ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಎಂ.ಎಸ್ ಧೋನಿ ಗೈರು, ಟೀಮ್ ಬಸ್‌ನ ಖಾಲಿ ಸೀಟು: ಚಾಹಲ್ ಬಿಚ್ಚಿಟ್ಟ ತಂಡದ ಸತ್ಯ!

ಧೋನಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಟೀಮ್ ಇಂಡಿಯಾ ಆಟಗಾರರು | MS DHONI | CHAHAL | ODI
No One Sits On MS dhonis Last Corner Seat In Team Bus: Yuzvendra Chahal

ಆತನನ್ನು ನಾವು ತುಂಬಾ ಮಿಸ್ ಮಾಡಿಕೊಳ್ಳುತ್ತೇವೆ. ಅದಕ್ಕಾಗಿ ಆತ ಕೂರುತ್ತಿದ್ದ ಸೀಟನ್ನು ಆತನಿಗಾಗಿಯೇ ಮೀಸಲಿಟ್ಟು ಯಾರೂ ಕೂರುತ್ತಿಲ್ಲ! ಹೀಗಂದಿದ್ದು ಟೀಮ್ ಇಂಡಿಯಾದ ಆಟಗಾರ ಯುಜುವೇಂದ್ರ ಚಾಹಲ್. ಟೀಮ್ ಇಂಡಿಯಾದ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ಸಂದರ್ಭದಲ್ಲಿ ಮಾಡಿದ ವಿಶೇಷ ವೀಡಿಯೋದಲ್ಲಿ ಟೀಮ್ ಇಂಡಿಯಾ ಆಟಗಾರರ ಗುಟ್ಟುಂದನ್ನು ಬಿಚ್ಚಿಟ್ಟಿದ್ದಾರೆ ಚಾಹಲ್.

ಅಂದಹಾಗೇ ಟೀಮ್ ಇಂಡಿಯಾ ಆಟಗಾರರು ಖಾಲಿ ಬಿಡುತ್ತಿರುವ ಸೀಟ್ ಯಾರದ್ದು ಗೊತ್ತಾ! ಅದು ಮಾಜಿ ನಾಯಕ ಮಹೇಂದ್ರ ಸಿಂಗ್ ಧೊನಿ ಕೂರುತ್ತಿದ್ದ ಸೀಟ್. ಧೋನಿ ಕೂರುತ್ತಿದ್ದ ಈ ಸೀಟ್‌ನಲ್ಲಿ ಬೇರೆ ಯಾರೂ ಕೂತುಕೊಳ್ಳದೆ ಧೋನಿಗಾಗಿ ಕಾಯುತ್ತಿದ್ದಾರೆ ಟೀಮ್ ಇಂಡಿಯಾ ಆಟಗಾರರು.

ಮುಗಿಯಿತಾ ಧೋನಿ ಯುಗ: ಬಿಸಿಸಿಐ ಕಾಂಟ್ರ್ಯಾಕ್ಟ್ ಲಿಸ್ಟ್‌ನಿಂದ ಧೋನಿ ಹೊರಕ್ಕೆಮುಗಿಯಿತಾ ಧೋನಿ ಯುಗ: ಬಿಸಿಸಿಐ ಕಾಂಟ್ರ್ಯಾಕ್ಟ್ ಲಿಸ್ಟ್‌ನಿಂದ ಧೋನಿ ಹೊರಕ್ಕೆ

