ ಈ ಪ್ರಕರಣದ ವಿಚಾರನೆಯನ್ನು ಮುಕ್ತಾಯಗೊಳಿಸುತ್ತಿರುವುದಾಗಿ ಉನ್ನತ ತನಿಖಾಧಿಕಾರಿಗಳು ಶುಕ್ರವಾರ(ಜೂನ್ 3) ಸ್ಪಷ್ಟಪಡಿಸಿದ್ದಾರೆ.

ನಾವು ಶ್ರೀಲಂಕಾ ಕ್ರಿಕೆಟ್ ತಂಡದ ಪ್ರಮುಖ ಮೂವರು ಆಟಗಾರರನ್ನು ವಿಚಾರಣೆ ನಡೆಸಿದ್ದೇವೆ. ಜೊತೆಗೆ ಅಂದಿನ ವಿಶ್ವಕಪ್ ತಂಡದ ಆಯ್ಕೆ ಮಂಡಳಿಯ ಮುಖ್ಯಸ್ಥರನ್ನೂ ವಿಚಾರಣೆ ನಡೆಸಿದ್ದೆವು. ವಿಚಾರಣೆಯ ಸಂದರ್ಭದಲ್ಲಿ ಅವರು ನೀಡಿದ ವಿವರಣೆಗಳಿಂದ ನಾವು ತೃಪ್ತರಾಗಿದ್ದೇವೆ ಎಂದು ಅಧಿಕಾರಿ ಹೇಳಿದ್ದಾರೆ.

ವಿಶ್ವಕಪ್‌ನಲ್ಲಿ ಫಿಕ್ಸಿಂಗ್ ಆರೋಪ: ಅರವಿಂದ ಡಿಸಿಲ್ವ ಹಾಗೂ ಉಫುಲ್ ತರಂಗ ವಿಚಾರಣೆ

ಮಾಜಿ ಕ್ರೀಡಾ ಸಚಿವರೇ ಮಾಡಿದ್ದರು ಗಂಭೀರ ಆರೋಪ

ಮಾಜಿ ಕ್ರೀಡಾ ಸಚಿವರೇ ಮಾಡಿದ್ದರು ಗಂಭೀರ ಆರೋಪ

ಭಾರತ ವಿಶ್ವಕಪ್ ವಿಜೇತವಾದ 2011ರ ವಿಶ್ವಕಪ್ ಫೈನಲ್ ಪಂದ್ಯವನ್ನು ಶ್ರೀಲಂಕಾ ಕ್ರಿಕೆಟ್ ತಂಡದ ಕೆಲ ವಿಭಾಗಗಳು ಮೊದಲೇ ನಿರ್ಧರಿಸಿದ್ದವು. ಹೀಗೆ ವಿಶ್ವಕಪ್‌ಅನ್ನು ಶ್ರೀಲಂಕಾ ಮಾರಾಟ ಮಾಡಿಕೊಂಡಿತ್ತು ಎಂದು ಫಿಕ್ಸಿಂಗ್ ನಡೆದಿದೆ ಎಂದು ಅಂದಿನ ಕ್ರೀಡಾ ಸಚಿವರಾಗಿದ್ದ ಮಹಿಂದಾನಂದ ಅಲುತ್‌ಗಮಾಗೆ ಆರೋಪವನ್ನು ಮಾಡಿದ್ದರು. ಸ್ವತಃ ಅಂದಿನ ಕ್ರೀಡಾ ಸಚಿವರೇ ಈ ಆರೋಪವನ್ನು ಮಾಡಿದ್ದು ಸಾಕಷ್ಟು ಗಂಭೀರತೆಯನ್ನು ಪಡೆದಿತ್ತು.

