ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಪಿಎಲ್ ಆಂತರಿಕ ಮಾಹಿತಿ ಪಡೆಯಲು ಭಾರತೀಯ ಆಟಗಾರನನ್ನು ಸಂಪರ್ಕಿಸಿದ್ದ ನರ್ಸ್

Nurse approaches indian player for IPL betting during IPL 2020

ಐಪಿಎಲ್ 2020ರ ಆವೃತ್ತಿಯಲ್ಲಿ ಐಪಿಎಲ್ ತಂಡದ ಆಂತರಿಕ ಮಾಹಿತಿಯನ್ನು ಅಕ್ರಮವಾಗಿ ಪಡೆಯಲು ಬಯಸಿದ್ದ ಪ್ರಕರಣ ಈಗ ಬೆಳಕಿಗೆ ಬಂದಿದೆ. ಡೆಲ್ಲಿ ಮೂಲದ ನರ್ಸ್ ವಿರುದ್ಧ ಭಾರತೀಯ ಕ್ರಿಕೆಟಿಗನನ್ನು ಸಂಪರ್ಕಿಸಿ ಐಪಿಎಲ್ ತಂಡದ ಗೌಪ್ಯ ಆಂತರಿಕ ಮಾಹಿತಿಯನ್ನು ಪಡೆಯಲು ಬಯಸಿದ್ದ ಆರೋಪ ಕೇಳಿ ಬಂದಿದೆ.

ಐಪಿಎಲ್ ಪಂದ್ಯಗಳಲ್ಲಿ ಬೆಟ್ ಕಟ್ಟುವ ವಿಚಾರವಾಗಿ ಈ ರೀತಿಯನ್ನು ಸಂಪರ್ಕಿಸಿರುವ ಸಾಧ್ಯತೆಯಿದೆ ಎನ್ನಲಾಗಿದೆ. ಸಾಮಾಜಿಕ ಜಾಲತಾಣದ ಮೂಲಕ ಆಟಗಾರನನ್ನು ಸಂಪರ್ಕಿಸಿ ಮಾಹಿತಿಯನ್ನು ಪಡೆಯುವ ಪ್ರಯತ್ನವಾಗಿತ್ತು. ಆದರೆ ಆಟಗಾರ ಅದಕ್ಕೆ ಪೂರಕವಾಗಿ ಸ್ಪಂದಿಸದ ಕಾರಣ ಆ ಸಂದೇಶಗಳನ್ನು ಅಳಿಸಲಾಗಿದೆ.

ಸ್ಟೋಯ್ನಿಸ್ ಬ್ಯಾಟಿಂಗ್ ಆರ್ಭಟ, ಹೊಬರ್ಟ್ ವಿರುದ್ಧ ಮೆಲ್ಬರ್ನ್‌ಗೆ ಜಯಸ್ಟೋಯ್ನಿಸ್ ಬ್ಯಾಟಿಂಗ್ ಆರ್ಭಟ, ಹೊಬರ್ಟ್ ವಿರುದ್ಧ ಮೆಲ್ಬರ್ನ್‌ಗೆ ಜಯ

ಸೆಪ್ಟೆಂಬರ್ 30ರಂದು ಐಪಿಎಲ್ ಟೂರ್ನಿಯ ಮಧ್ಯಭಾಗದಲ್ಲಿ ಈ ಬೆಳವಣಿಗೆ ನಡೆದಿದೆ. ದೆಹಲಿ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುವ ವೈದ್ಯರಂತೆ ಬಿಂಬಿಸಿಕೊಂಡು ಈ ಮಾಹಿತಿಯನ್ನು ಪಡೆಯುವ ಪ್ರಯತ್ನ ನಡೆಸಲಾಗಿತ್ತು. ಎರಡು ವರ್ಷಗಳ ಹಿಂದೆ ಟೀಮ್ ಇಂಡಿಯಾವನ್ನು ಪ್ರತಿನಿಧಿಸಿದ್ದ ಆಟಗಾರ ಈ ವಿಚಾರವನ್ನು ಬಿಸಿಸಿಐನ ಭ್ರಷ್ಟಾಚಾರ ನಿಗ್ರಹ ಘಟಕಕ್ಕೆ ವರದಿ ಮಾಡಿದ್ದಾರೆ.

