ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಕ್ರಿಕೆಟ್ ಇತಿಹಾಸದ ಈ ದಿನ: ಟೆಸ್ಟ್ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ ಭಾರತದ ಈ ಮೂವರು ದಿಗ್ಗಜರು

On June 20: Rahul Dravid, Sourav Ganguly and Virat Kohli Made Their Tests Debuts For India

ಜೂನ್ 20 ಭಾರತೀಯ ಟೆಸ್ಟ್ ಕ್ರಿಕೆಟ್ ಇತಿಹಾಸದಲ್ಲಿ ಮಹತ್ವದ ದಿನವಾಗಿದ್ದು, ಮೂವರು ಶ್ರೇಷ್ಠ ಆಟಗಾರರಾದ ರಾಹುಲ್ ದ್ರಾವಿಡ್, ಸೌರವ್ ಗಂಗೂಲಿ ಮತ್ತು ವಿರಾಟ್ ಕೊಹ್ಲಿ ತಮ್ಮ ಟೆಸ್ಟ್ ಪದಾರ್ಪಣೆ ಮಾಡಿದರು.

Ind vs SA: 'ತಪ್ಪುಗಳು ಸಂಭವಿಸುತ್ತವೆ, ಆದರೆ...': ಟಿ20 ಸರಣಿ ಸಮಬಲ ನಂತರ ರಿಷಭ್ ಪಂತ್ ಹೇಳಿದ್ದೇನು?Ind vs SA: 'ತಪ್ಪುಗಳು ಸಂಭವಿಸುತ್ತವೆ, ಆದರೆ...': ಟಿ20 ಸರಣಿ ಸಮಬಲ ನಂತರ ರಿಷಭ್ ಪಂತ್ ಹೇಳಿದ್ದೇನು?

1996ರಲ್ಲಿ ವಿಶ್ವದ ಐಕಾನಿಕ್ ಲಾರ್ಡ್ಸ್ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಟೆಸ್ಟ್ ಸರಣಯಲ್ಲಿ ರಾಹುಲ್ ದ್ರಾವಿಡ್ ಮತ್ತು ಸೌರವ್ ಗಂಗೂಲಿ ಟೆಸ್ಟ್ ಸ್ವರೂಪದ ಕ್ರಿಕೆಟ್‌ನ ಮೊದಲ ಅನುಭವ ಪಡೆದರು.

ಗಂಗೂಲಿ ಅವರು 20 ಬೌಂಡರಿಗಳೊಂದಿಗೆ 131 ರನ್

ಗಂಗೂಲಿ ಅವರು 20 ಬೌಂಡರಿಗಳೊಂದಿಗೆ 131 ರನ್

ಸದ್ಯ ಬಿಸಿಸಿಐ ಅಧ್ಯಕ್ಷರಾಗಿರುವ ಸೌರವ್ ಗಂಗೂಲಿ ಅವರು ತಮ್ಮ ಮೊದಲ ಟೆಸ್ಟ್ ಪಂದ್ಯದಲ್ಲಿ ಶತಕ ಗಳಿಸಿದ್ದಲ್ಲದೆ, ಜೊತೆಯಾಟಗಳ ನಡುವೆಯೂ ಸ್ಮರಣೀಯ ಆಟವಾಡಿದರು. ಭಾರತದ ಮೊದಲ ಇನ್ನಿಂಗ್ಸ್‌ನಲ್ಲಿ ಗಂಗೂಲಿ ಅವರು 20 ಬೌಂಡರಿಗಳೊಂದಿಗೆ 131 ರನ್ ಗಳಿಸಿದರು ಮತ್ತು ಎರಡು ಸ್ಕೇಲ್‌ಪ್‌ಗಳನ್ನು ಸಹ ಪಡೆದರು. ಮೊದಲ ಇನ್ನಿಂಗ್ಸ್‌ನಲ್ಲಿ 124 ರನ್ ಗಳಿಸಿದ್ದಕ್ಕಾಗಿ ಜ್ಯಾಕ್ ರಸ್ಸೆಲ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದರೂ, ಸೌರವ್ ಗಂಗೂಲಿ ಪ್ರಶಂಸೆಗೆ ಪಾತ್ರರಾದರು.

