ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಇದೆಂಥ ಅನ್ಯಾಯ: ರೋಹಿತ್, ಕೊಹ್ಲಿಗಿಂತ ಹೆಚ್ಚು ರನ್ ಗಳಿಸಿದ ಆಟಗಾರನಿಗೆ ಏಷ್ಯಾಕಪ್ ತಂಡದಲ್ಲಿಲ್ಲ ಸ್ಥಾನ!

No place for Ishan Kishan in Asia cup squad despite of being most runs scorer in t20 powerplay

ಇದೇ ತಿಂಗಳ 27ರಿಂದ ಏಷ್ಯಾಕಪ್ ಟೂರ್ನಿ ಆರಂಭವಾಗಲಿದ್ದು, ಟೂರ್ನಿ ಯುಎಇ ನೆಲದಲ್ಲಿ ನಡೆಯಲಿದೆ. ಈ ಟೂರ್ನಿಯಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗುವ ಕಾರಣ ಟೂರ್ನಿಯ ಮೇಲೆ ಸಾಕಷ್ಟು ದೊಡ್ಡ ಮಟ್ಟದ ನಿರೀಕ್ಷೆ ಇದ್ದು, ಭಾರತ ಕಳೆದ ಬಾರಿಯ ಟಿ ಟ್ವೆಂಟಿ ವಿಶ್ವಕಪ್ ಟೂರ್ನಿಯಲ್ಲಿ ಪಾಕ್ ವಿರುದ್ಧ ಪಂದ್ಯ ಸೋತಿದ್ದ ಸೇಡನ್ನು ತೀರಿಸಿಕೊಳ್ಳುವತ್ತ ಚಿತ್ತ ನೆಟ್ಟಿದ್ದು, ಟೂರ್ನಿಗಾಗಿ ಈಗಾಗಲೇ ಟೂರ್ನಿಗಾಗಿ ಹದಿನೈದು ಆಟಗಾರರ ತಂಡವನ್ನು ಪ್ರಕಟಿಸಿದೆ.

ಅತಿಹೆಚ್ಚು ಬಾರಿ ಏಷ್ಯಾಕಪ್ ಗೆದ್ದಿರುವ ತಂಡ ಯಾವುದು? ಎಲ್ಲಾ ಆವೃತ್ತಿಯ ವಿನ್ನರ್ಸ್, ರನ್ನರ್ ಅಪ್ ಪಟ್ಟಿಅತಿಹೆಚ್ಚು ಬಾರಿ ಏಷ್ಯಾಕಪ್ ಗೆದ್ದಿರುವ ತಂಡ ಯಾವುದು? ಎಲ್ಲಾ ಆವೃತ್ತಿಯ ವಿನ್ನರ್ಸ್, ರನ್ನರ್ ಅಪ್ ಪಟ್ಟಿ

ರೋಹಿತ್ ಶರ್ಮಾ ನಾಯಕತ್ವದ ಟೀಮ್ ಇಂಡಿಯಾದಲ್ಲಿ ಸಾಕಷ್ಟು ಅನಿರೀಕ್ಷಿತ ಅಂಶಗಳಿದ್ದು, ಗಾಯದ ಸಮಸ್ಯೆಯಿಂದಾಗಿ ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ನಂತರದಲ್ಲಿ ಯಾವುದೇ ಪಂದ್ಯವನ್ನಾಡದೇ ಇದ್ದ ಕೆಎಲ್ ರಾಹುಲ್‌ಗೆ ಅವಕಾಶ ನೀಡಲಾಗಿದೆ ಹಾಗೂ ಇತ್ತೀಚಿನ ದಿನಗಳಲ್ಲಿ ಹೆಚ್ಚು ಟಿ ಟ್ವೆಂಟಿ ಪಂದ್ಯಗಳನ್ನಾಡಿದ ಅನುಭವವಿಲ್ಲದ ರವಿಚಂದ್ರನ್ ಅಶ್ವಿನ್ ಹಾಗೂ ಸಿಕ್ಕ ಟಿ ಟ್ವೆಂಟಿ ಪಂದ್ಯಗಳಲ್ಲಿ ದುಬಾರಿ ಬೌಲಿಂಗ್ ಮಾಡಿದ್ದ ಅವೇಶ್ ಖಾನ್‌ಗೆ ಅವಕಾಶ ನೀಡಿರುವುದು ದೊಡ್ಡ ಮಟ್ಟದ ಅಚ್ಚರಿಯನ್ನು ಮೂಡಿಸಿದೆ.

