ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಅ. 23 ನನಗೆ ಯಾವಾಗಲೂ ವಿಶೇಷ: ಟಿ20 ವಿಶ್ವಕಪ್‌ನಲ್ಲಿ ಪಾಕ್ ವಿರುದ್ಧದ ಪಂದ್ಯ ನೆನಪಿಸಿಕೊಂಡ ಕೊಹ್ಲಿ

October 23rd 2022 Will Always Be Special To Me: Virat Kohli Remembers The Match Against Pakistan

2022ರ ಟಿ20 ವಿಶ್ವಕಪ್‌ನಲ್ಲಿ ಭಾರತ ತಂಡ ಪ್ರಶಸ್ತಿ ಗೆಲ್ಲಲಿದೆ ಎಂದು ಎಲ್ಲರ ನಿರೀಕ್ಷೆಯಾಗಿತ್ತು. ಆದರೆ ಇಂಗ್ಲೆಂಡ್ ವಿರುದ್ಧ ಸೆಮಿಫೈನಲ್‌ನಲ್ಲಿ ಸೋತ ನಂತರ ಭಾರತ ತಂಡ ಟೂರ್ನಿಯಿಂದ ಹೊರಬಿತ್ತು.

ಏಕಪಕ್ಷೀಯವಾಗಿ ನಡೆದ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಭಾರತದ ಮೇಲೆ ಸವಾರಿ ಮಾಡಿತು. ಜೋಸ್ ಬಟ್ಲರ್ ನಾಯಕತ್ವದ ಇಂಗ್ಲೆಂಡ್ ತಂಡವು ಅಂತಿಮವಾಗಿ ಎರಡನೇ ಬಾರಿಗೆ ಟ್ರೋಫಿಯನ್ನು ಎತ್ತಿ ಹಿಡಿಯಿತು. ಆದರೆ ಇಡೀ ಪಂದ್ಯಾವಳಿಯಲ್ಲಿ ಭಾರತದ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ವೀರಾವೇಶದ ಬ್ಯಾಟಿಂಗ್ ಪ್ರದರ್ಶನ ನೀಡಿದರು ಮತ್ತು ಅತ್ಯುತ್ತಮವಾಗಿ ಫಾರ್ಮ್‌ಗೆ ಹಿಂದಿರುಗಿದರು.

ಏಷ್ಯಾಕಪ್‌ಗೆ ಭಾರತ ತಂಡ ಬರದಿದ್ದರೆ, 2023ರ ವಿಶ್ವಕಪ್‌ನಲ್ಲಿ ಪಾಕ್ ಭಾಗವಹಿಸಲ್ಲ; ಪಿಸಿಬಿ ಮುಖ್ಯಸ್ಥಏಷ್ಯಾಕಪ್‌ಗೆ ಭಾರತ ತಂಡ ಬರದಿದ್ದರೆ, 2023ರ ವಿಶ್ವಕಪ್‌ನಲ್ಲಿ ಪಾಕ್ ಭಾಗವಹಿಸಲ್ಲ; ಪಿಸಿಬಿ ಮುಖ್ಯಸ್ಥ

ಪಾಕಿಸ್ತಾನದ ವಿರುದ್ಧ ಬಲಗೈ ಬ್ಯಾಟ್ಸ್‌ಮನ್‌ನ ಅಜೇಯ 82 ರನ್‌ ಇತಿಹಾಸದಲ್ಲಿ ನೆನಪಿನಲ್ಲುಳಿಯುವಂತಹದ್ದು. ಆ ಇನ್ನಿಂಗ್ಸ್‌ನಲ್ಲಿ ಮೆಲ್ಬೋರ್ನ್ ಕ್ರಿಕೆಟ್ ಗ್ರೌಂಡ್‌ನಲ್ಲಿ ಅಂತಿಮ ಓವರ್‌ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ವಿರುದ್ಧ ಭಾರತಕ್ಕೆ ಅಸಂಭವವಾದ ಗೆಲುವಿಗೆ ಮಾರ್ಗದರ್ಶನ ನೀಡಿದರು.

ಅಕ್ಟೋಬರ್ 23 ನನ್ನ ಹೃದಯದಲ್ಲಿ ಯಾವಾಗಲೂ ವಿಶೇಷ

ವಿರಾಟ್ ಕೊಹ್ಲಿ ಪಾಕಿಸ್ತಾನದ ವಿರುದ್ಧದ ಪಂದ್ಯದ ಚಿತ್ರವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ ಮತ್ತು ಅವರು ಪೋಸ್ಟ್‌ಗೆ ಶೀರ್ಷಿಕೆ ನೀಡಿದ್ದಾರೆ. "ಅಕ್ಟೋಬರ್ 23, 2022 ನನ್ನ ಹೃದಯದಲ್ಲಿ ಯಾವಾಗಲೂ ವಿಶೇಷವಾಗಿರುತ್ತದೆ. ಈ ಹಿಂದೆ ಕ್ರಿಕೆಟ್ ಆಟದಲ್ಲಿ ಅಂತಹ ಶಕ್ತಿಯನ್ನು ಎಂದಿಗೂ ಅನುಭವಿಸಲಿಲ್ಲ. ಅದು ಎಷ್ಟು ಆಶೀರ್ವಾದದ ಸಂಜೆಯಾಗಿದೆ". ಎಂದು ಬರೆದುಕೊಂಡಿದ್ದಾರೆ.

