ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನನ್ನ ಬ್ಯಾಟಿಂಗ್ ಶೈಲಿ ಬದಲಾಯಿಸುವ ಅಗತ್ಯವಿಲ್ಲ: ಟೀಕೆಗೆ ಪೂಜಾರ ಖಡಕ್ ಉತ್ತರ

No need to change batting style: cheteshwar Pujara

ಟೀಮ್ ಇಂಡಿಯಾದ ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ ಪೂಜಾರ ಕಳೆದ ಕೆಲ ಟೆಸ್ಟ್ ಪಂದ್ಯಗಳಲ್ಲಿ ತೋರಿದ ಪ್ರದರ್ಶನ ಟೀಕೆಗೆ ಗುರಿಯಾಗಿದೆ. ಅತ್ಯಂತ ನಿಧಾನಗತಿಯಲ್ಲಿ ಬ್ಯಾಟಿಂಗ್ ಮಾಡುವ ಪೂಜಾರ ಆಟದ ಶೈಲಿಯನ್ನು ಅನೇಕ ಕ್ರಿಕೆಟ್ ವಿಮರ್ಶಕರು ಕಟು ಟೀಕೆಗೆ ಒಳಪಡಿಸಿದ್ದಾರೆ.

ಈ ಟೀಕೆಗೆ ಟೀಮ್ ಇಂಡಿಯಾ ಆಟಗಾರ ಚೇತೇಶ್ವರ್ ಪೂಜಾರ ಉತ್ತರವನ್ನು ನೀಡಿದ್ದಾರೆ. ತನ್ನ ಆಟದಲ್ಲಿ ನಾನು ಯಾವುದೇ ರೀತಿಯ ಬದಲಾವಣೆಯನ್ನು ಮಾಡಿಕೊಳ್ಳು ಬಯಸುವುದಿಲ್ಲ. ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ನನ್ನ ಈ ಶೈಲಿಯ ಬ್ಯಾಟಿಂಗ್ ಕಾರಣಕ್ಕೇ ಆಯ್ಕೆ ಮಾಡಿಕೊಂಡಿದೆ ಎಂದು ಹೇಳಿದ್ದಾರೆ.

ಟೀಮ್ ಇಂಡಿಯಾ ಮ್ಯಾನೇಜ್‌ಮೆಂಟ್ ತನ್ನ ಮೇಲೆ ಮತ್ತು ತನ್ನ ಬ್ಯಾಟಿಂಗ್ ಸಾಮರ್ಥ್ಯದ ಮೇಲೆ ಸಾಕಷ್ಟು ನಂಬಿಕೆಯನ್ನು ಇಟ್ಟಿದೆ. ತನ್ನ ಬ್ಯಾಟಿಂಗ್ ಶೈಲಿಯನ್ನು ಮುಂದುವರಿಸಲು ಟೀಮ್ ಇಂಡಿಯಾ ನನಗೆ ಸಂಪೂರ್ಣಬೆಂಬಲವನ್ನು ನೀಡುತ್ತಿದೆ ಎಂದು ಚೇತೇಶ್ವರ ಪೂಜಾರ ಹೇಳಿಕೊಂಡಿದ್ದಾರೆ.

ಐಪಿಎಲ್ 2020: ಈ ಸೀಸನ್‌ನಲ್ಲಿ ಕೊಹ್ಲಿ ಮುರಿಯಬಲ್ಲ 4 ದಾಖಲೆಗಳು!ಐಪಿಎಲ್ 2020: ಈ ಸೀಸನ್‌ನಲ್ಲಿ ಕೊಹ್ಲಿ ಮುರಿಯಬಲ್ಲ 4 ದಾಖಲೆಗಳು!

ಈ ಬಾರಿಯ ರಣಜಿ ಫೈನಲ್ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ಸೌರಾಷ್ಟ್ರ ತಂಡದ ಪರವಾಗಿ ಬಂಗಾಳ ತಂಡದ ವಿರುದ್ಧ ನಡೆದ ಪಂದ್ಯದಲ್ಲಿ 237 ಎಸೆತಗಳನ್ನು ಎದುರಿಸಿ ಕೇವಲ 66 ರನ್ನಷ್ಟೇ ಗಳಿಸಿದರು. ಇದು ಸಾಕಷ್ಟು ಟೀಕೆಗೆ ಕಾರಣವಾಗಿತ್ತು.

ಚೇತೇಶ್ವರ್ ಪೂಜಾರ ತನ್ನ ಬ್ಯಾಟಿಂಗ್ ಸ್ಟ್ರೈಕ್‌ರೇಟ್‌ ಬಗ್ಗೆ ಕೇಳಿ ಬಂದಿರುವ ಟೀಕೆಗೆ ' ಈ ವಿಚಾರ ಚರ್ಚೆಗೆ ಬಂದಾಗ ಜನರು ತಂಡದ ಮ್ಯಾನೇಜ್‌ಮೆಂಟ್‌ನತ್ತ ಮುಖಮಾಡುತ್ತಾರೆ. ಆದರೆ ಟೀಮ್ ಮ್ಯಾನೇಜ್‌ಮೆಂಟ್ ಈ ವಿಚಾರವಾಗಿ ತನ್ನ ಮೇಲೆ ಯಾವುದೇ ರೀತಿಯಲ್ಲೂ ಒತ್ತಡವನ್ನು ಹಾಕಿಲ್ಲ ಎಂದಿದ್ದಾರೆ.

Story first published: Friday, March 20, 2020, 16:40 [IST]
Other articles published on Mar 20, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X