ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಫೀಲ್ಡಿಂಗ್‌ಗೆ ಅಡ್ಡಿ: ವಿಚಿತ್ರ ರೀತಿಯಲ್ಲಿ ಔಟಾದ ಆಟಗಾರರು ಯಾರೆಲ್ಲಾ ಗೊತ್ತಾ!

Obstructing the field: complete List of cricketers who have been dismissed in this unconventional manner

ಶ್ರೀಲಂಕಾ ಹಾಗೂ ವೆಸ್ಟ್ ಇಂಡೀಸ್ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯ ವಿಚಿತ್ರ ಕಾರಣಕ್ಕೆ ಸುದ್ದಿಯಾಯಿತು. ಶ್ರೀಲಂಕಾದ ಆರಂಭಿಕ ಆಟಗಾರ ಧನುಷ್ಕಾ ಗುಣತಿಲಕ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದರು ಎಂಬ ಕಾರಣಕ್ಕೆ ವಿಕೆಟ್ ಒಪ್ಪಿಸಿ ಫೆವಿಲಿಯನ್ ಸೇರಿದರು. ಈ ತೀರ್ಪು ಸಾಕಷ್ಟು ವಿವಾದಕ್ಕೂ ಕಾರಣವಾಯಿತು.

ಆಂಟಿಗುವಾದ ಸೈಂಟ್ ಜಾನ್ಸ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದ ಶ್ರೀಲಂಕಾ ಬ್ಯಾಟಿಂಗ್ ಇನ್ನಿಂಗ್ಸ್‌ನ 22ನೇ ಓವರ್‌ನಲ್ಲಿ ಈ ಘಟನೆ ನಡೆದಿದೆ. ವೆಸ್ಟ್ ಇಂಡೀಸ್ ನಾಯಕ ಕಿರಾನ್ ಪೊಲಾರ್ಡ್ ಎಸೆದ ಎಸೆತವನ್ನು ಎದುರಿಸಿದರು. ಈ ಸಂದರ್ಭದಲ್ಲಿ ಬ್ಯಾಟ್‌ಗೆ ತಗುಲಿದ ಚೆಂಡು ಬ್ಯಾಟ್ಸ್‌ಮನ್ ಗುಣತಿಲಕ ಅವರ ಕಾಲಿಗಿಂತ ಸ್ವಲ್ಪವೇ ಅಂತರದಲ್ಲಿ ಬಿದ್ದಿತ್ತು. ಗುಣತಿಲಕ ಒಂದೆರಡು ಹೆಜ್ಜೆ ಮುಂದಿಟ್ಟದರೂ ಓಡುವ ಮನಸ್ಸು ಮಾಡದೆ ಹಿಂದಕ್ಕೆ ಸರಿದಿದ್ದರು. ಆಗ ನಾನ್‌ಸ್ಟ್ರೈಕ್‌ನಲ್ಲಿದ್ದ ಆಟಗಾರ ಅದಾಗಲೇ ರನ್‌ಗಾಗಿ ಅರ್ಧ ಕ್ರೀಸ್ ದಾಟಿಬಿಟ್ಟಿದ್ದರು.

ಈ ಸಂದರ್ಭದಲ್ಲಿ ಕಿರಾನ್ ಪೋಲಾರ್ಡ್ ಸಹಿತ ಫೀಲ್ಡರ್‌ಗಳು ರನೌಟ್ ಮಾಡಲು ಚೆಂಡಿನತ್ತ ಬರುತ್ತಿದ್ದಾಗ ಹಿಂದಕ್ಕೆ ಸರಿಯುತ್ತಿದ್ದ ಗುಣತಿಲಕ ಅವರ ಕಾಲಿಗೆ ಚೆಂಡು ತಗುಲಿತ್ತು. ಹೀಗಾಗಿ ಎದುರಾಳಿ ನಾಯಕ ಕಿರಾನ್ ಪೊಲಾರ್ಡ್ ಅಸಮಾಧಾನವನ್ನು ವ್ಯಕ್ತಪಡಿಸಿ ಅಂಪೈರ್‌ಗೆ ಮನವಿಯನ್ನು ಸಲ್ಲಿಸಿದ್ದರು. ಇದನ್ನು ಉದ್ದೇಶಪೂರ್ವಕ ಎಂದು ಗುರುತಿಸಿದ ಥರ್ಡ್ ಅಂಪೈರ್ ಗುಣತಿಲಕ ಔಟ್ ಎಂದು ತೀರ್ಪು ನೀಡಿದ್ದರು.

