ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

50ನೇ ವರ್ಷದ ಸಂಭ್ರಮದಲ್ಲಿ ಏಕದಿನ ಕ್ರಿಕೆಟ್: ಮಳೆಯಿಂದಾಗಿ ಜನ್ಮ ತಾಳಿತ್ತು ಜನಪ್ರಿಯ ಮಾದರಿ

ODI cricket 50th anniversary: History behind 1st ever ODI in Kannada

ವಿಶ್ವ ಕ್ರೀಡೆಯಲ್ಲಿ ಕ್ರಿಕೆಟ್‌ ಮರುಹುಟ್ಟು ನೀಡಿದ ಮಾದರಿ ಏಕದಿನ ಕ್ರಿಕೆಟ್. ಕ್ರಿಕೆಟ್ ಅಂದರೆ ಟೆಸ್ಟ್ ಪಂದ್ಯ ಮಾತ್ರವೇ ಇದ್ದ ಕಾಲದಲ್ಲಿ ಸೀಮಿತ ದೇಶಗಳಲ್ಲಿ ಮಾತ್ರ ಈ ಆಟವನ್ನು ಆಡಲಾಗುತ್ತಿತ್ತು. ಆದರೆ ಏಕದಿನ ಮಾದರಿಯ ಹುಟ್ಟು ಕ್ರಿಕೆಟ್‌ಗೆ ಮತ್ತಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತ್ತು. ಈ ಮೂಲಕ ಕ್ರಿಕೆಟ್‌ಗೆ ಹೊಸ ಆಯಾಮವನ್ನು ನೀಡಲು ಕಾರಣವಾಗಿತ್ತು.

ಆದರೆ ಏಕದಿನ ಮಾದರಿಯ ಕ್ರಿಕೆಟ್ ಪರಿಕಲ್ಪನೆಗೆ ಕಾರಣವಾಗಿದ್ದು ಮಳೆ ಎಂಬುದು ಬಹುತೇಕರಿಗೆ ತಿಳಿದಿರಲು ಸಾಧ್ಯವಿಲ್ಲ. ಹೌದು ಮಳೆಯ ಕಾರಣದಿಂದಾಗಿ ಟೆಸ್ಟ್ ಮಾದರಿಯನ್ನು ಚುಟುಕುಗೊಳಿಸಿ ಮೊದಲಬಾರಿಗೆ ಒಂದು ದಿನದಲ್ಲಿ ಆಡಿಸಲಾಗಿತ್ತು. ಇದು ಪ್ರೇಕ್ಷಕರನ್ನು ಸೆಳೆದ ರೀತಿ ಹೊಸ ಮಾದರಿಯನ್ನು ಹುಟ್ಟು ಹಾಕಿತ್ತು.

ಎಂಎಸ್ ಧೋನಿ ಕುರಿತ ಪ್ರಶ್ನೆಗೆ ಮನ ತಾಕುವ ಉತ್ತರ ಕೊಟ್ಟ ಅಖ್ತರ್ಎಂಎಸ್ ಧೋನಿ ಕುರಿತ ಪ್ರಶ್ನೆಗೆ ಮನ ತಾಕುವ ಉತ್ತರ ಕೊಟ್ಟ ಅಖ್ತರ್

1970 ಡಿಸೆಂಬರ್ 31ರಿಂದ ಜನವರಿ 4ರ ವರೆಗೆ ಇಂಗ್ಲೆಂಡ್ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಮೆಲ್ಬರ್ನ್‌ನಲ್ಲಿ ಆ್ಯಷನ್ ಸರಣಿಯ ಮೂರನೇ ಪಂದ್ಯ ಆಯೋಜನೆಯಾಗಿತ್ತು. ಆದರೆ ಭಾರೀ ಮಳೆಯಿಂದಾಗಿ ಆ ಪಂದ್ಯ ನಡೆಯಲು ಸಾಧ್ಯವಾಗಿರಲಿಲ್ಲ. ಆದರೆ ಪ್ರೇಕ್ಷಕರನ್ನು ರಂಜಿಸುವ ಸಲುವಾಗಿ 5ನೇ ತಾರೀಕಿನಂದು 40 ಓವರ್‌ಗಳ ಪಂದ್ಯವನ್ನು ಅಂದಿನ ಆಸ್ಟ್ರೇಲಿಯಾ ಕ್ರಿಕೆಟ್ ಮಂಡಳಿ ಆಯೋಜಿಸಿತ್ತು.