ಟೆಸ್ಟ್ ವೃತ್ತಿಜೀವನದಲ್ಲಿ ಸೌರವ್ ಗಂಗೂಲಿ 113 ಪಂದ್ಯ ಆಡಿದ್ದಾರೆ

ಟೆಸ್ಟ್ ವೃತ್ತಿಜೀವನದಲ್ಲಿ ಸೌರವ್ ಗಂಗೂಲಿ 113 ಪಂದ್ಯ ಆಡಿದ್ದಾರೆ

ಟೆಸ್ಟ್ ವೃತ್ತಿಜೀವನದಲ್ಲಿ ಸೌರವ್ ಗಂಗೂಲಿ ಅವರು 113 ಪಂದ್ಯಗಳನ್ನಾಡಿದ್ದು, 42.17 ಸರಾಸರಿಯಲ್ಲಿ 7212 ರನ್ ಗಳಿಸಿದ್ದಾರೆ. 52.53 ಸರಾಸರಿಯಲ್ಲಿ 32 ವಿಕೆಟ್ ಕಬಳಿಸಿದ್ದಾರೆ ಮತ್ತು 71 ಕ್ಯಾಚ್‌ ಪಡೆದುಕೊಂಡಿದ್ದಾರೆ. ಕೊನೆಯ ಟೆಸ್ಟ್ ಅನ್ನು 2008ರಂದು ಆಸ್ಟ್ರೇಲಿಯಾ ವಿರುದ್ಧ ನಾಗ್ಪುರದಲ್ಲಿ ಆಡಿದ್ದರು.

ರಾಷ್ಟ್ರೀಯ ತಂಡದ ಪ್ರಸ್ತುತ ಮುಖ್ಯ ಕೋಚ್ ಟೆಸ್ಟ್ ವೃತ್ತಿಜೀವನ

ರಾಷ್ಟ್ರೀಯ ತಂಡದ ಪ್ರಸ್ತುತ ಮುಖ್ಯ ಕೋಚ್ ಟೆಸ್ಟ್ ವೃತ್ತಿಜೀವನ

ಇದೇ ವೇಳೆ ರಾಹುಲ್ ದ್ರಾವಿಡ್ ಯೋಗ್ಯವಾದ ಪ್ರದರ್ಶನವನ್ನು ನೀಡಿದರು. ಆದರೆ ಕ್ರಿಕೆಟ್ ತವರಿನಲ್ಲಿ ನಡೆದ ಪಂದ್ಯದಲ್ಲಿ ಹಸಿರಿನ ಪಿಚ್ ಅವರಂದುಕೊಂಡ ರೀತಿಯಲ್ಲಿ ಹೋಗಲಿಲ್ಲ. ಭಾರತದ ಪುರುಷರ ರಾಷ್ಟ್ರೀಯ ತಂಡದ ಪ್ರಸ್ತುತ ಮುಖ್ಯ ಕೋಚ್ ಆಗಿರುವ ಬಲಗೈ ಆಟಗಾರ ರಾಹುಲ್ ದ್ರಾವಿಡ್, ವೇಗದ ಬೌಲರ್ ಕ್ರಿಸ್ ಲೂಯಿಸ್ ಅವರ ಬೌಲಿಂಗ್‌ನಲ್ಲಿ ಔಟ್ ಆಗುವ ಮೊದಲು ಆರು ಬೌಂಡರಿಗಳೊಂದಿಗೆ 95 ರನ್ ಗಳಿಸಿದರು.