ಇಂಗ್ಲೆಂಡ್ ವಿರುದ್ಧ ಈ ಅಂತರದಲ್ಲಿ ಸರಣಿ ಗೆದ್ದರೆ ಭಾರತ ವಿಶ್ವ ನಂ.1 ಟಿ20 ತಂಡವಾಗಲಿದೆ!ಇಂಗ್ಲೆಂಡ್ ವಿರುದ್ಧ ಈ ಅಂತರದಲ್ಲಿ ಸರಣಿ ಗೆದ್ದರೆ ಭಾರತ ವಿಶ್ವ ನಂ.1 ಟಿ20 ತಂಡವಾಗಲಿದೆ!

ಇನ್ನು ಕ್ರಿಕೆಟ್ ಇತಿಹಾಸದಲ್ಲಿ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ ಕಾರಣಕ್ಕೆ ಔಟಾದ ಹಲವಾರು ಘಟನೆಗಳು ಇವೆ. ಅವುಗಳನ್ನು ನೋಡೋಣ

ಟೆಸ್ಟ್ ಕ್ರಿಕೆಟ್

ಟೆಸ್ಟ್ ಕ್ರಿಕೆಟ್

ಟೆಸ್ಟ್ ಕ್ರಿಕೆಟ್‌ನ ಇತಿಹಾಸದಲ್ಲಿ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ ಕಾರಣಕ್ಕೆ ಔಟಾದ ಕೇವಲ ಒಂದು ಘಟನೆ ಮಾತ್ರ ದಾಖಲಾಗಿದೆ. ಇಂಗ್ಲೆಂಡ್‌ನ ಮಾಜಿ ನಾಯಕ ಹಾಗೂ ಶ್ರೇಷ್ಠ ಬ್ಯಾಟ್ಸ್‌ಮನ್ ಲೆನ್ ಹಟ್ಟನ್ ಈ ರೀತಿ ಟೆಸ್ಟ್ ಕ್ರಿಕೆಟ್‌ನಲ್ಲಿ ಔಟಾದ ಏಕೈಕ ಆಟಗಾರನಾಗಿದ್ದಾರೆ. 1951ರಲ್ಲಿ ಓವಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್ ಸರಣಿಯ ಐದನೇ ಪಂದ್ಯದಲ್ಲಿ ಹಟ್ಟನ್ ಈ ರೀತಿ ವಿಕೆಟ್ ಒಪ್ಪಿಸಿದ್ದಾರೆ.

ಏಕದಿನ ಕ್ರಿಕೆಟ್

ಏಕದಿನ ಕ್ರಿಕೆಟ್

ಶ್ರೀಲಂಕಾದ ಬ್ಯಾಟ್ಸ್‌ಮನ್ ಧನುಷ್ಕ ಗುಣತಿಲಕ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ ಕಾರಣಕ್ಕೆ ಏಕದಿನ ಮಾದರಿಯ ಕ್ರಿಕೆಟ್‌ನಲ್ಲಿ ವಿಕೆಟ್ ಒಪ್ಪಿಸಿದ 8ನೇ ಆಟಗಾರನಾಗಿದ್ದಾರೆ. ಈ ಪಂದ್ಯ ವೆಸ್ಟ್ ಇಂಡೀಸ್ ವಿರುದ್ಧ ಆಂಟಿಗುವಾದ ಸೈಂಟ್ ಜೋನ್ಸ್ ಮೈದಾನದಲ್ಲಿ ಮಾರ್ಚ್ 10, 2021ರಲ್ಲಿ ನಡೆದಿತ್ತು.


