ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಪಾಕ್ ದಿಗ್ಗಜರೊಂದಿಗೆ ಹೋಲಿಸಿ ವಿರಾಟ್ ಕೊಹ್ಲಿ ಜೊತೆಗಲ್ಲ: ಬಾಬರ್ ಅಜಮ್

Not Virat Kohli, Better If People Compare Me With Pakistan Legends: Babar Azam

ಪಾಕಿಸ್ತಾನ ಸೀಮಿತ ಓವರ್‌ಗಳ ನಾಯಕ ಬಾಬರ್ ಅಜಮ್ ಅವರನ್ನು ಕ್ರಿಕೆಟ್ ಪಂಡಿತರು ಮಾಜಿ ಆಟಗಾರರು ಹಾಗೂ ಅಭಿಮಾನಿಗಳು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಯ ಆಟಕ್ಕೆ ಹೋಲಿಸುತ್ತಿದ್ದಾರೆ. ಅತ್ಯುತ್ತಮ ಬ್ಯಾಟಿಂಗ್ ಕೌಶಲ್ಯವನ್ನು ಹೊಂದಿರುವ ಬಾಬರ್ ಮೂರು ಮಾದರಿಯ ಕ್ರಿಕೆಟ್‌ನಲ್ಲೂ ಸ್ಥಿರವಾಗಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ತಂಡದ ಪರವಾಗಿ ಕಳೆದ ಕೆಲ ವರ್ಷಗಳಿಂದ ಬಾಬರ್ ಅಜಮ್ ಅತ್ಯುತ್ತಮ ಆಟವನ್ನು ಪ್ರದರ್ಶಿಸುತ್ತಿದ್ದು ಪ್ರಸಕ್ತ ಕಾಲದ ಉತ್ತಮ ಬ್ಯಾಟ್ಸ್‌ಮನ್‌ಗಳಲ್ಲಿ ಓರ್ವ ಎಂದು ಈಗಾಗಲೇ ಬಿಂಬಿತವಾಗಿದ್ದಾರೆ. ಸದ್ಯ ಬಾಬರ್ ಅಜಮ್ ಇಂಗ್ಲೆಂಡ್ ವಿರುದ್ಧದ ಸರಣಿಗೆ ಸಿದ್ಧವಾಗುತ್ತಿದ್ದಾರೆ. ಈ ಸಂದರ್ಭದಲ್ಲಿ ವಿರಾಟ್ ಕೊಹ್ಲಿಯೊಂದಿಗೆ ಬಾಬರ್ ಅಜಮ್ ಹೋಲಿಸಿ ಪ್ರಶ್ನೆಯೊಂದು ಬಂದಿತ್ತು.

3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲು ಕಾರಣ ಚಾಪೆಲ್ ಅಲ್ಲ ಸಚಿನ್: ಇರ್ಫಾನ್3ನೇ ಕ್ರಮಾಂಕದಲ್ಲಿ ಕಣಕ್ಕಿಳಿಯಲು ಕಾರಣ ಚಾಪೆಲ್ ಅಲ್ಲ ಸಚಿನ್: ಇರ್ಫಾನ್

ವಿರಾಟ್ ಕೊಹ್ಲಿಗೆ ಹೋಲಿಕೆ ಬೇಡ

ವಿರಾಟ್ ಕೊಹ್ಲಿಗೆ ಹೋಲಿಕೆ ಬೇಡ

ಇಂಗ್ಲೆಂಡ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮತ್ತೊಮ್ಮೆ ಬಾಬರ್ ಅಜಮ್ ಅವರನ್ನು ವಿರಾಟ್ ಕೊಹ್ಲಿಯ ಆಟಕ್ಕೆ ಹೋಲಿಸಿ ಪ್ರಶ್ನೆಯನ್ನು ಕೇಳಲಾಯಿತು. ಇದಕ್ಕೆ ಉತ್ತರಿಸಿದ ಬಾಬರ್ ಅಜಮ್ ತನ್ನನ್ನು ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಹೋಲಿಸಬೇಡಿ ಎಂದಿದ್ದಾರೆ.