Asia Cup 2022: ಏಷ್ಯಾಕಪ್‌ಗಾಗಿ 2 ವಾರಗಳ ಮುಂಚೆಯೇ ಅಭ್ಯಾಸ ಆರಂಭಿಸಲಿದ್ದಾರೆ ವಿರಾಟ್ ಕೊಹ್ಲಿAsia Cup 2022: ಏಷ್ಯಾಕಪ್‌ಗಾಗಿ 2 ವಾರಗಳ ಮುಂಚೆಯೇ ಅಭ್ಯಾಸ ಆರಂಭಿಸಲಿದ್ದಾರೆ ವಿರಾಟ್ ಕೊಹ್ಲಿ

ಹೀಗೆ ತಂಡದಲ್ಲಿ ಯಾರೂ ಊಹಿಸಿಯೂ ಇರದ ಆಟಗಾರರಿಗೆ ಅವಕಾಶ ನೀಡಿರುವುದರ ಜೊತೆಗೆ ಟಿ ಟ್ವೆಂಟಿ ಕ್ರಿಕೆಟ್‌ನಲ್ಲಿ ಮಿಂಚಿರುವ ಹಲವು ಆಟಗಾರರಿಗೆ ಅವಕಾಶ ನೀಡದ ಕಾರಣಕ್ಕೆ ಬಿಸಿಸಿಐ ಸಾಕಷ್ಟು ವಿರೋಧ ಮತ್ತು ಟೀಕೆಗಳಿಗೂ ಗುರಿಯಾಗಿದೆ. ಅದರಲ್ಲಿಯೂ ಈ ವರ್ಷ ಟಿ ಟ್ವೆಂಟಿ ಕ್ರಿಕೆಟ್‌ನ ಪವರ್‌ಪ್ಲೇ ಓವರ್‌ಗಳಲ್ಲಿ ಟೀಮ್ ಇಂಡಿಯಾದ ಎಲ್ಲಾ ಆಟಗಾರರಿಗಿಂತ ಹೆಚ್ಚು ರನ್ ಕಲೆಹಾಕಿರುವ ಆಟಗಾರನಿಗೆ ಬಿಸಿಸಿಐ ಅವಕಾಶ ನೀಡದೇ ಕಡೆಗಣಿಸಿದೆ. ಈ ಕುರಿತಾದ ಅಂಕಿಅಂಶ ಕೆಳಕಂಡಂತಿದೆ.

ಪವರ್‌ಪ್ಲೇನಲ್ಲಿ ಅತಿಹೆಚ್ಚು ರನ್ ಗಳಿಸಿದ ಭಾರತೀಯ

ಪವರ್‌ಪ್ಲೇನಲ್ಲಿ ಅತಿಹೆಚ್ಚು ರನ್ ಗಳಿಸಿದ ಭಾರತೀಯ

2022ರಲ್ಲಿ ನಡೆದಿರುವ ಟಿ ಟ್ವೆಂಟಿ ಪಂದ್ಯಗಳಲ್ಲಿ ಏಷ್ಯಾಕಪ್ ಟೂರ್ನಿಗೆ ಆಯ್ಕೆಯಾಗಿರುವ ಎಲ್ಲಾ ಆಟಗಾರರಿಗಿಂತ ಇಶಾನ್ ಕಿಶನ್ ಅತಿಹೆಚ್ಚು ಪವರ್‌ಪ್ಲೇ ರನ್ ಕಲೆಹಾಕಿದ ಆಟಗಾರ ಎನಿಸಿಕೊಂಡಿದ್ದಾರೆ. ಈ ವರ್ಷ ಅತಿಹೆಚ್ಚು ಟಿ ಟ್ವೆಂಟಿ ಪವರ್‌ಪ್ಲೇ ರನ್ ಕಲೆಹಾಕಿರುವ ವಿಶ್ವದ ಟಾಪ್ 5 ಕ್ರಿಕೆಟಿಗರಲ್ಲಿ ಇಶಾನ್ ಕಿಶನ್ ಮೂರನೇ ಸ್ಥಾನದಲ್ಲಿದ್ದರೆ, ರೋಹಿತ್ ಶರ್ಮಾ ಐದನೇ ಸ್ಥಾನದಲ್ಲಿದ್ದಾರೆ. ಹೀಗೆ ಪವರ್‌ಪ್ಲೇನಲ್ಲಿ ಅಬ್ಬರಿಸಿರುವ ಇಶನ್ ಕಿಶನ್‌ಗೆ ಅವಕಾಶ ನೀಡದೇ ಇರುವುದರ ಕುರಿತು ಸಾಕಷ್ಟು ಪ್ರಶ್ನೆಗಳೆದ್ದಿದ್ದು ಇಶಾನ್ ಕಿಶನ್‌ಗೆ ಅನ್ಯಾಯವಾಗಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.

