ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

NZ vs WI: ಅಲ್ಪ ಮೊತ್ತಕ್ಕೆ ಆಲ್ಔಟ್ ಆಗಿ ವಿಂಡೀಸ್ ವಿರುದ್ಧ ಹೀನಾಯವಾಗಿ ಸೋತ ವಿಲಿಯಮ್ಸನ್ ಬಳಗ

NZ vs WI 1st ODI: Shamarh Brooks 79 runs helps West Indies to beat Zealand by 5 wickets

ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ನಿರತವಾಗಿರುವ ಬ್ಲ್ಯಾಕ್ ಕ್ಯಾಪ್ಸ್ ನ್ಯೂಜಿಲೆಂಡ್ ತಂಡ ಕೆರಿಬಿಯನ್ನರ ವಿರುದ್ಧ 3 ಪಂದ್ಯಗಳ ಟಿ ಟ್ವೆಂಟಿ ಸರಣಿ ಹಾಗೂ 3 ಪಂದ್ಯಗಳ ಏಕದಿನ ಸರಣಿಯಲ್ಲಿ ಸೆಣಸಾಟವನ್ನು ನಡೆಸುತ್ತಿದೆ. ಉಭಯ ತಂಡಗಳ ನಡುವೆ ಮೊದಲಿಗೆ ನಡೆದ 3 ಪಂದ್ಯಗಳ ಟಿ 20 ಸರಣಿಯನ್ನು 2-1 ಅಂತರದಿಂದ ಗೆದ್ದು ಬೀಗಿದ್ದ ನ್ಯೂಜಿಲೆಂಡ್ ನಂತರ ಆರಂಭವಾಗಿರುವ ಏಕದಿನ ಸರಣಿಯ ಪ್ರಥಮ ಪಂದ್ಯದಲ್ಲಿಯೇ ಸೋಲುಂಡು ಹಿನ್ನಡೆ ಅನುಭವಿಸಿದೆ.

ಕೊಹ್ಲಿ, ಪಾಂಡ್ಯ, ರಾಹುಲ್, ರೋಹಿತ್ ಪೈಕಿ ಚೊಚ್ಚಲ ಐಪಿಎಲ್‌ನಲ್ಲಿಯೇ 3 ಕೋಟಿ ಪಡೆದದ್ದು ಈತ ಮಾತ್ರ!ಕೊಹ್ಲಿ, ಪಾಂಡ್ಯ, ರಾಹುಲ್, ರೋಹಿತ್ ಪೈಕಿ ಚೊಚ್ಚಲ ಐಪಿಎಲ್‌ನಲ್ಲಿಯೇ 3 ಕೋಟಿ ಪಡೆದದ್ದು ಈತ ಮಾತ್ರ!

ಬಾರ್ಬಡೋಸ್ ಬ್ರಿಡ್ಜ್ ಟೌನ್‌ನ ಕೆನ್ನಿಂಗ್ಟನ್ ಓವಲ್ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ವೆಸ್ಟ್ ಇಂಡೀಸ್ ತಂಡದ ನಾಯಕ ನಿಕೋಲಸ್ ಪೂರನ್ ಫೀಲ್ಡಿಂಗ್ ಆಯ್ದುಕೊಳ್ಳುವುದರ ಮೂಲಕ ಎದುರಾಳಿ ನ್ಯೂಜಿಲೆಂಡ್ ತಂಡವನ್ನು ಮೊದಲು ಬ್ಯಾಟಿಂಗ್ ಮಾಡಲು ಆಹ್ವಾನಿಸಿದರು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 45.2 ಓವರ್‌ಗಳಲ್ಲಿ 190 ರನ್ ಕಲೆಹಾಕಿ ಅಲ್ಪ ಮೊತ್ತಕ್ಕೆ ಆಲ್ ಔಟ್ ಆಗಿ ಆತಿಥೇಯ ವೆಸ್ಟ್ ಇಂಡೀಸ್ ತಂಡಕ್ಕೆ ಗೆಲ್ಲಲು 191 ರನ್‌ಗಳ ಗುರಿಯನ್ನು ನೀಡಿತು.

ಭಾರತ vs ಜಿಂಬಾಬ್ವೆ ಸರಣಿಯ ನೇರ ಪ್ರಸಾರ ಯಾವ ಚಾನೆಲ್‌ನಲ್ಲಿ ಲಭ್ಯ? ಮೊಬೈಲ್‌ನಲ್ಲಿ ವೀಕ್ಷಿಸುವುದು ಹೇಗೆ?ಭಾರತ vs ಜಿಂಬಾಬ್ವೆ ಸರಣಿಯ ನೇರ ಪ್ರಸಾರ ಯಾವ ಚಾನೆಲ್‌ನಲ್ಲಿ ಲಭ್ಯ? ಮೊಬೈಲ್‌ನಲ್ಲಿ ವೀಕ್ಷಿಸುವುದು ಹೇಗೆ?

