ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ vs ನಾರ್ಥಾಪ್ಟಂನ್‌ಶೈರ್‌: ದಿನೇಶ್ ಕಾರ್ತಿಕ್‌ ನಾಯಕತ್ವದಲ್ಲಿ 2ನೇ ಟಿ20 ಅಭ್ಯಾಸ ಪಂದ್ಯ

Team india

ಇಂಗ್ಲೆಂಡ್ ವಿರುದ್ಧ ಮೂರು ಪಂದ್ಯಗಳ ಟಿ20 ಸರಣಿಗೂ ಮುನ್ನ ಭಾರತ ಎರಡು ಅಭ್ಯಾಸ ಪಂದ್ಯಗಳಲ್ಲಿ ಈಗಾಗಲೇ ಒಂದರಲ್ಲಿ ಗೆಲುವು ಸಾಧಿಸಿದ್ದು, ಎರಡನೇ ಪಂದಕ್ಕೆ ಸಜ್ಜಾಗಿದೆ. ಇಂಗ್ಲೆಂಡ್ ವಿರುದ್ಧ ಚುಟುಕು ಸರಣಿಗೂ ಮುನ್ನ ಯಾವೆಲ್ಲಾ ಆಟಗಾರರ ಸ್ಥಾನ ಪಡೆಯಬಹುದು ಎಂಬುದು ಸದ್ಯದ ಪ್ರಶ್ನೆಯಾಗಿದೆ.

ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯ ಮೊದಲ ಪಂದ್ಯಕ್ಕೆ ಭಾರತ ಆಡುವ ಇಲೆವೆನ್‌ನಲ್ಲಿ ಸಂಜು ಸ್ಯಾಮ್ಸನ್ ಸ್ಥಾನ ಪಡೆಯುತ್ತಾರಾ? ತಂಡದಲ್ಲಿ ಅವರ ಸ್ಥಾನವನ್ನು ನಿರ್ಧರಿಸಲು ಭಾನುವಾರ ನಿರ್ಣಾಯಕ ಪಂದ್ಯ ನಡೆಯಲಿದೆ. ಟಿ20 ಸರಣಿಯ ಸಿದ್ಧತೆಯ ಭಾಗವಾಗಿ ಭಾನುವಾರ ಭಾರತದ ಎರಡನೇ ಟಿ20 ಅಭ್ಯಾಸ ಪಂದ್ಯವಾಗಿದೆ. ಪಂದ್ಯವು ಸಂಜೆ 7 ಗಂಟೆಯಿಂದ ಪ್ರಾರಂಭಗೊಳ್ಳಲಿದ್ದು, ಸಂಜೆ 6.30ಕ್ಕೆ ಟಾಸ್ ನಡೆಯಲಿದೆ.

ಟೀಂ ಇಂಡಿಯಾವನ್ನ ಮುನ್ನಡೆಸಲಿರುವ DK

ಟೀಂ ಇಂಡಿಯಾವನ್ನ ಮುನ್ನಡೆಸಲಿರುವ DK

ಈ ಪಂದ್ಯದಲ್ಲಿ ಅನುಭವಿ ವಿಕೆಟ್‌ಕೀಪರ್ ದಿನೇಶ್ ಕಾರ್ತಿಕ್ ಭಾರತವನ್ನು ಮುನ್ನಡೆಸಲಿದ್ದಾರೆ. ಡರ್ಬಿಶೈರ್ ವಿರುದ್ಧ ಶುಕ್ರವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತ ಕೂಡ ಡಿಕೆ ನಾಯಕತ್ವದಲ್ಲಿ ಮುನ್ನಡೆದಿದ್ದು, ಈ ಪಂದ್ಯವನ್ನು ಭಾರತ ಏಳು ವಿಕೆಟ್‌ಗಳಿಂದ ಗೆದ್ದಿತ್ತು. ಡರ್ಬಿಶೈರ್ ನೀಡಿದ್ದ 151ರನ್‌ಗಳ ಗುರಿಯನ್ನ ಬೆನ್ನತ್ತಿದ್ದ ಭಾರತ 16.4 ಓವರ್‌ಗಳಲ್ಲಿಯೇ ಗುರಿ ಮುಟ್ಟಿ 7 ವಿಕೆಟ್‌ಗ ಅಮೋಘ ಗೆಲುವು ಸಾಧಿಸಿದೆ.

