ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ನಿಷೇಧಿಸಿದ್ದರೂ ಭಾರತ ವಿರುದ್ಧ ಟೆಸ್ಟ್‌ ಸರಣಿಯಲ್ಲಿ ಕಣಕ್ಕಿಳಿಯಲಿದ್ದಾರೆ ರಾಬಿನ್ಸನ್!

Ollie Robinson eligible to resume crikcet career despite eight-match ban
Ravi Shastri ಸ್ಥಾನ ತುಂಬಬಲ್ಲ ಈ ಮಾಜಿ ಆಟಗಾರರಲ್ಲಿ ಯಾರು ಬೆಸ್ಟ್? | Team Indian Coach | Oneindia Kannada

ಲಂಡನ್: ಇಂಗ್ಲೆಂಡ್ ವೇಗಿ ಆಲಿ ರಾಬಿನ್ಸನ್ ತಂಡದ ಪರ ಮತ್ತೆ ಆಡಲಿದ್ದಾರೆ. ಕೆಲ ವರ್ಷಗಳ ಹಿಂದೆ ರಾಬಿನ್ಸನ್ ಮಾಡಿದ್ದ ಜನಾಂಗೀಯ ನಿಂದನೆಯ ಮತ್ತು ಅಶ್ಲೀಲ ಟ್ವೀಟ್‌ ಕಾಮೆಂಟ್‌ಗೆ ಸಂಬಂಧಿಸಿ ಅವರನ್ನು 8 ಪಂದ್ಯಗಳಿಂದ ನಿಷೇಧಿಸಲಾಗಿತ್ತು. ಇದರಲ್ಲಿ 3 ಪಂದ್ಯಗಳಲ್ಲಿ ರಾಬಿನ್ಸನ್ ವಿಷೇಧ ಅನುಭವಿಸಿದ್ದಾರೆ. ಇನ್ನುಳಿದ 5 ಪಂದ್ಯಗಳ ನಿಷೇಧವನ್ನು ರದ್ದುಗೊಳಿಸಲಾಗಿದೆ.

ದೇಸಿ ಕ್ರಿಕೆಟರ್‌ಗಳಿಗೆ ಭರ್ಜರಿ ವೇತನ ಹೆಚ್ಚಳ ಘೋಷಿಸಿದ ಬಿಸಿಸಿಐ!ದೇಸಿ ಕ್ರಿಕೆಟರ್‌ಗಳಿಗೆ ಭರ್ಜರಿ ವೇತನ ಹೆಚ್ಚಳ ಘೋಷಿಸಿದ ಬಿಸಿಸಿಐ!

ಆಲಿ ರಾಬಿನ್ಸನ್ ಅವರಿನ್ನು ಇಂಗ್ಲೆಂಡ್ ಪರ ಆಡಲು ಅರ್ಹರಾಗಿದ್ದಾರೆ. ಅವರಿಗೆ ವೃತ್ತಿ ಬದುಕು ಮುಂದುವರೆಸಲು ಅನುಮತಿ ನೀಡಲಾಗಿದೆ ಎಂದು ಇಂಗ್ಲೆಂಡ್ ಆ್ಯಂಡ್ ವೇಲ್ಸ್ ಕ್ರಿಕೆಟ್ ಬೋರ್ಡ್ ಶನಿವಾರ (ಜುಲೈ 3) ಘೋಷಿಸಿದೆ. ಕೀಳುಮಟ್ಟದ ಟ್ವೀಟ್‌ ಕಾಮೆಂಟ್‌ಗಾಗಿ ರಾಬಿನ್ಸನ್ ಅವರಿಗೆ 8 ಪಂದ್ಯಗಳ ನಿಷೇಧವಲ್ಲದೆ $4,400 (3,27,881 ರೂ.) ದಂಡ ಕೂಡ ವಿಧಿಸಲಾಗಿತ್ತು.

27ರ ಹರೆಯದ ಬೌಲರ್ ರಾಬಿನ್ಸನ್, ಮುಂಬರಲಿರುವ ಭಾರತ-ಇಂಗ್ಲೆಂಡ್ ನಡುವಿನ ಐದು ಪಂದ್ಯಗಳ ಟೆಸ್ಟ್‌ ಸರಣಿಗೂ ಲಭ್ಯರಿರಲಿದ್ದಾರೆ. ಈ ಟೆಸ್ಟ್ ಸರಣಿ ಆಗಸ್ಟ್ 4ರಿಂದ ಸೆಪ್ಟೆಂಬರ್‌ 14ರ ವರೆಗೆ ನಡೆಯಲಿದೆ. ನ್ಯೂಜಿಲೆಂಡ್ ವಿರುದ್ಧದ ಟೆಸ್ಟ್‌ ಸರಣಿಯ ವೇಳೆ ರಾಬಿನ್ಸನ್ ನಿಷೇಧಕ್ಕೊಳಗಾಗಿದ್ದರು.

WTC ಫೈನಲ್‌ನಲ್ಲಿ ಗೆದ್ದ ಮೇಲೆ ಕೇನ್ ವಿಲಿಯಮ್ಸನ್ ವಿರಾಟ್ ಕೊಹ್ಲಿ ಅಪ್ಪಿ ಎದೆಗೊರಗಿದ್ಯಾಕೆ ಗೊತ್ತಾ?!WTC ಫೈನಲ್‌ನಲ್ಲಿ ಗೆದ್ದ ಮೇಲೆ ಕೇನ್ ವಿಲಿಯಮ್ಸನ್ ವಿರಾಟ್ ಕೊಹ್ಲಿ ಅಪ್ಪಿ ಎದೆಗೊರಗಿದ್ಯಾಕೆ ಗೊತ್ತಾ?!

ಜೂನ್‌ನಲ್ಲಿ ನಡೆದಿದ್ದ ಇಂಗ್ಲೆಂಡ್-ನ್ಯೂಜಿಲೆಂಡ್ ಟೆಸ್ಟ್‌ ಸರಣಿಯಲ್ಲಿ ಆಲಿ ಉತ್ತಮ ಬೌಲಿಂಗ್ ಪ್ರದರ್ಶನಕ್ಕಾಗಿ ಗಮನ ಸೆಳೆದಿದ್ದರು. ಆಗ ರಾಬಿನ್ಸನ್ 2012-2014ರ ಅವಧಿಯಲ್ಲಿ ಮಾಡಿದ್ದ ವಿವಾದಾತ್ಮಕ ಟ್ವೀಟ್‌ ಕೂಡ ವೈರಲ್ ಆಗಿತ್ತು. ಅದನ್ನು ವಿಚಾರಣೆ ನಡೆಸಿದ್ದ ಇಂಗ್ಲೆಂಡ್ ಬೋರ್ಡ್, ಆಲಿಗೆ ನಿಷೇಧ ಹೇರಿತ್ತು.

Story first published: Saturday, July 3, 2021, 16:28 [IST]
Other articles published on Jul 3, 2021
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X