ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ನಡೆಯದಿದ್ದರೆ ಬಿಸಿಸಿಐಗೆ ಭಾರೀ ನಷ್ಟ : ಸಂಬಳ ಕಡಿತದ ಸುಳಿವು ನೀಡಿದ ಗಂಗೂಲಿ

Not Hosting Ipl Will Cause Loss of Rs 4000 Crore: Sourav Ganguly

ಕೊರೊನಾ ವೈರಸ್ ಕಾರಣದಿಂದಾಗಿ ಕ್ರಿಕೆಟ್ ಸೇರಿದಂತೆ ಎಲ್ಲಾ ಕ್ರೀಡೆಗಳೂ ಸ್ಥಗಿತಗೊಂಡಿದೆ. ಹೀಗಾಗಿ ಕ್ರೀಡಾ ಕ್ಷೇತ್ರ ಅತಿ ದೊಡ್ಡ ಆರ್ಥಿಕ ಮುಗ್ಗಟ್ಟನ್ನು ಎದುರಿಸುತ್ತಿರುವುದು ಸುಳ್ಳಲ್ಲ. ಕ್ರಿಕೆಟ್‌ನ ದೊಡ್ಡಣ್ಣ ಎನಿಸಿರುವ ಬಿಸಿಸಿಐ ಕೂಡ ಕೊರೊನಾ ವೈರಸ್‌ಗೆ ನಲುಗಿ ಹೋಗಿದೆ. ಅದರಲ್ಲೂ ಐಪಿಎಲ್ ನಡೆಯಲಿದ್ದರೆ ಬಿಸಿಸಿಐ ಬಹುದೊಡ್ಡ ನಷ್ಟಕ್ಕೆ ಒಳಗಾಗಲಿದೆ.

ಈ ಬಗ್ಗೆ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿಯೆ ಸ್ವತಃ ಹೇಳಿಕೆಯನ್ನು ನೀಡಿದ್ದಾರೆ. ಒಂದು ವೇಳೆ ಈ ವರ್ಷ ಐಪಿಎಲ್ ನಡೆಯಲು ಸಾಧ್ಯವಾಗದಿದ್ದರೆ ಬಿಸಿಸಿಐ ಹಣಕಾಸಿನ ವಿಚಾರವಾಗಿ ಭಾರೀ ನಷ್ಟಕ್ಕೆ ಒಳಗಾಗಲಿದೆ ಎಂದು ಅವರು ಮಾಹಿತಿಯನ್ನು ನೀಡಿದ್ದಾರೆ. ಜೊತೆಗೆ ಆಟಗಾರರ ಸಂಬಳದ ಬಗ್ಗೆಯೂ ಮಹತ್ವದ ಸುಳಿವೊಂದನ್ನು ಬಿಟ್ಟುಕೊಟ್ಟಿದ್ದಾರೆ.

ಕೊಹ್ಲಿ or ಜಡೇಜಾ: ಯಾರು ಅತ್ಯುತ್ತಮ ಫೀಲ್ಡರ್ ಚರ್ಚೆಗೆ ತಕ್ಷಣವೇ ಅಂತ್ಯ ಹಾಡಿದ ಕೊಹ್ಲಿಕೊಹ್ಲಿ or ಜಡೇಜಾ: ಯಾರು ಅತ್ಯುತ್ತಮ ಫೀಲ್ಡರ್ ಚರ್ಚೆಗೆ ತಕ್ಷಣವೇ ಅಂತ್ಯ ಹಾಡಿದ ಕೊಹ್ಲಿ

ಕೊರೊನಾ ವೈರಸ್ ನಿಂದಾಗಿ ಐಪಿಎಲ್ ನಡೆಯದಿದ್ದರೆ ಬಿಸಿಸಿಐ ಎಷ್ಟು ನಷ್ಟಕ್ಕೆ ಒಳಗಾಗಲಿದೆ? ಈ ಬಗ್ಗೆ ಗಂಗೂಲಿ ಏನೆಲ್ಲಾ ವಿಚಾರಗಳನ್ನು ಹಂಚಿಕೊಂಡಿದ್ದಾರೆ? ಮುಂದೆ ಓದಿ

ನಾಲ್ಕು ಸಾವಿರ ಕೋಟಿ ನಷ್ಟ

ನಾಲ್ಕು ಸಾವಿರ ಕೋಟಿ ನಷ್ಟ

ಈ ವರ್ಷ ಐಪಿಎಲ್ ನಡೆಸಲು ಸಾಧ್ಯವಾಗದಿದ್ದರೆ ಬಿಸಿಸಿಐ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಗಂಗೂಲಿ ಹೇಳಿದ್ದಾರೆ. ಕೊರೊನಾ ವೈರಸ್ ಕಾರಣದಿಂದಾಗಿ ಐಪಿಎಲ್ ನಡೆಯದಿದ್ದರೆ ಸುಮಾರು 4000 ಕೋಟಿ ರೂಪಾಯಿ ನಷ್ಟಕ್ಕೆ ಬಿಸಿಸಿಐ ಒಳಗಾಗಲಿ ಎಂದು ಸ್ವತಃ ಸೌರವ್ ಗಂಗೂಲಿ ಮಾಹಿತಿಯನ್ನು ನೀಡಿದ್ದಾರೆ.

