ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಐಸಿಸಿ ದಶಕದ ಏಕದಿನ ಆಟಗಾರ ಪ್ರಶಸ್ತಿಗೆ ಮೂವರು ಭಾರತೀಯರು ಕಣದಲ್ಲಿ

Official Nominees for ICC ODI Player Of The Decade 2010s Awards

ಐಸಿಸಿ ದಶಕದ ಆಟಗಾರ ಪ್ರಶಸ್ತಿಗೆ ಆಟಗಾರರನ್ನು ನಾಮನಿರ್ದೇಶನಗೊಳಿಸಿದೆ. ಪ್ರತಿ ಮಾದರಿಯ ಕ್ರಿಕೆಟ್‌ನಲ್ಲೂ ತಲಾ ಏಳು ಆಟಗಾರರನ್ನು ಐಸಿಸಿ ನಾಮನಿರ್ದೇಶನಗೊಳಿಸಿದೆ. ಏಕದಿನ ಕ್ರಿಕೆಟ್‌ನಲ್ಲೂ ಏಳು ಆಟಗಾರರನ್ನು ಈ ಸ್ಥಾನಕ್ಕೆ ಐಸಿಸಿ ಹೆಸರಿಸಿದ್ದು ಇದರಲ್ಲಿ ಕ್ರಿಕೆಟ್ ಅಭಿಮಾನಿಗಳು ಆಯ್ಕೆ ಮಾಡಬಹುದಾಗಿದೆ.

ಏಕದಿನ ಕ್ರಿಕೆಟ್‌ನಲ್ಲಿ ದಶಕದ ಆಟಗಾರ ಸ್ಥಾನಕ್ಕೆ ಐಸಿಸಿ ಹೆಸರಿಸಿರುವ 7 ಮಂದಿ ಆಟಗಾರರಲ್ಲಿ ಮೂವರು ಭಾರತೀಯ ಆಟಗಾರರು ಎಂಬುದು ವಿಶೇಷತೆಯಾಗಿದೆ. ಭಾರತ ಹೊರತು ಪಡಿಸಿ ಶ್ರೀಲಂಕಾದ ಇಬ್ಬರು ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯಾದ ಓರ್ವ ಆಟಗಾರರು ಈ ಪ್ರಶಸ್ತಿಗೆ ನಾಮಿನೇಟ್ ಆಗಿದ್ದಾರೆ.

ಭಾರತ vs ಆಸ್ಟ್ರೇಲಿಯಾ: ವೇಳಾಪಟ್ಟಿ, ತಂಡಗಳು, ಸಂಪೂರ್ಣ ಮಾಹಿತಿಭಾರತ vs ಆಸ್ಟ್ರೇಲಿಯಾ: ವೇಳಾಪಟ್ಟಿ, ತಂಡಗಳು, ಸಂಪೂರ್ಣ ಮಾಹಿತಿ

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ, ಟೀಮ್ ಇಂಡಿಯಾದ ಉಪನಾಯಕ ರೋಹಿತ್ ಶರ್ಮಾ ಹಾಗೂ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಏಕದಿನ ಕ್ರಿಕೆಟ್‌ನಲ್ಲಿ ದಶಕದ ಆಟಗಾರನ ಪ್ರಶಸ್ತಿಗೆ ಹೆಸರಿಸಲ್ಪಟ್ಟ ಆಟಗಾರರಾಗಿದ್ದಾರೆ. ಉಳಿದಂತೆ ಶ್ರೀಲಂಕಾ ಕ್ರಿಕೆಟ್ ತಂಡದ ವೇಗದ ಬೌಲರ್ ಲಸಿತ್ ಮಲಿಂಗ ಹಾಗೂ ಕುಮಾರ್ ಸಂಗಕ್ಕರ, ಆಸ್ಟ್ರೇಲಿಯಾದ ವೇಗಿ ಮಿಷೆಲ್ ಸ್ಟಾರ್ಕ್ ಹಾಗೂ ದಕ್ಷಿಣ ಆಫ್ರಿಕಾದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್ ಈ ಪ್ರಶಸ್ತಿಗೆ ಹೆಸರಿಸಲ್ಪಟ್ಟಿದ್ದಾರೆ.

ಐಸಿಸಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಮತ ಚಲಾಯಿಸುವ ಮೂಲಕ ತಮ್ಮ ನಮ್ಮ ನೆಚ್ಚಿನ ಆಟಗಾರರಿಗೆ ಅಭಿಮಾನಿಗಳು ಮತ ಚಲಾಯಿಸಬಹುದಾಗಿದೆ. ಏಕದಿನ, ಟೆಸ್ಟ್ ಹಾಗೂ ಟಿ20 ಕ್ರಿಕೆಟ್‌ನಲ್ಲಿ ಪ್ರತ್ಯೇಕವಾಗಿ ಈ ದಶಕದ ಆಟಗಾರನನ್ನು ಮತ ಚಲಾವಣೆ ಮೂಲಕ ಆಯ್ಕೆ ಮಾಡಲಾಗುತ್ತದೆ. ಡಿಸೆಂಬರ್ ತಿಂಗಳ 18ರಂದು ಇದರ ಫಲಿತಾಂಶ ಪ್ರಕಟವಾಗಲಿದೆ.

Story first published: Tuesday, November 24, 2020, 16:23 [IST]
Other articles published on Nov 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X