ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತ ಸುರಕ್ಷಿತ ರಾಷ್ಟ್ರವಲ್ಲ ಎಂದ ಪಾಕ್ ಮಾಜಿ ನಾಯಕ ಮಿಯಾಂದಾದ್

‘Not a safe country’: Javed Miandad wants ICC to stop teams from touring India

ಇಸ್ಲಮಾಬಾದ್‌, ಡಿಸೆಂಬರ್ 26: ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ನಾಯಕ ಜಾವೆದ್ ಮಿಯಾಂದಾದ್ ಭಾರತದ ವಿರುದ್ಧ ಅಸಮಾಧಾನ ವ್ಯಕ್ತ ಪಡಿಸಿದ್ದಾರೆ. ಭಾರತ ಸುರಕ್ಷಿತ ರಾಷ್ಟ್ರವಲ್ಲ. ಭಾರತಕ್ಕೆ ವಿಶ್ವದ ಯಾವುದೇ ಕ್ರಿಕೆಟ್ ತಂಡಗಳು ಪ್ರವಾಸ ಕೈಗೊಳ್ಳಬಾರದು ಎಂದು ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ) ಅನ್ನು ಜಾವೆದ್ ಕೋರಿಕೊಂಡಿದ್ದಾರೆ.

ಹಿಂದು ಎಂಬ ಕಾರಣಕ್ಕೆ ದಾನಿಶ್ ಕನೇರಿಯಾ ತಾರತಮ್ಯಕ್ಕೆ ಒಳಗಾಗಿದ್ದರು; ಶೋಯೆಬ್ ಅಖ್ತರ್ಹಿಂದು ಎಂಬ ಕಾರಣಕ್ಕೆ ದಾನಿಶ್ ಕನೇರಿಯಾ ತಾರತಮ್ಯಕ್ಕೆ ಒಳಗಾಗಿದ್ದರು; ಶೋಯೆಬ್ ಅಖ್ತರ್

ಲಾಹೋರ್‌ನಲ್ಲಿ 2009ರಲ್ಲಿ ನಡೆದಿದ್ದ ಟೆಸ್ಟ್‌ ಕ್ರಿಕೆಟ್‌ಗಾಗಿ ಶ್ರೀಲಂಕಾ ತಂಡ ಪ್ರವಾಸ ಕೈಗೊಂಡಿದ್ದಾಗ ಲಂಕಾ ಆಟಗಾರರಿದ್ದ ಬಸ್‌ನ ಭಯೋತ್ಪಾದನಾ ದಾಳಿ ನಡೆದಿತ್ತು. ಅದಾಗಿ ಸುಮಾರು 10 ವರ್ಷಗಳ ಬಳಿಕ ಅಂದರೆ 2019ರ ಡಿಸೆಂಬರ್‌ನಲ್ಲಿ ಚೊಚ್ಚಲ ಟೆಸ್ಟ್‌ ಸರಣಿಗಾಗಿ ಶ್ರೀಲಂಕಾ ತಂಡ ಪಾಕ್‌ಗೆ ತೆರಳಿತ್ತು.

ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದ ಜೇಮ್ಸ್ ಆ್ಯಂಡರ್ಸನ್ಟೆಸ್ಟ್‌ ಕ್ರಿಕೆಟ್‌ನಲ್ಲಿ ವಿಶೇಷ ದಾಖಲೆ ಬರೆದ ಜೇಮ್ಸ್ ಆ್ಯಂಡರ್ಸನ್

ಹಿಂದೆ ಪಾಕಿಸ್ತಾನದಲ್ಲಿ ಅಸುರಕ್ಷತೆಯ ಪರಿಸ್ಥಿತಿಯಿದ್ದಿದ್ದು ನಿಜ. ಆದರೆ ಈಗ ಭಾರತದಲ್ಲಿ ಪಾಕ್‌ಗಿಂತಲೂ ಕೆಟ್ಟ ಪರಿಸ್ಥಿತಿಯಿದೆ ಎಂಬರ್ಥದಲ್ಲಿ ಮಿಯಾಂದಾದ್ ಹೇಳಿಕೆ ನೀಡಿದ್ದಾರೆ.