ಕೊಹ್ಲಿಯೊಂದಿಗೆ ಹೋಲಿಕೆ ಇಷ್ಟವಿಲ್ಲ

ಕೊಹ್ಲಿಯೊಂದಿಗೆ ಹೋಲಿಕೆ ಇಷ್ಟವಿಲ್ಲ

ನಾನು ವಿರಾಟ್ ಕೊಹ್ಲಿಯೊಂದಿಗೆ ಹೋಲಿಕೆ ಮಾಡಿಕೊಳ್ಳಲು ಇಷ್ಟಪಡುವುದಿಲ್ಲ. ಪಾಕಿಸ್ತಾನದ ಕ್ರಿಕೆಟ್‌ನ ದಿಗ್ಗಜ ಆಟಗಾರರಾದ ಜಾವೇದ್ ಮಿಯಾಂದಾದ್, ಮೊಹಮದ್ ಯೂಸುಪ್ ಅಥವಾ ಯೂನಿಸ್ ಖಾನ್ ಅವರ ಆಟಕ್ಕೆ ಹೋಲಿಸಿದರೆ ಚೆನ್ನಾಗಿರುತ್ತದೆ ಎಂದು ಬಾಬರ್ ಹೇಳಿದ್ದಾರೆ.

ಇಂಗ್ಲೆಂಡ್ ವಿರುದ್ಧ ತ್ರಿಶತಕ ಬಾರಿಸುವೆ

ಇಂಗ್ಲೆಂಡ್ ವಿರುದ್ಧ ತ್ರಿಶತಕ ಬಾರಿಸುವೆ

ಇನ್ನು ಇದೇ ಸಂದರ್ಭದಲ್ಲಿ ಬಾಬರ್ ಅಜಮ್ ಮುಂದಿನ ಇಂಗ್ಲೆಂಡ್ ವಿರುದ್ಧದ ಸರಣಿಯ ಬಗ್ಗೆ ಹೇಳಿಕೆಯನ್ನು ನೀಡಿದ್ದಾರೆ. ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ತಾನು ತ್ರಿಶತಕವನ್ನು ಗಳಿಸುವತ್ತ ದೃಷ್ಟಿಯಿಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾರೆ. ನಾನು ನನ್ನ ನೈಸರ್ಗಿಕ ಆಟವನ್ನೇ ಆಡಲು ಬಯಸುತ್ತೇನೆ. ಆದರೆ ಶಾಟ್‌ನ ಆಯ್ಕೆ ಪರಿಸ್ಥಿತಿ ಹಾಗೂ ಬೌಲರ್‌ಅನ್ನು ಒಳಗೊಂಡಿರುತ್ತದೆ ಎಂದಿದ್ದಾರೆ.

ಟಿ20ಯಲ್ಲಿ ಬಾಬರ್ ನಂಬರ್ 1

ಟಿ20ಯಲ್ಲಿ ಬಾಬರ್ ನಂಬರ್ 1

ಬಾಬರ್ ಅಜಮ್ ಸದ್ಯ ಟಿ20 ಕ್ರಿಕೆಟ್‌ನಲ್ಲಿ ನಂಬರ್ 1 ಬ್ಯಾಟ್ಸ್‌ಮನ್ ಆಗಿದ್ದರೆ ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಏಕದಿನ ಶ್ರೇಯಾಂಕದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಟೆಸ್ಟ್‌ನಲ್ಲಿ ಎರಡನೇ ಸ್ಥಾನವನ್ನು ಕೊಹ್ಲಿ ಅಲಂಕರಿಸಿದ್ದು ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ ಮೊದಲ ಸ್ಥಾನದಲ್ಲಿದ್ದಾರೆ.

Story first published: Thursday, July 2, 2020, 21:51 [IST]
Other articles published on Jul 2, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X