ಮೂಲಗಳ ಮಾಹಿತಿಯ ಪ್ರಕಾರ ಕ್ರಿಕೆಟಿಗ ಹಾಗೂ ನರ್ಸ್ ಮೂರು ವರ್ಷಗಳ ಹಿಂದೆ ಆನ್‌ಲೈನ್‌ ವೇದಿಕೆಯಲ್ಲಿ ಮೂರು ವರ್ಷಗಳ ಹಿಂದೆ ಸಂಪರ್ಕಿಸಿದ್ದರು. ಆಟಗಾರನ ಅಭಿಮಾನಿಯೆಂದು ಹೇಳಿಕೊಂಡಿದ್ದ ಆಕೆ ದೆಹಲಿ ಮೂಲದ ವೈದ್ಯೆಯಾಗಿದ್ದು ದೆಹಲಿಯಲ್ಲಿ ಖಾಸಗಿ ಆಸ್ಪತ್ರೆಯನ್ನು ನಡೆಸುತ್ತಿರುವುದಾಗಿ ಹೇಳಿಕೊಂಡಿದ್ದಳು ಎನ್ನಲಾಗಿದೆ. ಇತ್ತೀಚೆಗೆ ಕ್ರಿಕೆಟಿಗ ಆಕೆಯೊಂದಿಗೆ ಸಂಪರ್ಕದಲ್ಲಿದ್ದು ಕೊರೊನಾ ವೈರಸ್‌ನ ಕಾರಣದಿಂದಾಗಿ ತೆಗೆದುಕೊಳ್ಳಬೇಕಾದ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ಆಕೆಯಿಂದ ಮಾಹಿತಿಯನ್ನು ಪಡೆದುಕೊಂಡಿದ್ದ ಎನ್ನಲಾಗುತ್ತಿದೆ.

ಕಾಮೆಂಟರಿ ನೀಡುತ್ತಿದ್ದ ಪಾಕ್ ಮಾಜಿ ನಾಯಕಿ ಸನಾಗೆ ಕೊರೊನಾ ಸೋಂಕುಕಾಮೆಂಟರಿ ನೀಡುತ್ತಿದ್ದ ಪಾಕ್ ಮಾಜಿ ನಾಯಕಿ ಸನಾಗೆ ಕೊರೊನಾ ಸೋಂಕು

ಬಿಸಿಸಿಐನ ಭ್ರಷ್ಟಾಚಾರ ವಿರೋಧಿ ಘಟಕದ ಮುಖ್ಯಸ್ಥ ಅಜಿತ್ ಸಿಂಗ್ ಈ ಬೆಳವಣಿಗೆಯನ್ನು ಖಚಿತಪಡಿಸಿದ್ದು ಈ ಪ್ರಕರಣ ಈಗ ಅಂತ್ಯವಾಗಿದೆ ಎಂದಿದ್ದಾರೆ. "ಪ್ರಕರಣವನ್ನು ಆಟಗಾರ ಐಪಿಎಲ್ ಸಂದರ್ಭದಲ್ಲಿಯೇ ವರದಿ ಮಾಡಿದ್ದರು. ನಾವು ಅದನ್ನು ತನಿಖೆ ನಡೆಸಿದ್ದು ಪ್ರಕರಣ ಮುಕ್ತಾಯ ಕಂಡಿದೆ" ಎಂದಿದ್ದಾರೆ. ಆಟಗಾರನನ್ನು ಸಂಪರ್ಕಿಸಿದ್ದ ವ್ಯಕ್ತಿ ಯಾವುದೇ ಬೆಟ್ಟಿಂಗ್ ಸಿಂಡೀಕೇಟ್‌ನೊಂದಿಗೆ ಸಂಪರ್ಕವನ್ನು ಹೊಂದಿಲ್ಲ. ನಾವು ಪ್ರಕರಣವನ್ನು ಸಂಪೂರ್ಣವಾಗಿ ತನಿಖೆ ಮಾಡಿದ್ದೇವೆ. ಎಲ್ಲಾ ವಿವರಗಳನ್ನು ಪಡೆದುಕೊಳ್ಳಲಾಗಿದ್ದು ಆಕೆಯನ್ನು ವಿಚಾರಣೆ ನಡೆಸಿಯೂ ಆಗಿದೆ. ಆದರೆ ಆಕೆಯಿಂದ ಯಾವುದೇ ಮಾಹಿತಿಯೂ ದೊರೆತಿಲ್ಲ. ಹೀಗಾಗಿ ಪ್ರಕರಣ ಅಂತ್ಯವಾಗಿದೆ" ಎಂದಿದ್ದಾರೆ.

Story first published: Tuesday, January 5, 2021, 13:15 [IST]
Other articles published on Jan 5, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X