ಮೊದಲ ಬಾರಿಗೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೀಮಿತ ಓವರ್‌ಗಳಲ್ಲಿ ನಡೆದ ಪಂದ್ಯ ಅದಾಗಿತ್ತು. ಈ ಪಂದ್ಯವನ್ನು ವೀಕ್ಷಿಸಲು ಎಂಸಿಜಿಯಲ್ಲಿ 44000 ಸಾವಿದಷ್ಟು ಪ್ರೇಕ್ಷಕರು ಸೇರಿದ್ದರು. ಈ ಪಂದ್ಯವನ್ನು ಅತಿಥೇಯ ಆಸ್ಟ್ರೇಲಿಯಾ 5 ವಿಕೆಟ್‌ಗಳಿಂದ ಗೆದ್ದು ಬೀಗಿತ್ತು.

ಈ ಚೊಚ್ಚಲ ಪಂದ್ಯದ ಆಸ್ಟ್ರೇಲಿಯಾ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತ್ತು. ಇಂಗ್ಲೆಂಡ್ ತಂಡ 39.4 ಓವರ್‌ಗಳಲ್ಲಿ 190 ರನ್ ಗಳಿಸಿತ್ತು. ಈ ಟಾರ್ಗೆಟ್ ಅನ್ನು ಬೆನ್ನಟ್ಟಿದ್ದ ಆಸ್ಟ್ರೇಲಿಯಾ 35 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತ್ತು. ಈ ರೀತಿ ಮೊದಲ ಏಕದಿನ ಪಂದ್ಯಕ್ಕೆ ಅಂದು ಎಂಸಿಜಿ ವೇದಿಕೆಯಾಗಿತ್ತು.

ಉಮೇಶ್ ಯಾದವ್‌ಗೆ ಬದಲಿ ಆಟಗಾರನ ಹೆಸರಿಸಿದ ಓಜಾ, ದೀಪ್‌ದಾಸ್ಉಮೇಶ್ ಯಾದವ್‌ಗೆ ಬದಲಿ ಆಟಗಾರನ ಹೆಸರಿಸಿದ ಓಜಾ, ದೀಪ್‌ದಾಸ್

ಇದಾದ ಬಳಿಕ 1972ರ ಆಗಸ್ಟ್ ತಿಂಗಳಿನಲ್ಲಿ ಇಂಗ್ಲೆಂಡ್ ಎರಡನೇ ಏಕದಿನ ಕ್ರಿಕೆಟ್‌ಅನ್ನು ಆಯೋಜನೆ ಮಾಡಿತ್ತು. ಇದು 55 ಓವರ್‌ಗಳ ಪಂದ್ಯವಾಗಿತ್ತು. 1977ರ ವರೆಗೆ ಏಕದಿನ ಕ್ರಿಕೆಟ್ ಅಂದರೆ ಅದು ತಲಾ 55 ಓವರ್‌ಗಳ ಪಂದ್ಯವಾಗಿತ್ತು. 1977ರಲ್ಲಿ ಮೊದಲ ಬಾರಿಗೆ 50 ಓವರ್‌ಗಳ ಏಕದಿನ ಪಂದ್ಯವನ್ನು ಆಡಿಸಲಾಗಿತ್ತು.

Story first published: Wednesday, January 6, 2021, 13:08 [IST]
Other articles published on Jan 6, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X