160 ರನ್ ಬೆನ್ನಟ್ಟಿದ ಸಂದರ್ಭದಲ್ಲಿ 7ನೇ ಓವರ್‌ಗಳಾಗಿದ್ದಾಗ 31 ರನ್‌ಗೆ 4 ವಿಕೆಟ್ ಕಳೆದುಕೊಂಡು ಭಾರತ ಸಂಕಷ್ಟದಲ್ಲಿತ್ತು. ನಂತರ ಟೀಮ್ ಇಂಡಿಯಾ ಪಂದ್ಯದಲ್ಲಿ ಸೋಲುವ ಹಂತಕ್ಕೆ ತಲುಪಿತ್ತು. ಆದರೆ ಈ ಆಸಂದರ್ಭದಲ್ಲಿ ವಿರಾಟ್ ಕೊಹ್ಲಿ ಮತ್ತು ಹಾರ್ದಿಕ್ ಪಾಂಡ್ಯ ನಡುವಿನ ಸ್ಥಿರ ಜೊತೆಯಾಟವು ಭಾರತವನ್ನು ಮರಳಿ ಟ್ರ್ಯಾಕ್‌ಗೆ ತಂದಿತು.

98.66ರ ಅದ್ಭುತ ಸರಾಸರಿಯಲ್ಲಿ 296 ರನ್

98.66ರ ಅದ್ಭುತ ಸರಾಸರಿಯಲ್ಲಿ 296 ರನ್

ಅಂತಿಮ ಓವರ್‌ಗಳಲ್ಲಿ ವಿರಾಟ್ ಕೊಹ್ಲಿ ಅವರು ಶಾಹೀನ್ ಶಾ ಆಫ್ರಿದಿ, ಹ್ಯಾರಿಸ್ ರೌಫ್ ಮತ್ತು ನಸೀಮ್ ಶಾ ಅವರ ಬೌಲಿಂಗ್‌ಗೆ ವೇಗದ ರನ್ ಗಳಿಸಿದರು. ಮೊಹಮ್ಮದ್ ನವಾಜ್ ಪಂದ್ಯದ ಅಂತಿಮ ಓವರ್ ಬೌಲ್ ಮಾಡಿದರು. ಆ ವೇಳೆ ಸ್ಪಿನ್ನರ್ ನೋ-ಬಾಲ್ ಮತ್ತು ವೈಡ್ ಬೌಲ್ ಹಾಕಿ ಪಾಕಿಸ್ತಾನದಿಂದ ಪಂದ್ಯವನ್ನು ದೂರ ತೆಗೆದುಕೊಂಡು ಹೋದರು. ವಿರಾಟ್ ಕೊಹ್ಲಿ ಕೊನೆಯವರೆಗು ಬ್ಯಾಟಿಂಗ್ ಮಾಡಿ ಭಾರತಕ್ಕೆ ಗೆಲುವು ತಂದುಕೊಟ್ಟರು.

3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಭಾರತೀಯ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು 98.66ರ ಅದ್ಭುತ ಸರಾಸರಿಯಲ್ಲಿ 296 ರನ್ ಗಳಿಸಿದ ನಂತರ ಪಂದ್ಯಾವಳಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾದರು.

ಆಧುನಿಕ ಯುಗದ ಶ್ರೇಷ್ಠ ವೈಟ್-ಬಾಲ್ ಬ್ಯಾಟರ್

ಆಧುನಿಕ ಯುಗದ ಶ್ರೇಷ್ಠ ವೈಟ್-ಬಾಲ್ ಬ್ಯಾಟರ್

ವಿರಾಟ್ ಕೊಹ್ಲಿ ತಮ್ಮ ವಿಶ್ವಕಪ್ ಅಭಿಯಾನವನ್ನು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನದ ವಿರುದ್ಧ ಔಟಾಗದೆ 82 ರನ್ ಗಳಿಸುವ ಮೂಲಕ ಪ್ರಾರಂಭಿಸಿದರು.

ನಂತರ ಬಾಂಗ್ಲಾದೇಶದ ವಿರುದ್ಧ ಔಟಾಗದೆ 64, ನೆದರ್ಲ್ಯಾಂಡ್ಸ್ ವಿರುದ್ಧ ಔಟಾಗದೆ 62 ಮತ್ತು ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ 50 ರನ್ ಗಳಿಸಿದರು. ಆಧುನಿಕ ಯುಗದ ಶ್ರೇಷ್ಠ ವೈಟ್-ಬಾಲ್ ಬ್ಯಾಟರ್‌ಗಳಲ್ಲಿ ಒಬ್ಬರು ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದರು.

Story first published: Saturday, November 26, 2022, 13:08 [IST]
Other articles published on Nov 26, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X