ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

NZ vs WI: ನ್ಯೂಜಿಲೆಂಡ್ ವಿರುದ್ಧ ಅಂತಿಮ ಟಿ20 ಪಂದ್ಯ ಗೆದ್ದ ವೆಸ್ಟ್ ಇಂಡೀಸ್, ಕಿವೀಸ್‌ಗೆ ಸರಣಿ ಜಯ

West indies

ಜಮೈಕಾದ ಸಬೀನಾ ಪಾರ್ಕ್‌ನಲ್ಲಿ ನಡೆದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ಆತಿಥೇಯ ವೆಸ್ಟ್ ಇಂಡೀಸ್ ತಂಡವು 8 ವಿಕೆಟ್‌ಗಳ ಭರ್ಜರಿ ಗೆಲುವು ದಾಖಲಿಸಿದೆ. ಆದ್ರೆ ಅದಾಗಲೇ ಮೊದಲೆರಡು ಟಿ20 ಪಂದ್ಯ ಗೆದ್ದಿದ್ದ ನ್ಯೂಜಿಲೆಂಡ್‌ ಟಿ20 ಸರಣಿಯನ್ನ ತನ್ನದಾಗಿಸಿಕೊಂಡಿದೆ.

ನ್ಯೂಜಿಲೆಂಡ್ ನೀಡಿದ್ದ 146 ರನ್‌ಗಳ ಗುರಿ ಬೆನ್ನತ್ತಿದ ರೋವ್ಮನ್ ಪೋವೆಲ್ ನಾಯಕತ್ವದ ವಿಂಡೀಸ್ ತಂಡವು ಉತ್ತಮ ಆರಂಭ ಪಡೆಯುವಲ್ಲಿ ಯಶಸ್ವಿಯಾಯಿತು. ಮೊದಲ ವಿಕೆಟ್‌ಗೆ ಶತಕದ ಜೊತೆಯಾಟವಾಡಿದ ಬ್ರಾಂಡನ್ ಕಿಂಗ್ ಮತ್ತು ಶಮರ್ ಬ್ರೂಕ್ಸ್‌ ಜೋಡಿ 102ರನ್‌ಗಳ ಜೊತೆಯಾಟವಾಡಿತು.

ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ

ಮೊದಲ ವಿಕೆಟ್‌ಗೆ ಶತಕದ ಜೊತೆಯಾಟ

ಮೊದಲ ವಿಕೆಟ್ ಪಡೆಯಲು ಹರಸಾಹಸ ಪಟ್ಟ ನ್ಯೂಜಿಲೆಂಡ್ ಪರ ಟಿಮ್ ಸೌಥಿ ಮೊದಲ ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದ್ರು. 35 ಎಸೆತಗಳಲ್ಲಿ 53ರನ್ ಕಲೆಹಾಕಿದ ಬ್ರಾಂಡನ್ ಕಿಂಗ್‌ ಸೌಥಿ ಬೌಲಿಂಗ್‌ನಲ್ಲಿ ಗಪ್ಟಿಲ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿಕೊಂಡರು. ಇವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್‌ ಒಳಗೊಂಡಿದ್ದವು.

ಬ್ರಾಂಡನ್ ಉತ್ತಮ ಇನ್ನಿಂಗ್ಸ್‌ ಬಳಿಕ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದಿದ್ದ ವಿಕೆಟ್ ಕೀಪರ್ ಡೆವೊನ್ ಥಾಮಸ್ 5 ಎಸೆತಗಳಲ್ಲಿ 5 ರನ್ ಕಲೆಹಾಕಿ ಇಶ್ ಸೋಧಿಗೆ ವಿಕೆಟ್ ಒಪ್ಪಿಸುವ ಮೂಲಕ ನಿರಾಸೆ ಮೂಡಿಸಿದರು. ಆದ್ರೆ ಅಜೇಯ ಅರ್ಧಶತಕ ಸಿಡಿಸಿದ್ದ ಶಮರ್ ಬ್ರೂಕ್ಸ್‌ ಹಾಗೂ ನಾಯಕ ರೋವ್ಮನ್ ಪೊವೆಲ್ ತಂಡವನ್ನ ಗೆಲುವಿನ ದಡ ತಲುಪಿಸುವಲ್ಲಿ ಯಶಸ್ವಿಯಾದ್ರು.

