ಕೆಪಿಎಲ್ ಫಿಕ್ಸಿಂಗ್ ಹಗರಣ: ತನಿಖೆ ಪೂರ್ಣಗೊಳ್ಳುವವರೆಗೆ ಕೆಪಿಎಲ್ ಇಲ್ಲ

ಕರ್ನಾಟಕ ಪ್ರೀಮಿಯರ್ ಲೀಗ್ ಈಗ ವಿವಾದದ ಕೇಂದ್ರಬಿಂದುವಾಗಿದೆ. ಟೂರ್ನಿಗೆ ಫಿಕ್ಸಿಂಕ್ ಕಳಂಕ ಅಂಟಿಕೊಂಡಿದ್ದು ತನಿಖೆಗೆ ಎಸ್‌ಐಟಿ ತಂಡವನ್ನು ರಚನೆ ಮಾಡಲಾಗಿದೆ. ಕರ್ನಾಟಕ ರಾಜ್ಯ ಫಿಕ್ಸಿಂಗ್ ಹಗರಣದ ತನಿಖೆ ಪೂರ್ಣಗೊಳ್ಳುವ ತನಕ ಕರ್ನಾಟಕ ಪ್ರೀಮಿಯರ್ ಲೀಗ್ ಪಂದ್ಯಗಳನ್ನು ನಡೆಸದಿರಲು ಕೆಎಸ್‌ಸಿಎ ನಿರ್ಧರಿಸಿದೆ.

ಸದ್ಯ ಯಾವುದೇ ಕೆಪಿಎಲ್ ಪಂದ್ಯಗಳು ಇಲ್ಲ. ತನಿಖೆ ಮುಗಿಯುವವರೆಗೂ ಯಾವುದೇ ಪಂದ್ಯ ಆಯೋಜನೆ ಮಾಡದೇ ಇರಲು ನಿರ್ಧರಿಸಿರೋದಾಗಿ ಕೆಎಸ್‌ಸಿಎ ಖಜಾಂಚಿ ವಿನಯ್ ಮೃತ್ಯುಂಜಯ ತಿಳಿಸಿದ್ದಾರೆ. ಹಾಗಿದ್ದರೂ ಕೆಪಿಎಲ್ ಟೂರ್ನಿಯನ್ನು ಆಯೋಜನೆ ಮಾಡುವುದು ಕೆಸ್‌ಸಿಎ ಕಾರ್ಯಸೂಚಿಯಲ್ಲಿದೆ ಎಂದು ಅವರು ತಿಳಿಸಿದ್ದಾರೆ.

ಕೆಪಿಎಲ್ ಫಿಕ್ಸಿಂಗ್ ಪ್ರಕರಣಕ್ಕೆ ಟ್ವಿಸ್ಟ್, ಮೋಸದಾಟಕೆ ಹೆಣ್ಣಿನಾಸೆ ತಳುಕು!

ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಈವರೆಗೆ ಏಳು ಮಂದಿಯನ್ನು ಬಂಧಿಸಿದೆ. ಬಳ್ಳಾರಿ ಟಸ್ಕರ್ಸ್ ಮಾಲೀಕ ಅರವಿಂದ್ ವೆಂಟೇಶ್ ರೆಡ್ಡಿಯವರಿಗೆ ಲುಕ್‌ಔಟ್‌ ನೋಡೀಸ್ ಕಳುಹಿಸಲಾಗಿದೆ. ಆಟಗಾರ ಭವೇಶ್ ಗುಲೆಚಾ ನೀಡಿದ ದೂರಿನ ಹಿನ್ನೆಲೆಯಲ್ಲಿ ಪ್ರಕರಣ ಬೆಳಕಿಗೆ ಬಂದಿತ್ತು. ಬೆಳಗಾವಿ ಪ್ಯಾಂರ್ಸ್ ತಂಡದ ಮಾಲೀಕ ಅಸ್ಫಾಕ್ ಥಾರಾ ಪ್ರಕರಣದಲ್ಲಿ ಮೊದಲಿಗೆ ಬಂಧನಕ್ಕೊಳಗಾಗಿದ್ದು ತನಿಖೆಯಲ್ಲಿ ಆಟಗಾರರು ಹಾಗೂ ತಂಡದ ಅಧಿಕಾರಿಗಳು ಪಾಲ್ಗೊಂಡಿರುವುದು ಬೆಳಕಿಗೆ ಬಂದಿತ್ತು.

ಕೆಪಿಎಲ್ ಮ್ಯಾಚ್ ಫಿಕ್ಸಿಂಗ್: ನಮ್ಮ ಶಿವಮೊಗ್ಗ ತಂಡದ ನಿಶಾಂತ್ ಸಿಂಗ್ ಬಂಧನ

ಹರ್ಯಾಣದ ಅಂತರಾಷ್ಟ್ರೀಯ ಬುಕ್ಕಿ ಸನ್ಯಾಮ್, ಬಳ್ಳಾರಿ ಟಸ್ಕರ್ಸ್‌ ನಾಯಕ ಸಿ ಎಂ ಗೌತಮ್, ಮತ್ತು ಐಪಿಎಲ್ ಡ್ರಮ್ಮರ್ ಭಾವೇಶ್ ಬಾಫ್ನಾ ಬಂಧನಕ್ಕೊಳಗಾಗಿರುವ ಇತರ ಪ್ರಮುಖರಾಗಿದ್ದಾರೆ. ತನಿಖೆಯ ಸಂದರ್ಭದಲ್ಲಿ ಹನಿಟ್ರ್ಯಾಪ್ ಮೂಲಕ ಆಟಗಾರರನ್ನು ಬಲೆಗೆ ಕೆಡವಿ ಬಳಿಕ ಫಿಕ್ಸಿಂಗ್‌ನಲ್ಲಿ ತೊಡಗಿಸಿಕೊಳ್ಳಲಾಗುತ್ತಿತ್ತು ಎನ್ನುವ ವಿಚಾರ ಬೆಳಕಿಗೆ ಬಂದಿದೆ.

For Quick Alerts
Subscribe Now
For Quick Alerts
ALLOW NOTIFICATIONS
For Daily Alerts

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Friday, November 22, 2019, 12:14 [IST]
Other articles published on Nov 22, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X