ನೀವು ಏನೇ ಮಾಡಿದರು ಟೀಕೆಗಳನ್ನು ಎದುರಿಸಬೇಕಾಗುತ್ತದೆ: ಲಸಿತ್ ಮಾಲಿಂಗ ಅಸಮಾಧಾನ

ಶ್ರೀಲಂಕಾ ತಂಡದ ಹಿರಿಯ ವೇಗಿ ಟಿ20 ನಾಯಕ ಲಸಿತ್ ಮಾಲಿಂಗ ಶ್ರಿಲಂಕಾ ಮಂಡಳಿ ಆಯೊಜಿಸುತ್ತಿರುವ ಮೊದಲ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಪಾಲ್ಗೊಳ್ಳದಿರಲು ನಿರ್ಧರಿಸಿದ್ದಾರೆ. ಲಂಕಾದ ಹಿರಿಯ ಆಟಗಾರನ ಈ ನಿರ್ಧಾರಕ್ಕೆ ಸಾಕಷ್ಟು ಅಸಮಾಧಾನಗಳು ವ್ಯಕ್ತವಾಗುತ್ತಿದೆ. ಇದಕ್ಕೆ ಸ್ವತಃ ಲಸಿತ್ ಮಾಲಿಂಗ ಪ್ರತಿಕ್ರಿಯಿಸಿದ್ದು ಬೇಸರದ ಮಾತುಗಳನ್ನು ಆಡಿದ್ದಾರೆ.

ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡದಿರುವ ಹಿನ್ನೆಲೆಯಲ್ಲಿ ಶ್ರೀಲಂಕಾದ ಅಭಿಮಾನಿಗಳು ಲಸಿತ್ ಮಾಲಿಂಗ ಅವರ ದೇಶಪ್ರೇಮವನ್ನೇ ಪ್ರಶ್ನಿಸುತ್ತಿದ್ದಾರೆ. ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಆಡಲು ಸಿದ್ದರಿರುವ ಮಾಲಿಂಗಾ ಲಂಕಾ ಪ್ರೀಮಿಯರ್ ಲೀಗ್‌ನಲ್ಲಿ ಆಡುವ ಕನಿಷ್ಟ ಪ್ರಯತ್ನವನ್ನೂ ನಡೆಸಲಿಲ್ಲ ಎಂದು ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ.

ಇಬ್ಬರು ಕನ್ನಡಿಗರನ್ನು ಪ್ರಮುಖ ಆಟಗಾರರ ಅಲಭ್ಯತೆಯನ್ನು ತುಂಬಬಲ್ಲ ಆಟಗಾರರು ಎಂದ ಸ್ಟೀವ್ ಸ್ಮಿತ್

ಗಮನಿಸಬೇಕಾಗ ಸಂಗತಿಯೆಂದರೆ ಲಸಿತ್ ಮಾಲಿಂಗ ಈ ಬಾರಿಯ ಐಪಿಎಲ್‌ನಿಂದಲೂ ಹೊರಗುಳಿದಿದ್ದರು. ಮುಂಬೈ ಇಂಡಿಯನ್ಸ್ ಪರವಾಗಿ ಕಣಕ್ಕಿಳಿಯಬೇಕಿದ್ದ ಲಸಿತ್ ಮಾಲಿಂಗ್ ವೈಯಕ್ತಿಕ ಕಾರಣಗಳನ್ನು ನೀಡಿ ಐಪಿಎಲ್‌ನಿಂದಲೂ ಹಿಂದಕ್ಕೆ ಸರಿದಿದ್ದರು. ಇವರ ಸ್ಥಾನಕ್ಕೆ ಮುಂಬೈ ಜೇಮ್ಸ್ ಪ್ಯಾಟಿನ್ಸನ್ ಅವರನ್ನು ಸೇರಿಸಿಕೊಂಡಿತ್ತು.

"ಸುದೀರ್ಘಕಾಲ ಆಡುದವರಿಗೆ ಪೂರ್ವತಯಾರಿ ಯಾಕೆ ಎಂದು ಕೆಲವರು ಅಚ್ಚರಿ ಪಡುತ್ತಾರೆ. ಆದರೆ ನೀವು ಅಂಗಳದಲ್ಲಿ ಮಾಡುಬೇಕಾದದನ್ನು ಮನೆಯಲ್ಲಿ ಜಿಮ್‌ನಲ್ಲಿ ಕುಳಿತು ಮಾಡಲು ಸಾಧ್ಯವಿಲ್ಲ. ನಾನು ಒಂದು ಯಾರ್ಕರ್ ಎಸೆಯಬೇಕಾದರೆ ಅದಕ್ಕೂ ಮುನ್ನ ಸಾವಿರ ಬಾರಿ ಅಭ್ಯಾಸ ನಡೆಸಿರುತ್ತೇನೆ. ಅದು ಅಚಾನಕ್ ಆಗಿ ಬಿದ್ದಿರುವುದಿಲ್ಲ" ಎಂದು ಮಾಲಿಂಗ ಟೀಕಾಕಾರರಿಕೆ ತಿರುಗೇಟು ನೀಡಿದ್ದಾರೆ.

ಇಂಗ್ಲೆಂಡ್ ವಿರುದ್ಧ ಭಾರತ 5 ಟಿ20ಐ ಪಂದ್ಯಗಳನ್ನಾಡಲಿದೆ: ಗಂಗೂಲಿ

"ನಾನು ಎಲ್‌ಪಿಎಲ್‌ನಲ್ಲಿ ಯಾರ್ಕರ್ ಎಸೆಯಲು ವಿಫಲನಾದರೆ ಆಗ ಐಪಿಎಲ್‌ನಲ್ಲಿ ಯಾರ್ಕರ್ ಎಸೆಯಲು ಸಾಧ್ಯವಾಗುತ್ತದೆ ಎಲ್‌ಪಿಎಲ್‌ನಲ್ಲಿ ಆಗುವುದಿಲ್ಲ ಎನ್ನುತ್ತಾರೆ. ನೀವು ದೇಶದ ಪರವಾಗಿ ಏನು ಸಾಧಿಸಿದ್ದೀರಿ ಎಂಬುದು ಮೂಖ್ಯವಾಗುವುದಿಲ್ಲ. ಟೀಕೆಗಳನ್ನು ಸ್ವೀಕರಿಸಲೇಬೇಕಾಗುತ್ತದೆ. ನಾನು ದೇಶಕ್ಕಾಗಿ ಏನು ಮಾಡಿದ್ದೇನೆ ಎಂಬುದು ಜಗತ್ತಿಗೆ ತಿಳಿದಿದೆ ಹಾಗೂ ನನ್ನನ್ನು ಇಷ್ಟ ಪಡುವವರಿಗೆ ತಿಳಿದಿದೆ. ಅದು ನನಗೆ ಸಾಕು" ಎಂದು ಲಸಿತ್ ಮಾಲಿಂಗ ಹೇಳಿಕೊಂಡಿದ್ದಾರೆ.

For Quick Alerts
ALLOW NOTIFICATIONS
For Daily Alerts
 

ಕ್ರಿಕೆಟನ್ನು ಪ್ರೀತಿಸುತ್ತೀರಾ? ಋಜುವಾತುಪಡಿಸಿ! ಮೈಖೇಲ್ ಫ್ಯಾಂಟಸಿ ಕ್ರಿಕೆಟ್ ಆಟವಾಡಿ

Story first published: Tuesday, November 24, 2020, 22:34 [IST]
Other articles published on Nov 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X