ಶಮರ್ ಬ್ರೂಕ್ಸ್‌ 59 ಎಸೆತಗಳಲ್ಲಿ 3 ಬೌಂಡರಿ ಮತ್ತು 2 ಸಿಕ್ಸರ್ ಸಹಿತ 56 ರನ್ ಕಲೆಹಾಕಿದ್ರೆ, ರೋವ್ಮನ್ ಪೊವೆಲ್ 15 ಎಸೆತಗಳಲ್ಲಿ 2 ಬೌಂಡರಿ ಮತ್ತು 2 ಸಿಕ್ಸರ್ ಸಹಿತ ಅಜೇಯ 27 ರನ್ ಕಲೆಹಾಕಿ ತಂಡಕ್ಕೆ ಗೆಲುವು ತಂದುಕೊಟ್ಟರು. ವೆಸ್ಟ್ ಇಂಡೀಸ್ ಇನ್ನೊಂದು ಓವರ್ ಬಾಕಿ ಇರುವಂತೆಯೇ 2 ವಿಕೆಟ್ ನಷ್ಟಕ್ಕೆ 150ರನ್ ಕಲೆಹಾಕಿ ಅಂತಿಮ ಪಂದ್ಯದಲ್ಲಿ ಜಯ ಸಾಧಿಸಿ ವೈಟ್ ವಾಶ್ ಮುಖಭಂಗ ತಪ್ಪಿಸಿಕೊಂಡಿತು.

ಪ್ರಪಂಚದಾದ್ಯಂತ ಕಾಡಿನಲ್ಲಿ 4,000 ಹುಲಿಗಳಿರಬಹುದು, ಆದ್ರೆ ಕೇವಲ ಒಬ್ಬ ರಾಹುಲ್ ದ್ರಾವಿಡ್: ರಾಸ್ ಟೇಲರ್

ಬ್ಯಾಟಿಂಗ್ ಆಯ್ದುಕೊಂಡು ಎಡವಿದ ಕೇನ್ ವಿಲಿಯಮ್ಸನ್ ಪಡೆ

ಬ್ಯಾಟಿಂಗ್ ಆಯ್ದುಕೊಂಡು ಎಡವಿದ ಕೇನ್ ವಿಲಿಯಮ್ಸನ್ ಪಡೆ

ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೇನ್ ವಿಲಿಯಮ್ಸನ್ ನಾಯಕತ್ವದ ನ್ಯೂಜಿಲೆಂಡ್ ಉತ್ತಮ ಆರಂಭ ಪಡೆಯುವಲ್ಲಿ ವಿಫಲಗೊಂಡಿತು. ಓಪನರ್‌ಗಳಾದ ಮಾರ್ಟಿನ್ ಗಪ್ಟಿಲ್ 15 ರನ್‌ಗಳಿಸಿ ಅಕೇಲ್ ಹುಸೇನ್‌ಗೆ ವಿಕೆಟ್ ಒಪ್ಪಿಸಿದ್ರೆ, ಮೂರನೇ ಕ್ರಮಾಂಕದಲ್ಲಿ ಬಡ್ತಿ ಪಡೆದಿದ್ದ ಮಿಚೆಲ್ ಸ್ಯಾಂಟ್ನರ್ 11 ಎಸೆತಗಳಲ್ಲಿ 13 ರನ್‌ಗೆ ಔಟಾದ್ರು.

ಇದ್ರ ಬೆನ್ನಲ್ಲೇ ಉತ್ತಮವಾಗಿ ಆಡ್ತಿದ್ದ ವಿಕೆಟ್ ಕೀಪರ್ ಬ್ಯಾಟರ್ ಡಿವೊನ್ ಕಾನ್ವೆ 17 ಎಸೆತಗಳಲ್ಲಿ 21ರನ್ ಗಳಿಸಿ ವಿಕೆಟ್ ಒಪ್ಪಿಸಿ ಪೆವಿಲಿಯನ್ ಸೇರಿಕೊಂಡರು. ನಾಯಕ ಕೇನ್ ವಿಲಿಯಮ್ಸನ್ ಆಟವು 24ರನ್‌ಗೆ ಕೊನೆಗೊಂಡಿತು. ಡೊಮಿನಿಕ್ ಡ್ರೆಕ್ಸ್ ಬೌಲಿಂಗ್‌ನಲ್ಲಿ ಕಿವೀಸ್ ನಾಯಕ ಅಕೇಲ್ ಹುಸೇನ್‌ಗೆ ಕ್ಯಾಚಿತ್ತರು.

