ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟೀಮ್ ಇಂಡಿಯಾಗೆ ಹೋಲಿಸಿ ಪಿಸಿಬಿ ವಿರುದ್ಧ ಮತ್ತೋರ್ವ ಪಾಕ್ ಮಾಜಿ ನಾಯಕನ ವಾಗ್ದಾಳಿ

No Pakistan Batsman Can Play For Teams Like India, Australia: Javed Miandad

ಪಾಕಿಸ್ತಾನ ಮಾಜಿ ಕ್ರಿಕೆಟಿಗರು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮೇಲೆ ನಿರಂತರವಾಗಿ ಹರಿಹಾಯುತ್ತಲೇ ಇದ್ದಾರೆ. ಪಿಸಿಬಿಯ ಕಾರ್ಯವೈಖರಿ ಪಾಕಿಸ್ತಾನದ ಮಾಜಿ ಕ್ರಿಕೆಟಿಗರಿಗೆ ಇಷ್ಟವಾಗುತ್ತಿಲ್ಲ. ಆವಕಾಶ ಸಿಕ್ಕಾಗೆಲ್ಲಾ ಪಾಕಿಸ್ತಾನದ ಮಾಜಿ ಆಟಗಾರರು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ವಿರುದ್ಧ ವಾಗ್ದಾಳಿಯನ್ನು ನಡೆಸಿದ್ದಾರೆ.

ಕಳೆದ ಎರಡು ದಿನಗಳ ಹಿಂದೆಯಷ್ಟೇ ಪಾಕಿಸ್ತಾನದ ಮಾಜಿ ವೇಗಿ ಶೋಯೇಬ್ ಅಖ್ತರ್ ಪಿಸಿಬಿ ವಿರುದ್ಧ ಹರಿಹಾಯ್ದಿದ್ದರು. ಮತ್ತೊಂದೆಡೆ ಮತ್ತೋರ್ವ ಪಾಕ್ ದಿಗ್ಗಜ ಆಟಗಾರ ವಾಕರ್ ಯೂನಿಸ್ ಕೂಡ ಬಿಸಿಸಿಐಯನ್ನು ಹೊಗಳಿ ಟೀಮ್ ಇಂಡಿಯಾ ಆಟಗಾರರ ಬಗ್ಗೆ ಧನಾತ್ಮಕ ಮಾತುಗಳನ್ನು ಆಡಿದ್ದರು

ಈಗ ಮತ್ತೋರ್ವ ಮಾಜಿ ಆಟಗಾರ ಈ ಪಟ್ಟಿಗೆ ಸೇರ್ಪಡೆಗೊಂಡಿದ್ದಾರೆ. ಬಿಸಿಸಿಐ, ಟೀಮ್ ಇಂಡಿಯಾವನ್ನು ಹೊಗಳಿ ಪಾಕ್ ಕ್ರಿಕೆಟ್ ಬೋರ್ಡ್‌ಗೆ ಕ್ಲಾಸ್ ತೆಗೆದುಕೊಂಡಿದ್ದಾರೆ.

ಯಾರು ಆ ಮಾಜಿ ನಾಯಕ

ಯಾರು ಆ ಮಾಜಿ ನಾಯಕ

ಈ ಬಾರಿ ಪಾಕ್ ಕ್ರಿಕೆಟ್ ಬೋರ್ಡ್‌ಅನ್ನು ಮತ್ತು ಪಾಕಿಸ್ತಾನ ತಂಡವನ್ನು ತರಾಟೆಗೆ ತೆಗೆದುಕೊಂಡಿದ್ದು ಪಾಕಿಸ್ತಾನ ತಂಡದ ಮಾಜಿ ನಾಯಕ ಜಾವೇದ್ ಮಿಯಾಂದಾದ್. ಪಾಕಿಸ್ತಾನ ತಂಡದ ಪ್ರದರ್ಶನದ ಬಗ್ಗೆ ಮತ್ತು ಅದರ ಕಾರಣಕ್ಕೆ ಪಿಸಿಬಿಯ ಮೇಲೆ ಕೆಂಡಕಾರಿದ್ದಾರೆ ಮಿಯಾಂದಾದ್.