ಐಪಿಎಲ್ ನಡೆದರೆ ಸಂಬಳ ಕಟ್ ಇಲ್ಲ

ಐಪಿಎಲ್ ನಡೆದರೆ ಸಂಬಳ ಕಟ್ ಇಲ್ಲ

ಆಟಗಾರರು ಮತ್ತು ಸಿಬ್ಬಂದಿಗಳ ಸಂಬಳ ಕಡಿತದ ಬಗ್ಗೆ ಪರೋಕ್ಷವಾಗಿ ಸೌರವ್ ಗಂಗೂಲಿ ಹೇಳಿಕೆಯನ್ನು ನೀಡಿದ್ದಾರೆ. ಈ ಬಾರಿ ಐಪಿಎಲ್ ನಡೆದರೆ ಸಂಬಳ ಕಟ್ ಇರುವುದುಲ್ಲ ಎಂದು ಅದವರು ಹೇಳಿಕೆಯನ್ನು ನೀಡಿದರು. ಹೀಗಾಗಿ ಐಪಿಎಲ್ ನಡೆಯದ ಸಂದರ್ಭದಲ್ಲಿ ಸಂಬಳ ಕಡಿತಗೊಳಿಸುವ ತೀರ್ಮಾನವಾಗಿರುವುದು ಬಹುತೇಕ ಖಚಿತವಾಗಿದೆ.

ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್‌ಗಳ ಸರಣಿ

ಆಸ್ಟ್ರೇಲಿಯಾ ವಿರುದ್ಧ 5 ಟೆಸ್ಟ್‌ಗಳ ಸರಣಿ

ಆಸ್ಟ್ರೇಲಿಯಾ ತಂಡದ ವಿರುದ್ಧ ವರ್ಷಾಂತ್ಯದಲ್ಲಿ ಉದ್ದೇಶಿಸಲಾಗಿದ್ದ ನಾಲ್ಕು ಟೆಸ್ಟ್ ಪಂದ್ಯಗಳ ಬದಲಾಗಿ ಐದು ಟೆಸ್ಟ್ ಪಂದ್ಯ ನಡೆಸಲಾಗುತ್ತದೆ ಎಂಬ ಮಾತುಗಳು ಕೇಳಿ ಬಂದಿತ್ತು. ಇದಕ್ಕೆ ಪ್ರತಿಕ್ರಿಯಿಸಿದ ಗಂಗೂಲಿ ಅದೆಲ್ಲಾ ಸಾಧ್ಯವಾಗಲಿದೆ ಎಂದು ನನಗೆ ಅನಿಸುತ್ತಿಲ್ಲ. ಸೀಮಿತ ಓವರ್‌ಗಳ ಸರಣಿಯೂ ಇರಲಿದೆ ಜೊತೆಗೆ 14 ದಿನಗಳ ಕ್ವಾರಂಟೈನ್ ಗೈಡ್‌ಲೈನ್ಸ್‌ಗಳನ್ನು ಕೂಡ ಅನುಸರಿಸಬೇಕಾಗುತ್ತದೆ ಎಂದು ಗಂಗೂಲಿ ಹೇಳಿದ್ದಾರೆ.

ಹಣಕಾಸಿನ ಮುಗ್ಗಟ್ಟಿನಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ

ಹಣಕಾಸಿನ ಮುಗ್ಗಟ್ಟಿನಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ

ಕೊರೊನಾ ವೈರಸ್ ಕಾರಣದಿಂದಾಗಿ ಕ್ರಿಕೆಟ್ ಸರಣಿಗಳು ಸ್ಥಗಿತವಾದ ಹಿನ್ನೆಲೆಯಲ್ಲಿ ಕ್ರಿಕೆಟ್ ಆಸ್ಟ್ರೇಲಿಯಾ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವುದನ್ನು ಮೊದಲೇ ತಿಳಿಸಿತ್ತು. ಕ್ರಿಕೆಟ್ ಆಸ್ಟ್ರೇಲಿಯಾ ತನ್ನ ಕಛೇರಿಯಲ್ಲಿ ಕೆಲಸ ಮಾಡುವ ಸಿಬ್ಬಂಧಿಗಳಿಗೆ ಸಂಬಳ ನೀಡಲು ಸಾಧ್ಯವಾಗದ ಪರಿಸ್ಥಿತಿಯನ್ನು ಎದುರಿಸುತ್ತಿದೆ ಎಂದು ಹೇಳಿತ್ತು. ಜೊತೆಗೆ ತಾತ್ಕಾಲಿಕವಾಗಿ ಸಿಬ್ಬಂಧಿಗಳಿಗೆ ತಾನು ಒಡಂಬಡಿಕೆ ಮಾಡಿಕೊಂಡಿದ್ದ ಕಂಪನಿಗಳಲ್ಲಿ ಕೆಲಸ ಮಾಡಲು ಸೂಚಿಸಿದೆ ಎಂದು ವರದಿಯಾಗಿತ್ತು.

Story first published: Friday, May 15, 2020, 15:20 [IST]
Other articles published on May 15, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X