ಯುಜುವೇಂದ್ರ ಚಾಹಲ್ ಟೀಮ್ ಇಂಡಿಯಾದ ಅನೇಕ ಇನ್‌ಸೈಡ್‌ ಸ್ಟೋರಿಗಳನ್ನು ತಮ್ಮ 'ಚಾಹಲ್ ಟಿವಿ' ವಿಶೇಷ ಶೋ ಮೂಲಕ ಬಿಚ್ಚಿಡುತ್ತಾರೆ. ನ್ಯೂಜಿಲ್ಯಾಂಡ್ ವಿರುದ್ಧದ ಎರಡನೇ ಪಂದ್ಯ ಗೆದ್ದ ಬಳಿಕ ಟೀಮ್ ಇಂಡಿಯಾ ಆಟಗಾರರು ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಯುಜುವೇಂದ್ರ ಚಾಹಲ್ ಪ್ರತಿಯೊಬ್ಬರ ಬಳಿಯೂ ತೆರಳಿ ಕಾಲೆಳೆದುಕೊಂಡು ತಮಾಷೆಯಾಗಿ ಮಾತನಾಡುತ್ತಾ ಎಂಜಾಯ್ ಮಾಡಿದ್ದಾರೆ. ಆದರೆ ಬಸ್‌ನ ಬಲಭಾಗದ ಕೊನೆಯ ಕಾರ್ನರ್ ಸೀಟ್‌ ಬಳಿ ಬಂದು ಧೋನಿಯ ಗೈರನ್ನು ಬೇಸರದಿಂದ ವ್ಯಕ್ತಪಡಿಸಿದ್ದಾರೆ.

ಮಹೇಂದ್ರ ಸಿಂಗ್ ಧೋನಿ ಟೀಮ್ ಬಸ್‌ನ ಬಲಬಾಗದ ಹಿಂಬದಿಯ ಕಾರ್ನರ್‌ನಲ್ಲಿ ಕುಳಿತುಕೊಳ್ಳುತ್ತಾರೆ. ಧೋನಿ ವಿಶ್ವಕಪ್ ಬಳಿಕ ತಂಡದಲ್ಲಿ ಕಾಣಿಸಿಕೊಳ್ಳದಿದ್ದರೂ ಆ ಕೊನೆಯ ಕಾರ್ನರ್ ಸೀಟ್‌ನಲ್ಲಿ ಯಾರೂ ಕುಳಿತುಕೊಳ್ಲುತ್ತಿಲ್ಲ. ತಂಡದ ಆಟಗಾರರು ಅಷ್ಟು ಅವರನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರೆ ಎಂದು ಚಾಹಲ್ ತಮ್ಮ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ. (ಸಂಪೂರ್ಣ ವೀಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ)

ಧೋನಿ ಧಮಾಕಕ್ಕೆ 15ರ ಸಂಭ್ರಮ; ಮಾಹಿ ಹಾದಿಯ ಅಪೂರ್ವ ನೋಟಧೋನಿ ಧಮಾಕಕ್ಕೆ 15ರ ಸಂಭ್ರಮ; ಮಾಹಿ ಹಾದಿಯ ಅಪೂರ್ವ ನೋಟ

ಕಳೆದ ಒಂದೂವರೆ ದಶಕಗಳ ಕಾಲ ಟೀಮ್ ಇಂಡಿಯಾದಲ್ಲಿ ಮಹೇಂದ್ರ ಸಿಂಗ್ ಧೋನಿಅವಿಭಾಜ್ಯ ಅಂಗವಾಗಿದ್ದರು. ಈ ಅವಧಿಯಲ್ಲಿ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದು ಬೆರಳೆಣಿಕೆ ಸಂದರ್ಭಗಳಲ್ಲಿ ಮಾತ್ರ. ಆದರೆ ಕಳೆದ ವಿಶ್ವಕಪ್ ಬಳಿಕ ಟೀಮ್ ಇಂಡಿಯಾದಲ್ಲಿ ಮಹೇಂದ್ರ ಸಿಂಗ್ ಧೋನಿ ಕಾಣಿಸಿಕೊಂಡಿಲ್ಲ. ಇದು ಧೋನಿ ಅಭಿಮಾನಿಗಳನ್ನು ಮಾತ್ರವಲ್ಲ, ಟೀಮ್ ಇಂಡಿಯಾ ಆಟಗಾರರನ್ನು ಕೂಡ ಎಷ್ಟು ಕಾಡುತ್ತಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನ.

Story first published: Tuesday, January 28, 2020, 13:01 [IST]
Other articles published on Jan 28, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X