ಈಗಾಗಲೇ ಟಿ20 ಮತ್ತು ಏಕದಿನ ಸರಣಿಗೆ ತಂಡ ಪ್ರಕಟ

ಈಗಾಗಲೇ ಟಿ20 ಮತ್ತು ಏಕದಿನ ಸರಣಿಗೆ ತಂಡ ಪ್ರಕಟ

ಇಂಗ್ಲೆಂಡ್ ವಿರುದ್ಧದ ಟಿ20 ಮತ್ತು ಏಕದಿನ ಸರಣಿಗೆ ಭಾರತ ತಂಡವನ್ನು ಗುರುವಾರ ಪ್ರಕಟಿಸಲಾಗಿದೆ. ಇದೇ ತಿಂಗಳ 7ರಂದು ನಡೆಯಲಿರುವ ಮೊದಲ ಟಿ20 ಹಾಗೂ ಉಳಿದ ಎರಡು ಟಿ20 ಪಂದ್ಯಗಳಿಗೆ ಬಿಸಿಸಿಐ ವಿವಿಧ ತಂಡಗಳನ್ನು ಪ್ರಕಟಿಸಿದೆ. ಮೊದಲ ಪಂದ್ಯದಲ್ಲಿ ಸಂಜು ತಂಡದಲ್ಲಿ ಸ್ಥಾನ ಪಡೆದರು. ನಂತರದ ಎರಡು ಪಂದ್ಯಗಳಲ್ಲಿ ಸ್ಥಾನವನ್ನ ನೀಡಲಾಗಿಲ್ಲ. ಹೀಗಾಗಿ ಆಯ್ಕೆಗಾರರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಟೀಕೆ ವ್ಯಕ್ತವಾಗಿದೆ.

ಡರ್ಬಿಶೈರ್ ವಿರುದ್ಧದ ಕಳೆದ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕಿಳಿದಿದ್ದ ಸಂಜು ಸ್ಯಾಮ್ಸನ್ ಅದ್ಭುತ ಪ್ರದರ್ಶನ ನೀಡಿದ್ದರು. ಭಾರತದ 151 ರನ್ ಚೇಸ್ ನಲ್ಲಿ ತಂಡಕ್ಕೆ ಅತಿ ಹೆಚ್ಚು ರನ್ ಗಳಿಸಿದ ಎರಡನೇ ಆಟಗಾರ ಎನಿಸಿಕೊಂಡರು. ಸಂಜು 30 ಎಸೆತಗಳಲ್ಲಿ ನಾಲ್ಕು ಬೌಂಡರಿ ಹಾಗೂ ಒಂದು ಸಿಕ್ಸರ್ ಸೇರಿದಂತೆ 38 ರನ್ ಗಳಿಸಿದರು.

ಅದಕ್ಕೂ ಮೊದಲು, ಅವರು ಐರ್ಲೆಂಡ್ ವಿರುದ್ಧದ ಎರಡನೇ ಟಿ 20ಪಂದ್ಯದಲ್ಲಿ ಆಡುವ ಹನ್ನೊಂದರಲ್ಲಿದ್ದರು. ಇಶಾನ್ ಕಿಶನ್ ಜೊತೆಗೆ ಆರಂಭಿಕರಾಗಿ ಕಣಕ್ಕಿಳಿದ ಸಂಜು 77 ರನ್ ಗಳಿಸಿ ಔಟಾದರು. ಈ ಪಂದ್ಯದಲ್ಲಿ ಸಂಜು ಚೊಚ್ಚಲ ಅಂತಾರಾಷ್ಟ್ರೀಯ ಅರ್ಧಶತಕ ಸೇರಿತ್ತು.