2022ರಲ್ಲಿ ಅತಿಹೆಚ್ಚು ಟಿ ಟ್ವೆಂಟಿ ಪವರ್‌ಪ್ಲೇ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳು

2022ರಲ್ಲಿ ಅತಿಹೆಚ್ಚು ಟಿ ಟ್ವೆಂಟಿ ಪವರ್‌ಪ್ಲೇ ರನ್ ಗಳಿಸಿದ ಬ್ಯಾಟ್ಸ್‌ಮನ್‌ಗಳು

ಈ ವರ್ಷ ಟಿ ಟ್ವೆಂಟಿ ಪವರ್‌ಪ್ಲೇನಲ್ಲಿ ಅತಿಹೆಚ್ಚು ರನ್ ಗಳಿಸಿದ ವಿಶ್ವದ ಟಾಪ್ 5 ಬ್ಯಾಟ್ಸ್‌ಮನ್‌ಗಳ ಪಟ್ಟಿ:
1. ಪೌಲ್ ಸ್ಟರ್ಲಿಂಗ್, ಐರ್ಲೆಂಡ್ - 278 ರನ್‌ಗಳು
2. ಆಂಡ್ರೂ ಬೆಲ್ಬೆರ್ನಿ, ಐರ್ಲೆಂಡ್ - 265 ರನ್‌ಗಳು
3. ಇಶಾನ್ ಕಿಶನ್, ಭಾರತ - 256 ರನ್‌ಗಳು
4. ಕೈಲ್ ಮೇಯರ್ಸ್, ವೆಸ್ಟ್ ಇಂಡೀಸ್ - 215 ರನ್‌ಗಳು
5. ರೋಹಿತ್ ಶರ್ಮಾ, ಭಾರತ - 204 ರನ್‌ಗಳು

ಭಾರತದ ಪರ ಈ ವರ್ಷ ಅತಿಹೆಚ್ಚು ರನ್ ಕಲೆಹಾಕಿದ ಎರಡನೇ ಬ್ಯಾಟ್ಸ್‌ಮನ್

ಭಾರತದ ಪರ ಈ ವರ್ಷ ಅತಿಹೆಚ್ಚು ರನ್ ಕಲೆಹಾಕಿದ ಎರಡನೇ ಬ್ಯಾಟ್ಸ್‌ಮನ್

ಇನ್ನು ಈ ವರ್ಷ ಟಿ ಟ್ವೆಂಟಿ ಕ್ರಿಕೆಟ್‌ನಲ್ಲಿ ಅತಿಹೆಚ್ಚು ರನ್ ಕಲೆಹಾಕಿದ ಭಾರತೀಯ ಬ್ಯಾಟ್ಸ್‌ಮನ್‌ಗಳ ಟಾಪ್ 5 ಪಟ್ಟಿಯಲ್ಲಿ ಶ್ರೇಯಸ್ ಐಯ್ಯರ್ ಅಗ್ರಸ್ಥಾನದಲ್ಲಿದ್ದರೆ, ಇಶಾನ್ ಕಿಶನ್ ದ್ವಿತೀಯ ಸ್ಥಾನದಲ್ಲಿದ್ದಾರೆ. ಈ ಪಟ್ಟಿ ಈ ಕೆಳಕಂಡಂತಿದೆ.

1. ಶ್ರೇಯಸ್ ಐಯ್ಯರ್ - 14 ಇನ್ನಿಂಗ್ಸ್‌ನಲ್ಲಿ 449 ರನ್‌ಗಳು
2. ಇಶಾನ್ ಕಿಶನ್ - 14 ಇನ್ನಿಂಗ್ಸ್‌ನಲ್ಲಿ 430 ರನ್‌ಗಳು
3. ಸೂರ್ಯಕುಮಾರ್ ಯಾದವ್ - 12 ಇನ್ನಿಂಗ್ಸ್‌ನಲ್ಲಿ 428 ರನ್‌ಗಳು
4. ರೋಹಿತ್ ಶರ್ಮಾ - 13 ಇನ್ನಿಂಗ್ಸ್‌ನಲ್ಲಿ 290 ರನ್‌ಗಳು
5. ಹಾರ್ದಿಕ್ ಪಾಂಡ್ಯ - 12 ಇನ್ನಿಂಗ್ಸ್‌ನಲ್ಲಿ 281 ರನ್‌ಗಳು

Story first published: Thursday, August 11, 2022, 10:31 [IST]
Other articles published on Aug 11, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X