ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್‌ ಫೈನಲ್‌ ಸೋಲಿನ ದುಖಃ ತೋಡಿಕೊಂಡ ವಿಲಿಯಮ್ಸನ್‌

ಕೊನೆಗೂ ಮೌನ ಮುರಿದ ಕೇನ್ ವಿಲಿಯಮ್ಸನ್ ಹೆಳಿದ್ದು ಹೀಗೆ..? | Oneindia Kannada
No one lost the World Cup final: Kane Williamson

ವೆಲ್ಲಿಂಗ್ಟನ್‌, ಜುಲೈ 16: "ಫೈನಲ್‌ ಪಂದ್ಯದಲ್ಲಿ ಯಾರೂ ಸೋಲಲಿಲ್ಲ," ಎಂದು ನ್ಯೂಜಿಲೆಂಡ್‌ ತಂಡದ ನಾಯಕ ಕೇನ್‌ ವಿಲಿಯಮ್ಸನ್‌ ಇಂಗ್ಲೆಂಡ್‌ ಎದುರು ವಿಶ್ವಕಪ್‌ ಕೈಚೆಲ್ಲಿದ ಎರಡು ದಿನಗಳ ಬಳಿಕ ತಮ್ಮ ಮನದಾಳದ ಮಾತುಗಳನ್ನು ಹೊರಹಾಕಿದ್ದಾರೆ.

ನ್ಯೂಜಿಲೆಂಡ್‌ ತಂಡ ಕ್ರಿಕೆಟ್‌ ಜಗತ್ತು ಹಿಂದೆಂದೂ ಕಂಡರಿಯದ ರೀತಿಯಲ್ಲಿ ವಿಶ್ವಕಪ್‌ ಫೈನಲ್‌ನಲ್ಲಿ ಬೌಂಡರಿಗಳ ಅಂತರದಲ್ಲಿ ಹಿನ್ನಡೆ ಅನುಭವಿಸಿದ್ದ ಕಾರಣಕ್ಕೆ ರನ್ನರ್ಸ್‌ಅಪ್‌ ಸ್ಥಾನ ಪಡೆದಿತ್ತು. ಹಾಲಿ ಮತ್ತು ಮಾಜಿ ಕ್ರಿಕೆಟಿಗರು ಹಾಗೂ ಇಡೀ ಕ್ರಿಕೆಟ್‌ ಜಗತ್ತೇ ಈ ನಿಯಮದ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿತ್ತು. ಅಲ್ಲದೆ ಐಸಿಸಿ ಈ ನಿಯಮಗಳ ಬದಲಾವಣೆ ಕಡೆಗೆ ಮುಂದಾಗಬೇಕೆಂದು ಸಲಹೆ ನೀಡಿದ್ದರು.

ವಿಶ್ವಕಪ್‌ ಫೈನಲ್‌ ಸೋಲಿನ ಬಗ್ಗೆ ಕೊನೆಗೂ ಮೌನ ಮುರಿದ ಕಿವೀಸ್‌ ಕೋಚ್‌ವಿಶ್ವಕಪ್‌ ಫೈನಲ್‌ ಸೋಲಿನ ಬಗ್ಗೆ ಕೊನೆಗೂ ಮೌನ ಮುರಿದ ಕಿವೀಸ್‌ ಕೋಚ್‌

ಇನ್ನು ಫೈನಲ್‌ ಪಂದ್ಯದ ಬಳಿಕ ಮಾತನಾಡಿದ್ದ ಕೇನ್‌ ವಿಲಿಯಮ್ಸನ್‌ ಗೆಲುವನ್ನು ಸ್ವೀಕರಿಸುವ ರೀತಿಯಲ್ಲೇ ಸೋಲನ್ನೂ ಸ್ವೀಕರಿಸುವುದಾಗಿ ಹೇಳಿ ಕ್ರಿಕೆಟ್‌ ಪ್ರಿಯರ ಮನ ಗೆದ್ದಿದ್ದರು. ಅಲ್ಲದೆ ಟೂರ್ನಿಯ ನೀತಿ ನಿಯಮಗಳಿಗೆ ಬದ್ಧರಾಗಿರುವ ಒಪ್ಪಂದಕ್ಕೆ ತಾವು ಸಹಿ ಹಾಕಿರುವುದಾಗಿ ಹೇಳಿದ್ದರು. ನ್ಯೂಜಿಲೆಂಡ್‌ ತಂಡ ಫೈನಲ್‌ ಪಂದ್ಯದಲ್ಲಿ 17 ಬೌಂಡರಿಗಳನ್ನು ಗಳಿಸಿದ್ದರೆ, ಇಂಗ್ಲೆಂಡ್‌ ತಂಡದ ಖಾತೆಯಲ್ಲಿ 26 ಬೌಂಡರಿಗಳಿದ್ದವು. ನಿಗದಿತ ಓವರ್‌ಗಳು ಮತ್ತು ಸೂಪರ್‌ ಓವರ್‌ನಲ್ಲಿ ಎರಡೂ ತಂಡಗಳು ಸಮಬಲ ಸಧಿಸಿದ ಹಿನ್ನೆಲೆಯಲ್ಲಿ ಬೌಂಡರಿಗಳ ಸಂಖ್ಯೆಯನ್ನು ಟೈಬ್ರೇಕರ್‌ ನಿಯಮವಾಗಿ ಬಳಕೆ ಮಾಡಲಾಗಿತ್ತು.

