ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

'ಐಸಿಸಿ 2010ರ ದಶಕದ ಆಟಗಾರ' ನಾಮನಿರ್ದೇಶಿತರಲ್ಲಿ ಒಬ್ಬ ಭಾರತೀಯ

Official Nominees for ICC Test Player Of The Decade 2010s Awards

ಲಂಡನ್: ಇಂಟರ್ ನ್ಯಾಷನಲ್ ಕ್ರಿಕೆಟ್ ಕೌನ್ಸಿಲ್‌ (ಐಸಿಸಿ) 2010ರ ದಶಕದ ಟೆಸ್ಟ್ ಆಟಗಾರ ಪ್ರಶಸ್ತಿಗೆ ನಾಮ ನಿರ್ದೇಶಿತರ ಪಟ್ಟಿ ಪ್ರಕಟಗೊಂಡಿದೆ. ಟೆಸ್ಟ್ ಪ್ರಶಸ್ತಿಗಾಗಿ ಪ್ರಕಟಿಸಲಾದ ನಾಮನಿರ್ದೇಶಿತರ ಪಟ್ಟಿಯಲ್ಲಿ ಭಾರತದ ಒಬ್ಬನೇ ಆಟಗಾರ ಇದ್ದಾರೆ. ನಾಯಕ ವಿರಾಟ್ ಕೊಹ್ಲಿಯ ಹೆಸರು ಪಟ್ಟಿಯಲ್ಲಿ ಕಾಣಿಸಿಕೊಂಡಿದೆ.

ಐಸಿಸಿ ದಶಕದ ಏಕದಿನ ಆಟಗಾರ ಪ್ರಶಸ್ತಿಗೆ ಮೂವರು ಭಾರತೀಯರು ಕಣದಲ್ಲಿಐಸಿಸಿ ದಶಕದ ಏಕದಿನ ಆಟಗಾರ ಪ್ರಶಸ್ತಿಗೆ ಮೂವರು ಭಾರತೀಯರು ಕಣದಲ್ಲಿ

ಐಸಿಸಿ 2010ರ ದಶಕದ ಟೆಸ್ಟ್ ಆಟಗಾರ ಪ್ರಶಸ್ತಿಗೆ ನಾಮ ನಿರ್ದೇಶಿತರ ಪಟ್ಟಿಯಲ್ಲಿ ಕೊಹ್ಲಿಯಲ್ಲದೆ ಇಂಗ್ಲೆಂಡ್‌ನ ಜೋ ರೂಟ್, ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್, ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್, ನ್ಯೂಜಿಲೆಂಡ್‌ನ ಕೇನ್ ವಿಲಿಯಮ್ಸನ್, ಶ್ರೀಲಂಕಾದ ರಂಗನಾ ಹೇರತ್, ಪಾಕಿಸ್ತಾನದ ಯಾಸಿರ್ ಶಾ ಹೆಸರುಗಳಿವೆ.

ಶೀಘ್ರ ಐಸಿಸಿ 2010ರ ದಶಕದ ಟೆಸ್ಟ್ ಆಟಗಾರ ಪ್ರಶಸ್ತಿ ಪುರಸ್ಕೃತರ ಹೆಸರು ಘೋಷಣೆಯಾಗಲಿದೆ. ಟೆಸ್ಟ್, ಏಕದಿನ ಕ್ರಿಕೆಟ್‌ಗೆ ಸಂಬಂಧಿಸಿ ಪ್ರಶಸ್ತಿ ವಿಭಾಗಗಳಿವೆ. ವಿಜೇತರ ಹೆಸರುಗಳನ್ನು ಡಿಸೆಂಬರ್ 18ರಂದು ಪ್ರಕಟಿಸಲಾಗುತ್ತದೆ ಎಂದು ತಿಳಿದು ಬಂದಿದೆ.

ಭಾರತ vs ಆಸ್ಟ್ರೇಲಿಯಾ: ವೇಳಾಪಟ್ಟಿ, ತಂಡಗಳು, ಸಂಪೂರ್ಣ ಮಾಹಿತಿಭಾರತ vs ಆಸ್ಟ್ರೇಲಿಯಾ: ವೇಳಾಪಟ್ಟಿ, ತಂಡಗಳು, ಸಂಪೂರ್ಣ ಮಾಹಿತಿ

32ರ ಹರೆಯದ ವಿರಾಟ್ ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಉತ್ತಮ ಸಾಧನೆ ಹೊಂದಿದ್ದಾರೆ. ಟೆಸ್ಟ್‌ನಲ್ಲಿ ಕೊಹ್ಲಿ ಮಾಜಿ ವಿಶ್ವ ನಂ.1 ಶ್ರೇಯಾಂಕಿತರೂ ಹೌದು. 86 ಟೆಸ್ಟ್ ಪಂದ್ಯಗಳನ್ನಾಡಿದರು ಕೊಹ್ಲಿ 53.63ರ ಸರಾಸರಿಯಂತೆ 7240 ರನ್, 27 ಶತಕ, 7 ದ್ವಿಶತಕ, 22 ಅರ್ಧ ಶತಕಗಳನ್ನು ಬಾರಿಸಿದ್ದಾರೆ.

Story first published: Tuesday, November 24, 2020, 16:22 [IST]
Other articles published on Nov 24, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X