ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ-ಇಂಗ್ಲೆಂಡ್ ಟಿ20ಐಗೆ ಭಾರತ ಪ್ಲೇಯಿಂಗ್ XI ಪ್ರಕಟಿಸಿದ ಲಕ್ಷ್ಮಣ್

No Shikhar Dhawan in VVS Laxmans probable India XI for first England T20I

ಅಹ್ಮದಾಬಾದ್: ಇಂಗ್ಲೆಂಡ್ ವಿರುದ್ಧ ನಾಲ್ಕು ಪಂದ್ಯಗಳ ಟೆಸ್ಟ್‌ ಸರಣಿಯನ್ನು 3-1ರಿಂದ ಗೆದ್ದಿರುವ ಟೀಮ್ ಇಂಡಿಯಾ ಶುಕ್ರವಾರ (ಮಾರ್ಚ್ 12)ದಿಂದ ಐದು ಪಂದ್ಯಗಳ ಟಿ20ಐ ಸರಣಿಯಲ್ಲಿ ಪಾಲ್ಗೊಳ್ಳಲಿದೆ. ಐದು ಪಂದ್ಯಗಳೂ ಅಹ್ಮದಾಬಾದ್‌ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿವೆ. ಟಿ20ಐ ಬಳಿಕ ಇತ್ತಂಡಗಳ ಮಧ್ಯೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯಲಿದೆ.

ಏಕದಿನ ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆ ಬರೆದ ಸ್ಮೃತಿ ಮಂಧಾನ!ಏಕದಿನ ಕ್ರಿಕೆಟ್‌ನಲ್ಲಿ ಹೊಸ ವಿಶ್ವದಾಖಲೆ ಬರೆದ ಸ್ಮೃತಿ ಮಂಧಾನ!

ಟೆಸ್ಟ್‌ ಸರಣಿಯಲ್ಲಿ ಅಭೂತಪೂರ್ವ ಗೆಲುವು ದಾಖಲಿಸಿರುವ ಭಾರತ ಜೂನ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಐಸಿಸಿ ವರ್ಲ್ಡ್ ಟೆಸ್ಟ್‌ ಚಾಂಪಿಯನ್‌ಶಿಪ್‌ ಫೈನಲ್‌ನಲ್ಲಿ ಆಡಲಿದೆ. ಇಂಗ್ಲೆಂಡ್ ಎದುರು ಟಿ20ಐನಲ್ಲೂ ಗೆದ್ದು ಮುಂಬರಲಿರುವ ಟಿ20 ವಿಶ್ವಕಪ್‌ಗೆ ಆತ್ಮವಿಶ್ವಾಸ ಹೆಚ್ಚಿಸಿಕೊಳ್ಳುವತ್ತ ಟೀಮ್ ಇಂಡಿಯಾ ಕಣ್ಣಿಟ್ಟಿದೆ.

ಲಕ್ಷ್ಮಣ್‌ರ ವೆರಿ ವೆರಿ ಸ್ಪೆಷಲ್ ಟೀಮ್

ಲಕ್ಷ್ಮಣ್‌ರ ವೆರಿ ವೆರಿ ಸ್ಪೆಷಲ್ ಟೀಮ್

ಸ್ಟಾರ್‌ ಸ್ಪೋರ್ಟ್ಸ್‌ನ ಗೇಮ್‌ಪ್ಲ್ಯಾನ್‌ನಲ್ಲಿ ಮಾತನಾಡಿರುವ ಭಾರತ ಮಾಜಿ ಬ್ಯಾಟ್ಸ್‌ಮನ್‌ 'ವೆರಿ ವೆರಿ ಸ್ಪೆಷಲ್' ಖ್ಯಾತಿಯ ವಿವಿಎಸ್‌ ಲಕ್ಷ್ಮಣ್ ಇಂಗ್ಲೆಂಡ್‌ ವಿರುದ್ಧದ ಮೊದಲ ಟಿ20ಐ ಸರಣಿಗೆ ಇಂಡಿಯಾ ಪ್ಲೇಯಿಂಗ್ XI ಪ್ರಕಟಿಸಿದ್ದಾರೆ. ಲಕ್ಷ್ಮಣ್ ನೆಚ್ಚಿನ ಈ ತಂಡ ವಿಶೇಷವಾಗಿಯೂ ಬಲಿಷ್ಠವಾಗಿಯೂ ಇದೆ.

ಶಿಖರ್ ಧವನ್‌ಗೆ ಸ್ಥಾನವಿಲ್ಲ

ಶಿಖರ್ ಧವನ್‌ಗೆ ಸ್ಥಾನವಿಲ್ಲ

ಟಿ20ಐನಲ್ಲಿ ಟೀಮ್ ಇಂಡಿಯಾಕ್ಕೆ ಒಬ್ಬ ಬಲಿಷ್ಠ ಆರಂಭಿಕ ಆಟಗಾರನ ಅಗತ್ಯವಿದೆ ಎಂದು ವಿವಿಎಸ್ ಲಕ್ಷ್ಮಣ್ ಅರಿತಂತಿದೆ. ಹೀಗಾಗಿ ಭಾರತದ ಪ್ಲೇಯಿಂಗ್‌ XIನಲ್ಲಿ ಗಬ್ಬರ್ ಶಿಖರ್ ಧವನ್‌ಗೆ ಸ್ಥಾನ ನೀಡಿಲ್ಲ. ಧವನ್ ಬದಲು ರೋಹಿತ್ ಶರ್ಮಾ ಜೊತೆಗೆ ಆರಂಭಿಕರಾಗಿ ಕೆಎಲ್ ರಾಹುಲ್ ಅವರನ್ನು ಹೆಸರಿಸಿದ್ದಾರೆ. ಅಚ್ಚರಿಯೆಂದರೆ ಸೂರ್ಯ ಕುಮಾರ್ ಯಾದವ್ ಕೂಡ ಲಕ್ಷ್ಮಣ್ ತಂಡದಲ್ಲಿ ಕಾಣಿಸಿಕೊಂಡಿಲ್ಲ.

ಟಿ20ಗೆ ಲಕ್ಷ್ಮಣ್ ನೆಚ್ಚಿನ ತಂಡ

ಟಿ20ಗೆ ಲಕ್ಷ್ಮಣ್ ನೆಚ್ಚಿನ ತಂಡ

ರೋಹಿತ್ ಶರ್ಮಾ, ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ (ನಾಯಕ), ಶ್ರೇಯಸ್ ಅಯ್ಯರ್, ರಿಷಭ್ ಪಂತ್ (ವಿಕೆಟ್ ಕೀಪರ್), ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ಭುವನೇಶ್ವರ ಕುಮಾರ್, ದೀಪಕ್ ಚಹರ್, ಯುಜುವೇಂದ್ರ ಚಾಹಲ್, ಟಿ ನಟರಾಜನ್.

Story first published: Wednesday, March 10, 2021, 15:51 [IST]
Other articles published on Mar 10, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X