ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಭಾರತದ ಅತೀ ಹಿರಿಯ ಪ್ರಥಮದರ್ಜೆ ಕ್ರಿಕೆಟರ್ ವಸಂತ್ ರಾಯ್ಜಿ ನಿಧನ

oldest first-class cricketer Vasant Raiji passes away at 100

ಮುಂಬೈ, ಜೂನ್ 13: ಭಾರತದ ಅತೀ ಹಿರಿಯ ಪ್ರಥಮದರ್ಜೆ ಕ್ರಿಕೆಟರ್ ವಸಂತ್ ರಾಯ್ಜಿ ನಿಧನರಾಗಿದ್ದಾರೆ. ಭರ್ತಿ 100 ವಯಸ್ಸಾಗಿದ್ದ ರಾಯ್ಜಿ, ತನ್ನ ಪತ್ನಿ ಮತ್ತು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಶನಿವಾರ (ಜೂನ್ 13) ಮುಂಜಾನೆ ರಾಯ್ಜಿ ಕೊನೆಯುಸಿರೆಳೆದಿರುವುದಾಗಿ ಅವರ ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಟಿ20 ವಿಶ್ವಕಪ್‌: ಆಸ್ಟ್ರೇಲಿಯಾ ಸ್ಟೇಡಿಯಂಗಳನಲ್ಲಿ ಸೀಮಿತ ಜನಸಂದಣಿಗೆ ಅವಕಾಶ?!ಟಿ20 ವಿಶ್ವಕಪ್‌: ಆಸ್ಟ್ರೇಲಿಯಾ ಸ್ಟೇಡಿಯಂಗಳನಲ್ಲಿ ಸೀಮಿತ ಜನಸಂದಣಿಗೆ ಅವಕಾಶ?!

'ದಕ್ಷಿಣ ಮುಂಬೈಯಲ್ಲಿರುವ ವಾಲ್ಕೇಶ್ವರ್‌ನಲ್ಲಿನ ತಮ್ಮ ನಿವಾಸದಲ್ಲಿ ಮಲಗಿದ್ದ ವಸಂತ್ ರಾಯ್ಜಿ, ವಯೋ ಸಹಜವಾಗಿ ಶನಿವಾರ ಮುಂಜಾನೆ 2.20 am ವೇಳೆಗೆ ಅಲ್ಲೇ ಸಾವನ್ನಪ್ಪಿದ್ದಾರೆ,' ಎಂದು ರಾಯ್ಜಿಯ ಅಳಿಯ ಸುದರ್ಶನ ನಾನಾವತಿ ಮಾಹಿತಿ ನೀಡಿದ್ದಾರೆ.

ಕ್ರಿಕೆಟ್ ಸೇರಿದಂತೆ ಕ್ರೀಡಾಕೂಟಗಳಿಗೆ ಆಸ್ಟ್ರೇಲಿಯಾದಲ್ಲಿ ಹಸಿರು ನಿಶಾನೆಕ್ರಿಕೆಟ್ ಸೇರಿದಂತೆ ಕ್ರೀಡಾಕೂಟಗಳಿಗೆ ಆಸ್ಟ್ರೇಲಿಯಾದಲ್ಲಿ ಹಸಿರು ನಿಶಾನೆ

ಬಲಗೈ ಬ್ಯಾಟ್ಸ್‌ಮನ್ ಆಗಿದ್ದ ರಾಯ್ಜಿ, 1940ರ ದಶಕದಲ್ಲಿ ಒಟ್ಟು 9 ಪ್ರಥಮರ್ಜೆ ಕ್ರಿಕೆಟ್ ಪಂದ್ಯಗಳನ್ನು ಆಡಿದ್ದರು. 277 ಒಟ್ಟಾರೆ ರನ್ ಗಳಿಸಿದ್ದ ರಾಯ್ಜಿಯದ್ದು 68 ವೈಯಕ್ತಿಯ ಅತ್ಯಧಿಕ ರನ್ ಆಗಿತ್ತು.

ಇಂಗ್ಲೆಂಡ್ ವಿರುದ್ಧದ ಟೆಸ್ಟ್, ಟಿ20ಐ ಸರಣಿಗೆ ತಂಡ ಪ್ರಕಟಿಸಿದ ಪಾಕಿಸ್ತಾನಇಂಗ್ಲೆಂಡ್ ವಿರುದ್ಧದ ಟೆಸ್ಟ್, ಟಿ20ಐ ಸರಣಿಗೆ ತಂಡ ಪ್ರಕಟಿಸಿದ ಪಾಕಿಸ್ತಾನ

1939ರಲ್ಲಿ ವಸಂತ್ ರಾಯ್ಜಿ ಮುಂಬೈಯಲ್ಲಿರುವ ಕ್ರಿಕೆಟ್ ಕ್ಲಬ್ ಆಫ್ ಇಂಡಿಯಾ ಟೀಮ್ ಪರ ಪಾದಾರ್ಪಣೆ ಮಾಡಿದ್ದರು. 1941ರಲ್ಲಿ ಮುಂಬೈ ಪರ ಪಾದಾರ್ಪಣೆ ಮಾಡಿದ್ದರು. ಈ ತಂಡದ ಪರ ವಿಜಯ್ ಮರ್ಚೆಂಟ್ ನಾಯಕತ್ವದಲ್ಲಿ ಪಶ್ಚಿಮ ಭಾರತದಲ್ಲಿ ಆಡಿದ್ದರು.

Story first published: Saturday, June 13, 2020, 16:00 [IST]
Other articles published on Jun 13, 2020
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X