ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ವಿಶ್ವಕಪ್ ಆಯೋಜನೆ ನಿರ್ಧಾರ ಕೈಗೊಳ್ಳಲು ಆತುರವಿಲ್ಲ: ಕೇನ್ ರಿಚರ್ಡ್ಸನ್

No Rush To Make A Decision: Kane Richardson On T20 World Cup

ವಿಶ್ವಕಪ್ ಆಯೋಜನೆಯ ಬಗ್ಗೆ ನಿರ್ಧಾರವನ್ನು ಕೈಗೊಳ್ಳಲು ಕರೆದದ್ದ ಎರಡು ಸಭೆಯಲ್ಲಿ ಐಸಿಸಿ ಈ ಬಗ್ಗೆ ತೀರ್ಮಾನವನ್ನು ತೆಗೆದುಕೊಳ್ಳದೆ ಜುಲೈಗೆ ಸಭೆಯನ್ನು ಮುಂದೂಡಿದೆ. ಈ ಬಗ್ಗೆ ಆಸ್ಟ್ರೇಲಿಯಾದ ಕ್ರಿಕೆಟಿಗ ಕೇನ್ ರಿಚರ್ಡ್ಸನ್ ಪ್ರತಿಕ್ರಿಯಿಸಿದ್ದಾರೆ. ವಿಶ್ವಕಪ್ ಆಯೋಜನೆ ನಿರ್ಧಾರವನ್ನು ತೆಗೆದುಕೊಳ್ಳಲು ಯಾವುದೇ ಆತುರದ ಅಗತ್ಯವಿಲ್ಲ ಎಂದಿದ್ದಾರೆ.

ಐಸಿಸಿ ವಿಶ್ವಕಪ್ ಆಯೋಜನೆಗೆ ಸಂಬಂಧಪಟ್ಟಂತೆ ತೆಗೆದುಕೊಳ್ಳುವ ನಿರ್ಧಾರದ ಬಗ್ಗೆ ಸರಿಯಾದ ಕ್ರಮವನ್ನೇ ಅನುಸರಿಸುತ್ತಿದೆ. ಆತುರವಾಗಿ ಯಾವುದೇ ನಿರ್ಧಾರವನ್ನು ತೆಗೆದುಕೊಳ್ಳದೆ ಕಾದು ನೋಡಿ, ಸಾಕಷ್ಟು ಸಮಯಾವಕಾಶವನ್ನು ನಿಡಿ ನಿರ್ಧಾರವನ್ನು ತೆಗದುಕೊಳ್ಳಲು ನಿರ್ಧರಿಸಿದೆ. ಇದು ಸರಿಯಾದ ನಿರ್ಧಾರ ಎಂದು ರಿಚರ್ಡ್ಸನ್ ಹೇಳಿದ್ದಾರೆ.

ಕೇರಳ ರಣಜಿ ತಂಡದಲ್ಲಿ ವಿವಾದಾತ್ಮಕ ವೇಗಿ ಶ್ರೀಶಾಂತ್‌ಗೆ ಸ್ಥಾನ!ಕೇರಳ ರಣಜಿ ತಂಡದಲ್ಲಿ ವಿವಾದಾತ್ಮಕ ವೇಗಿ ಶ್ರೀಶಾಂತ್‌ಗೆ ಸ್ಥಾನ!

ಸಾಕಷ್ಟು ಸಮಯವನ್ನು ತೆಗದುಕೊಳ್ಳುವುದು ಮತ್ತು ತಾವು ತೆಗೆದುಕೊಂಡ ನಿರ್ಧಾರ ಉತ್ತಮವಾದ್ದು ಎಂದು ಖಚಿತಪಡಿಸುವುದು ಶ್ರೇಷ್ಠವಾಗದ್ದು ಎಂದು ಐಸಿಸಿಯ ಕ್ರಮದ ಬಗ್ಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದ್ದಾರೆ ರಿಚರ್ಡ್ಸನ್. ಕೊರೊನಾ ವೈರಸ್‌ ಬಗ್ಗೆ ಸರ್ಕಾರ ಸಾಕಷ್ಟು ಎಚ್ಚರಿಕೆಯನ್ನು ತೆಗದುಕೊಳ್ಳುತ್ತಿದೆ. ಹಾಗಾಗಿ ವಿಶ್ವಕಪ್ ಆಯೋಜನೆಗೆ ಅಡ್ಡಿಯಾಗಿದೆ ಎಂದಿದ್ದಾರೆ.

ಇದೇ ಸಂದರ್ಭದಲ್ಲು 29ರ ಹರೆಯದ ರಿಚರ್ಡ್ಸನ್ ವಿಶ್ವಕಪ್‌ಗೆ ಮುಂಚಿತವಾಗಿ ಕೆಲವು ದೇಶೀಯ ಕ್ರಿಕೆಟ್ ಆಡಲು ಸಾಧ್ಯವಾದರೆ ಅತ್ಯುತ್ತಮ ಎಂದು ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಆದರೆ ಮ್ಯಾನೇಜ್‌ಮೆಂಟ್ ತೆಗೆದುಕೋ್ಳುವ ಯಾವುದೇ ನಿರ್ಧಾರವನ್ನು ಆಟಗಾರರು ಬೆಂಬಲಿಸುತ್ತಾರೆ ಎಂದು ತಿಳಿಸಿದರು.

ದಶಕದ ನಂತರ ಸಚಿನ್ ನಿವೃತ್ತಿಯ ಬಗೆಗಿನ ರಹಸ್ಯವನ್ನು ಬಿಚ್ಚಿಟ್ಟ ಮಾಜಿ ಕೋಚ್

ಮಾರ್ಚ್ ತಿಂಗಳಿನಲ್ಲಿ ನ್ಯೂಜಲೆಂಡ್ ವಿರುದ್ಧ ಆಡಿದ್ದ ಅಂತಿಮ ಏಕದಿನ ಸರಣಿಯಲ್ಲಿ ರಿಚರ್ಡ್ಸನ್ ಕಣಕ್ಕಿಳಿದಿರಲಿಲ್ಲ. ರಿಚರ್ಡ್ಸನ್ ಅವರಲ್ಲಿ ಕೊರೊನಾ ವೈರಸ್‌ನ ಲಕ್ಷಣಗಳು ಕಾಣಿಸಿದ್ದವು. ಆದರೆ ಪರೀಕ್ಷೆಯನ್ನು ನಡೆಸಿದ ನಂತರ ವರದಿಯಲ್ಲಿ ನೆಗೆಟಿವ್ ಬಂದು ನಿರಾಳರಾಗಿದ್ದರು.

Story first published: Thursday, June 18, 2020, 15:55 [IST]
Other articles published on Jun 18, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X