ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಟಿ20 ವಿಶ್ವಕಪ್‌ಗೆ ಆಯ್ಕೆಯಾಗಿಲ್ಲ, ಆದರೆ ಅವಕಾಶ ಕೊನೆಯಾಗಿಲ್ಲ: ಸಿರಾಜ್

Not getting selected for T20 World Cup is not the end, says Mohammed Siraj

ನವದೆಹಲಿ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯ ವೇಳೆ ಭಾರತದ ವೇಗಿ ಮೊಹಮ್ಮದ್ ಸಿರಾಜ್ ಉತ್ತಮ ಪ್ರದರ್ಶನ ನೀಡಿದ್ದರು. ಭಾರತ ತಂಡ ಎರಡನೇ ಟೆಸ್ಟ್ ಪಂದ್ಯದಲ್ಲಿ ಗೆದ್ದು ಐದು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0ಯ ಮುನ್ನಡೆ ಪಡೆದುಕೊಳ್ಳುವಲ್ಲಿ ಸಿರಾಜ್ ಕೊಡುಗೆ ಮಹತ್ವದ್ದಾಗಿತ್ತು. ಲಾರ್ಡ್ಸ್ ಸ್ಟೇಡಿಯಂನಲ್ಲಿ ನಡೆದಿದ್ದ ಈ ಪಂದ್ಯದಲ್ಲಿ ಸಿರಾಜ್ 8 ವಿಕೆಟ್ ಉರುಳಿಸಿದ್ದರು. ಈ ಪಂದ್ಯದಲ್ಲಿ ಭಾರತ 151 ರನ್‌ಗಳಿಂದ ಗೆದ್ದಿತ್ತು.

 ಅಬುಧಾಬಿಗೆ ಮುಂಬೈ ಇಂಡಿಯನ್ಸ್‌ನ ಕೀರನ್ ಪೊಲಾರ್ಡ್ ಆಗಮನ ಅಬುಧಾಬಿಗೆ ಮುಂಬೈ ಇಂಡಿಯನ್ಸ್‌ನ ಕೀರನ್ ಪೊಲಾರ್ಡ್ ಆಗಮನ

ಆದರೆ ಅಕ್ಟೋಬರ್‌-ನವೆಂಬರ್‌ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌ಗೆ ಬೋರ್ಡ್ ಆಫ್ ಕಂಟ್ರೋಲ್ ಫಾರ್ ಕ್ರಿಕೆಟ್ ಇನ್ ಇಂಡಿಯಾ (ಬಿಸಿಸಿಐ) ತಂಡ ಪ್ರಕಟಿಸುವಾಗ ಮೊಹಮ್ಮದ್ ಸಿರಾಜ್‌ಗೆ ನಿರಾಸೆಯಾಗಿತ್ತು. ಯಾಕೆಂದರೆ ಪ್ರಕಟಿತ ತಂಡದಲ್ಲಿ ಸಿರಾಜ್ ಹೆಸರಿರಲಿಲ್ಲ. ಈ ವಿಚಾರದ ಬಗ್ಗೆ ಸಿರಾಜ್ ಅಭಿಪ್ರಾಯ ಹಂಚಿಕೊಂಡಿದ್ದಾರೆ.

"ತಂಡಕ್ಕೆ ಆಯ್ಕೆಯಾಗೋದು ನಮ್ಮ ಕೈಲಿಲ್ಲ. ಸಹಜವಾಗೇ ಟಿ20 ವಿಶ್ವಕಪ್‌ನಲ್ಲಿ ತಂಡದ ಪರ ಆಡೋದು ಎಲ್ಲರ ಕನಸಾಗಿರತ್ತೆ. ಹಾಗಂತ ಇದೇ ಕೊನೆ ಅಂತೇನೂ ಅಲ್ಲ. ನನ್ನ ಮುಂದೆ ಇನ್ನೂ ಅನೇಕ ಗುರಿಗಳಿವೆ. ಇವುಗಳಲ್ಲಿ ದೊಡ್ಡ ಗುರಿಯೆಂದರೆ ಭಾರತ ತಂಡದ ಪರ ಆಡಿ ಪಂದ್ಯಗಳನ್ನು ಗೆಲ್ಲಲು ಮುಂಚೂಣಿ ಪಾತ್ರ ವಹಿಸಬೇಕು," ಎಂದು ಸಿರಾಜ್ ಹೇಳಿದ್ದಾರೆ.

ಯಾರಾಗ್ತಾರೆ ಟೀಮ್ ಇಂಡಿಯಾ ಮುಂದಿನ ಉಪ ನಾಯಕ?; ರೇಸ್‌ನಲ್ಲಿದ್ದಾರೆ ಈ ಮೂವರು ಆಟಗಾರರುಯಾರಾಗ್ತಾರೆ ಟೀಮ್ ಇಂಡಿಯಾ ಮುಂದಿನ ಉಪ ನಾಯಕ?; ರೇಸ್‌ನಲ್ಲಿದ್ದಾರೆ ಈ ಮೂವರು ಆಟಗಾರರು

ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಮತ್ತು ಓಮನ್‌ನಲ್ಲಿ ಅಕ್ಟೋಬರ್‌ 17ರಿಂದ ನವೆಂಬರ್‌ 14ರ ವರೆಗೆ ಟಿ20 ವಿಶ್ವಕಪ್‌ ಟೂರ್ನಿ ನಡೆಯಲಿದೆ. ಈ ಪ್ರತಿಷ್ಠಿತ ಟೂರ್ನಿಯಲ್ಲಿ 27ರ ಹರೆಯದ ಸಿರಾಜ್ ಆಡುತ್ತಿಲ್ಲ. ಆದರೆ ಸೆಪ್ಟೆಂಬರ್‌ 19ರಿಂದ ಯುಎಇಯಲ್ಲಿ ಆರಂಭಗೊಳ್ಳಲಿರುವ ಐಪಿಎಲ್ ದ್ವಿತೀಯ ಹಂತದ ಟೂರ್ನಿಯಲ್ಲಿ ಸಿರಾಜ್ ಅವರು ಆರ್‌ಸಿಬಿ ಪರ ಕಣಕ್ಕಿಳಿಯಲಿದ್ದಾರೆ.

Story first published: Friday, September 17, 2021, 18:02 [IST]
Other articles published on Sep 17, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X