ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನವೆಂಬರ್ 5: ಕೊಹ್ಲಿ, ತೆಂಡೂಲ್ಕರ್, ಗವಾಸ್ಕರ್ ಪಾಲಿಗೆ ವಿಶೇಷ ದಿನ!

November 5 is a special day for Virat Kohli, Sachin Tendulkar and Sunil Gavaskar

ನವದೆಹಲಿ: ನವೆಂಬರ್ 5 ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅವರ ಜನುಮ ದಿನ. ಕೊಹ್ಲಿಗೆ ಈ ದಿನ ವಿಶೇಷ ಹೌದು. ಆದರೆ ಇದೇ ದಿನ ಕ್ರಿಕೆಟ್ ದಂತಕತೆ ಸಚಿನ್ ತೆಂಡೂಲ್ಕರ್ ಮತ್ತು ಸುನಿಲ್ ಗವಾಸ್ಕರ್ ಪಾಲಿಗೂ ವಿಶೇಷ ದಿನ. ಕೊಹ್ಲಿಗೆ ಹುಟ್ಟು ಹಬ್ಬವೆಂಬ ಕಾರಣಕ್ಕಾಗಿ ವಿಶೇಷ ದಿನವಾದರೆ, ಸಚಿನ್-ಗವಾಸ್ಕರ್‌ಗೆ ವೃತ್ತಿ ಬದುಕಿಗೆ ನವೆಂಬರ್ 5 ಥಳುಕು ಹಾಕಿಕೊಂಡಿದೆ.

ಐಪಿಎಲ್ 2020: 6 ಯುವ ಪ್ರತಿಭೆಗಳ ಹೆಸರಿಸಿದ ಸೌರವ್ ಗಂಗೂಲಿಐಪಿಎಲ್ 2020: 6 ಯುವ ಪ್ರತಿಭೆಗಳ ಹೆಸರಿಸಿದ ಸೌರವ್ ಗಂಗೂಲಿ

ಕ್ರಿಕೆಟ್ ದಿಗ್ಗಜ ಸುನಿಲ್ ಗವಾಸ್ಕರ್ ಕೊನೇ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದು 1987 ನವೆಂಬರ್ 5ಕ್ಕೆ. ಆವತ್ತು ಮುಂಬೈಯ ವಾಂಖೇಡೆ ಸ್ಟೇಡಿಯಂನಲ್ಲಿ ನಡೆದಿದ್ದ ರಿಲಯನ್ಸ್ ವಿಶ್ವಕಪ್‌ ಪಂದ್ಯದಲ್ಲಿ ಭಾರತ ಮತ್ತು ಇಂಗ್ಲೆಂಡ್ ಮುಖಾಮುಖಿಯಾಗಿದ್ದವು. ವೃತ್ತಿ ಬದುಕಿನ ಕೊನೇ ಅಂತಾರಾಷ್ಟ್ರೀಯ ಪಂದ್ಯ ಆಡಿದ್ದ ಗವಾಸ್ಕರ್ 4 ರನ್ ಗಳಿಸಿದ್ದರು. ಪಂದ್ಯದಲ್ಲಿ ಇಂಗ್ಲೆಂಡ್ 35 ರನ್‌ನಿಂದ ಗೆದ್ದಿತ್ತು.

ಒಂದೇ ಎಸೆತಕ್ಕೆ ಎರಡೆರಡು ಸಾರಿ ಔಟ್: ಬಲು ಅಪರೂಪದ ವಿಡಿಯೋಒಂದೇ ಎಸೆತಕ್ಕೆ ಎರಡೆರಡು ಸಾರಿ ಔಟ್: ಬಲು ಅಪರೂಪದ ವಿಡಿಯೋ

1988ರ ನವೆಂಬರ್ 5ರಂದು ಕೊಹ್ಲಿ ನವದೆಹಲಿಯಲ್ಲಿ ಜನಿಸಿದ್ದು. ಕೊಹ್ಲಿಗೀಗ 32ರ ಹರೆಯ. ಈ ಬಾರಿಯ ಹುಟ್ಟು ಹಬ್ಬದ ದಿನ ಕೊಹ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿದ್ದು ಐಪಿಎಲ್‌ ಫೈನಲ್‌ ಕನಸಿನಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರಿಗೆ ನಾಯಕತ್ವದ ಜವಾಬ್ದಾರಿಯಲ್ಲಿದ್ದಾರೆ.

ನಿಮ್ಮನ್ನು ಬೆರಗುಗೊಳಿಸಬಲ್ಲ ಐಪಿಎಲ್‌ನ 10 ಸತ್ಯ ಸಂಗತಿಗಳಿವು!ನಿಮ್ಮನ್ನು ಬೆರಗುಗೊಳಿಸಬಲ್ಲ ಐಪಿಎಲ್‌ನ 10 ಸತ್ಯ ಸಂಗತಿಗಳಿವು!

1989ರಂದು ನವೆಂಬರ್ 5ಕ್ಕೆ ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಅವರು ಟೀಮ್ ಇಂಡಿಯಾಕ್ಕೆ ಆಯ್ಕೆಯಾಗಿದ್ದರು. ಆದರೆ ಸಚಿನ್ ಪಾದಾರ್ಪಣೆ ಪಂದ್ಯವಾಡಿದ್ದು 1989 ನವೆಂಬರ್ 15-20ರ ವರೆಗೆ ನಡೆದಿದ್ದ ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಈ ಪಂದ್ಯ ಕರಾಚಿಯಲ್ಲಿ ನಡೆದಿತ್ತು.

Story first published: Thursday, November 5, 2020, 14:56 [IST]
Other articles published on Nov 5, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X