ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಿಗ್ಗಜ ಆಟಗಾರರ ಅನುಪಸ್ಥಿತಿಯಲ್ಲೇ ನಡೆಯುತ್ತಾ ಯುಎಸ್ ಓಪನ್?

Novak Djokovic Unsure Of Playing Us Open 2020

ಅಮೆರಿಕಾದಲ್ಲಿ ಕೊರೊನಾ ವೈರಸ್‌ನ ಪರಿಣಾಮ ಇನ್ನೂ ತಗ್ಗಿಲ್ಲ. ಸಾಕಷ್ಟು ಪ್ರಮಾಣದಲ್ಲಿ ಜನರು ಕೊರೊನಾ ವೈರಸ್‌ಗೆ ತುತ್ತಾಗುತ್ತಿದ್ದಾರೆ. ಈ ಮಧ್ಯೆ ಟೆನ್ನಿಸ್‌ನ ಪ್ರತಿಷ್ಠಿತ ಗ್ರ್ಯಾಂಡ್ ಸ್ಲ್ಯಾಮ್ ಯುಎಸ್‌ ಓಪನ್ ನಡೆಸಲು ಯುನೈಟೆಡ್ ಸ್ಟೇಟ್ಸ್ ಟೆನ್ನಿಸ್ ಅಸೊಸಿಯೇಶನ್ ಉತ್ಸುಕವಾಗಿದೆ. ನಿಗದಿತ ವೇಳಾಪಟ್ಟಿಯಂತೆಯೇ ಟೂರ್ನಿ ನಡೆಸಲು ಯುಎಸ್‌ಟಿಎ ಹರಸಾಹಸಪಡುತ್ತಿದೆ.

ಆದರೆ ಮತ್ತೊಂದೆಡೆ ಪರಿಸ್ಥಿತಿ ವಿಭಿನ್ನವಾಗಿದೆ. ಒಂದು ವೇಳೆ ಈ ಟೂರ್ನಿ ನಡೆಯುವುದೇ ಆದಲ್ಲಿ ಟೆನಿಸ್‌ನ ಅಗ್ರ ಆಟಗಾರರು ಇದರಿಂದ ದೂರವುಳಿಯುವುದು ಬಹುತೇಕ ಖಚಿತವಾಗಿದೆ. ರಾಫೆಲ್ ನಡಾಲ್ ರೋಜರ್ ಫೆಡರರ್ ಬಳಿಕ ಈಗ ಜಾಕೊವಿಕ್ ಕೂಡ ಯುಸ್‌ ಓಪನ್‌ಗೆ ಅಲಭ್ಯರಾಗುವುದು ಬಹುತೇಕ ಖಚಿತ ಎನ್ನಲಾಗುತ್ತಿದೆ.

ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಫೆಡರರ್: ಈ ವರ್ಷ ಟೆನ್ನಿಸ್ ಅಂಗಳದಿಂದ ದೂರಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದ ಫೆಡರರ್: ಈ ವರ್ಷ ಟೆನ್ನಿಸ್ ಅಂಗಳದಿಂದ ದೂರ

ಬ್ರಾಡ್‌ಕಾಸ್ಟರ್‌ ಆರ್‌ಟಿಎಸ್‌ ಜತೆಗೆ ಮಾತಾಡುವ ವೇಳೆ ಜೊಕೊವಿಕ್‌ ಇಂಥದೊಂದು ಸಾಧ್ಯತೆಯನ್ನು ತೆರೆದಿಟ್ಟಿದ್ದಾರೆ. ಅಲ್ಲದೇ ಯು.ಎಸ್‌. ಓಪನ್‌ ತಾಣವಾದ ನ್ಯೂಯಾರ್ಕ್‌ನಲ್ಲಿ ಕೊರೊನಾ ಇನ್ನೂ ನಿಯಂತ್ರಣಕ್ಕೆ ಬಾರದಿರುವುದೂ ಇದಕ್ಕೊಂದು ಕಾರಣವಾಗಿದೆ.

"ಸದ್ಯ ನನ್ನ ಯೋಜನೆ ಫ್ರೆಂಚ್‌ ಓಪನ್‌ನಲ್ಲಿ ಪಾಲ್ಗೊ ಳ್ಳುವುದು. ಹೀಗಾಗಿ ಇದಕ್ಕಿಂತ ಮೊದಲು ನಡೆಯುವ ಯು.ಎಸ್‌. ಓಪನ್‌ ಕೂಟದಲ್ಲಿ ಆಡುವ ಸಾಧ್ಯತೆ ಇಲ್ಲ. ನ್ಯೂಯಾರ್ಕ್‌ಗೆ ತೆರಳುವ ಕುರಿತು ಬಹುತೇಕ ಟೆನಿಸ್‌ ಗೆಳೆಯರು ನಕಾರಾತ್ಮಕ ಅಭಿಪ್ರಾಯವನ್ನೇ ವ್ಯಕ್ತಪಡಿಸಿದ್ದಾರೆ' ಎಂದು ಜೊಕೊವಿಕ್‌ ಹೇಳಿದರು.

ಯುಎಸ್‌ ಓಪನ್ ನಡೆಯುವುದು ಅನುಮಾನ ಎಂದ ರಾಫೆಲ್ ನಡಾಲ್ಯುಎಸ್‌ ಓಪನ್ ನಡೆಯುವುದು ಅನುಮಾನ ಎಂದ ರಾಫೆಲ್ ನಡಾಲ್

ರೋಜರ್ ಫೆಡರರ್ ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾಗುತ್ತಿರುವುದನ್ನು ಖಚಿತ ಪಡಿಸಿದ್ದು ಈ ವರ್ಷದ ಯಾವುದೇ ಟೂರ್ನಿಯಲ್ಲೂ ಪಾಲ್ಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇದಕ್ಕೂ ಮುನ್ನ ರಾಫೆಲ್ ನಡಾಲ್ ಕೊರೊನಾ ವೈರಸ್‌ನ ಕಾರಣದಿಂದಾಗಿ ಅಮೆರಿಕಾದಲ್ಲಿನ ಪರಿಸ್ಥಿತಿಯ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದರು.

Story first published: Thursday, June 11, 2020, 15:33 [IST]
Other articles published on Jun 11, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X