ತಮ್ಮ ವಿಶ್ವಕಪ್‌ ತಂಡದಿಂದ ಧೋನಿಯನ್ನು ಕೈಬಿಟ್ಟ ತೆಂಡೂಲ್ಕರ್‌!ತಮ್ಮ ವಿಶ್ವಕಪ್‌ ತಂಡದಿಂದ ಧೋನಿಯನ್ನು ಕೈಬಿಟ್ಟ ತೆಂಡೂಲ್ಕರ್‌!

ಇದೀಗ ಕೊನೆಗೂ ಬೌಂಡರಿ ನಿಯಮದಿಂದ ಸೋಲೆದುರಾಗಿದರ ಕುರಿತಾಗಿ ತಮ್ಮೊಳಗಿನ ಹತಾಶೆ ಹಾಗೂ ದುಖಃವನ್ನು ತೋಡಿಕೊಂಡಿರುವ ವಿಲಿಯಮ್ಸನ್‌, "ಈ ಕುರಿತಾಗಿ ನೀವು ಪ್ರಶಸ್ನೆ ಕೇಳುವ ಸಂದರ್ಭ ಬರುತ್ತದೆ ಎಂದು ನಾನು ಆಲೋಚಿಸಿರಲಿಲ್ಲ. ನನಗೆ ಇಂಥದ್ದೊಂದು ಪ್ರಶ್ನೆಗೆ ಉತ್ತರಿಸುವ ಪ್ರಸಂಗ ಬರುತ್ತದೆ ಎಂದೂ ಅಂದಾಜಿಸಿರಲಿಲ್ಲ," ಎಂದು ನಗುತ್ತಲೇ ಮಾತನಾಡಿದ ವಿಲಿಯಮ್ಸನ್‌, "ಭಾವನೆಗಳು ನೈಜವಾದವು. ಎರಡು ತಂಡಗಳು ತನ್ನೆಲ್ಲಾ ಸಾಮರ್ಥ್ಯವನ್ನು ಪಣಕ್ಕಿಟ್ಟು ಆಡಿದ್ದಂತಹ ಸಂದರ್ಭದಲ್ಲಿ ಇಂಥದ್ದೊಂದು ಫಲಿತಾಂಶವನ್ನು ಅರಗಿಸಿಕೊಳ್ಳಲು ಖಂಡಿತಾ ಸಾಧ್ಯವಿಲ್ಲ. ಪಂದ್ಯದಲ್ಲಿ ಸೋಲು ಗೆಲುವನ್ನು ನಿರ್ಧರಿಸಲು ಎರಡು ಬಾರಿ ಪ್ರಯತ್ನಿಸಲಾಯಿತು. ಆದರೆ ಸಮಬಲವೇ ಹೊರಬಂದಿತ್ತು. ಇಲ್ಲಿ ಸೋತವರು ಯಾರೂ ಇಲ್ಲ," ಎಂದಿದ್ದಾರೆ.

ಟೀಮ್‌ ಇಂಡಿಯಾಗೆ ಹೊಸ ಕೋಚ್‌ ತರುವ ಆಲೋಚನೆಯಲ್ಲಿ ಬಿಸಿಸಿಐಟೀಮ್‌ ಇಂಡಿಯಾಗೆ ಹೊಸ ಕೋಚ್‌ ತರುವ ಆಲೋಚನೆಯಲ್ಲಿ ಬಿಸಿಸಿಐ

ಪಂದ್ಯದಲ್ಲಿ ಮೊದಲಿಗೆ ಟಾಸ್‌ ಗೆದ್ದು ಬ್ಯಾಟ್‌ ಮಾಡಿದ ನ್ಯೂಜಿಲೆಂಡ್‌ 241/8 ಎನ್‌ಗಳನ್ನು ದಾಖಲಿಸಿತು. ಬಳಿಕ ಗುರಿ ಬೆನ್ನತ್ತಿದ ಇಂಗ್ಲೆಂಡ್‌ ತನ್ನೆಲ್ಲಾ ವಿಕೆಟ್‌ ಕಳದುಕೊಂಡು 241 ರನ್‌ಗಳನ್ನು ಗಳಿಸಿದ್ದರಿಂದ ಫಲಿತಾಂಶ ಸಲುವಾಗಿ ಸೂಪರ್‌ ಓವರ್‌ ಮೊರೆಹೋಗಲಾಯಿತು. ಸೂಪರ್‌ ಓವರ್‌ನಲ್ಲೂ ಎರಡೂ ತಂಡಗಳು ತಲಾ 15 ರನ್‌ಗಳನ್ನು ದಾಖಲಿಸಿದ್ದರಿಂದ, ಟೈಬ್ರೇಕರ್‌ ನಿಯಮ ಜಾರಿಗೆ ತಂದು ಒಟ್ಟು ಬೌಂಡರಿಗಳ ಸಂಖ್ಯೆ ಆಧಾರದ ಮೇರೆ ಇಂಗ್ಲೆಂಡ್ ಚಾಂಪಿಯನ್ಸ್‌ ಪಟ್ಟಕ್ಕೇರಿತು.

Story first published: Tuesday, July 16, 2019, 18:42 [IST]
Other articles published on Jul 16, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X