ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ದಕ್ಷಿಣ ಆಫ್ರಿಕಾ vs ಇಂಗ್ಲೆಂಡ್: ಸಂಪೂರ್ಣ ಏಕದಿನ ಸರಣಿ ರದ್ದು

ODI series between South Africa vs England canceled

ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಏಕದಿನ ಸರಣಿಯನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗಿದೆ. ಸುದೀರ್ಘ ಸಮಯದ ವಿರಾಮದ ಬಳಿಕ ದಕ್ಷಿಣ ಆಫ್ರಿಕಾ ಕ್ರಕೆಟ್ ಮಂಡಳಿ ಆಯೋಜನೆ ಮಾಡಿರುವ ಈ ಏಕದಿನ ಸರಣಿಗೆ ಕೊರೊನಾ ವೈರಸ್‌ನ ಕರಿನೆರಳು ಬಿದ್ದು ಸರಣಿಯನ್ನು ಬಲಿತೆಗೆದುಕೊಂಡಿದೆ.

ದಕ್ಷಿಣ ಆಫ್ರಿಕಾ ಹಾಗೂ ಇಂಗ್ಲೆಂಡ್ ತಂಡಗಳ ನಡುವೆ ಚುಟುಕು ಕ್ರಿಕೆಟ್ ಸರಣಿ ನಡದ ಬಳಿಕ ಏಕದಿನ ಸರಣಿಗಾಗಿ ಎರಡು ತಂಡಗಳು ಕೂಡ ಸಿದ್ಧವಾಗಿತ್ತು. ಕೊರೊನಾ ವೈರಸ್‌ನ ವಕ್ರದೃಷ್ಟಿ ಈ ಏಕದಿನ ಸರಣಿಯ ಮೇಲೆ ಬಿತ್ತು. ಆಫ್ರಿಕಾ ಕ್ರಿಕೆಟ್‌ ತಂಡದ ಇಬ್ಬರು ಸದಸ್ಯರು ಕೊರೊನಾ ವೈರಸ್‌ಗೆ ತುತ್ತಾಗಿರುವುದು ಬೆಳಕಿಗೆ ಬಂತು. ಮುನ್ನೆಚ್ಚರಿಕಾ ಕ್ರಮವಾಗಿ ಮೊದಲ ಏಲದಿನ ಪಂದ್ಯವನ್ನು ಎರಡು ದಿನಗಳ ಕಾಲ ಮುಂದೂಡುವ ನಿರ್ಧಾರಕ್ಕೆ ಬರಲಾಗಿತ್ತು.

ಭಾರತ vs ಆಸ್ಟ್ರೇಲಿಯಾ: ಆಸಿಸ್ ನೆಲದಲ್ಲಿ ವಿರಾಟ್ ಕೊಹ್ಲಿ ಮುಡಿಗೇರುತ್ತಾ ಮತ್ತೊಂದು ಗರಿಮೆ?ಭಾರತ vs ಆಸ್ಟ್ರೇಲಿಯಾ: ಆಸಿಸ್ ನೆಲದಲ್ಲಿ ವಿರಾಟ್ ಕೊಹ್ಲಿ ಮುಡಿಗೇರುತ್ತಾ ಮತ್ತೊಂದು ಗರಿಮೆ?

ಮುಂದೂಡಿಕೆಯ ನಂತರ ಮೊದಲ ಏಕದಿನ ಸರಣಿ ಭಾನುವಾರ ನಡೆಯಬೇಕಿತ್ತು. ಆದರೆ ಇಂಗ್ಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟಿಗರು ಉಳಿದುಕೊಂಡಿದ್ದ ಹೋಟೆಲ್‌ನ ಇಬ್ಬರು ಸಿಬ್ಬಂದಿಗಳಿಗೆ ಕೊರೊನಾ ವೈರಸ್‌ ಇರುವುದು ಬೆಳಕಿಗೆ ಬಂದಿತ್ತು. ಹೀಗಾಗಿ ಮೊದಲ ಏಕದಿನ ಪಂದ್ಯವನ್ನು ರದ್ದುಗೊಳಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿತ್ತು.

ಇದಾದ ಬಳಿಕ ಇಡೀ ಸರಣಿಯ ಮೇಲೆಯೇ ಕರಿಛಾಯೆ ಆವರಿಸಿತ್ತು. ಈ ಆತಂಕ ಈಗ ನಿಜವಾಗಿದ್ದು ಇಡೀ ಸರಣಿಯನ್ನು ರದ್ದುಗೊಳಿಸಲಾಗಿದೆ. ವೈದ್ಯಕೀಯ ಕಾರಣಗಳನ್ನು ನಿಡಿ ಸರಣಿಯನ್ನು ರದ್ದುಗೊಳಿಸಲು ಎರಡು ದೇಶಗಳ ಕ್ರಿಕೆಟ್ ಮಂಡಳಿಗಳು ತೀರ್ಮಾನಿಸಿದೆ.

ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ಜಿಗಿದು ಕೊಹ್ಲಿಗೆ ಸಮನಾಗಿ ನಿಂತ ವಿಲಿಯಮ್ಸನ್!ಟೆಸ್ಟ್‌ ರ್‍ಯಾಂಕಿಂಗ್‌ನಲ್ಲಿ ಜಿಗಿದು ಕೊಹ್ಲಿಗೆ ಸಮನಾಗಿ ನಿಂತ ವಿಲಿಯಮ್ಸನ್!

ಸಿಎಸ್‌ಎ ಸಿಇಒ ಕುಗಾಂಡ್ರೆ ಗೊವೆಂಡ್ರಿ ಈ ಬಗ್ಗೆ ಪ್ರತಿಕ್ರಿಯಿಸಿದ್ದಾರೆ. "ನಮ್ಮ ಜೊತೆಗೆ ಸಕಾರಾತ್ಮಕ ಬಾಂಧವ್ಯವನ್ನು ಮುಂದುವರಿಸಿರುವಿದಕ್ಕೆ ಧನ್ಯವಾದಗಳು. ಇಂಗ್ಲೆಂಡ್ ಜೊತೆಗೆ ಈ ಸರಣಿಯನ್ನು ಸದ್ಯದಲ್ಲೇ ಏರ್ಪಡಿಸಲು ನಾವು ಎದುರುನೋಡುತ್ತಿದ್ದೇವೆ" ಎಂದು ಅವರು ಹೇಳಿಕೆ ನೀಡಿದ್ದಾರೆ

Story first published: Tuesday, December 8, 2020, 10:18 [IST]
Other articles published on Dec 8, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X