120 ವರ್ಷಗಳಲ್ಲಿ ಇದೇ ಮೊದಲು!: ಸ್ಪೋಟಕ ಶತಕ ಸಿಡಿಸಿ ಪಂತ್ ಮುರಿದ ದಾಖಲೆ ಒಂದೆರಡಲ್ಲ!

ಇಂಗ್ಲೆಂಡ್ ವಿರುದ್ಧ ತಂಡವನ್ನ ಮುನ್ನಡೆಸಲಿರುವ ರೋಹಿತ್

ಇಂಗ್ಲೆಂಡ್ ವಿರುದ್ಧ ತಂಡವನ್ನ ಮುನ್ನಡೆಸಲಿರುವ ರೋಹಿತ್

ಇಂಗ್ಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ರೋಹಿತ್ ಶರ್ಮಾ ಭಾರತ ತಂಡವನ್ನು ಮುನ್ನಡೆಸಲಿದ್ದಾರೆ. ಈ ಪಂದ್ಯದಲ್ಲಿ ಸಂಜು ಸ್ಯಾಮ್ಸನ್ ಅಲ್ಲದೆ ಇಶಾನ್ ಕಿಶನ್ ಮತ್ತು ದಿನೇಶ್ ಕಾರ್ತಿಕ್ ವಿಕೆಟ್ ಕೀಪರ್ ಆಗಿ ತಂಡದಲ್ಲಿದ್ದಾರೆ. ಆದ್ದರಿಂದ ಸಂಜು ಆಡುವ ಹನ್ನೊಂದರ ಭಾಗವಾಗುವುದು ಸುಲಭವಲ್ಲ.

ಆದರೆ ನಾರ್ಥಾಂಪ್ಟನ್‌ಶೈರ್ ವಿರುದ್ಧದ ಅಭ್ಯಾಸ ಪಂದ್ಯನಲ್ಲಿ ಅವರು ಫಿಫ್ಟಿ ಪ್ಲಸ್ ಗಳಿಸಿದರೆ, ಸಂಜು ಇಂಗ್ಲೆಂಡ್ ವಿರುದ್ಧದ ಟಿ20 ಪಂದ್ಯದಲ್ಲಿ ಸ್ಥಾನ ಪಡೆಯಬಹುದು.