ಅತ್ತ ಈ ಗುರಿಯನ್ನು ಬೆನ್ನಟ್ಟಿದ ವೆಸ್ಟ್ ಇಂಡೀಸ್ 39 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 193 ರನ್ ಕಲೆಹಾಕಿ 5 ವಿಕೆಟ್‍ಗಳ ಗೆಲುವನ್ನು ಸಾಧಿಸಿತು. ಈ ಜಯದ ಮೂಲಕ ಏಕದಿನ ಸರಣಿಯಲ್ಲಿ ವೆಸ್ಟ್ ಇಂಡೀಸ್ 1-0 ಅಂತರದ ಮುನ್ನಡೆಯನ್ನು ಕಾಯ್ದುಕೊಂಡಿದೆ.

ನ್ಯೂಜಿಲೆಂಡ್ ಕಳಪೆ ಇನ್ನಿಂಗ್ಸ್

ನ್ಯೂಜಿಲೆಂಡ್ ಕಳಪೆ ಇನ್ನಿಂಗ್ಸ್

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ ಪರ ಆರಂಭಿಕ ಆಟಗಾರರಾಗಿ ಕಣಕ್ಕಿಳಿದ ಮಾರ್ಟಿನ್ ಗಪ್ಟಿಲ್ ಹಾಗೂ ಫಿನ್ ಅಲೆನ್ 41 ರನ್‌ಗಳ ಜತೆಯಾಟವಾಡಿದರು. ಮಾರ್ಟಿನ್ ಗಪ್ಟಿಲ್ 24 ರನ್ ಕಲೆಹಾಕಿದರೆ ಫಿನ್ ಅಲೆನ್ 25 ರನ್ ಬಾರಿಸಿದರು. ಇನ್ನುಳಿದಂತೆ ತಂಡದ ನಾಯಕ ಕೇನ್ ವಿಲಿಯಮ್ಸನ್ 34, ಡಿವಾನ್ ಕಾನ್ವೆ 4, ಟಾಮ್ ಲಾಥಮ್ 12, ಡೆರಿಲ್ ಮಿಚೆಲ್ 20, ಮಿಚೆಲ್ ಬ್ರೇಸ್ ವೆಲ್ 31, ಮಿಚೆಲ್ ಸ್ಯಾಂಟ್ನರ್ 25, ಟಿಮ್ ಸೌಥಿ 12, ಟ್ರೆಂಟ್ ಬೌಲ್ಟ್ 1 ರನ್ ಹಾಗೂ ಲಾಕಿ ಫರ್ಗ್ಯುಸನ್ ಯಾವುದೇ ರನ್ ಗಳಿಸದೇ ಅಜೇಯರಾಗಿ ಉಳಿದರು. ಹೀಗೆ ನ್ಯೂಜಿಲೆಂಡ್ ತಂಡದ ಯಾವೊಬ್ಬ ಆಟಗಾರನೂ ಕೂಡ ಅರ್ಧಶತಕವನ್ನು ಸಹ ಬಾರಿಸಲಾಗದೇ ಮಂಕಾದ ಕಾರಣ ತಂಡ ಅಲ್ಪ ಮೊತ್ತಕ್ಕೆ ಆಲ್ ಔಟ್ ಆಯಿತು.

ವೆಸ್ಟ್ ಇಂಡೀಸ್ ತಂಡದ ಪರ ಉತ್ತಮ ಬೌಲಿಂಗ್ ಪ್ರದರ್ಶನ ಮಾಡಿದ ಅಲ್ಜಾರಿ ಜೋಸೆಫ್ ಹಾಗೂ ಅಖೆಲ್ ಹುಸೈನ್ ತಲಾ 3 ವಿಕೆಟ್ ಪಡೆದರೆ, ಜೇಸನ್ ಹೋಲ್ಡರ್ 2 ವಿಕೆಟ್ ಮತ್ತು ಕೆವಿನ್ ಸಿಂಕ್ಲೇರ್ ಹಾಗೂ ಯಾನಿಕ್ ಕಾರಿಯಾ ತಲಾ ಒಂದೊಂದು ವಿಕೆಟ್ ಪಡೆದರು.

