ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಹಿರಿಯ ವಯಸ್ಸಿನಲ್ಲಿ ಚೊಚ್ಚಲ ಟಿ20 ಅಂತರಾಷ್ಟ್ರೀಯ ಪಂದ್ಯವನ್ನಾಡಿದ ಭಾರತದ ಕ್ರಿಕೆಟಿಗರು

Harshal patel

ರಾಂಚಿಯ ಜಿಎಸ್‌ಸಿಎ ಇಂಟರ್‌ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಎರಡನೇ ಟಿ20 ಪಂದ್ಯದಲ್ಲಿ ಟಾಸ್‌ ಗೆದ್ದ ಟೀಮ್ ಇಂಡಿಯಾ ಬೌಲಿಂಗ್ ಆಯ್ದುಕೊಂಡಿತು. ತಂಡದಲ್ಲಿ ಕೇವಲ ಒಂದು ಬದಲಾವಣೆ ಮಾಡಲಾಗಿದ್ದು, ಬಹು ನಿರೀಕ್ಷೆಯಂತೆ ಐಪಿಎಲ್ 2021 ಸ್ಟಾರ್ ಬೌಲರ್ ಹರ್ಷಲ್ ಪಟೇಲ್ ಪ್ಲೇಯಿಂಗ್ 11ನಲ್ಲಿ ಸ್ಥಾನ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್‌ಗೆ ಕಾಲಿಟ್ಟ 94ನೇ ಬೌಲರ್ ಆಗಿರುವ ಹರ್ಷಲ್ ಪಟೇಲ್ ತಂಡದಲ್ಲಿ ಸ್ಥಾನ ಪಡೆಯುವ ಮೊದಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದ್ದರು. ಐಪಿಎಲ್ 2021ರಲ್ಲಿ ಲೀಡಿಂಗ್ ವಿಕೆಟ್ ಟೇಕರ್ ಆಗಿರುವ ಹರ್ಷಲ್ ಪಟೇಲ್ ಐಪಿಎಲ್ ಇತಿಹಾಸದಲ್ಲಿ ಸೀಸನ್‌ವೊಂದರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎನಿಸಿಕೊಂಡ್ರು.

2021ರ ಪರ್ಪಲ್ ಕ್ಯಾಪ್ ವಿನ್ನರ್ ಆಗಿರುವ ಹರ್ಷಲ್ ಪಟೇಲ್ 15 ಪಂದ್ಯಗಳಲ್ಲಿ 32 ವಿಕೆಟ್‌ಗಳನ್ನು ಪಡೆದು ಪರ್ಪಲ್ ಕ್ಯಾಪ್ ವಿಜೇತರಾಗಿ ಹೊರಹೊಮ್ಮಿದ್ದರು. ಮೊದಲನೇ ಪಂದ್ಯದಲ್ಲಿ ಕಣಕ್ಕಿಳಿದಿದ್ದ ಮೊಹಮ್ಮದ್ ಸಿರಾಜ್ ಗಾಯಾಳುವಾಗಿ ತಂಡದಿಂದ ಬದಲು ಈ ಪಂದ್ಯದಲ್ಲಿ ಹರ್ಷಲ್ ಪಟೇಲ್ ಕಣಕ್ಕಿಳಿದಿದ್ದಾರೆ. ಈ ಬಾರಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಹರ್ಷಲ್ ಪಟೇಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ನೀಡಿದ್ದ ಅತ್ಯುತ್ತಮ ಬೌಲಿಂಗ್ ಪ್ರದರ್ಶನ ಇದೀಗ ಅವರಿಗೆ ಟೀಮ್ ಇಂಡಿಯಾದ ಅಂತಾರಾಷ್ಟ್ರೀಯ ತಂಡದ ಕ್ಯಾಪ್ ಧರಿಸುವ ಅವಕಾಶವನ್ನು ತಂದುಕೊಟ್ಟಿದೆ.