ಏಕದಿನ ಮಾದರಿಯಲ್ಲಿ ಹೀಗೆ ಔಟಾದ ಆಟಗಾರರ ಪಟ್ಟಿ:

*ರಮೀಜ್ ರಾಜಾ (ಪಾಕಿಸ್ತಾನ) vs ಇಂಗ್ಲೆಂಡ್, ಕರಾಚಿ, 1987
ಮೊಹಿಂದರ್ ಅಮರನಾಥ್ (ಭಾರತ) vs ಶ್ರೀಲಂಕಾ, ಅಹ್ಮದಾಬಾದ್, 1989
*ಇಂಜಮಾಮ್-ಉಲ್-ಹಕ್ (ಪಾಕಿಸ್ತಾನ) vs ಭಾರತ, ಪೇಶಾವರ್, 2006
ಮೊಹಮ್ಮದ್ ಹಫೀಜ್ (ಪಾಕಿಸ್ತಾನ) vs ದಕ್ಷಿಣ ಆಫ್ರಿಕಾ, ಡರ್ಬನ್, 2013
*ಅನ್ವರ್ ಅಲಿ (ಪಾಕಿಸ್ತಾನ) vs ದಕ್ಷಿಣ ಆಫ್ರಿಕಾ, ಪೋರ್ಟ್ ಎಲಿಜಬೆತ್, 2013
*ಬೆನ್ ಸ್ಟೋಕ್ಸ್ (ಇಂಗ್ಲೆಂಡ್) vs ಆಸ್ಟ್ರೇಲಿಯಾ, ಲಾರ್ಡ್ಸ್, 2015
ಕ್ಸೇವಿಯರ್ ಮಾರ್ಷಲ್ (ಯುಎಸ್ಎ) vs ಯುಎಇ, ಶಾರ್ಜಾ, 2019.

ಅಂತಾರಾಷ್ಟ್ರೀಯ ಟಿ20 ಮಾದರಿ

ಅಂತಾರಾಷ್ಟ್ರೀಯ ಟಿ20 ಮಾದರಿ

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ಮಾದರಿಯಲ್ಲಿ ಕೇವಲ ಇಬ್ಬರು ಆಟಗಾರರು ಮಾತ್ರವೇ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದ ಕಾರಣಕ್ಕೆ ವಿಕೆಟ್ ಒಪ್ಪಿಸಿದ್ದಾರೆ. 2017ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ಇಂಗ್ಲೆಂಡ್‌ನ ಜೇಸನ್ ರಾಯ್ ಮೊದಲ ಬಾರಿಗೆ ಚುಟುಕು ಕ್ರಿಕೆಟ್‌ನಲ್ಲಿ ಫೀಲ್ಡಿಂಗ್‌ಗೆ ಅಡ್ಡಿಪಡಿಸಿ ವಿಕೆಟ್ ಒಪ್ಪಿಸಿದ್ದಾರೆ. ಮಾಲ್ಡೀವ್ಸ್ ಹಾಗೂ ಕತಾರ್ ವಿರುದ್ಧದ ಪಂದ್ಯದಲ್ಲಿ ಮಾಲ್ಡೀವ್ಸ್‌ನ ಹಸ್ಸನ್ ರಶೀದ್ ಕೂಡ ಇದೇ ಕಾರಣಕ್ಕೆ ವಿಕೆಟ್ ಒಪ್ಪಿಸಿಹೊರನಡೆದಿದ್ದಾರೆ.