ಶಾಮ್ರಾ ಬ್ರೂಕ್ಸ್ ಅರ್ಧ ಶತಕ; ವಿಂಡೀಸ್ ಗೆ ಜಯ

ಶಾಮ್ರಾ ಬ್ರೂಕ್ಸ್ ಅರ್ಧ ಶತಕ; ವಿಂಡೀಸ್ ಗೆ ಜಯ

ನ್ಯೂಜಿಲೆಂಡ್ ನೀಡಿದ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ 17 ರನ್‌ಗಳಿಗೆ ತನ್ನ ಮೊದಲ ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತು. ಕೇಲ್ ಮೇಯರ್ಸ್ 6 ರನ್ ಗಳಿಸಿ ಔಟಾದರು. ಈ ಸಂದರ್ಭದಲ್ಲಿ ಕಣಕ್ಕಿಳಿದ ಶಾಮ್ರಾ ಬ್ರೂಕ್ಸ್ 91 ಎಸೆತಗಳಲ್ಲಿ 79 ರನ್ ಕಲೆಹಾಕಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಕೇಲ್ ಮೇಯರ್ಸ್ ಜತೆ ಆರಂಭಿಕನಾಗಿ ಕಣಕ್ಕಿಳಿದಿದ್ದ ಮತ್ತೋರ್ವ ಆಟಗಾರ ಶಾಯ್ ಹೋಪ್ 26, ಕೀಸಿ ಕಾರ್ಟಿ 11, ನಾಯಕ ನಿಕೋಲಸ್ ಪೂರನ್ 28 ರನ್ ಕಲೆಹಾಕಿದರೆ ಅಂತಿಮವಾಗಿ ಬ್ಲಾಕ್‌ವುಡ್ ಅಜೇಯ 12 ಮತ್ತು ಜೇಸನ್ ಹೋಲ್ಡರ್ ಅಜೇಯ 13 ರನ್ ಕಲೆ ಹಾಕಿದರು.

ನ್ಯೂಜಿಲೆಂಡ್ ತಂಡದ ಪರ ಟ್ರೆಂಟ್ ಬೌಲ್ಟ್ ಹಾಗೂ ಟಿಮ್ ಸೌಥಿ ತಲಾ 2 ವಿಕೆಟ್ ಪಡೆದರೆ, ಮಿಚೆಲ್ ಸ್ಯಾಂಟ್ನರ್ 1 ವಿಕೆಟ್ ಪಡೆದರು

ಇಷ್ಟುದ್ದದ ರೈಲು ನೀವು ಬಿಟ್ಟಿರೋಕೆ ಸಾಧ್ಯಾನೇ ಇಲ್ಲ | *India | OneIndia Kannada
ಆಡುವ ಬಳಗ

ಆಡುವ ಬಳಗ

ವೆಸ್ಟ್ ಇಂಡೀಸ್: ಶಾಯ್ ಹೋಪ್ (ವಿಕೆಟ್ ಕೀಪರ್), ಕೈಲ್ ಮೇಯರ್ಸ್, ಶಮರ್ ಬ್ರೂಕ್ಸ್, ನಿಕೋಲಸ್ ಪೂರನ್ (ನಾಯಕ), ಜೆರ್ಮೈನ್ ಬ್ಲಾಕ್‌ವುಡ್, ಕೀಸಿ ಕಾರ್ಟಿ, ಜೇಸನ್ ಹೋಲ್ಡರ್, ಅಕೆಲ್ ಹೋಸೇನ್, ಯಾನಿಕ್ ಕ್ಯಾರಿಯಾ, ಅಲ್ಜಾರಿ ಜೋಸೆಫ್, ಕೆವಿನ್ ಸಿಂಕ್ಲೇರ್

ನ್ಯೂಜಿಲೆಂಡ್: ಮಾರ್ಟಿನ್ ಗಪ್ಟಿಲ್, ಫಿನ್ ಅಲೆನ್, ಕೇನ್ ವಿಲಿಯಮ್ಸನ್ (ನಾಯಕ), ಡೆವೊನ್ ಕಾನ್ವೇ, ಟಾಮ್ ಲ್ಯಾಥಮ್ (ವಿಕೆಟ್ ಕೀಪರ್), ಡೇರಿಲ್ ಮಿಚೆಲ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಟಿಮ್ ಸೌಥಿ, ಲಾಕಿ ಫರ್ಗುಸನ್, ಟ್ರೆಂಟ್ ಬೌಲ್ಟ್

Story first published: Thursday, August 18, 2022, 10:14 [IST]
Other articles published on Aug 18, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X