ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಬಗ್ಗೆ ಶ್ರೀಲಂಕಾದಿಂದ ಇನ್ನೂ ಪ್ರಸ್ತಾಪ ಬಂದಿಲ್ಲ: ಬಿಸಿಸಿಐ

‘No proposal from SLC yet and obviously no discussion’: BCCI official

ನವದೆಹಲಿ, ಏಪ್ರಿಲ್ 17: ಕೊರೊನಾವೈರಸ್‌ನಿಂದಾಗಿ ಮುಂದೂಡಲ್ಪಟ್ಟಿರುವ 2020ರ ಇಂಡಿಯನ್ ಪ್ರೀಮಿಯಲ್ ಲೀಗ್‌ನ ಆತಿಥ್ಯವನ್ನು ಶ್ರೀಲಂಕಾ ಕ್ರಿಕೆಟ್ (ಎಸ್‌ಎಲ್‌ಸಿ) ವಹಿಸಿಕೊಳ್ಳಲಿದೆ ಎನ್ನಲಾಗುತ್ತಿದೆ. ಆದರೆ ಬಿಸಿಸಿಐ ಅಧಿಕಾರಿಗಳು ಮಾತ್ರ ಈ ಬಗ್ಗೆ ಮಾತನಾಡಲು ನಿರಾಕರಿಸುತ್ತಿದ್ದಾರೆ.

ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ 'ಸುಲಭ' ಸೂತ್ರ ಬಿಚ್ಚಿಟ್ಟ ಶೋಯೆಬ್ ಅಖ್ತರ್ವಿರಾಟ್ ಕೊಹ್ಲಿ ವಿಕೆಟ್ ಪಡೆಯುವ 'ಸುಲಭ' ಸೂತ್ರ ಬಿಚ್ಚಿಟ್ಟ ಶೋಯೆಬ್ ಅಖ್ತರ್

13ನೇ ಆವೃತ್ತಿಯ ಐಪಿಎಲ್ ಮಾರ್ಚ್ 19ರಿಂದ ಮೇ 24ರ ವರೆಗೆ ನಡೆಯುವುದರಲ್ಲಿತ್ತು. ಕೊರೊನಾವೈರಸ್ ಭೀತಿಯಿಂದಾಗಿ ಜನಪ್ರಿಯ ಟೂರ್ನಿ ಏಪ್ರಿಲ್ 15ರ ಬಳಿಕ ಮುಂದೂಲ್ಪಟ್ಟಿತ್ತು. ಮತ್ತೀಗ ಭಾರತದಾದ್ಯಂತ ಲಾಕ್‌ಡೌನ್ ಮೇ 3ರವರೆಗೆ ಮುಂದೂಡಲ್ಪಟ್ಟಿರುವುದರಿಂದ ಐಪಿಎಲ್ ಅನ್ನು ತಾತ್ಕಾಲಿಕವಾಗಿ ಬಿಸಿಸಿಐ ರದ್ದುಗೊಳಿಸಿತ್ತು.

ಮುಖ್ಯ ವಿಕೆಟ್ ಕೀಪರ್ ಆಗಿ ರಾಹುಲ್ ಬೇಡ ಎಂದ ಮೊಹಮದ್ ಕೈಫ್ಮುಖ್ಯ ವಿಕೆಟ್ ಕೀಪರ್ ಆಗಿ ರಾಹುಲ್ ಬೇಡ ಎಂದ ಮೊಹಮದ್ ಕೈಫ್

ಶ್ರೀಲಂಕಾದಲ್ಲಿ ಕೊರೊನಾವೈರಸ್ ಸೋಂಕಿತರ ಸಂಖ್ಯೆ ತುಂಬಾ ಕಡಿಮೆಯಿದೆ. ಮುಂಬರುವ ದಿನಗಳಲ್ಲಿ ಶ್ರೀಲಂಕಾ ಸಂಪೂರ್ಣವಾಗಿ ಕೊರೊನಾವೈರಸ್ ಮುಕ್ತ ದೇಶವಾಗುವ ಭರವಸೆಯಲ್ಲಿದೆ. ಹೀಗಾಗಿ ಐಪಿಎಲ್‌ಗೆ ಆತಿಥ್ಯ ವಹಿಸಲು ಶ್ರೀಲಂಕಾ ತಯಾರಿರುವುದಾಗಿ ಶ್ರೀಲಂಕಾ ಕ್ರಿಕೆಟ್ ಅಧ್ಯಕ್ಷ ಶಮ್ಮಿ ಸಿಲ್ವ ಹೇಳಿದ್ದರು.

ಈ ವಿಚಾರದಲ್ಲಿ ಎಂಎಸ್ ಧೋನಿ, ಸೌರವ್ ಗಂಗೂಲಿ ಇಬ್ಬರೂ ಒಂದೇ: ಝಹೀರ್ಈ ವಿಚಾರದಲ್ಲಿ ಎಂಎಸ್ ಧೋನಿ, ಸೌರವ್ ಗಂಗೂಲಿ ಇಬ್ಬರೂ ಒಂದೇ: ಝಹೀರ್

ಆದರೆ ಐಪಿಎಲ್ ಆತಿಥ್ಯವನ್ನು ಶ್ರೀಲಂಕಾ ವಹಿಸಿಕೊಂಡಿರುವ ಬಗ್ಗೆ ಮಾತನಾಡಲು ಬಿಸಿಸಿಐ ಅಧಿಕಾರಿಗಳು ನಿರಾಕರಿಸಿದ್ದಾರೆ. 'ಕೊರೊನಾವೈರಸ್‌ನಿಂದ ವಿಶ್ವವೇ ನಿಷೇಧವನ್ನಾಚರಿಸಿಸುತ್ತಿದೆ. ಐಪಿಎಲ್ ಬಗ್ಗೆ ಶ್ರೀಲಂಕಾದಿಂದ ಇನ್ನೂ ಪ್ರಸ್ತಾಪ ಬಂದಿಲ್ಲ. ಹೀಗಾಗಿ ಇದರ ಬಗ್ಗೆ ಏನನ್ನೂ ಮಾತನಾಡಲು ಬಿಸಿಸಿಐ ಸದ್ಯ ಸಿದ್ಧವಿಲ್ಲ,' ಎಂದು ಬೋರ್ಡ್‌ನ ಹಿರಿಯ ಅಧಿಕಾರಿಯೊಬ್ಬರು ಪಿಟಿಐಯೊಂದಿಗೆ ಹೇಳಿಕೊಂಡಿದ್ದಾರೆ.

Story first published: Friday, April 17, 2020, 16:57 [IST]
Other articles published on Apr 17, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X