ತನಿಖೆ ಮುಕ್ತಾಯವಾಗಿದೆ

ತನಿಖೆ ಮುಕ್ತಾಯವಾಗಿದೆ

ವಿಚಾರಣೆಯ ಬಗ್ಗೆ ಮಾತನಾಡಿದ ವಿಶೇಷ ತನಿಖಾ ತಂಡದ ಮುಖ್ಯಸ್ಥ ಜಗತ್‌ ಫೋನ್ಸೆಕಾ "ಈ ತನಿಖೆಯ ಸಂಪೂರ್ಣ ವರದಿಯನ್ನು ತನಿಖೆಗೆ ನಿರ್ದೇಶನವನ್ನು ನೀಡಿದ್ದ ಕ್ರೀಡಾ ಸಚಿವಾಲಯ ಮತ್ತು ಕಾರ್ಯದರ್ಶಿಗಳಿಗೆ ಕಳುಹಿಸಲಾಗಿದೆ. ಇಂದು ನಡೆಸಿದ ಆಂತರಿಕ ಚರ್ಚೆಯ ನಂತರ ತನಿಖೆಯನ್ನು ಮುಕ್ತಾಯಗೊಳಿಸಿದ್ದೇವೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಆಟಗಾರರ ಹೆಚ್ಚಿನ ವಿಚಾರಣೆಗೆ ಯಾವುದೇ ಕಾರಣಗಳಿಲ್ಲ

ಆಟಗಾರರ ಹೆಚ್ಚಿನ ವಿಚಾರಣೆಗೆ ಯಾವುದೇ ಕಾರಣಗಳಿಲ್ಲ

ಈ ವಿಚಾರಣೆಯ ನಂತರ ಈ ಬಗ್ಗೆ ಮಾಜಿ ಕ್ರೀಡಾ ಸಚಿವ ಮಹಿಂದಾನಂದ ಅಲುತ್‌ಗಮಾಗೆ ಅವರ 14 ಅಂಶಗಳನ್ನು ಆರೋಪಗಳನ್ನು ದೃಢಪಡಿಸಲು ಸಾಧ್ಯವಿಲ್ಲ ಎಂದು ಜಗತ್ ಫೊನ್ಸೆಕಾ ಹೇಳಿದ್ದಾರೆ. ಜೊತೆಗೆ ಆಟಗಾರರನ್ನು ಇನ್ನಷ್ಟು ವಿಚಾರಣೆ ನಡೆಸಲು ಯಾವುದೇ ಕಾರಣಗಳು ನಮ್ಮ ಮುಂದೆ ಇಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ.

9 ವರ್ಷಗಳ ನಂತರ ತನಿಖೆ

9 ವರ್ಷಗಳ ನಂತರ ತನಿಖೆ

ಆರೋಪ ಕೇಳಿ ಬಂದಿರುವ ವಿಶ್ವಕಪ್‌ನ ಪಂದ್ಯ ನಡೆದು 9 ವರ್ಷಗಳು ಕಳೆದಿವೆ. ಈ ಸಂದರ್ಭದಲ್ಲಿ ಅಂದು ಕ್ರೀಡಾ ಸಚಿವರಾಗಿದ್ದ ಮಹಿಂದಾನಂದ ಅಲುತ್‌ಗಮಾಗೆ ಖಾಸಗೀ ವಾಹಿನಿಯೊಂದರ ಸಂದರ್ಶನದಲ್ಲಿ ಅಂದಿನ ಪಂದ್ಯದಲ್ಲಿ ಫಿಕ್ಸಿಂಗ್ ನಡೆದಿದೆ ಎಂದು ಆರೋಪಿಸಿದ್ದರು. ಆದರೆ ಬಳಿಕ ವಿಚಾರಣಾ ತಂಡದ ಮುಂದೆ ಹೇಳಿಕೆ ನೀಡಿದ ಸಂದರ್ಭದಲ್ಲಿ ಫಿಕ್ಸಿಂಗ್ ನಡೆದಿದೆ ಎಂಬ ಅನುಮಾನವಿದೆಯಷ್ಟೇ ಎಂದಿದ್ದರು.

For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, July 3, 2020, 16:56 [IST]
Other articles published on Jul 3, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X