ಟೆಸ್ಟ್ ವೃತ್ತಿಜೀವನದಲ್ಲಿ ರಾಹುಲ್ ದ್ರಾವಿಡ್ ಅವರು 164 ಪಂದ್ಯ, 286 ಇನ್ನಿಂಗ್ಸ್‌ಗಳನ್ನಾಡಿದ್ದು, 42.51 ಸ್ಟ್ರೈಕ್‌ರೇಟ್‌ನಲ್ಲಿ 52.31 ಸರಾಸರಿಯಲ್ಲಿ 13288 ರನ್ ಗಳಿಸಿದ್ದಾರೆ. 36 ಶತಕ ಮತ್ತು 63 ಅರ್ಧಶತಕ ಗಳಿಸಿದ್ದಾರೆ ಮತ್ತು 210 ಕ್ಯಾಚ್‌ ಪಡೆದುಕೊಂಡಿದ್ದಾರೆ. ಕೊನೆಯ ಟೆಸ್ಟ್ ಅನ್ನು ಅಡಿಲೇಡ್‌ನಲ್ಲಿ ಆಸ್ಟ್ರೇಲಿಯಾ ವಿರುದ್ಧ 2012ರ ಜನವರಿ 24ರಿಂದ 28ರವರೆಗೆ ನಡೆದ ಪಂದ್ಯದಲ್ಲಿ ಆಡಿದ್ದರು.

ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ 4 ಮತ್ತು 15 ರನ್‌

ಮೊದಲ ಪಂದ್ಯದಲ್ಲಿ ವಿರಾಟ್ ಕೊಹ್ಲಿ 4 ಮತ್ತು 15 ರನ್‌

ಇನ್ನು ಸದ್ಯದ ಹಾಲಿ ಆಟಗಾರ ವಿರಾಟ್ ಕೊಹ್ಲಿಗೆ ಸಂಬಂಧಿಸಿದಂತೆ, ಅವರು ತವರಿನಲ್ಲಿ ನಡೆದ 50 ಓವರ್‌ಗಳ ವಿಶ್ವಕಪ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ನಂತರ, 2011ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದಲ್ಲಿ ಟೆಸ್ಟ್‌ಗೆ ಪಾದಾರ್ಪಣೆ ಮಾಡಿದರು. ಜಮೈಕಾದ ಕಿಂಗ್‌ಸ್ಟನ್‌ನ ಸಬಿನಾ ಪಾರ್ಕ್‌ನಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ 4 ಮತ್ತು 15 ರನ್‌ಗಳನ್ನು ಗಳಿಸುವ ಮೂಲಕ ಮೊದಲ ಪಂದ್ಯದಲ್ಲಿಯೇ ಪ್ರಯಾಸಪಟ್ಟರು.

ವೆಸ್ಟ್ ಇಂಡೀಸ್ ವೇಗದ ಬೌಲರ್ ಫಿಡೆಲ್ ಎಡ್ವರ್ಡ್ಸ್ ಎರಡೂ ಸಂದರ್ಭಗಳಲ್ಲಿ ಚೊಚ್ಚಲ ಆಟಗಾರನನ್ನು ಹೊರಹಾಕಿದರು. 11 ವರ್ಷಗಳ ನಂತರ, ಕೊಹ್ಲಿ ಟೆಸ್ಟ್ ಕ್ರಿಕೆಟ್‌ನಲ್ಲಿ ಭಾರತದ ಪ್ರಸಿದ್ಧ ಬ್ಯಾಟರ್‌ಗಳಲ್ಲಿ ಒಬ್ಬರಾಗಿದ್ದಾರೆ. 101 ಪಂದ್ಯಗಳಿಂದ 27 ಶತಕಗಳು ಮತ್ತು 28 ಅರ್ಧ ಶತಕಗಳೊಂದಿಗೆ 8043 ರನ್ ಗಳಿಸಿದ್ದಾರೆ.

Story first published: Monday, June 20, 2022, 16:36 [IST]
Other articles published on Jun 20, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X