ಇಂಗ್ಲೆಂಡ್ ವಿರುದ್ಧ ರಿಷಭ್ ಅದ್ಭುತ ಶತಕ: ಕೋಚ್ ರಾಹುಲ್ ದ್ರಾವಿಡ್ ಸೆಲೆಬ್ರೆಷನ್ ವೈರಲ್

ಎರಡನೇ ಅಭ್ಯಾಸ ಪಂದ್ಯದಲ್ಲಿ ಕೆಲ ಬದಲಾವಣೆ ಸಾಧ್ಯತೆ

ಎರಡನೇ ಅಭ್ಯಾಸ ಪಂದ್ಯದಲ್ಲಿ ಕೆಲ ಬದಲಾವಣೆ ಸಾಧ್ಯತೆ

ಡರ್ಬಿಶೈರ್ ವಿರುದ್ಧದ ಕೊನೆಯ ಟಿ20ಯಲ್ಲಿ ಆಡಿದ ತಂಡದಲ್ಲಿ ಭಾರತ ಕೆಲವು ಬದಲಾವಣೆಗಳೊಂದಿಗೆ ನಾರ್ಥಾಂಪ್ಟನ್ ಶೈರ್ ತಂಡವನ್ನು ಎದುರಿಸಲಿದೆ. ಹೊಸಬರ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ರಾಹುಲ್ ತ್ರಿಪಾಠಿ ತಂಡದಲ್ಲಿ ಅವಕಾಶ ಪಡೆಯುವ ಸಾಧ್ಯತೆ ಹೆಚ್ಚಿದೆ. ಐರ್ಲೆಂಡ್ ವಿರುದ್ಧದ ಟಿ20 ಸರಣಿಗೆ ತ್ರಿಪಾಠಿ ತಂಡದ ಭಾಗವಾಗಿದ್ದರು. ಆದರೆ ಆಡುವ ಅವಕಾಶ ಸಿಗಲಿಲ್ಲ. ತ್ರಿಪಾಠಿ ತಂಡಕ್ಕೆ ಬಂದರೆ ಭಾರತ ಮುಂದಿನ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್‌ಗೆ ವಿಶ್ರಾಂತಿ ನೀಡಬಹುದು.

ಭಾನುವಾರದ ಭಾರತ ಮತ್ತು ನಾರ್ಥಾಂಪ್ಟನ್‌ಶೈರ್ ನಡುವಿನ ಪಂದ್ಯವನ್ನು ನೇರ ಪ್ರಸಾರ ಮಾಡಲಾಗುವುದಿಲ್ಲ. ಆದರೆ ನೀವು YouTube ನಲ್ಲಿ ಲೈವ್ ಆಗಿ ವೀಕ್ಷಿಸಬಹುದು. ಈ ಹಿಂದೆ ಭಾರತ ಮತ್ತು ಡರ್ಬಿಶೈರ್ ನಡುವಿನ ಪಂದ್ಯವೂ ಈ ರೀತಿ ಯೂಟ್ಯೂಬ್‌ನಲ್ಲಿ ಲೈವ್ ಸ್ಟ್ರೀಮಿಂಗ್ ಆಗಿತ್ತು. ಪಂದ್ಯವನ್ನು ಡರ್ಬಿಶೈರ್‌ನ ಅಧಿಕೃತ ಯೂಟ್ಯೂಬ್ ಚಾನೆಲ್‌ನಲ್ಲಿ ಪ್ರಸಾರ ಮಾಡಲಾಯಿತು.

ಪಂತ್ ಈಸ್ ಬ್ಯಾಕ್: ಪತ್ರಕರ್ತನ ಪ್ರಶ್ನೆಗೆ ಪಂತ್ ಕೊಟ್ಟ ಉತ್ತರ ಫುಲ್ ವೈರಲ್ | Oneindia Kannada
ಭಾರತ ತಂಡ

ಭಾರತ ತಂಡ

ದಿನೇಶ್ ಕಾರ್ತಿಕ್ (ನಾಯಕ), ಭುವನೇಶ್ವರ್ ಕುಮಾರ್ (ಉಪನಾಯಕ), ಇಶಾನ್ ಕಿಶನ್, ರುತುರಾಜ್ ಗಾಯಕ್ವಾಡ್, ಸಂಜು ಸ್ಯಾಮ್ಸನ್, ಸೂರ್ಯಕುಮಾರ್ ಯಾದವ್, ವೆಂಕಟೇಶ್ ಅಯ್ಯರ್, ದೀಪಕ್ ಹೂಡಾ, ರಾಹುಲ್ ತ್ರಿಪಾಠಿ, ಯುಜ್ವೇಂದ್ರ ಚಾಹಲ್, ಅಕ್ಷರ್ ಪಟೇಲ್, ರವಿ ಬಿಷ್ಣೋಯ್, ಹರ್ಷಲ್ ಪಟೇಲ್, ಜೋಶ್ ಖಾನ್ ಅರ್ಷದೀಪ್ ಸಿಂಗ್, ಉಮ್ರಾನ್ ಮಲಿಕ್.

Story first published: Saturday, July 2, 2022, 18:21 [IST]
Other articles published on Jul 2, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X