ವೃದ್ದಿಮಾನ್ ಸಾಹಾ ಹೇಳಿಕೆಯಿಂದ ನನಗೆ ಬೇಸರವಾಗಿಲ್ಲ ಎಂದ ರಾಹುಲ್ ದ್ರಾವಿಡ್

ಇತ್ತೀಚೆಗಷ್ಟೇ ಟ್ವಿಟ್ಟರ್‌ನಲ್ಲಿ ಪತ್ರಕರ್ತನ ಬೆದರಿಕೆ ಕುರಿತು ಬಿಚ್ಚಿಟ್ಟಿ ವಿವಾದ ಸ್ಫೋಟಿಸಿದ್ದ ವಿಕೆಟ್ ಕೀಪರ್ ವೃದ್ದಿಮಾನ್ ಸಾಹಾ ರಾಹುಲ್ ದ್ರಾವಿಡ್ ಕುರಿತಾಗಿಯೂ ಮಾತನಾಡಿ ಟ್ವಿಟ್ಟರ್‌ನಲ್ಲಿ ಭಾರೀ ಚರ್ಚೆಗೆ ಎಡೆಮಾಡಿಕೊಟ್ಟಿದ್ದರು.

ಈಗಾಗಲೇ ಆಯ್ಕೆದಾರರು ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿಯಿಂದ ಅವರನ್ನ ಕೈ ಬಿಡಲಾಗಿದೆ. ಹೀಗಾಗಿ ಬೇಸರಗೊಂಡಿರುವ ಸಾಹಾ ರಣಜಿ ಕ್ರಿಕೆಟ್‌ನಿಂದಲೂ ಹೊರಗುಳಿದಿದ್ದಾರೆ. ಇದರ ಜೊತೆಗೆ ಕೆಲವು ವಿಷಯಗಳನ್ನ ಬಿಚ್ಚಿಟ್ಟಿದ್ದಾರೆ.

ದಕ್ಷಿಣ ಆಫ್ರಿಕಾ ಸರಣಿಯಲ್ಲಿ ಭಾರತ ತಂಡದಲ್ಲಿ ಸ್ಥಾನ ಪಡೆದಿದ್ದ ಸಾಹಾ ಕೋಚ್ ರಾಹುಲ್ ದ್ರಾವಿಡ್‌ ಜೊತೆಗಿನ ಖಾಸಗಿ ಸಂಭಾಷಣೆಯನ್ನ ಬಿಚ್ಚಿಟ್ಟಿದ್ದಾರೆ.

ಸರಣಿ ಮುಗಿದ ಬಳಿಕ ಮಾತುಕತೆಯಲ್ಲಿ ರಾಹುಲ್ ದ್ರಾವಿಡ್ ವೃದ್ದಿಮಾನ್ ಸಾಹಾ ನಿವೃತ್ತಿಯ ಬಗ್ಗೆ ಯೋಚಿಸುವಂತೆ ಹೇಳಿದ್ದರು ಎಂದು ತಿಳಿಸಿದ್ದಾರೆ.

ಆದ್ರೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ರಾಹುಲ್ ದ್ರಾವಿಡ್ '' ಸಾಹಾ ಮಾತಿನಿಂದ ನನಗೆ ಯಾವುದೇ ನೋವಾಗಿಲ್ಲ. ವೃದ್ದಿಮಾನ್ ಸಾಹಾ ಮತ್ತು ಅವರ ಸಾಧನೆಗಳು ಹಾಗೂ ಭಾರತೀಯ ಕ್ರಿಕೆಟ್‌ಗೆ ಅವರ ಕೊಡುಗೆ ಬಗ್ಗೆ ನನಗೆ ಗೌರವವಿದೆ. ಹೀಗಾಗಿ ಈ ಗೌರವದಿಂದಲೇ ಅವರೊಂದಿಗೆ ನಾನು ಸಂಭಾಷಣೆ ನಡೆಸಿದ್ದು. ಅವರು ಪ್ರಾಮಾಣಿಕತೆ ಮತ್ತು ಸ್ಪಷ್ಟತೆಗೆ ಅರ್ಹರು ಎಂದು ನಾನು ಭಾವಿಸುತ್ತೇನೆ'' ಎಂದು ದ್ರಾವಿಡ್ ಹೇಳಿದರು.

''ನಾನು ಆಟಗಾರರೊಂದಿಗೆ ನಿರಂತರವಾಗಿ ಮಾತುಕತೆ ನಡೆಸುತ್ತೇನೆ. ಆಟಗಾರರು ಅವರ ಬಗ್ಗೆ ನಾನು ಹೇಳುವ ಎಲ್ಲವನ್ನೂ ಒಪ್ಪಿಕೊಳ್ಳುತ್ತಾರೆ ಎಂದು ನಾನು ನಿರೀಕ್ಷಿಸುವುದಿಲ್ಲ'' ಎಂದು ದ್ರಾವಿಡ್ ಸ್ಪಷ್ಟಪಡಿಸಿದ್ದಾರೆ.

ಇದರ ಜೊತೆಗೆ ಈ ರೀತಿಯ ವಿವಾದವನ್ನ ತಪ್ಪಿಸಲು ಸುಲಭವಾಗಿ ನಾನು ಆ ರೀತಿಯ ಸಂಭಾಷಣೆಗಳನ್ನು ಮಾಡದಿದ್ದರೆ ಸಾಕು. ಆದ್ರೆ ಹಾಗಂತ ನಾನು ಅವನಲ್ಲ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

ಗಾಯದ ಸಮಸ್ಯೆಯಿಂದ ಬಳಲ್ಲಿತಿರುವ ದೀಪಕ್ ! | Oneindia Kannada

ವೃದ್ದಿಮಾನ್ ಸಾಹಾ ಭಾರತದ ಪರ 40 ಟೆಸ್ಟ್‌ಗಳನ್ನು ಆಡಿದ್ದಾರೆ ಮತ್ತು 29.4 ರ ಸರಾಸರಿಯಲ್ಲಿ 1,353 ರನ್ ಗಳಿಸಿದ್ದಾರೆ. ಟೆಕ್ನಿಕಲಿ ಭಾರತ ಕಂಡಉತ್ತಮ ವಿಕೆಟ್‌ಕೀಪರ್‌ಗಳಲ್ಲಿ ಇವರು ಒಬ್ಬರಾಗಿದ್ದಾರೆ.

For Quick Alerts
ALLOW NOTIFICATIONS
For Daily Alerts
Story first published: Monday, February 21, 2022, 13:54 [IST]
Other articles published on Feb 21, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X