ಇಂಡಿಯನ್ ್ಪ್ರೀಮಿಯರ್ ಲೀಗ್

ಇಂಡಿಯನ್ ್ಪ್ರೀಮಿಯರ್ ಲೀಗ್

ಐಪಿಎಲ್‌ನ ಕಳೆದ 13 ಆವೃತ್ತಿಗಳಲ್ಲಿ ಎರಡು ಬಾರಿ ಬ್ಯಾಟ್ಸ್‌ಮನ್‌ಗಳು ಫಿಲ್ಡಿಂಗ್‌ಗೆ ಅಡ್ಡಿಪಡಿಸಿದರು ಎಂಬ ಕಾರಣಕ್ಕೆ ಫೆವಿಲಿಯನ್ ಸೇರಿದ ಘಟನೆಗಳು ನಡೆದಿದೆ. 2013ರಲ್ಲಿ ಯುಸುಫ್ ಪಠಾಣ್ ಇದೇ ರೀತಿ ವಿಕೆಟ್ ಒಪ್ಪಿಸಿದ್ದರು. ಕೊಲ್ಕತ್ತಾ ನೈಟ್ ರೈಡರ್ಸ್ ಪರವಾಗಿ ಪುಣೆ ವಿರುದ್ಧದ ಪಂದ್ಯದಲ್ಲಿ ಯೂಸುಫ್ ಹೀಗೆ ಔಟಾಗಿದ್ದರು. 2019 ಐಪಿಎಲ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಪರವಾಗಿ ಕಣಕ್ಕಿಳಿದಿದ್ದ ಅಮಿತ್ ಮಿಶ್ರಾ ಕೂಡ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ಈ ರೀತಿ ಔಟ್ ಆಗಿ ವಿಕೆಟ್ ಒಪ್ಪಿಸಿದ್ದರು.

ಪ್ರಥಮದರ್ಜೆ ಕ್ರಿಕೆಟ್

ಪ್ರಥಮದರ್ಜೆ ಕ್ರಿಕೆಟ್

ಸೌರಾಷ್ಟ್ರದ ಶೆಲ್ಡನ್ ಜಾಕ್ಸನ್ 2017ರಲ್ಲಿ ಫೀಲ್ಡಿಂಗ್‌ಗೆ ಅಡ್ಡಿಪಡಿಸಿದರು ಎಂಬ ಕಾರಣಕ್ಕೆ ಛತ್ತೀಸ್‌ಘಡ್ ವಿರುದ್ಧದ ವಿಜಯ್ ಹಜಾರೆ ಟ್ರೋಫಿಯ ಪಂದ್ಯದಲ್ಲಿ ವಿಕೆಟ್ ಒಪ್ಪಿಸಿದ್ದರು. ಸರ್ರೆ ತಂಡದ ಮಾರ್ಕ್ ರಾಮ್‌ಪ್ರಕಾಶ್ 2011ರಲ್ಲಿ ಗ್ಲೌಸೆಸ್ಟರ್‌ಶೈರ್ ವಿರುದ್ಧದ ಪಂದ್ಯದಲ್ಲೂ ಹೀಗೆಯೇ ಫೆವಿಲಿಯನ್ ಸೇರಿದ್ದರು. 2018ರಲ್ಲಿ ಬ್ರಿಸ್ಬೇನ್ ಹೀಟ್ ತಂಡದ ಅಲೆಕ್ಸ್ ರೋಸ್, 2017ರಲ್ಲಿ ಜಿಂಬಾಬ್ವೆಯ ಲೊಗಾನ್ ಕಪ್‌ನಲ್ಲಿ ರಿಯಾನ್ ಬರ್ಲ್ ಕೂಡ ಪ್ರಥಮದರ್ಜೆ ಕ್ರಿಕೆಟ್‌ನಲ್ಲಿ ವಿಚಿತ್ರ ಕಾರಣಕ್ಕೆ ಔಟ್‌ಆದ ಆಟಗಾರರಾಗಿದ್ದಾರೆ.

Story first published: Friday, March 12, 2021, 15:49 [IST]
Other articles published on Mar 12, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X