ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕುಲ್‌ದೀಪ್ ಆಡಿಸದಕ್ಕೆ ಯಾವುದೇ ಕಾರಣಕ್ಕೂ ವಿಷಾದವಿಲ್ಲ: ವಿರಾಟ್ ಕೊಹ್ಲಿ

no regrets for not playing Kuldeep Yadav in 1st Test: Virat Kohli

ಟೀಮ್ ಇಂಡಿಯಾ ಇಂಗ್ಲೆಂಡ್ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಕಳಪೆ ಆಟವನ್ನು ಪ್ರದರ್ಶಿಸಿದ ಕಾರಣಕ್ಕೆ ಸರಿಯಾಗಿಯೇ ಬೆಲೆತೆತ್ತು ಹೀನಾಯ ಸೋಲು ಕಂಡಿದೆ. ಈ ಸೋಲಿನ ಬಗ್ಗೆ ಸಾಕಷ್ಟು ವಿಮರ್ಶೆಗಳು ಈಗ ಆರಂಭವಾಗಿದೆ. ಟೀಮ್ ಇಂಡಿಯಾದ ಬೌಲಿಂಗ್ ಕಾಂಬಿನೇಶನ್ ಆಯ್ಕೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿದೆ. ಅದರಲ್ಲೂ ಕುಲ್‌ದೀಪ್ ಯಾದವ್ ಅವರನ್ನು ಆಯ್ಕೆ ಮಾಡದ ಬಗ್ಗೆ ದೊಡ್ಡ ಮಟ್ಟದಲ್ಲಿ ಟೀಕೆಗಳು ವ್ಯಕ್ತವಾಗುತ್ತಿದೆ

ಪಂದ್ಯ ಮುಗಿದ ಬಳಿಕ ಈ ವಿಚಾರ ನಾಯಕ ವಿರಾಟ್ ಕೊಹ್ಲಿಗೂ ಎದುರಾಯಿತು. ಕುಲ್‌ದೀಪ್ ಯಾದವ್ ಆಯ್ಕೆ ಮಾಡದಿರುವ ಬಗ್ಗೆ ವಿಷಾದವಿದೆಯೇ ಎಂದು ವಿರಾಟ್ ಕೊಹ್ಲಿಗೆ ಪ್ರಶ್ನಿಸಲಾಯಿತು. ಅದಕ್ಕೆ ವಿರಾಟ್ ಕೊಹ್ಲಿ ಆ ಬಗ್ಗೆ ಯಾವುದೇ ವಿಷಾದವಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ.

ಯುರೋ ಮಿಲಿಯನ್ ಈ ವಾರ ಭಾರತೀಯರಿಗೆ ಯೂರೋ 144 ಮಿ. ಜಾಕ್‌ಪಾಟ್ ನೀಡಲಿದೆ!ಯುರೋ ಮಿಲಿಯನ್ ಈ ವಾರ ಭಾರತೀಯರಿಗೆ ಯೂರೋ 144 ಮಿ. ಜಾಕ್‌ಪಾಟ್ ನೀಡಲಿದೆ!

"ಕುಲ್‌ದೀಪ್ ಯಾದವ್ ಅವರನ್ನು ಆಡಿಸದ ಬಗ್ಗೆ ನಿಜಕ್ಕೂ ವಿಷಾದವಿಲ್ಲ. ಇಬ್ಬರು ಆಫ್‌ಸ್ಪಿನ್ನರ್‌ಗಳನ್ನು ಆಡಿಸುವಾಗ ಕುಲ್‌ದೀಪ್ ಯಾದವ್ ಬಹುತೇಕ ಸಾಮ್ಯತೆಯ ಬೌಲಿಂಗ್‌ಅನ್ನು ಹೊಂದಿದ್ದಾರೆ. ಹೀಗಾಗಿ ಬೌಲಿಂಗ್‌ನಲ್ಲಿ ವೈವಿಧ್ಯತೆಗಳು ಅಗತ್ಯವಾಗುತ್ತದೆ. ಹೀಗಾಗಿ ಆಡುವ ಬಳಗದಲ್ಲಿ ಬೌಲಿಂಗ್ ಆಯ್ಕೆಯ ಬಗ್ಗೆ ನಾವು ಸ್ಪಷ್ಟತೆಯನ್ನು ಹೊಂದಿದ್ದೆವು. ಆ ನಿರ್ಧಾರಕ್ಕೆ ಯಾವುದೇ ವಿಷಾದವಿಲ್ಲ" ಎಂದಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯಕ್ಕೆ ಸ್ಕ್ವಾಡ್‌ನಲ್ಲಿ ಇಲ್ಲದ ಶಹ್ಬಾಜ್ ನದೀಮ್ ಅವರನ್ನು ತಂಡಕ್ಕೆ ಸೇರ್ಪಡೆಗೊಳಿಸಿ ಅವರಿಗೆ ಕುಲ್‌ದೀಪ್ ಯಾದವ್ ಅಬದಲಿಗೆ ಅವಕಾಶವನ್ನು ನೀಡಲಾಗಿತ್ತು. ಇದಕ್ಕೂ ಮುನ್ನ ಆಸ್ಟ್ರೇಲಿಯಾದ ಅಂತಿಮ ಟೆಸ್ಟ್ ಪಂದ್ಯದಲ್ಲೂ ನೆಟ್ ಬೌಲರ್‌ ಆಗಿದ್ದ ವಾಶಿಂಗ್ಟನ್ ಸುಂದರ್ ಆಡುವ ಬಳಗದಲ್ಲಿ ಅವಕಾಶವನ್ನು ಪಡೆದು ಗೆಲುವಿಗೆ ಕಾರಣರಾಗಿದ್ದರು.

2019ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್‌ನಲ್ಲಿ ಮ್ಯಾಚ್ ವಿನ್ನಿಂಗ್ಸ್ ಪ್ರದರ್ಶನದ ಬಳಿಕ ಕುಲ್‌ದೀಪ್ ಯಾದವ್ ಸತತವಾಗಿ ಅವಕಾಶ ವಂಚಿತರಾಗುತ್ತಿದ್ದಾರೆ. ಟೀಮ್ ಇಂಡಿಯಾ ಜೊತೆಗೆ ಪ್ರವಾಸಕ್ಕೆ ಆಯ್ಕೆಯಾದರೂ ಆಡುವ ಬಳಗದಲ್ಲಿ ಕುಲ್‌ದೀ್ ಯಾದವ್‌ಗೆ ಅವಕಾಶ ದೊರೆಯುತ್ತಿಲ್ಲ. ಹೀಗಾಗಿ ಅಭಿಮಾನಿಗಳು ಕುಲ್‌ದೀಪ್ ಯಾದವ್ ಆಡಿಸದ ಬಗ್ಗೆ ಬೇಸರವನ್ನು ವ್ಯಕ್ತಪಡಿಸುತ್ತಿದ್ದಾರೆ.

Story first published: Wednesday, February 10, 2021, 10:18 [IST]
Other articles published on Feb 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X