ಮಿಯಾಂದಾದ್ ಕಿಡಿ ಕಾರಲು ಕಾರಣ

ಮಿಯಾಂದಾದ್ ಕಿಡಿ ಕಾರಲು ಕಾರಣ

ಮಿಯಾಂದಾದ್ ಭಾರತದ ಮೇಲೆ ಕಿಡಿ ಕಾರಲು ಮುಖ್ಯ ಕಾರಣ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ವಿರುದ್ಧ ಭಾರತದಾದ್ಯಂತ ಪ್ರತಿಭಟನೆ ನಡೆಯುತ್ತಿರುವುದು. ಹೀಗಾಗಿ ಪಾಕಿಸ್ಥಾನಕ್ಕೆ ಉಳಿದ ರಾಷ್ಟ್ರಗಳು ಪ್ರವಾಸ ಕೈಗೊಳ್ಳದಂತೆ ನಿರ್ಬಂಧ ಹೇರಿದಂತೆ ಭಾರತದ ವಿರುದ್ಧವೂ ಕ್ರಮ ಕೈಗೊಳ್ಳಬೇಕೆಂದು ಮಿಯಾಂದಾದ್ ಐಸಿಸಿಯನ್ನು ಕೇಳಿಕೊಂಡಿದ್ದಾರೆ.

ಭಾರತವನ್ನು ಐಸಿಸಿ ಬಹಿಷ್ಕರಿಸಬೇಕು

ಭಾರತವನ್ನು ಐಸಿಸಿ ಬಹಿಷ್ಕರಿಸಬೇಕು

'ಭಾರತದಲ್ಲಿ ಸದ್ಯ ಏನು ನಡೆಯುತ್ತಿದೆ ಎಂಬುದನ್ನು ಜನ ಅರಿತುಗೊಳ್ಳಬೇಕು. ವಿದೇಶಿ ತಂಡಗಳು ಭಾರತಕ್ಕೆ ಪ್ರವಾಸ ಕೈಗೊಳ್ಳುವುದನ್ನು ಐಸಿಸಿ ಬಹಿಷ್ಕರಿಸಬೇಕೆಂದು ಬಯಸುತ್ತೇನೆ,' ಎಂದು ಪಾಕ್‌ಪ್ಯಾಶನ್.ಕಾಮ್‌ನಲ್ಲಿ ಹಾಕಿರುವ ವಿಡಿಯೋದಲ್ಲಿ ಮಿಯಾಂದಾದ್ ಹೇಳಿಕೊಂಡಿದ್ದಾರೆ.

ಯಾರಿಗೂ ಭಾರತ ಸುರಕ್ಷಿತ ರಾಷ್ಟ್ರವಲ್ಲ

ಯಾರಿಗೂ ಭಾರತ ಸುರಕ್ಷಿತ ರಾಷ್ಟ್ರವಲ್ಲ

ವಿಡಿಯೋದಲ್ಲಿ ಮಾತನಾಡುತ್ತ ಮಿಯಾಂದಾದ್, 'ಈಗ ಪಾಕಿಸ್ತಾನವಲ್ಲ; ಪ್ರವಾಸಿಗರಿಗೆ ಅಥವಾ ಭೇಟಿ ನೀಡಲಿರುವ ಯಾರಿಗೂ ಭಾರತ ಸುರಕ್ಷಿತ ರಾಷ್ಟ್ರವಲ್ಲ. ಮನುಷ್ಯರಾಗಿ, ಕ್ರೀಡಾಪಟುಗಳಾಗಿ ನಾವೂ ಅಲ್ಲಿನ ಪರಿಸ್ಥಿತಿಯನ್ನು, ಕಾಯ್ದೆ ತರುತ್ತಿರುವವರನ್ನು ಖಂಡಿಸಬೇಕು,' ಎಂದಿದ್ದಾರೆ.

ಭಾರತವನ್ನು ಇಡೀ ಜಗತ್ತು ನೋಡುತ್ತಿದೆ

ಭಾರತವನ್ನು ಇಡೀ ಜಗತ್ತು ನೋಡುತ್ತಿದೆ

'ಅಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಇಡೀ ಜಗತ್ತು ನೋಡುತ್ತಿದೆ ಮತ್ತು ಮಾತನಾಡುತ್ತಿದೆ. ಪಾಕಿಸ್ತಾನದ ಪರವಾಗಿ ನಾನು ಮಾತನಾಡುತ್ತಿದ್ದೇನೆ, ಅದೇನೆಂದರೆ; ಐಸಿಸಿಯು ಭಾರತದೊಂದಿಗೆ ಎಲ್ಲಾ ಕ್ರೀಡಾ ಸಂಬಂಧಗಳನ್ನು ಸ್ಥಗಿತಗೊಳಿಸಬೇಕು. ಅವರ ವಿರುದ್ಧ ಎಲ್ಲಾ ದೇಶಗಳು ಕ್ರಮ ಕೈಗೊಳ್ಳಬೇಕು,' ಎಂದು ಮಿಯಾಂದಾದ್ ವೀಡಿಯೋದಲ್ಲಿ ಪ್ರತಿಕ್ರಿಯಿಸಿದ್ದಾರೆ.

Story first published: Friday, December 27, 2019, 20:04 [IST]
Other articles published on Dec 27, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X