'AB ಸರ್' ನಾನು ನಿಮ್ಮ ಬಹುದೊಡ್ಡ ಅಭಿಮಾನಿ: ಎಬಿಡಿ ನಿವೃತ್ತಿ ಬಳಿಕ ಯುಜವೇಂದ್ರ ಚಹಾಲ್ ಭಾವನಾತ್ಮಕ ಪೋಸ್ಟ್‌'AB ಸರ್' ನಾನು ನಿಮ್ಮ ಬಹುದೊಡ್ಡ ಅಭಿಮಾನಿ: ಎಬಿಡಿ ನಿವೃತ್ತಿ ಬಳಿಕ ಯುಜವೇಂದ್ರ ಚಹಾಲ್ ಭಾವನಾತ್ಮಕ ಪೋಸ್ಟ್‌

ಆದ್ರೆ ಹರ್ಷಲ್ ಪಟೇಲ್‌ರ ಬಹಳ ತಡವಾಗಿ ಟೀಂ ಇಂಡಿಯಾಕ್ಕೆ ಎಂಟ್ರಿ ಕೊಟ್ಟಿದ್ದಾರೆ ಎನ್ನುವುದು ಕೆಲವು ಕ್ರಿಕೆಟ್ ಪಂಡಿತರ ವಾದ. ಇದಕ್ಕೆ ಕಾರಣ ಅವರ ವಯಸ್ಸು. 30 ವರ್ಷ 361ನೇ ವಯಸ್ಸಿನ ದಿನ ಹಷಳ್ ಟೀಂ ಇಂಡಿಯಾ ಪರ ಟಿ20 ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದಾರೆ. ಇವರಿಗೂ ಮೊದಲು ಇನ್ನೂ ಹಿರಿಯ ವಯಸ್ಸಿನಲ್ಲಿ ಚೊಚ್ಚಲ ಟಿ20 ಪಂದ್ಯಗಳನ್ನಾಡಿದ ಆಟಗಾರರು ಇದ್ದಾರೆ. ಅವರು ಯಾರು? ಎಷ್ಟನೇ ವಯಸ್ಸಿನಲ್ಲಿ ಮೊದಲ ಅಂತರಾಷ್ಟ್ರೀಯ ಟಿ20 ಪಂದ್ಯವನ್ನಾಡಿದರು ಎಂಬುದನ್ನ ಮುಂದೆ ತಿಳಿಯಿರಿ.

ಅತ್ಯಂತ ಹಿರಿಯ ವಯಸ್ಸಿನಲ್ಲಿ ಚೊಚ್ಚಲ ಅಂತರಾಷ್ಟ್ರೀಯ ಟಿ20 ಪಂದ್ಯವನ್ನಾಡಿದ ಭಾರತೀಯ ಆಟಗಾರರು

ರಾಹುಲ್ ದ್ರಾವಿಡ್: 38 ವರ್ಷ 232 ದಿನಗಳು
ಸಚಿನ್ ತೆಂಡೂಲ್ಕರ್: 33 ವರ್ಷ 221 ದಿನಗಳು
ಶ್ರೀನಾಥ್ ಅರವಿಂದ್: 31 ವರ್ಷ 177 ದಿನಗಳು
ಸ್ಟುವರ್ಟ್ ಬಿನ್ನಿ: 31 ವರ್ಷ 44 ದಿನಗಳು
ಮುರಳಿ ಕಾರ್ತಿಕ್: 31 ವರ್ಷ 39 ದಿನಗಳು
ಹರ್ಷಲ್ ಪಟೇಲ್: 30 ವರ್ಷ 361 ದಿನಗಳು

ಸೆಮಿ ಫೈನಲ್ ಪ್ರವೇಶಿಸಿದ ಕರ್ನಾಟಕ , ಸೂಪರ್ ಓವರ್ ನಲ್ಲಿ ಗೆಲುವು | Oneindia Kannada

ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ ಹರ್ಷಲ್ ಪಟೇಲ್; ಪ್ರಮುಖ ಬೌಲರ್‌ಗೆ ಕೊಕ್!ಅಂತರರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪಣೆ ಮಾಡಿದ ಹರ್ಷಲ್ ಪಟೇಲ್; ಪ್ರಮುಖ ಬೌಲರ್‌ಗೆ ಕೊಕ್!

Story first published: Saturday, November 20, 2021, 9:44 [IST]
Other articles published on Nov 20, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X