ಆದ್ರೆ ನ್ಯೂಜಿಲೆಂಡ್ ಪರ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಗ್ಲೆನ್ ಫಿಲಿಪ್ಸ್‌ 26 ಎಸೆತಗಳಲ್ಲಿ 157.69ರ ಸ್ಟ್ರೈಕ್‌ರೇಟ್‌ನಲ್ಲಿ 41ರನ್ ಸಿಡಿಸಿದ್ರು. ಇವರ ಇನ್ನಿಂಗ್ಸ್‌ನಲ್ಲಿ 4 ಬೌಂಡರಿ ಮತ್ತು 2 ಸಿಕ್ಸರ್ ಒಳಗೊಂಡಿತ್ತು. ಡೆರಿಲ್ ಮಿಚೆಲ್ 14ರನ್‌ಗಳ ಕೊಡುಗೆ ನೀಡಿದ್ರೆ, ಕೆಳಕ್ರಮಾಂಕದ ಬ್ಯಾಟರ್ ಬಹುಬೇಗನೆ ವಿಕೆಟ್ ಒಪ್ಪಿಸಿದ್ರು. ಅಂತಿಮವಾಗಿ ನ್ಯೂಜಿಲೆಂಡ್ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 145ರನ್‌ಗಳಿಸಲಷ್ಟೇ ಶಕ್ತವಾಯಿತು.

ಚೇತೇಶ್ವರ್ ಪೂಜಾರ ಸತತ 2ನೇ ಏಕದಿನ ಕ್ರಿಕೆಟ್ ಶತಕ: 131 ಎಸೆತಗಳಲ್ಲಿ 171 ರನ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ಉಭಯ ತಂಡಗಳ ಪ್ಲೇಯಿಂಗ್ ಇಲೆವೆನ್

ವೆಸ್ಟ್ ಇಂಡೀಸ್ ಪ್ಲೇಯಿಂಗ್ 11:
ಬ್ರಾಂಡನ್ ಕಿಂಗ್, ಶಮರ್ ಬ್ರೂಕ್ಸ್, ರೋವ್‌ಮನ್ ಪೊವೆಲ್ (ನಾಯಕ), ಡೆವೊನ್ ಥಾಮಸ್ (ವಿಕೆಟ್ ಕೀಪರ್), ಶಿಮ್ರಾನ್ ಹೆಟ್ಮೆಯರ್, ರೊಮಾರಿಯೊ ಶೆಫರ್ಡ್, ಡೊಮಿನಿಕ್ ಡ್ರೇಕ್ಸ್, ಅಕೆಲ್ ಹೊಸೈನ್, ಓಡಿಯನ್ ಸ್ಮಿತ್, ಹೇಡನ್ ವಾಲ್ಷ್, ಅಲ್ಜಾರಿ ಜೋಸೆಫ್

ಬೆಂಚ್: ಕೈಲ್ ಮೇಯರ್ಸ್, ನಿಕೋಲಸ್ ಪೂರನ್, ಜೇಸನ್ ಹೋಲ್ಡರ್, ಒಬೆಡ್ ಮೆಕಾಯ್, ಕೀಮೋ ಪಾಲ್

ನ್ಯೂಜಿಲೆಂಡ್ ಪ್ಲೇಯಿಂಗ್ 11:
ಮಾರ್ಟಿನ್ ಗಪ್ಟಿಲ್, ಡೆವೊನ್ ಕಾನ್ವೇ (ವಿಕೆಟ್ ಕೀಪರ್), ಕೇನ್ ವಿಲಿಯಮ್ಸನ್ (ನಾಯಕ), ಗ್ಲೆನ್ ಫಿಲಿಪ್ಸ್, ಡೇರಿಲ್ ಮಿಚೆಲ್, ಜೇಮ್ಸ್ ನೀಶಮ್, ಮೈಕೆಲ್ ಬ್ರೇಸ್‌ವೆಲ್, ಮಿಚೆಲ್ ಸ್ಯಾಂಟ್ನರ್, ಇಶ್ ಸೋಧಿ, ಟಿಮ್ ಸೌಥಿ, ಲ್ಯುಕಿ ಫರ್ಗುಸನ್

ಬೆಂಚ್: ಟಾಮ್ ಲ್ಯಾಥಮ್, ಫಿನ್ ಅಲೆನ್, ಟ್ರೆಂಟ್ ಬೌಲ್ಟ್

Story first published: Monday, August 15, 2022, 8:06 [IST]
Other articles published on Aug 15, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X