ಇತರ ತಂಡಗಳಿಗೆ ಹೋಲಿಕೆ

ಇತರ ತಂಡಗಳಿಗೆ ಹೋಲಿಕೆ

ಜಾವೇದ್ ಮಿಯಾಂದಾದ್ ಪಾಕಿಸ್ತಾನ ತಂಡವನ್ನು ಇತರ ತಂಡಗಳಿಗೆ ಹೋಲಿಕೆ ಮಾಡಿದ್ದಾರೆ. ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್, ನ್ಯೂಜಿಲೆಂಡ್ ಮತ್ತು ದಕ್ಷಿಣ ಆಫ್ರಿಕಾ ತಂಡಗಳಿಗೆ ಹೋಲಿಸಿದ್ದಾರೆ. ಈ ತಂಡದ ಆಟಗಾರರ ರೀತಿ ಪಾಕ್ ತಂಡದಲ್ಲಿ ಕ್ರಿಕೆಟಿಗರು ಇದ್ದಿದ್ದರೆ ಪಾಕಿಸ್ತಾನದ ಪ್ರಸಕ್ತ ತಂಡದ ಯಾವೊಬ್ಬ ಆಟಗಾರನೂ ಸ್ಥಾನ ಪಡೆಯುತ್ತಿರಲಿಲ್ಲ ಎಂದಿದ್ದಾರೆ.

ಬ್ಯಾಟ್ಸ್‌ಮನ್‌ಗಳ ಪ್ರದರ್ಶನದ ಮೇಲೆ ವಾಗ್ದಾಳಿ

ಬ್ಯಾಟ್ಸ್‌ಮನ್‌ಗಳ ಪ್ರದರ್ಶನದ ಮೇಲೆ ವಾಗ್ದಾಳಿ

ಜಾವೇದ್ ಮಿಯಾಂದಾದ್ ಪಾಕಿಸ್ತಾನ ಕ್ರಿಕೆಟ್ ತಂಡದ ಬ್ಯಾಟ್ಸ್‌ಮನ್‌ಗಳ ಪ್ರದರ್ಶನದ ಮೇಲೆ ವಾಗ್ದಾಳಿಯನ್ನು ನಡೆಸಿದ್ದಾರೆ.ಪಾಕಿಸ್ತಾನದ ಯಾವೊಬ್ಬ ಆಟಗಾರನೂ ಇತರ ಟೀಮ್ ಗಳಲ್ಲಿ ಸ್ಥಾನವನ್ನು ಪಡೆಯಲಾರ ಎಂದಿದ್ದಾರೆ. ಆದರೆ ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಬೌಲಿಂಗ್ ವಿಭಾಗವನ್ನು ಮಿಯಾಂದಾದ್ ಮೆಚ್ಚಿಕೊಂಡಿದ್ದಾರೆ.

ಬೇಜವಾಬ್ದಾರಿಯುತ ಹೇಳಿಕೆ ನೀಡಬೇಡಿ

ಬೇಜವಾಬ್ದಾರಿಯುತ ಹೇಳಿಕೆ ನೀಡಬೇಡಿ

ಇದೇ ಸಂದರ್ಭದಲ್ಲಿ ಪಾಕಿಸ್ತಾನ ಆಟಗಾರರಿಗೆ ಮಿಯಾಂದಾದ್ ಬೇಜವಾಬ್ಧಾರಿ ಹೇಳಿಕೆಗಳನ್ನು ನೀಡಬೇಡಿ ಎಂದು ಹೇಳಿದ್ದಾರೆ . ಪಾಕ್ ಕ್ರಿಕೆಟಿಗ ಶೆಹ್ಜಾದ್ ತಾನು ಮುಂದಿನ 12 ವರ್ಷಗಳ ಕಾಲ ಆಡಬಲ್ಲೆ ಎಂದು ಹೇಳಿದ್ದರು. ಇದನ್ನು ಉಲ್ಲೇಖಿಸಿದ ಮಿಯಾಂದಾದ್ ಉತ್ತಮ ಪ್ರದರ್ಶನವನ್ನು ನೀಡುತ್ತಿದ್ದರೆ 12 ಅಲ್ಲ 20 ವರ್ಷ ಕ್ರಿಕೆಟ್ ಆಡುತ್ತಿರಬಹುದು. ಆದರೆ ಬ್ಯಾಟಿಂಗ್‌ನಲ್ಲಿ ಪ್ರದರ್ಶನ ತೋರಿಸುತ್ತಿರಬೇಕು ಎಂದಿದ್ದಾರೆ.

ಪಿಸಿಬಿ ಒಂದೇ ಹೀಗೆ ಮಾಡುತ್ತದೆ.

ಪಿಸಿಬಿ ಒಂದೇ ಹೀಗೆ ಮಾಡುತ್ತದೆ.

ಬಳಿಕ ಮಿಯಾಂದಾದ್ ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ಅನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಆಟಗಾರರ ಈ ಹಿಂದಿನ ಪ್ರದರ್ಶನದ ಆಧಾರದ ಮೇಲೆ ಆಟಗಾರರನ್ನು ಆಯ್ಕೆ ಮಾಡಿಕೊಳ್ಳುತ್ತಿದೆ. ಕೇವಲ ಪಿಸಿಬಿ ಮಾತ್ರವೇ ಈ ರೀತಿಯ ಮಾನದಂಡವನ್ನು ಇಟ್ಟುಕೊಂಡಿದೆ. ಇತರ ಎಲ್ಲಾ ಬೋರ್ಡ್‌ಗಳು ಆಟಗಾರರ ಸದ್ಯದ ಪ್ರದರ್ಶನವನ್ನು ದೃಷ್ಟಿಯಲ್ಲಿಟ್ಟುಕೊಂಡು ಆಯ್ಕೆ ಮಾಡುತ್ತದೆ ಎಂದಿದ್ದಾರೆ.

ಪಿಸಿಬಿ ಕಾರ್ಯ ವೈಖರಿಗೆ ಖಂಡನೆ

ಪಿಸಿಬಿ ಕಾರ್ಯ ವೈಖರಿಗೆ ಖಂಡನೆ

ಪಾಕಿಸ್ತಾನ ಕ್ರಿಕೆಟ್ ಬೋರ್ಡ್‌ನ ಕಾರ್ಯ ವೈಖರಿ ಪಾಕಿಸ್ತಾನದ ಮಾಜಿ ಆಟಗಾರರಿಗೆ ಇಷ್ಟವಾಗುತ್ತಿಲ್ಲ. ನಿರಂತರವಾಗಿ ಅಲ್ಲಿನ ಮಾಜಿ ಕ್ರಿಕೆಟಿಗರು ಹರಿಹಾಯುತ್ತಿದ್ದಾರೆ. ಅದರಲ್ಲೂ ಭಾರತವನ್ನು ಮುಂದಿಟ್ಟುಕೊಂಡು ಪಾಕ್ ಬೋರ್ಡ್‌ನ್ನು ಜರಿಯುವುದನ್ನು ಪಾಕ್ ಮಾಜಿ ಆಟಗಾರರು ನಿರಂತರವಾಗಿ ಮಾಡಿಕೊಂಡು ಬರುತ್ತಿದ್ದಾರೆ.

ಗಂಗೂಲಿಯನ್ನು ಉಲ್ಲೇಖಿಸಿ ಅಖ್ತರ್ ಚಾಟಿ

ಗಂಗೂಲಿಯನ್ನು ಉಲ್ಲೇಖಿಸಿ ಅಖ್ತರ್ ಚಾಟಿ

ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯವರ ಕಾರ್ಯ ವೈಖರಿ ಪಾಕ್ ಕ್ರಿಕೆಟಿಗರಿಗೂ ಮೆಚ್ಚುಗೆಯಾಗಿದ್ದು ಸುಳ್ಳಲ್ಲ. ಸೌರವ್ ಗಂಗೂಲಿಯ ವೃತ್ತಿಪರತೆಯನ್ನು ಮುಂದಿಟ್ಟುಕೊಂಡು ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಮೇಲೆ ಶೋಯೆಬ್ ಅಖ್ತರ್ ಕಟು ಮಾತುಗಳಲ್ಲಿ ಟೀಕಿಸಿದ್ದಾರೆ.

ವಾಕರ್ ಯೂನಿಸ್ ಹೇಳಿಕೆ

ವಾಕರ್ ಯೂನಿಸ್ ಹೇಳಿಕೆ

ಪಾಕಿಸ್ತಾನದ ಮಾಜಿ ನಾಯಕ ವಾಕರ್ ಯೂನಿಸ್ ಟೀಮ್ ಇಂಡಿಯಾವನ್ನು ಹೊಗಳಿ ಬುಧವಾರ ಹೇಳಿಕೆಯನ್ನು ನೀಡಿದ್ದರು. ಆಟಗಾರರಿಗೆ ಬಿಸಿಸಿಐ ಬೆನ್ನೆಲುಬಾಗಿ ಕೆಲಸ ಮಾಡುತ್ತಿದೆ, ಅದೇ ಕಾರಣಕ್ಕೆ ಟೀಮ್ ಇಂಡಿಯಾ ಟೆಸ್ಟ್‌ ಕ್ರಿಕೆಟ್‌ನ ಪವರ್ ಹೌಸ್ ಆಗಿದೆ ಎಂದು ವಾಕರ್ ಯೂನಿಸ್ ಹೇಳಿದ್ದರು.

Story first published: Thursday, March 19, 2020, 17:32 [IST]
Other articles published on Mar 19, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X